AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG ಗ್ಯಾಸ್​ ಡೆಲಿವರಿ ಹುಡುಗರಿಗೆ ಹೆಚ್ಚಿನ ಹಣ ನೀಡಬೇಡಿ.. ಕೇಳಿದರೆ ಕಂಪ್ಲೇಂಟ್ ಮಾಡಿ: ಏನಿದರ ಲೆಕ್ಕಾಚಾರ?

ಈ ಕೆಲಸ ಸುಲಭವಲ್ಲ. ಸಿಲಿಂಡರ್​ನ್ನು ಗ್ರಾಹಕರ ಮನೆಯವರೆಗೆ ತೆಗೆದುಕೊಂಡು ಹೋಗಲು ವಾಹನ ಇರುತ್ತದೆ. ಆದರೆ ಮನೆಯ ಬಾಗಿಲಿನವರೆಗೆ ಹೊತ್ತುಕೊಂಡೇ ಹೋಗಬೇಕು. ತುಂಬ ಸುಸ್ತಾಗುತ್ತದೆ. ಆದರೆ ನಮ್ಮ ಶ್ರಮಕ್ಕೆ ತಕ್ಕ ಸಂಬಳ ಇಲ್ಲ ಎನ್ನುತ್ತಾರೆ ಒಬ್ಬ ಡೆಲಿವರಿ ಬಾಯ್​.

LPG ಗ್ಯಾಸ್​ ಡೆಲಿವರಿ ಹುಡುಗರಿಗೆ ಹೆಚ್ಚಿನ ಹಣ ನೀಡಬೇಡಿ.. ಕೇಳಿದರೆ ಕಂಪ್ಲೇಂಟ್ ಮಾಡಿ: ಏನಿದರ ಲೆಕ್ಕಾಚಾರ?
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on:Jan 05, 2021 | 3:16 PM

Share

ನಿಮ್ಮ ಮನೆಗೆ ಸಿಲಿಂಡರ್ ಗ್ಯಾಸ್​ ಕೊಡಲು ಬರುವ ವಿತರಕರು, ಡೆಲಿವರಿ ಚಾರ್ಜ್​​ ಕೊಡಿ ಎಂದು ಕೇಳುವುದು ಸಾಮಾನ್ಯ. ಅದರಲ್ಲೂ ನಿಮ್ಮ ಮನೆ ಎರಡು-ಮೂರನೇ ಫ್ಲೋರ್​ ನಲ್ಲಿ ಇದ್ದರಂತೂ 100 ರೂ. ವರೆಗೂ ಕೆಲವರು ಕೇಳುತ್ತಾರೆ. ನೀವೂ ಅನಿವಾರ್ಯವಾಗಿ ಕೊಡಲೇಬೇಕಿದೆ..!

ಆದರೆ ಇನ್ಮುಂದೆ ನೀವು ಡೆಲಿವರಿ ಬಾಯ್​ಗಳಿಗೆ ಚಾರ್ಜ್​ ಕೊಡುವ ಅಗತ್ಯವಿಲ್ಲ ಎಂದು ಹಿಂದೂಸ್ತಾನ್​ ಪೆಟ್ರೋಲಿಯಂ ಲಿಮಿಟೆಡ್​ ಸ್ಪಷ್ಟಪಡಿಸಿದೆ. ಮೊದಲನೆಯದಾಗಿ ವಿತರಕರು ಕೇಳುವಂತೆಯೇ ಇಲ್ಲ.. ಹಾಗೊಮ್ಮೆ ಕೇಳಿದರೂ ಗ್ರಾಹಕರು ಕೊಡುವುದು ಕಡ್ಡಾಯವಲ್ಲ. ಅದು ನಿಯಮದಲ್ಲಿಯೂ ಇಲ್ಲ ಎಂದು ತಿಳಿಸಿದೆ.

