Triple Talaq: ತ್ರಿವಳಿ ತಲಾಖ್ ಕಾನೂನಿಗೆ 2 ವರ್ಷ; ಆಗಸ್ಟ್ 1ರಂದು ಮುಸ್ಲಿಂ ಮಹಿಳೆಯ ಸ್ವಾತಂತ್ರ್ಯ ದಿನ ಆಚರಿಸಲಿದೆ ಕೇಂದ್ರ ಸರ್ಕಾರ

ಈಕುರಿತು ಅಧಿಕೃತ ಪ್ರಕಟಣೆ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಮುಸ್ಲಿಂ ಮಹಿಳೆಯರಿಗೆ ಸಮಸ್ಯೆಯಾಗಿದ್ದ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸಿರುವುದು ಬಿಜೆಪಿಯ ಹೆಗ್ಗಳಿಕೆ ಎಂದು ವ್ಯಾಖ್ಯಾನಿಸಿದ್ದಾರೆ.

Triple Talaq: ತ್ರಿವಳಿ ತಲಾಖ್ ಕಾನೂನಿಗೆ 2 ವರ್ಷ; ಆಗಸ್ಟ್ 1ರಂದು ಮುಸ್ಲಿಂ ಮಹಿಳೆಯ ಸ್ವಾತಂತ್ರ್ಯ ದಿನ ಆಚರಿಸಲಿದೆ ಕೇಂದ್ರ ಸರ್ಕಾರ
ಸಾಂಕೇತಿಕ ಚಿತ್ರ
TV9kannada Web Team

| Edited By: guruganesh bhat

Jul 31, 2021 | 7:29 PM

ದೆಹಲಿ: ತ್ರಿವಳಿ ತಲಾಖ್ (Triple Talaq) ವಿರುದ್ಧ ಕಾನೂನು ಜಾರಿಯಾಗಿ ಎರಡು ವರ್ಷ ಪೂರ್ಣಗೊಂಡ ಕಾರಣ ನಾಳೆ, ಆಗಸ್ಟ್ 1ರಂದು ದೇಶದಾದ್ಯಂತ ‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ವನ್ನು ಆಚರಿಸುವುದಾಗಿ ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ತಿಳಿಸಿದೆ. ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ (Mukhtar Abbas Naqvi )ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡುವುದು ಕಾನೂನು ಬಾಹಿರ ಎಂಬ ಕಾನೂನನ್ನು 2019ರ ಆಗಸ್ಟ್ 1ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ರಾಜ್ಯಸಭೆಯಲ್ಲಿ ಈ ಕಾಯ್ದೆಗೆ ಅಂಗೀಕಾರ ದೊರೆಯಲು ಕೊಂಚ ಸಮಸ್ಯೆಯನ್ನು ಸಹ ಕೇಂದ್ರ ಸರ್ಕಾರ ಅನುಭವಿಸಿತ್ತು.

ಈಕುರಿತು ಅಧಿಕೃತ ಪ್ರಕಟಣೆ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಮುಸ್ಲಿಂ ಮಹಿಳೆಯರಿಗೆ ಸಮಸ್ಯೆಯಾಗಿದ್ದ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸಿರುವುದು ಬಿಜೆಪಿಯ ಹೆಗ್ಗಳಿಕೆ ಎಂದು ವ್ಯಾಖ್ಯಾನಿಸಿದ್ದಾರೆ. ಈ ಕಾನೂನು ಜಾತಿಯಾದ ನಂತರ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿದ್ದ ಬಹುದೊಡ್ಡ ತೊಂದರೆಯೊಂದು ಪರಿಹಾರವಾದಂತಾಗಿದೆ. ಕಾನೂನು ಜಾರಿಗೊಳಿಸಿರುವುದನ್ನು ಅತ್ಯಂತ ಮುಕ್ತಕಂಠದಿಂದ ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ. ಅಲ್ಲದೇ, ಕೇಂದ್ರ ಸರ್ಕಾರವನ್ನು ಕೊಂಡಾಡಿದ್ದಾರೆ ಎಂದು ಸಹ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದರು. ರವಿವಾರ ದೆಹಲಿಯಲ್ಲಿ ನಡೆಯಲಿರುವ ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರವ ಜತೆಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಪರಿಸರ ಸಚಿವ ಭೂಪೇಂದರ್ ಯಾದವ್ ಸಹ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: 

ತ್ರಿವಳಿ ತಲಾಖ್ ತಿದ್ದುಪಡಿ ಕಾನೂನಿಗೆ 1 ವರ್ಷ, ಬಿಜೆಪಿ ನಾಯಕರಲ್ಲಿ ಹರ್ಷ

Explainer: ಭಾರತದಲ್ಲಿ ಕಣ್ಗಾವಲು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕಾದ 7 ಪ್ರಮುಖ ವಿಷಯಗಳು

(Muslim Women rights day on August 1 for commemorate Triple Talaq Law fulfills 2 years)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada