NCRB Report: ಭಾರತದಲ್ಲಿ ನಡೆಯುತ್ತಿರುವ ಕೊಲೆಗಳ ಹಿಂದಿರುವ ಸಾಮಾನ್ಯ ಉದ್ದೇಶಗಳೇನು?

ಭಾರತದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB) ವರದಿ ನೀಡಿದೆ. ಭಾರತದಲ್ಲಿ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಮಂದಿ ಕೊಲೆಯಾಗುತ್ತಿದ್ದಾರೆ. ದೇಶದಲ್ಲಿ ಕಳೆದ ವರ್ಷ ಅಂದರೆ 2022 ರಲ್ಲಿ ಒಟ್ಟು 28,522 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಕ್ರೈಮ್ ಇನ್ ಇಂಡಿಯಾ-2022 ಶೀರ್ಷಿಕೆಯಲ್ಲಿ ಸಿದ್ಧಪಡಿಸಿರುವ  ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರತಿದಿನ ಸುಮಾರು 78 ಜನರನ್ನು ಹತ್ಯೆ ಮಾಡಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದಾಗ್ಯೂ, ಈ ಅಂಕಿ ಅಂಶವು ಕಳೆದ ಎರಡು ವರ್ಷಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ.

NCRB Report: ಭಾರತದಲ್ಲಿ ನಡೆಯುತ್ತಿರುವ ಕೊಲೆಗಳ ಹಿಂದಿರುವ ಸಾಮಾನ್ಯ ಉದ್ದೇಶಗಳೇನು?
ಅಪರಾಧ
Follow us
ನಯನಾ ರಾಜೀವ್
|

Updated on: Dec 06, 2023 | 11:25 AM

ಭಾರತದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB) ವರದಿ ನೀಡಿದೆ. ಭಾರತದಲ್ಲಿ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಮಂದಿ ಕೊಲೆಯಾಗುತ್ತಿದ್ದಾರೆ. ದೇಶದಲ್ಲಿ ಕಳೆದ ವರ್ಷ ಅಂದರೆ 2022 ರಲ್ಲಿ ಒಟ್ಟು 28,522 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಕ್ರೈಮ್ ಇನ್ ಇಂಡಿಯಾ-2022 ಶೀರ್ಷಿಕೆಯಲ್ಲಿ ಸಿದ್ಧಪಡಿಸಿರುವ  ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರತಿದಿನ ಸುಮಾರು 78 ಜನರನ್ನು ಹತ್ಯೆ ಮಾಡಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದಾಗ್ಯೂ, ಈ ಅಂಕಿ ಅಂಶವು ಕಳೆದ ಎರಡು ವರ್ಷಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ.

ವರದಿಯ ಪ್ರಕಾರ, 2021 ರಲ್ಲಿ 29,272 ಮತ್ತು 2020 ರಲ್ಲಿ 29,193 ಜನರು ಸಾವನ್ನಪ್ಪಿದ್ದಾರೆ, ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಗರಿಷ್ಠ 3,491 ಎಫ್‌ಐಆರ್‌ಗಳು ದಾಖಲಾಗಿದ್ದವು. ಅದರ ನಂತರ, ಬಿಹಾರದಲ್ಲಿ 2,930, ಮಹಾರಾಷ್ಟ್ರದಲ್ಲಿ 2,295, ಮಧ್ಯಪ್ರದೇಶದಲ್ಲಿ 1,978 ಮತ್ತು ರಾಜಸ್ಥಾನದಲ್ಲಿ 1,834 ಪ್ರಕರಣಗಳು ದಾಖಲಾಗಿವೆ. ಈ ಅಗ್ರ ಐದು ರಾಜ್ಯಗಳು 43.92 ರಷ್ಟು ಕೊಲೆ ಪ್ರಕರಣಗಳನ್ನು ದಾಖಲಿಸಿವೆ.

