National Technology Day: ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಲು ಕಾರಣವೇನು?

ಮೇ 11, 1998 ರಂದು, ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸುವ ಮೂಲಕ ಜಗತ್ತನ್ನು ಬೆರಗುಗೊಳಿಸಿದರು.

National Technology Day: ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಲು ಕಾರಣವೇನು?
ಸಾಂದರ್ಭಿಕ ಚಿತ್ರ Image Credit source: Wikimedia Commons
Follow us
ನಯನಾ ಎಸ್​ಪಿ
|

Updated on:May 13, 2023 | 3:28 PM

1998 ರಿಂದ, ಭಾರತದಲ್ಲಿ ಮೇ 11 ಅನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು (National Technology Day) ಗುರುತಿಸಲಾಗಿದೆ. ಪೋಖ್ರಾನ್‌ನಲ್ಲಿ ಭಾರತದ ಐತಿಹಾಸಿಕ ಪರಮಾಣು ಪರೀಕ್ಷೆಯನ್ನು (Pokhran Nuclear Test) ಸ್ಮರಿಸಲು ಮತ್ತು ನೆನಪಿಸಿಕೊಳ್ಳಲು ಈ ದಿನವನ್ನು ಗುರುತಿಸಲಾಗಿದೆ. ಡಾ ಎಪಿಜೆ ಅಬ್ದುಲ್ ಕಲಾಂ (Dr. APJ Abdul Kalam) ಮತ್ತು ಅವರ ತಂಡವು 1950 ರ ದಶಕದಲ್ಲಿ ಹೋಮಿ ಜಹಾಂಗೀರ್ ಭಾಬಾ ಅವರು 1988 ರಲ್ಲಿ ವಾಸ್ತವಿಕ ಯೋಜನೆಯಾಗಿ ರೂಪಿಸಿದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಸಾಧಿಸಿದರು. ಮೇ 11, 1998 ರಂದು, ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸುವ ಮೂಲಕ ಜಗತ್ತನ್ನು ಬೆರಗುಗೊಳಿಸಿದರು.

1998 ರ ಪರೀಕ್ಷೆಗಳು ಭಾರತದ ಮೊದಲ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯಾಗಿರಲಿಲ್ಲ. ಇಂದಿರಾ ಗಾಂಧಿಯವರ ನೇತೃತ್ವದಲ್ಲಿ “ಸ್ಮೈಲಿಂಗ್ ಬುದ್ಧ” ಎಂಬ ಹೆಸರಿನಲ್ಲಿ1974 ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ನಡೆಸಲಾದ ಮೊದಲ ಯಶಸ್ವಿ ಪರೀಕ್ಷೆಯಾಗಿತ್ತು.

ಭಾರತ ಮತ್ತು ಪರಮಾಣು ಪರೀಕ್ಷೆಗಳು

ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ಅಧಿಕಾರಿಗಳು ಸಂಪೂರ್ಣವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುತ್ತಿದ್ದರು. 1945 ರಲ್ಲಿ, ಹಿರೋಷಿಮಾ ಮತ್ತು ನಾಗಸಾಕಿ ಪರಮಾಣು ದಾಳಿಯ ಭೀಕರತೆಯನ್ನು ಜಗತ್ತು ನೋಡಿತ್ತು. ಮಹಾತ್ಮಾ ಗಾಂಧಿಯವರ ಪ್ರಕಾರ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯು ನೈತಿಕವಾಗಿ ತಪ್ಪು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕೂಡ ಅದೇ ರೀತಿ ಜಾಗರೂಕರಾಗಿದ್ದರು ಆದರೆ ಈ ವಿಷಯದ ಕುರಿತು ತಿಳಿದುಕೊಳ್ಳಲು ಮುಕ್ತವಾಗಿದ್ದರು.

