NeoCoV: ನಿಯೋ ಕೊವ್​ ಬಗ್ಗೆ ಹೆದರುವ ಅಗತ್ಯ ಇಲ್ಲವೇ ಇಲ್ಲ, ಇದು ಕೊರೊನಾದ ರೂಪಾಂತರಿ ಅಲ್ಲ; ಅಧ್ಯಯನ ತಿಳಿಸಿದೆ ಒಂದು ಗುಡ್​ ನ್ಯೂಸ್ !

ನಿಯೋ ಕೊವ್​ ಬಗ್ಗೆ ಕೆಲವರು ತಜ್ಞರು ಅಧ್ಯಯನ ಮಾಡಿದ್ದಾರೆ. ಆ ಅಧ್ಯಯನ ಸಾರಾಂಶದ ಪ್ರಕಾರ ಇದು ಕೊರೊನಾದ ಇನ್ನೊಂದು ತಳಿ  ಅಲ್ಲ. ಬದಲಿಗೆ ನಿಯೋ ಕೊವ್​ ಎಂಬುದು ಮರ್ಸ್​-ಕೊವ್​ (MERS-CoV) ವೈರಸ್​​ನ ತಳಿಯಾಗಿದೆ.

NeoCoV: ನಿಯೋ ಕೊವ್​ ಬಗ್ಗೆ ಹೆದರುವ ಅಗತ್ಯ ಇಲ್ಲವೇ ಇಲ್ಲ, ಇದು ಕೊರೊನಾದ ರೂಪಾಂತರಿ ಅಲ್ಲ; ಅಧ್ಯಯನ ತಿಳಿಸಿದೆ ಒಂದು ಗುಡ್​ ನ್ಯೂಸ್ !
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 29, 2022 | 11:15 AM

ಕೊರೊನಾ ವೈರಸ್ ಜಗತ್ತಿಗೆ ಕಾಲಿಟ್ಟು ಎರಡು ವರ್ಷಗಳೇ ಕಳೆಯಿತು. ಈಗೀಗ ಕೊರೊನಾದ ರೂಪಾಂತರಿ ತಳಿಗಳ ಕಾಟವೂ ಹೆಚ್ಚಾಗಿದೆ. ಆಲ್ಪಾ, ಡೆಲ್ಟಾ, ಒಮಿಕ್ರಾನ್​ ಬಳಿಕ ಇದೀಗ ಕೊರೊನಾದ ಇನ್ನೊಂದು ಮಾರಕ ತಳಿ ಹರಡುವಿಕೆ ಶುರುವಾಗಿದೆ ಎಂದು ವರದಿಯಾಗಿದ್ದು, ಜನರನ್ನು ಇನ್ನಷ್ಟು ಆತಂಕಕ್ಕೆ ನೂಕಿದೆ. ಕೊರೊನಾ ಎಂಬುದು ಮೊದಲು ಶುರುವಾಗಿದ್ದು, ಚೀನಾದಲ್ಲಿ 2019ರಲ್ಲಿ. ನಂತರ ಅದನ್ನು ಸಾರ್ಸ್​-ಕೊವ್​-2(SARS-CoV-2) ಎಂದು ಕರೆಯಲಾಯಿತು. ಇಡೀ ಜಗತ್ತಿನ ಚಲನೆಗೆ ಅಡ್ಡಗಾಲು ಹಾಕಿದ ವೈರಸ್​ ಎಂಬ ಕುಖ್ಯಾತಿ ಕೊರೊನಾದ್ದು. ಅದರಲ್ಲೂ ಈ ವೈರಸ್​​​ನ ಒಂದೊಂದೇ ರೂಪಾಂತರ (Mutation)ಹೊರಬರುತ್ತಿದ್ದಂತೆ ಇನ್ನಷ್ಟು ಭಯ ಆವರಿಸುತ್ತಲೇ ಹೋಗುತ್ತಿದೆ. ಸೋಂಕಿತರ ಸಂಖ್ಯೆ ಇನ್ನೆಷ್ಟು ಹೆಚ್ಚುತ್ತದೆಯೋ? ಎಷ್ಟು ಜನ ಹೊಸ ತಳಿಗೆ ತುತ್ತಾಗುತ್ತಾರೋ? ಅದೆಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೋ ಎಂಬಿತ್ಯಾದಿ ಹೆದರಿಕೆ ಸಹಿತ ಪ್ರಶ್ನೆಗಳು ಏಳುತ್ತಲೇ ಇರುತ್ತಿವೆ ಮತ್ತು ಒಂದಷ್ಟು ಊಹಾಪೋಹಗಳು, ವಿವಿಧ ಅಧ್ಯಯನ ಆಧಾರಿತ ವರದಿಗಳು ಜನರಲ್ಲಿ ಗೊಂದಲವನ್ನೂ ಮೂಡಿಸುತ್ತಿವೆ.. 