ರಾಜ್ಯ ಪ್ರಕರಣ ನಾಗಾಲ್ಯಾಂಡ್ 21 ಮಿಜೋರಾಂ 31 ಗೋವಾ 44 ಮಣಿಪುರ 47

ಕೇಂದ್ರಾಡಳಿತ ಪ್ರದೇಶಗಳ ಪೈಕಿ ಜಮ್ಮು ಮತ್ತು ಕಾಶ್ಮೀರದಲ್ಲಿ 99, ಪುದುಚೇರಿಯಲ್ಲಿ 30, ಚಂಡೀಗಢದಲ್ಲಿ 18, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ 16, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 7, ಲಡಾಖ್‌ನಲ್ಲಿ ಐದು ಮತ್ತು ಲಕ್ಷದ್ವೀಪದಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಹತ್ಯೆಗೀಡಾದವರಲ್ಲಿ 8,125 ಮಹಿಳೆಯರು ಮತ್ತು ಒಂಬತ್ತು ಟ್ರಾನ್ಸ್‌ಜೆಂಡರ್‌ಗಳು. ಮೃತರಲ್ಲಿ ಸುಮಾರು 70 ಪ್ರತಿಶತ ಪುರುಷರು.

ಮತ್ತಷ್ಟು ಓದಿ: Road Accident Deaths: 2022ರಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ದೆಹಲಿಯಲ್ಲೇ ಹೆಚ್ಚು

ಕೊಲೆಗಳ ಹಿಂದಿನ ಕಾರಣವೇನು? ಈಗ ಭಾರತದಲ್ಲಿ ನಡೆಯುತ್ತಿರುವ ಕೊಲೆಗಳ ಹಿಂದೆ ಏನು ಕಾರಣ ಎಂಬ ಪ್ರಶ್ನೆ ಉದ್ಭವಿಸಿದೆ. ಎನ್‌ಸಿಆರ್‌ಬಿ ವರದಿಯ ಪ್ರಕಾರ, ಕಳೆದ ವರ್ಷ 9,962 ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ನಡೆದಿದ್ದು, ಜನರು ವಿವಾದಗಳಿಂದಾಗಿ ಗರಿಷ್ಠ ಜೀವಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸುತ್ತದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1,130 ವಿವಾದ ಪ್ರಕರಣಗಳು ದಾಖಲಾಗಿವೆ. ಇದರ ನಂತರ, ತಮಿಳುನಾಡಿನಲ್ಲಿ 1,045, ಬಿಹಾರದಲ್ಲಿ 980, ಮಧ್ಯಪ್ರದೇಶದಲ್ಲಿ 726 ಮತ್ತು ಉತ್ತರ ಪ್ರದೇಶದಲ್ಲಿ 710 ಪ್ರಕರಣಗಳು ವರದಿಯಾಗಿವೆ.

ಎರಡನೇ ಪ್ರಮುಖ ಕಾರಣವೆಂದರೆ ವೈಯಕ್ತಿಕ ದ್ವೇಷ ಕಳೆದ ವರ್ಷ ಇಂತಹ 3,761 ಪ್ರಕರಣಗಳು ದಾಖಲಾಗಿದ್ದವು. ಬಿಹಾರ (804), ಮಧ್ಯಪ್ರದೇಶ (364) ಮತ್ತು ಕರ್ನಾಟಕ (353) ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

NCRB ಡೇಟಾ ಪ್ರಕಾರ, ವರದಕ್ಷಿಣೆ, ವಾಮಾಚಾರ, ಮಗು/ನರಬಲಿ, ಕೋಮು/ಧಾರ್ಮಿಕ, ಜಾತೀಯತೆ, ರಾಜಕೀಯ ಕಾರಣಗಳು, ಮರ್ಯಾದಾ ಹತ್ಯೆ ಮತ್ತು ಪ್ರೇಮ ಪ್ರಕರಣಗಳು ಇತರ ಉದ್ದೇಶಗಳಾಗಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್