ಗ್ಯಾಸ್ ಸಿಲಿಂಡರ್​ ತಂದುಕೊಡುವವರಿಗೆ ಡೆಲಿವರಿ ಚಾರ್ಜ್​ ಕೊಡುವುದು ಕಡ್ಡಾಯವಾ ಎಂದು ಗ್ರಾಹಕರೋರ್ವರು ಮಾಹಿತಿ ಹಕ್ಕು ಕಾಯ್ದೆ(RTI)ಯಡಿ ಮಾಹಿತಿ ಕೇಳಿದ್ದರು. ಅದಕ್ಕೆ ಉತ್ತರಿಸಿದ ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ ​(HPCL), ಗ್ರಾಹಕರ ಮನೆ ಯಾವುದೇ ಕಟ್ಟಡ, ಫ್ಲ್ಯಾಟ್​ನ ಎಷ್ಟನೇ ಫ್ಲೋರ್​ನಲ್ಲಿದ್ದರೂ ಅವರ ಮನೆ ಬಾಗಿಲಿಗೆ ಗ್ಯಾಸ್​ ಸಿಲಿಂಡರ್​ ತೆಗೆದುಕೊಂಡು ಹೋಗಿ ಮುಟ್ಟಿಸುವುದು ವಿತರಕರ ಕರ್ತವ್ಯ. ಅದಕ್ಕಾಗಿ ಬಿಲ್​​ನಲ್ಲಿ ಇರುವುದಕ್ಕಿಂತಲೂ ಹೆಚ್ಚು ಮೊತ್ತವನ್ನು ಪಾವತಿಸುವ ಅಗತ್ಯವಿಲ್ಲ. ಒಂದೊಮ್ಮೆ ಡೆಲಿವರಿ ಬಾಯ್​ಗಳು ಕೇಳಿದರೂ ಗ್ರಾಹಕರು ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ನಮ್ಮ ಪ್ರೋತ್ಸಾಹ ಇಲ್ಲ ಎಲ್​ಪಿಜಿ (LPG-liquefied petroleum gas) ಗ್ಯಾಸ್​ ವಿತರಕರಿಗೆ ಡೆಲಿವರಿ ಚಾರ್ಜ್​ ಕೊಡುವ ಅಗತ್ಯವಿಲ್ಲ ಎಂದು ಭಾರತೀಯ ತೈಲ ನಿಗಮ (Indian Oil Corporation) ಈ ಹಿಂದೆಯೂ ಹೇಳಿತ್ತು. ಐಒಸಿ ಈಗಲೂ ಅದನ್ನೇ ಪುನರುಚ್ಚರಿಸಿದೆ. ಅಷ್ಟೇ ಅಲ್ಲ, ಯಾರಾದರೂ ಹೆಚ್ಚುವರಿ ಹಣ ಕೇಳಿದರೆ, ಕರೆ ಮಾಡಿ ದೂರು ನೀಡಿ ಎಂದೂ ಗ್ರಾಹಕರಿಗೆ ತಾಕೀತು ಮಾಡಿದೆ.

ಎಲ್ಲ ಡೆಲಿವರಿ ಬಾಯ್​ಗಳೂ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಆದರೆ ಯಾರೂ ಕೇಳಬಾರದು. ವಿತರಕರ ಈ ಪರಿಪಾಠಕ್ಕೆ ಗ್ರಾಹಕರೇ ಬ್ರೇಕ್​ ಹಾಕಬೇಕು. ಕೆಲವು ಗ್ರಾಹಕರು ತಾವು ಸ್ವಯಂ ಪ್ರೇರಣೆಯಿಂದ ಟಿಪ್ಸ್​ ರೂಪದಲ್ಲಿ ಹಣ ಕೊಡುತ್ತಾರೆ. ಇದನ್ನೂ ಸಹ ಮಾಡಬಾರದು ಎಂದು ತೈಲ ನಿಗಮ ವಿವರಿಸಿದೆ.

