ನಿರ್ಭಯಾ ರೇಪ್ ಅಂಡ್ ಮರ್ಡರ್: ನೇಣು ಕುಣಿಕೆಯಿಂದ ಪಾರಾದ ನರರೂಪಿ ರಾಕ್ಷಸರು?

ದೆಹಲಿ: ಪಾಪಿ ಚಿರಾಯು ಅನ್ನೋ ಮಾತು ನಿರ್ಭಯಾ ಹಂತಕರಿಗೆ ಹೋಲಿಕೆಯಾಗ್ತಿದೆ. ಯಾಕಂದ್ರೆ ಈ ನರರೂಪಿ ರಾಕ್ಷಸರ ಕೃತ್ಯ ಸಾಬೀತಾಗಿ, ಗಲ್ಲುಶಿಕ್ಷೆ ವಿಧಿಸಿದ್ದರೂ ಒಂದಿಲ್ಲೊಂದು ಅಡೆ-ತಡೆಯಿಂದ ನೇಣಿಗೇರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 2ನೇ ಬಾರಿಗೆ ಡೆತ್ ವಾರೆಂಟ್ ಹೊರಡಿಸಿದ್ದರೂ ಅದನ್ನ ಜಾರಿಗೆ ತರಲು ಆಗುತ್ತಿಲ್ಲ. ಅಷ್ಟಕ್ಕೂ ಈ ಬಾರಿ ಅಡ್ಡಿಯಾಗಿರೋ ಅಂಶವಾದ್ರು ಏನು..? ಅನ್ನೋದಾದ್ರೆ.. ಅಬಲೆಯ ಮೇಲೆ ಮೃಗಗಳಂತೆ ಎರಗಿ, ಹತ್ಯೆಗೈದ ನರರೂಪಿ ರಾಕ್ಷಸರಿಗೆ ನೇಣಿಗೇರಿಸಲು ಸಾಧ್ಯವಾಗುತ್ತಿಲ್ಲ. ಇಡೀ ದೇಶವನ್ನೇ ನಡುಗಿಸಿದ್ದ ನಿರ್ಭಯಾ ರೇಪ್ ಌಂಡ್ ಮರ್ಡರ್ ಕೇಸ್​ನಲ್ಲಿ […]

ನಿರ್ಭಯಾ ರೇಪ್ ಅಂಡ್ ಮರ್ಡರ್: ನೇಣು ಕುಣಿಕೆಯಿಂದ ಪಾರಾದ ನರರೂಪಿ ರಾಕ್ಷಸರು?
Follow us
ಸಾಧು ಶ್ರೀನಾಥ್​
|

Updated on:Jan 22, 2020 | 10:23 AM

ದೆಹಲಿ: ಪಾಪಿ ಚಿರಾಯು ಅನ್ನೋ ಮಾತು ನಿರ್ಭಯಾ ಹಂತಕರಿಗೆ ಹೋಲಿಕೆಯಾಗ್ತಿದೆ. ಯಾಕಂದ್ರೆ ಈ ನರರೂಪಿ ರಾಕ್ಷಸರ ಕೃತ್ಯ ಸಾಬೀತಾಗಿ, ಗಲ್ಲುಶಿಕ್ಷೆ ವಿಧಿಸಿದ್ದರೂ ಒಂದಿಲ್ಲೊಂದು ಅಡೆ-ತಡೆಯಿಂದ ನೇಣಿಗೇರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 2ನೇ ಬಾರಿಗೆ ಡೆತ್ ವಾರೆಂಟ್ ಹೊರಡಿಸಿದ್ದರೂ ಅದನ್ನ ಜಾರಿಗೆ ತರಲು ಆಗುತ್ತಿಲ್ಲ. ಅಷ್ಟಕ್ಕೂ ಈ ಬಾರಿ ಅಡ್ಡಿಯಾಗಿರೋ ಅಂಶವಾದ್ರು ಏನು..? ಅನ್ನೋದಾದ್ರೆ..

ಅಬಲೆಯ ಮೇಲೆ ಮೃಗಗಳಂತೆ ಎರಗಿ, ಹತ್ಯೆಗೈದ ನರರೂಪಿ ರಾಕ್ಷಸರಿಗೆ ನೇಣಿಗೇರಿಸಲು ಸಾಧ್ಯವಾಗುತ್ತಿಲ್ಲ. ಇಡೀ ದೇಶವನ್ನೇ ನಡುಗಿಸಿದ್ದ ನಿರ್ಭಯಾ ರೇಪ್ ಌಂಡ್ ಮರ್ಡರ್ ಕೇಸ್​ನಲ್ಲಿ ಅಪರಾಧಿಗಳಿಗೆ ವಿಧಿಸಿರುವ ಶಿಕ್ಷೆಯನ್ನೇ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಮೊದಲ ಬಾರಿ ಡೆತ್ ವಾರಂಟ್ ಜಾರಿಯಾದ ಸಂದರ್ಭದಲ್ಲಿ ಹಲವು ಅಡೆ, ತಡೆ ಎದುರಾಗಿ ಬ್ರೇಕ್ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ 2ನೇ ಬಾರಿಗೆ ಡೆತ್ ವಾರೆಂಟ್ ಹೊರಡಿಸಿದ್ರೂ ಪ್ರಯೋಜನವಾಗ್ತಿಲ್ಲ.