ಸದ್ಯ ಜಗತ್ತು ಒಮಿಕ್ರಾನ್​ ರೂಪಾಂತರಿ ವೈರಸ್​​ನ ಅಲೆಯಲ್ಲಿ ಇದೆ. ಭಾರತದಲ್ಲೂ ಮೂರನೇ ಅಲೆಗೆ ಕಾರಣವಾಗಿದ್ದು ಕೊರೊನಾದ ಇತ್ತೀಚಿನ ರೂಪಾಂತರಿ ಒಮಿಕ್ರಾನ್​. ಇದು ಬಂದ ಮೇಲೆ ಭಾರತದಲ್ಲಿ ಒಂದೇ ಸಮ ಏರಿಕೆಯಾಗಿ, ದಿನದಲ್ಲಿ 3 ಲಕ್ಷಕ್ಕೂ ಹೆಚ್ಚಾಗಿ ದಾಖಲಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಕೊರೊನಾದ ಇನ್ನೊಂದು ರೂಪಾಂತರಿ ಕಾಲಿಟ್ಟಿದ್ದಾಗಿ ವರದಿಯಾಗಿದ್ದು, ಅದರ ಹೆಸರು ನಿಯೋಕೊವ್​ (NeoCoV). ಈ NeoCoV ಅದೆಷ್ಟರ ಮಟ್ಟಿಗೆ ಸಂಚಲನ ಮೂಡಿಸಿದೆ ಎಂದರೆ, ಅದರ ಹೆಸರು ಹೊರಬಿದ್ದಾಗಿನಿಂದ, ಜನವರಿ 28ರವರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ NeoCoV ಬಗ್ಗೆ ಗೂಗಲ್​ ಮತ್ತಿತರ ಆನ್​​ಲೈನ್​​ ಆ್ಯಪ್​ಗಳಲ್ಲಿ ಸರ್ಚ್​ ಮಾಡಿದ್ದಾರೆ. ನಿಯೋಕೊವ್​ ಎಂದರೇನು? ಅದು ಕೊರೊನಾದ ಇನ್ನೊಂದು ತಳಿ ಹೌದಾ? ಎಷ್ಟು ಮಾರಣಾಂತಿಕ? ನಿಯೋಕೊವ್​ ಪ್ರಸರಣದ ವೇಗವೆಷ್ಟು..ಹೀಗೆ ವಿವಿಧ ಪ್ರಶ್ನೆಗಳನ್ನು ಟೈಪಿಸಿ, ಸರ್ಚ್​ ಮಾಡಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ನಿಯೋಕೊವ್​ಗೆ ಹೆದರಲೇಬೇಡಿ ! ಹೀಗೊಂದು ಅಧ್ಯಯನ ಪೂರಕ ಸಂದೇಶವನ್ನು ಇಂಡಿಯಾ ಟುಡೆ ನೀಡಿದೆ. ಕೆಲವು ವೈದ್ಯಕೀಯ ತಜ್ಞರು, ಆರೋಗ್ಯ ಕ್ಷೇತ್ರದ ಸ್ಪೆಶಲಿಸ್ಟ್​​ಗಳ ಟ್ವೀಟ್​ಗಳು, ಹೇಳಿಕೆಗಳನ್ನು ಉಲ್ಲೇಖ ಮಾಡಿ ವರದಿ ನೀಡಿರುವ ಇಂಡಿಯಾ ಟುಡೆ, ನಿಯೋಕೊವ್​ ಕೊವಿಡ್​ 19ನ ಹೊಸ ತಳಿಯಲ್ಲ. ಅಷ್ಟೇ ಏಕೆ, NeoCoV ಎಂಬುದು ಜಗತ್ತಿಗೆ ಹೊಸ ವೈರಸ್​ ಕೂಡ ಅಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.  ನಿಯೋಕೊವ್​ ಬಗ್ಗೆ ಇದೀಗ ಅಲರ್ಟ್​ ಮಾಡಿದ್ದು ಚೀನಾ ವಿಜ್ಞಾನಿಗಳ ಗುಂಪು. ಹಾಗಂತ ಇವರ ಅಧ್ಯಯನ ಇನ್ನೂ ಕೂಡ ತಜ್ಞರಿಂದ ಪರಿಶೀಲನೆ ಆಗಿದ್ದಲ್ಲ. ಹಾಗಂತ ನಿಯೋಕೊವ್​ ಹೆಸರು ಕೇಳಿದಾಕ್ಷಣ, ನೀವೆಲ್ಲ ಇದು ಪಕ್ಕಾ ಕೊರೊನಾದ ಇನ್ನೊಂದು ತಳಿಯೇ ಎಂದು ಭಯಭೀತರಾಗುವ ಅವಶ್ಯಕತೆಯೂ ಇಲ್ಲ.