ಎರಡು ರೀತಿಯ ಸಂದರ್ಭ ಹಾಗೇ ನೋಡಿದರೆ ಇದು ಬರೀ ಡೆಲಿವರಿ ಬಾಯ್​ಗಳದ್ದೇ ತಪ್ಪು.. ಅವರೇ ಮುಂದಾಗಿ ಹಣ ಕೇಳುತ್ತಾರೆ ಎಂದೂ ಹೇಳಲಾಗುವುದಿಲ್ಲ. ಗ್ರಾಹಕರೊಬ್ಬರು ಹೀಗೆ ಹೇಳುತ್ತಾರೆ.. ನಮ್ಮ ಮನೆ ಮೂರನೇ ಫ್ಲೋರ್​ನಲ್ಲಿದೆ. ಪ್ರತಿಬಾರಿಯೂ ಡೆಲಿವರಿ ಬಾಯ್​ಗೆ ಹೆಚ್ಚುವರಿ ಹಣ ಕೊಟ್ಟರೆ ಮಾತ್ರ ಮೇಲೆ ತೆಗೆದುಕೊಂಡು ಬರುತ್ತಾನೆ. ಇಲ್ಲದಿದ್ದರೆ ಗ್ರೌಂಡ್​ ಫ್ಲೋರ್​ನಲ್ಲಿಯೇ ಇಟ್ಟು ಹೋಗುತ್ತಾನೆ. ನಮ್ಮ ಕಟ್ಟಡಕ್ಕೆ ಲಿಫ್ಟ್​ ಇಲ್ಲ. ನಾನೂ ಮನೆಯಲ್ಲಿ ಇಲ್ಲದಿದ್ದರೆ, ನನ್ನ ಪತ್ನಿಯೇ ಅದನ್ನು ಮೇಲೆ ತರಬೇಕು ಎಂದು ಹೇಳುತ್ತಾರೆ..

ಆದರೆ ವಿತರಕರ ಬಳಿ ಕೇಳಿದರೆ ಅವರು ಬೇರೆಯದ್ದನ್ನೇ ಹೇಳುತ್ತಾರೆ.. ಮತ್ತೆ ಅದನ್ನು ಅಲ್ಲಗಳೆಯುವಂತೆಯೂ ಇಲ್ಲ. ನಾವು ತುಂಬ ವರ್ಷಗಳಿಂದಲೂ ಕೆಲವು ಮನೆಗಳಿಗೆ ಸಿಲಿಂಡರ್​ ಡೆಲಿವರಿ ಕೊಡುತ್ತೇವೆ. ಎಷ್ಟೇ ಫ್ಲೋರ್​ನಲ್ಲಿ ಇದ್ದರೂ ಮನೆಬಾಗಿಲಿಗೆ ಮುಟ್ಟಿಸುತ್ತೇವೆ. ಅವರು ನಮಗೆ ಚಿರಪರಿಚಿತರಾಗಿರುತ್ತಾರೆ. ನಮ್ಮ ಕಾರ್ಯಕ್ಕೆ ನಾವು ಕೇಳದೆಯೇ ಅವರು ಅಷ್ಟೋ-ಇಷ್ಟೋ ಟಿಪ್ಸ್ ಕೊಡುತ್ತಾರೆ. ಕೃತಜ್ಞತಾ ಪೂರ್ವಕವಾಗಿ ಹಣ ಕೊಡುತ್ತಾರೆ. ಇನ್ನು ಶ್ರೀಮಂತ ಕುಟುಂಬದವರು 100 ರೂ.ವರೆಗೂ ನೀಡುತ್ತಾರೆ. ನಾವು ಹೆಚ್ಚುವರಿ ಹಣಕ್ಕಾಗಿ ಯಾವುದೇ ಗ್ರಾಹಕರೊಂದಿಗೂ ಜಗಳ ಆಡುವುದಿಲ್ಲ. ಹಾಗೊಮ್ಮೆ ಅಂಥ ಘಟನೆ ನಡೆದರೂ ತೀರ ಅಪರೂಪ ಎನ್ನುತ್ತಾರೆ.

ಈ ಕೆಲಸ ಸುಲಭವಲ್ಲ. ಸಿಲಿಂಡರ್​ನ್ನು ಗ್ರಾಹಕರ ಮನೆಯವರೆಗೆ ತೆಗೆದುಕೊಂಡು ಹೋಗಲು ವಾಹನ ಇರುತ್ತದೆ. ಆದರೆ ಮನೆಯ ಬಾಗಿಲಿನವರೆಗೆ ಹೊತ್ತುಕೊಂಡೇ ಹೋಗಬೇಕು. ತುಂಬ ಸುಸ್ತಾಗುತ್ತದೆ. ಆದರೆ ನಮ್ಮ ಶ್ರಮಕ್ಕೆ ತಕ್ಕ ಸಂಬಳ ಇಲ್ಲ. ಹಾಗಂತ ನಾವು ನಮ್ಮ ವಿತರಕ ಕಂಪನಿಯನ್ನು ದೂಷಿಸುವಂತೆ ಇಲ್ಲ.

