ಲಸಿಕೆ ಪಡೆಯುವಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ; ಮತ್ತಷ್ಟು ಸುಲಭವಾಯ್ತು ವ್ಯಾಕ್ಸಿನ್ ಪಡೆಯುವ ಪ್ರಕ್ರಿಯೆ

ಲಸಿಕೆ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ಲಸಿಕಾ ಕೇಂದ್ರದಲ್ಲೇ ಕೊವಿನ್ ಆ್ಯಪ್‌ನಲ್ಲಿ ನೇರ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಪಡೆಯುವ ನಿಯಮವನ್ನು ಸಡಿಲಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಲಸಿಕೆ ಪಡೆಯುವಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ; ಮತ್ತಷ್ಟು ಸುಲಭವಾಯ್ತು ವ್ಯಾಕ್ಸಿನ್ ಪಡೆಯುವ ಪ್ರಕ್ರಿಯೆ
ಪ್ರಾತಿನಿಧಿಕ ಚಿತ್ರ
Follow us
preethi shettigar
|

Updated on: May 25, 2021 | 1:33 PM

ದೆಹಲಿ: ಕೊರೊನಾ ಎರಡನೇ ಅಲೆಯಿಂದಾಗಿ ಬಚಾವಾಗಲು ಇರುವ ಒಂದೇ ಒಂದು ದಾರಿ ಅಂದರೆ ಅದು ಲಸಿಕೆ ಹಾಕಿಸಿಕೊಳ್ಳುವುದು. ಆದರೆ ಲಸಿಕೆ ಕೊರತೆಯಿಂದಾಗಿ ದೇಶದಲ್ಲಿ ಲಸಿಕೆ ಕಾರ್ಯಕ್ರಮ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಅಲ್ಲದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ, ವ್ಯಾಕ್ಸಿನೇಷನ್ ಬಗ್ಗೆ ಗೊಂದಲವೇರ್ಪಟ್ಟಿತ್ತು. ಇದೀಗ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

18 ರಿಂದ 44 ವರ್ಷದವರಿಗೆ ಲಸಿಕೆ‌ ನೀಡುವ ಅಭಿಯಾನ ಅರಂಭವಾಗಿದೆ. ಅನೇಕ ರಾಜ್ಯಗಳಲ್ಲಿ ಲಸಿಕೆ ನೀಡಲಾಗುತ್ತಿದೆ‌. ಅದರಂತೆ ಲಸಿಕೆ ಹಾಕಿಸಿಕೊಳ್ಳಲು ಕೊವಿನ್ ಌಪ್​ನಲ್ಲಿ ನೊಂದಣಿ ಮಾಡಿಸಬೇಕಿತ್ತು. ಆದರೆ, ಈಗ ಲಸಿಕಾ ಕೇಂದ್ರದಲ್ಲೇ ನೊಂದಣಿ ಮಾಡುವ ನಿಯಮ ತರಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ಲಸಿಕಾ ಕೇಂದ್ರದಲ್ಲೇ ಕೊವಿನ್ ಆ್ಯಪ್‌ನಲ್ಲಿ ನೇರ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಪಡೆಯುವ ನಿಯಮವನ್ನು ಸಡಿಲಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಆದರೆ, ಈ ಹೊಸ ನಿಯಮ ಕೇವಲ ಸರ್ಕಾರಿ ಕೊವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಖಾಸಗಿ ಸಿವಿಸಿಗಳಿಗೆ ಲಭ್ಯವಿರುವುದಿಲ್ಲ ಮತ್ತು ಅವರು ತಮ್ಮ ಲಸಿಕಾ ವೇಳಾಪಟ್ಟಿಗಳನ್ನು ಆನ್‌ಲೈನ್ಅ ಪಾಯಿಂಟ್ಮೆಂಟ್‌ಗಳಿಗಾಗಿ ಸ್ಲಾಟ್‌ಗಳೊಂದಿಗೆ ಪ್ರತ್ಯೇಕವಾಗಿ ಪ್ರಕಟಿಸಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.‌ ಸ್ಥಳೀಯ ಸನ್ನಿವೇಶದ ಆಧಾರದ ಮೇಲೆ 18ರಿಂದ44 ವರ್ಷ ವಯಸ್ಸಿನವರಿಗೆ ಆನ್-ಸೈಟ್ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ನೀಡುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಿರ್ಧರಿಸಬೇಕು ಎಂದು ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ಮುಂಬೈನಲ್ಲಿ ಗರ್ಭಿಣಿ, ಬಾಣಂತಿಯರಿಗೂ ಲಸಿಕೆ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಲಸಿಕೆ‌ ನೀಡಲು ಸರಕಾರ ಸಮ್ಮತಿ ಸುಚಿಸಿರಲಿಲ್ಲ. ಕಳೆದ ವಾರ ಲಸಿಕೆಯ ತಜ್ಞರ ಸಮಿತಿ ಗರ್ಭಿಣಿ, ಬಾಣಂತಿಯರಿಗೆ ಲಸಿಕೆ ನೀಡಲು ಶಿಫಾರಸು ಮಾಡಿತ್ತು. ಬಳಿಕ ಕೇಂದ್ರ ಸರಕಾರ ಲಸಿಕೆ‌‌ ನೀಡಲು ಗ್ರೀನ್‌ ಸಿಗ್ನಲ್ ನೀಡಿತ್ತು. ಸದ್ಯ ಮುಂಬೈ ಮಹಾನಗರ ಪಾಲಿಕೆ ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ನೀಡಲು ಶುರುಮಾಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ‌ ರಾಜ್ಯದಲ್ಲೂ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಲಸಿಕೆ‌ ನೀಡುವ ಅಭಿಯಾನ ಆರಂಭವಾಗಲಿದೆ.