ನಿಯೋಕೊವ್​ ಹೊಸ ವೈರಸ್​ ಅಲ್ಲ ನಿಯೋ ಕೊವ್​ ಬಗ್ಗೆ ಕೆಲವರು ತಜ್ಞರು ಅಧ್ಯಯನ ಮಾಡಿದ್ದಾರೆ. ಆ ಅಧ್ಯಯನ ಸಾರಾಂಶದ ಪ್ರಕಾರ ಇದು ಕೊರೊನಾದ ಇನ್ನೊಂದು ತಳಿ  ಅಲ್ಲ. ಬದಲಿಗೆ ನಿಯೋ ಕೊವ್​ ಎಂಬುದು ಮರ್ಸ್​-ಕೊವ್​ (MERS-CoV) ವೈರಸ್​​ನ ತಳಿಯಾಗಿದೆ. ಅದರೆ ಇದು ಕೊರೊನಾ ವೈರಸ್ ಕುಟುಂಬದ್ದೇ ಆಗಿದೆ. ಅಂದರೆ ಇದು ಹೊಸ ಕೊರೊನಾ ವೈರಸ್ ಆಗಿದ್ದು, ಮನುಷ್ಯರ ಮೇಲೆ ಪರಿಣಾಮ ಬೀರಬಹುದು. ಆದರೆ ಇದುವರೆಗೆ ಕೇವಲ ಬಾವಲಿಗಳಲ್ಲಿ ಮಾತ್ರ ಪತ್ತೆಯಾಗಿದ್ದು, ಮನುಷ್ಯರಲ್ಲಿ ಕಂಡುಬಂದಿಲ್ಲ. ಹಾಗಂತ ನಿಯೋ ಕೊವ್​ ಹೊಸ ವೈರಸ್ ಅಲ್ಲ, 2010ರ ಸಮಯದಲ್ಲೇ ಸೌದಿ ಅರೇಬಿಯಾ, ಯುನೈಟೆಡ್​ ಅರಬ್​ ಎಮಿರೇಟ್ಸ್​, ದಕ್ಷಿಣ ಕೊರಿಯಾಗಳಲ್ಲಿ ಕಾಣಿಸಿಕೊಂಡಿತ್ತು. ಈ ಮರ್ಸ್​ ಕೊವ್​  ಪ್ರಬೇಧದ ಕೊರೊನಾ ವೈರಸ್​ ನಿಯೋ ಕೊವ್​ ತಗುಲಿದವರು ಶೇ.35ರಷ್ಟು ಮಂದಿ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಹೇಳಿದೆ.  ಆದರೆ ಇನ್ನೊಂದೆಡೆ, ವೈದ್ಯಕೀಯ ತಜ್ಞ ರಾಜೇಶ್​ ಜಯದೇವನ್​ ಟ್ವೀಟ್ ಮಾಡಿ, ನಿಯೋ ಕೊವ್​ ಖಂಡಿತ ಹೊಸ ವೈರಸ್ ಅಲ್ಲ. 2013ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೂಡ ಬಾವಲಿಗಳಲ್ಲಿ ಕಾಣಿಸಿಕೊಂಡಿತ್ತು. ಅದು ಮನುಷ್ಯರಿಗೆ ತಗುಲುವುದಿಲ್ಲ. ಯಾರನ್ನೂ ಕೊಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಯೋಕೊವ್​ ಅಧ್ಯಯನ ವರದಿ ಸಾರಾಂಶ ಹೀಗಿದೆ.. 1. ನಿಯೋ ಕೊವ್​ ಬಾವಲಿಗಳಲ್ಲಿ ಕಂಡುಬರುತ್ತದೆ. ಇದುವರೆಗೆ ಮನುಷ್ಯರಲ್ಲಿ ಕಾಣಿಸಿಕೊಂಡ ವರದಿಯಾಗಿಲ್ಲ. 2. MERS-CoV ಗೆ ಹತ್ತಿರವಾದ ಹೊಸ ಕೊರೊನಾ ವೈರಸ್ ಆಗಿದ್ದು, ಕೆಲವು ವಿಧದ ಬಾವಲಿಗಳ ಎಸಿಇ2 (ಗ್ರಾಹಕಗಳು ಎಂದು ಕರೆಯಲ್ಪಡುವ ಜೀವಕೋಶಗಳು)ಮೂಲಕ ಹರಡುತ್ತವೆ. 3. ನಿಯೋ ಕೊವ್​ ಕೊರೊನಾ ವೈರಸ್​ಗಳು T510F ರೂಪಾಂತರವಾದರೆ ಮಾತ್ರ ಮನುಷ್ಯರಿಗೆ ತಗುಲಬಹುದು. ಅಲ್ಲಿಯವರೆಗೂ ಮಾನವರಿಗೆ ತಗುಲಲಾರವು.