ಕೆಲವು ಏಜೆನ್ಸಿಗಳಲ್ಲಿ ಡೆಲಿವರಿ ಬಾಯ್ಸ್​ಗೂ ಪಿಎಫ್​, ಇಎಸ್​ಐ ವ್ಯವಸ್ಥೆ ಇರುತ್ತದೆ. ನಮಗೆ ಏಜೆನ್ಸಿಗಳು ನೀಡುವ ಸಂಬಳ 10,000-12,000. ಆದರೆ ಇಂದಿನ ದಿನಗಳಲ್ಲಿ ಬದುಕಲು ಏನಿಲ್ಲವೆಂದರೂ ತಿಂಗಳಿಗೆ ₹17,000- ₹20,000 ಬೇಕು ಎಂದು ಇನ್ನೊಬ್ಬ ಡೆಲಿವರಿ ಬಾಯ್​ ಅಲವತ್ತುಕೊಳ್ಳುತ್ತಾರೆ.

ಸಿಲಿಂಡರ್​ ಮನೆಗೆ ತಲುಪಿಸುವವರು ಯಾಕೆ ಹೆಚ್ಚುವರಿ ಹಣ ಕೇಳುತ್ತಾರೆ ಎಂಬುದನ್ನು CITU ತಮಿಳುನಾಡು ಪೆಟ್ರೋಲಿಯಂ ಗ್ಯಾಸ್​ ವರ್ಕರ್ಸ್​ ಯೂನಿಯನ್​ ಪ್ರಧಾನ ಕಾರ್ಯದರ್ಶಿ ಕೆ.ವಿಜಯನ್​ ವಿವರಿಸಿದ್ದಾರೆ. ಸಿಲಿಂಡರ್​ ಗ್ಯಾಸ್​ ವಿತರಕ ಏಜೆನ್ಸಿಗಳು ಡೆಲಿವರಿ ಬಾಯ್ಸ್​ಗೆ ಒಳ್ಳೆ ವೇತನ ಕೊಡುವುದಿಲ್ಲ. ಎ ಗ್ರೇಡ್​ ಮಾನ್ಯತೆಯ ನಗರಗಳಲ್ಲಿ ಅವರಿಗೆ ದಿನಕ್ಕೆ ಕನಿಷ್ಠ 600 ರೂ. ನೀಡಲಾಗುತ್ತದೆ. ಹಾಗೇ ಬಿ-ಗ್ರೇಡ್​ ಸಿಟಿಗಳಲ್ಲಿ ದಿನಕ್ಕೆ 510 ಮತ್ತು ಗ್ರಾಮಾಂತರ ಪ್ರದೇಶದಲ್ಲಿ ದಿನಕ್ಕೆ 450 ರೂ. ವೇತನ ಇದೆ. ಅವರಿಗೆ ಲೋಡಿಂಗ್​ ಮತ್ತು ಅನ್​ಲೋಡಿಂಗ್ ಚಾರ್ಜ್, ಇಂಧನ ಚಾರ್ಜ್​​ ಕೂಡ ಕಂಪನಿಯೇ ಕೊಡಬೇಕು ಎಂದು ವಿಜಯನ್​ ತಿಳಿಸಿದ್ದಾರೆ.

ಕಾರಂಜಾ ಡ್ಯಾಂನಿಂದ ಕಾಲುವೆಗೆ ಪರೀಕ್ಷಾರ್ಥ ನೀರು: ಹೊಲಗಳಿಗೆ ನುಗ್ಗಿ ನೂರಾರು ಎಕರೆ ಬೆಳೆ ಹಾನಿ

Published On - 3:14 pm, Tue, 5 January 21