ಕೊರೊನಾ ವಿರುದ್ಧದ ಸಮರಕ್ಕೆ ರಷ್ಯಾ ವ್ಯಾಕ್ಸಿನ್ ಬಲ ಸೋಂಕು ತಡೆಯುವ ಸಲುವಾಗಿ ಈಗಾಗಲೇ ಭಾರತದಲ್ಲಿ ಲಸಿಕೆ ನೀಡುವ ಕೆಲಸ ಆರಂಭವಾಗಿದೆ. ಆದರೂ, ಎಲ್ಲರಿಗೂ ನೀಡುವಷ್ಟು ಲಸಿಕೆ ದೇಶದಲ್ಲಿ ಪ್ರಸ್ತುತ ಲಭ್ಯವಿಲ್ಲ. ಹೀಗಾಗಿ ರಷ್ಯಾದಿಂದ ವಿಶ್ವದ ಮೊಟ್ಟಮೊದಲ ನೋಂದಾಯಿತ ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಭಾರತದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡುವ ಸಲುವಾಗಿ ರಷ್ಯಾ ಭಾರತದಲ್ಲಿ ನೇರ ಹೂಡಿಕೆ ಮಾಡಿದ್ದು, ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸಹಯೋಗದೊಂದಿಗೆ ಪ್ರತಿ ವರ್ಷ 100 ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಲಸಿಕೆಯನ್ನು ಉತ್ಪಾದಿಸಲಿದೆ.

9 ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹೆಚ್ಚಿಸುವಂತೆ ಡಿಸಿಎಂ ಸೂಚನೆ ರಾಜ್ಯದ 9 ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹೆಚ್ಚಿಸುವಂತೆ ಕೊವಿಡ್ ಟಾಸ್ಕ್‌ ಫೋರ್ಸ್‌ ಅಧ್ಯಕ್ಷ ಡಾ.ಅಶ್ವತ್ಥ್‌ ನಾರಾಯಣ್ ಸೂಚನೆ ನೀಡಿದ್ದಾರೆ. 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಕೊವಿಡ್‌ ಪರೀಕ್ಷೆ ಹೆಚ್ಚಿಸುವಂತೆ ಡಿಸಿಎಂ ಅಶ್ವತ್ಥ್ ನಾರಾಯಣ್ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಲಸಿಕೆ ಪಡೆಯುವ ವಿಚಾರವಾಗಿ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ ಕೊರೊನಾ ವಿರುದ್ಧದ ಸಂಜೀವಿನಿಯಾಗಿರುವ ಲಸಿಕೆ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ.

ಇದನ್ನೂ ಓದಿ:

ಅಕ್ಟೋಬರ್ ವೇಳೆಗೆ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯ; ರಷ್ಯಾದಿಂದ ಭಾರತಕ್ಕೆ ನಿರೀಕ್ಷೆಗೂ ಮೀರಿದ ಸಹಾಯ

ಮುಂದಿನ ಮೂರು ದಿನಗಳಲ್ಲಿ 51 ಲಕ್ಷ ಡೋಸ್ ಕೊವಿಡ್ ಲಸಿಕೆ ರಾಜ್ಯಗಳಿಗೆ ಸಿಗಲಿದೆ: ಕೇಂದ್ರ ಆರೋಗ್ಯ ಸಚಿವಾಲಯ