ನಿಯೋ ಕೊವ್​ ಎಂಬ ಹೆಸರು ಕೇಳಿದ ತಕ್ಷಣ ಅದು ಸದ್ಯ ಇರುವ ಕೊರೊನಾ ವೈರಸ್​ನ ರೂಪಾಂತರ ಎಂದು ಭಾವಿಸುವ ಅಗತ್ಯವೇ ಇಲ್ಲ. ಈ ವೈರಸ್​ ಬಗ್ಗೆ ಈಗಾಗಲೇ ಅನೇಕ ರೀತಿಯ ಊಹಾಪೋಹಗಳು ಎದ್ದಿವೆ. ಆದರೆ ನಿಯೋ ಕೊವ್​ ಎಂಬುದು ಒಂದು ನಿರ್ದಿಷ್ಟ ರೂಪಾಂತರಕ್ಕೆ ಒಳಗಾಗುವರೆಗೂ ಅದು ಮನುಷ್ಯರಿಗೆ ತಗುಲುವುದಿಲ್ಲ ಎಂಬುದು ಹಲವು ತಜ್ಞರ ಸ್ಪಷ್ಟನೆಯಾಗಿವೆ. ಹೀಗಾಗಿ ಸದ್ಯಕ್ಕೆ ಯಾರೂ ಆತಂಕ, ಗಾಬರಿಗೆ ಒಳಗಾಗುವ ಅಗತ್ಯವಿಲ್ಲ.

ಇದನ್ನೂ ಓದಿ: U19 World Cup 2022: ಇಂದು ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ: ಯಾವುದರಲ್ಲಿ ನೇರ ಪ್ರಸಾರ, ಎಷ್ಟು ಗಂಟೆಗೆ ಪಂದ್ಯ?

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್