ಇನ್ನು, 1962 ರಲ್ಲಿ ಭಾರತ-ಚೀನಾ ಯುದ್ಧದಲ್ಲಿ ಭಾರತದ ಸೋಲಿನ ಪರಿಣಾಮವಾಗಿ, ರಾಷ್ಟ್ರೀಯ ಭದ್ರತೆಯ ಬಗ್ಗೆ ಗಂಭೀರ ಕಾಳಜಿಗಳು ಹುಟ್ಟಿಕೊಂಡವು.

1974 ರಲ್ಲಿ ಭಾರತವು ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ರಾಜಸ್ಥಾನದ ಪೋಖ್ರಾನ್‌ನಲ್ಲಿ “ಸ್ಮೈಲಿಂಗ್ ಬುದ್ಧ” ಎಂದು ಹೆಸರಿನಲ್ಲಿ ಮಾಡಿತು. ಈ ಪರೀಕ್ಷೆಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು “ಶಾಂತಿಯುತ ಪರಮಾಣು ಸ್ಫೋಟ” ಎಂದು ಬಣ್ಣಿಸಿದರು. ಅಂದಿನ ಈ ನಡೆ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿತು.

ಭಾರತ ಪರಮಾಣು ಪರೀಕ್ಷೆ ನಡೆಸಲು ಕಾರಣವೇನು?

ಭಾರತವು 1974 ರಲ್ಲಿ ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ತನ್ನ ಏಕೈಕ ಪರಮಾಣು ಪರೀಕ್ಷೆಯನ್ನು ನಡೆಸಿತು, ಆದರೆ ಆ ಪರೀಕ್ಷೆಯ ನಂತರ, ಭಾರತವು ‘ನಾನ್-ವೆಪನೈಸ್ಡ್ ಡಿಟೆರೆನ್ಸ್’ ಎಂದು ಕರೆಯಲ್ಪಡುವ ಮಾರ್ಗವನ್ನು ಅಳವಡಿಸಿಕೊಂಡಿತು. ಆದರೆ1990 ರಲ್ಲಿ, ಭಾರತವು ಈ ಮೂರು ಕಾರಣಕ್ಕೆ ಪರಮಾಣು ಪರೀಕ್ಷೆಗೆ ನಡೆಸಬೇಕಾಯಿತು.

ಪಾಕಿಸ್ತಾನ: ಈಗಾಗಲೇ ಸಿದ್ಧವಾಗಿರುವ ಪರಮಾಣು ಶಸ್ತ್ರಾಸ್ತ್ರಗಳ ಗುಪ್ತಚರವನ್ನು ಹೊಂದಿದ್ದ ಭಾರತದ ಹತ್ತಿರದ ಸ್ಪರ್ಧಿ ರಾಷ್ಟ್ರವಾದ ಪಾಕಿಸ್ತಾನದಿಂದ ಮೊದಲ ಹಂತದ ಒತ್ತಡ ಬಂದಿತು. ಭಾರತವನ್ನು ದೂರವಿಡುವ ಸಲುವಾಗಿ ಚೀನಾ ಈ ಸಿದ್ಧ ಅಣ್ವಸ್ತ್ರಗಳನ್ನು ಪಾಕಿಸ್ತಾನಕ್ಕೆ ತಲುಪಿಸುತ್ತಿದೆ ಎಂದು ಆ ಸಮಯದಲ್ಲಿ ಹಲವಾರು ವದಂತಿಗಳಿದ್ದವು.

ಅಮೇರಿಕಾ: ಒತ್ತಡದ ಎರಡನೇ ಮೂಲವು ಅಮೇರಿಕಾದಿಂದ ಬಂದಿದೆ. ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯ ಹಾದಿಯನ್ನು ಮುಚ್ಚಲು, ಪ್ರಸರಣ ರಹಿತ ಒಪ್ಪಂದವನ್ನು (NPT) ಅಮೇರಿಕಾ ಇತರ ರಾಷ್ಟ್ರಗಳಿಗೆ ವಿಸ್ತರಿಸಿತು, ಈ ಸಮಯದಲ್ಲಿ ಈ ಒಪ್ಪದಕ್ಕೆ ಸಹಿ ಹಾಕುವಂತೆ ಭಾರತಕ್ಕೆ ಒತ್ತಾಯಿಸಿತು.