ನೇಣು ಕುಣಿಕೆಯಿಂದ ಆರೋಪಿಗಳು ಪಾರು..? ಅಂದಹಾಗೆ ಫೆಬ್ರವರಿ 1ರ ಬೆಳಗ್ಗೆ 6ಕ್ಕೆ ಗಲ್ಲಿಗೇರಿಸಲು ಬ್ಲ್ಯಾಕ್ ವಾರೆಂಟ್ ಹೊರಡಿಸಿದ್ದರು ಕೂಡ ಫೆಬ್ರವರಿ 1 ರಂದೇ ಗಲ್ಲಿಗೇರಿಸೋದು ಅನುಮಾನವಾಗಿದೆ. ಏಕೆಂದರೇ ಈಗಲೂ ಅಪರಾಧಿಗಳನ್ನ ಗಲ್ಲಿಗೇರಿಸಲು ಕೆಲ ನಿಯಮ ಅಡ್ಡಿಯಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಲು ಇನ್ನೂ 1 ತಿಂಗಳು ಬೇಕಾಗಬಹುದು ಅಂತ ಕಾನೂನು ತಜ್ಞರು ಹೇಳುತ್ತಿದ್ದಾರೆ. ಹಾಗಾದರೇ ಈಗ ಎದುರಾಗಿರೋ ಸಮಸ್ಯೆ ಏನು ಅನ್ನೋದಾದ್ರೆ.

ನೇಣು ಕುಣಿಕೆಯಿಂದ ಮಿಸ್..? ದೆಹಲಿಯ ಜೈಲ್ ಮ್ಯಾನ್ಯುಯಲ್ ಪ್ರಕಾರ ಕ್ಷಮಾದಾನ ಅರ್ಜಿ ವಜಾಗೊಂಡ ನಂತರ 14 ದಿನಗಳ ಕಾಲಾವಕಾಶವನ್ನ ಅಪರಾಧಿಗಳಿಗೆ ನೀಡಬೇಕು. ನಿರ್ಭಯಾ ಕೇಸ್​ನಲ್ಲಿ ಇನ್ನೂ ಇಬ್ಬರು ಅಪರಾಧಿಗಳು ಕ್ಷಮಾದಾನ ಅರ್ಜಿಯನ್ನೇ ಸಲ್ಲಿಸಿಲ್ಲ. ಈ ಕ್ಷಮಾದಾನ ಅರ್ಜಿ ವಜಾಗೊಂಡ ಬಳಿಕವೂ ಗಲ್ಲಿಗೇರಿಸಲು 14 ದಿನ ಅಂತರ ಅತ್ಯಗತ್ಯ. ಅಪರಾಧಿ ವಿನಯಾ ಶರ್ಮಾನ ಕ್ಷಮಾದಾನ ಅರ್ಜಿ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಹೀಗಾಗಿ ಕ್ಷಮೆ ಯಾಚಿಸಲು ತನ್ನ ಒಪ್ಪಿಗೆ ಇಲ್ಲ ಎಂದು ವಿನಯ ಶರ್ಮಾ ರಾಷ್ಟ್ರಪತಿಗೆ ಪತ್ರ ಬರೆದಿದ್ದಾನೆ. ಈ ಪತ್ರವೂ ಈಗಲೂ ರಾಷ್ಟ್ರಪತಿ ಬಳಿ ಇದೆ. ರಾಷ್ಟ್ರಪತಿ ತಿರಸ್ಕಾರ ಮಾಡಿದರೆ ಕೋರ್ಟ್​ನಲ್ಲಿ ವಿಚಾರಣೆ ಮಾಡಬಹುದಾಗಿದೆ.

ಒಟ್ನಲ್ಲಿ ಗಲ್ಲುಶಿಕ್ಷೆ ಜಾರಿಗೆ ನಿಗದಿಪಡಿಸಿದ ದಿನಾಂಕ ದಿನೇ ದಿನೆ ಹೈಟೆನ್ಷನ್ ಕ್ರಿಯೇಟ್ ಮಾಡ್ತಿದೆ. ಈ ಬಗ್ಗೆ ನಿರ್ಭಯಾ ತಾಯಿ ತಮ್ಮ ಅಳಲು ತೋಡಿಕೊಂಡಿದ್ದು, ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

Published On - 7:48 am, Wed, 22 January 20

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