ಸಂಸತ್ನಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆಗೆ ಅಂಗೀಕಾರ
ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ಅವರು ಮಸೂದೆಯ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸುವಾಗ ಪ್ರಸ್ತುತ ಭಾರತವು ವರ್ಷಕ್ಕೆ ಸುಮಾರು 6,000 ಪರೀಕ್ಷೆಗಳನ್ನು ಮಾತ್ರ ನಡೆಸಬಹುದು. ಪರೀಕ್ಷಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಈ ಕಾನೂನು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (National Anti-Doping Agency)ಮತ್ತು ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿಯ(National Dope Testing Laboratory) ಕಾರ್ಯನಿರ್ವಹಣೆಗೆ ಶಾಸನಬದ್ಧ ಚೌಕಟ್ಟನ್ನು ಒದಗಿಸುವ ಉದ್ದೀಪನ ಮದ್ದು ತಡೆ ಮಸೂದೆಯನ್ನು ಸಂಸತ್ ಬುಧವಾರ ಅಂಗೀಕರಿಸಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ, 2022 (National Anti-Doping Bill, 2022) ಅನ್ನು ರಾಜ್ಯಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಯಿತು. ಕೆಲವು ಅಧಿಕೃತ ತಿದ್ದುಪಡಿಗಳೊಂದಿಗೆ ಲೋಕಸಭೆಯು ಕಳೆದ ವಾರ ಈ ಮಸೂದೆಯನ್ನು ಅಂಗೀಕರಿಸಿತ್ತು. ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ಅವರು ಮಸೂದೆಯ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸುವಾಗ ಪ್ರಸ್ತುತ ಭಾರತವು ವರ್ಷಕ್ಕೆ ಸುಮಾರು 6,000 ಪರೀಕ್ಷೆಗಳನ್ನು ಮಾತ್ರ ನಡೆಸಬಹುದು. ಪರೀಕ್ಷಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಈ ಕಾನೂನು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಯಾವುದೇ ದೊಡ್ಡ ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್ ಮಾಡುವುದಾದರೆ ಅಗತ್ಯವಿರುವ ಪರೀಕ್ಷೆಗಳ ಸಂಖ್ಯೆ ತಿಂಗಳಿಗೆ 10,000 ಆಗಿರುತ್ತದೆ ಎಂದು ಅವರು ಹೇಳಿದರು.
ಈ ಮಸೂದೆ ಅಂಗೀಕಾರದೊಂದಿಗೆ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ತಪಾಸಣೆಗೆ ಸಂಬಂಧಿಸಿದಂತೆ ತಮ್ಮದೇ ಆದ ಕಾನೂನುಗಳನ್ನು ಹೊಂದಿರುವ ಅಮೆರಿಕ , ಚೀನಾ, ಜಪಾನ್ ಮತ್ತು ಫ್ರಾನ್ಸ್‌ನಂತಹ ರಾಷ್ಟ್ರಗಳ ಗುಂಪಿಗೆ ಭಾರತ ಸೇರಲಿದೆ ಎಂದು ಠಾಕೂರ್ ಹೇಳಿದರು.
“NADA ने एंटीडोपिंग अवेयरनेस टूलकिट को डेवलॅप किया है, टेक्नोलॉजी का उपयोग करके। स्कूल के बच्चों को भी जानकारी देंगे की डोपिंग होती क्या है और कैसे होती है”
– श्री @ianuragthakur राष्ट्रीय डोपिंग रोधी विधेयक 2022 पर #RajyaSabha pic.twitter.com/9yAMdUA8tP
— Office of Mr. Anurag Thakur (@Anurag_Office) August 3, 2022
ಪ್ರತಿಪಕ್ಷಗಳು ಮಂಡಿಸಿದ ಹಲವಾರು ತಿದ್ದುಪಡಿಗಳನ್ನು ನಿರಾಕರಿಸಲಾಯಿತು.
ಮಸೂದೆಯು “ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಏಜೆನ್ಸಿ (ನಾಡಾ), ರಾಷ್ಟ್ರೀಯ ಡೋಪ್ ಪರೀಕ್ಷಾ ಪ್ರಯೋಗಾಲಯ (ಎನ್‌ಡಿಟಿಎಲ್) ಮತ್ತು ಇತರ ಉದ್ದೀಪನಾ ಪರೀಕ್ಷಾ ಪ್ರಯೋಗಾಲಯಗಳ ಕಾರ್ಯಾಚರಣೆಗೆ ಶಾಸನಬದ್ಧ ಚೌಕಟ್ಟನ್ನು ಒದಗಿಸಲು ಮತ್ತು ಉದ್ದೀಪನಾ ಮದ್ದು ವಿರೋಧಿ ರಾಷ್ಟ್ರೀಯ ಮಂಡಳಿ ರಚಿಸುವ ಉದ್ದೇಶ ಹೊಂದಿದೆ.
ಇದು ನಾಡಾಗೆ ತನಿಖೆ, ಉದ್ದೀಪನ ಮದ್ದು ವಿರೋಧಿ ನಿಯಮ ಉಲ್ಲಂಘನೆಗಳಿಗೆ ನಿರ್ಬಂಧಗಳನ್ನು ವಿಧಿಸುವುದು, ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಕಾರ್ಯವಿಧಾನಗಳು ಮತ್ತು ತಪಾಸಣೆ, ಮಾದರಿ ಸಂಗ್ರಹಣೆ ಮತ್ತು ಮಾಹಿತಿಯ ಮುಕ್ತ ಹರಿವಿನ ಅಧಿಕಾರಗಳನ್ನು ನೀಡಲು ಪ್ರಯತ್ನಿಸುತ್ತದೆ.