ಮತ್ತೊಂದು ಕಾರಣವೆಂದರೆ ಮಾರ್ಚ್ 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತವನ್ನು ಪುನಃ ಸ್ಥಾಪಿಸಲಾಯಿತು. ಆಡಳಿತವು ತ್ವರಿತವಾಗಿ ಹೆಚ್ಚಿನ ಪರಮಾಣು ಪರೀಕ್ಷೆಯನ್ನು ಅನುಮೋದಿಸಿತು. ಕ್ಷಿಪಣಿ ಯೋಜನೆಗೆ ಹೆಚ್ಚುವರಿಯಾಗಿ “ಪರಮಾಣು ಶಸ್ತ್ರಾಸ್ತ್ರಗಳನ್ನು ಸೇರಿಸುವ ಆಯ್ಕೆಯನ್ನು ನಿರ್ಧಿಷ್ಟ ಮಾಡಲು” 1998 ರ ಬಾಜ್‌ಪೇಯಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಿದರು.

ಇದು ಭಾರತ ಮತ್ತು ಭಾರತದಲ್ಲಿ ನಡೆದ ಪರಮಾಣು ಪರೀಕ್ಷೆಗಳ ಇತಿಹಾಸ. ಅಂದಿನಿಂದ ಇಂದಿನ ವರೆಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಬೆಳವಣಿಗೆ ಕಂಡಿದೆ. ಇನ್ನು ಮುಂದಿನ 5 ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಬೇಡಿಕೆ ಇರಲಿದೆ ಎಂದು ಸಾಕಷ್ಟು ವರದಿಗಳು ತಿಳಿಸಿದೆ.

ಇದನ್ನೂ ಓದಿ: ಇಂದು ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ: ಇದರ ಇತಿಹಾಸ, ಮಹತ್ವವೇನು?

ನ್ಯಾಟಿನಲ್ ಟೆಕ್ನಾಲಜಿ ದಿನದ ಸಂದರ್ಭದಲ್ಲಿ ಮಾತನಾಡಿದ ಲರ್ನ್ ಬೇ ಸಂಸ್ಥಾಪಕ ಮತ್ತು ಸಿಇಓ ಕೃಷ್ಣ ಕುಮಾರ್, “ಕಳೆದ ಕೆಲವು ವರ್ಷಗಳಿಂದ, ನಮ್ಮ ಜೀವನದಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆಯು ತೀವ್ರವಾಗಿ ಬೆಳೆದಿದೆ. ನಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರವನ್ನು ಹೊಂದಿದೆ, ಆದರೆ ಶಿಕ್ಷಣವನ್ನು ಸುಧಾರಿಸುವಲ್ಲಿ ಅದರ ಪ್ರಭಾವವು ವಿಶೇಷವಾಗಿ ಗಮನಾರ್ಹವಾಗಿದೆ. 2023ರ ರಾಷ್ಟ್ರೀಯ ತಂತ್ರಜ್ಞಾನ ದಿನದ ಥೀಮ್ ನಮ್ಮ ಜೀವನಕ್ಕೆ ಹೆಚ್ಚು ಪ್ರಸ್ತುತವಾಗಿದೆ. ಹೊಸ ಯುಗದ ಡಿಜಿಟಲ್ ಆರ್ಥಿಕ ಕೌಶಲ್ಯಗಳ ತಿಳುವಳಿಕೆ ಹೊಂದಿರುವವರು ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ವಿಧಾನವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗುತ್ತಾರೆ”, ಎಂದು ತಿಳಿಸಿದ್ದಾರೆ.

Published On - 1:10 pm, Thu, 11 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