AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್ ಸೈಲೆಂಟ್ ಕಿಲ್ಲರ್, 25 ದಿನಗಳಾಯಿತು ಇನ್ನೂ ಬಳಲುತ್ತಿದ್ದೇನೆ: ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ

ಒಮಿಕ್ರಾನ್ ಒಂದು ಸೈಲೆಂಟ್ ಕಿಲ್ಲರ್, ನಿಮಗೆ ಗೊತ್ತಾ, ನಾನು ಮೊದಲ ಅಲೆಯಲ್ಲಿ ಬಳಲಿದ್ದೇನೆ ಆದರೆ ನಾಲ್ಕು ದಿನಗಳಲ್ಲಿ ಚೇತರಿಸಿಕೊಂಡಿದ್ದೇನೆ, ಆದರೆ ಈಗ, ಈ ಅಲೆಯಲ್ಲಿ 25 ದಿನಗಳು ಕಳೆದಿವೆ. ನಾನು ಇನ್ನೂ ಬಳಲುತ್ತಿದ್ದೇನೆ" ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.

ಒಮಿಕ್ರಾನ್ ಸೈಲೆಂಟ್ ಕಿಲ್ಲರ್, 25 ದಿನಗಳಾಯಿತು ಇನ್ನೂ ಬಳಲುತ್ತಿದ್ದೇನೆ: ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ
ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ
TV9 Web
| Edited By: |

Updated on: Feb 23, 2022 | 5:26 PM

Share

ದೆಹಲಿ: ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿಚಾರಣೆ ಪ್ರಕ್ರಿಯೆಯು  ಪೂರ್ಣ ದೈಹಿಕ ವಿಚಾರಣೆಗೆ ಮರಳಲು ಕೋರಿರುವ ಬಗ್ಗೆ  ಪ್ರತಿಕ್ರಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ  (NV Ramana) ಅವರು ಬುಧವಾರ ಒಮಿಕ್ರಾನ್ (Omicron) ಅನ್ನು “ಸೈಲೆಂಟ್ ಕಿಲ್ಲರ್” ಎಂದು ಕರೆದಿದ್ದಾರೆ.ಸುಮಾರು ಒಂದು ತಿಂಗಳ ಹಿಂದೆ ಸೋಂಕು ತಗಲಿದ್ದು ನಾನು ಇನ್ನೂ ಬಳಲುತ್ತಿದ್ದೇನೆ ಎಂದು ಅವರು ಹೇಳಿದರು.  “ಒಮಿಕ್ರಾನ್ ಒಂದು ಸೈಲೆಂಟ್ ಕಿಲ್ಲರ್, ನಿಮಗೆ ಗೊತ್ತಾ, ನಾನು ಮೊದಲ ಅಲೆಯಲ್ಲಿ ಬಳಲಿದ್ದೇನೆ ಆದರೆ ನಾಲ್ಕು ದಿನಗಳಲ್ಲಿ ಚೇತರಿಸಿಕೊಂಡಿದ್ದೇನೆ, ಆದರೆ ಈಗ, ಈ ಅಲೆಯಲ್ಲಿ 25 ದಿನಗಳು ಕಳೆದಿವೆ. ನಾನು ಇನ್ನೂ ಬಳಲುತ್ತಿದ್ದೇನೆ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿರುವ ಹಿರಿಯ ವಕೀಲ ವಿಕಾಸ್ ಸಿಂಗ್, ಪ್ರಕರಣಗಳು ಇಳಿಮುಖವಾಗುವುದರೊಂದಿಗೆ ಪೂರ್ಣ ದೈಹಿಕ ವಿಚಾರಣೆಗೆ ಹಿಂತಿರುಗುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ ನಂತರ ರಮಣ  ಅವರ ಈ ಹೇಳಿಕೆಗಳು ಬಂದವು. ಪ್ರಸ್ತುತ, ವಿಚಾರಣೆಗಳು ಹೈಬ್ರಿಡ್ ಶೈಲಿಯಲ್ಲಿ ನಡೆಯುತ್ತಿವೆ, ವಾರಕ್ಕೆ ಎರಡು ಬಾರಿ ದೈಹಿಕ ವಿಚಾರಣೆಗಳು ಮತ್ತು ಉಳಿದವು ಆನ್‌ಲೈನ್‌ ರೀತಿಯಲ್ಲಿ ನಡೆಯುತ್ತಿವೆ.  ಈಗ 15,000 ಪ್ರಕರಣಗಳ ಏರಿಕೆ ಆಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಗಮನ ಸೆಳೆದರು.”ಇದು ಒಮಿಕ್ರಾನ್, ಇದು ಹೆಚ್ಚು ಸೌಮ್ಯವಾಗಿದೆ,” ಸಿಂಗ್ ಉತ್ತರಿಸಿದರು.  ಮುಖ್ಯ ನ್ಯಾಯಾಧೀಶರು ನಂತರದ ಪರಿಣಾಮಗಳನ್ನು ಇನ್ನೂ ಅನುಭವಿಸುತ್ತಿರುವ ಬಗ್ಗೆ ಮಾತನಾಡಿದಾಗ, ವಕೀಲ “ಆ ವಿಷಯದಲ್ಲಿ ಇದು ದುರದೃಷ್ಟಕರವಾಗಿದೆ, ಆದರೆ ಜನರು ಚೇತರಿಸಿಕೊಳ್ಳುತ್ತಿದ್ದಾರೆ.” 

ಆಗ ಮುಖ್ಯ ನ್ಯಾಯಮೂರ್ತಿ ರಮಣ ಅವರು ನಾವು ನೋಡೋಣ ಎಂದಿದ್ದಾರೆ. ಜನವರಿಯಲ್ಲಿ ಸುಪ್ರೀಂಕೋರ್ಟ್ ನ 10 ನ್ಯಾಯಾಧೀಶರು ಧನಾತ್ಮಕ ಪರೀಕ್ಷೆ ನಡೆಸಿದ್ದರು ಮತ್ತು ಸಿಬ್ಬಂದಿಯಲ್ಲಿ ಧನಾತ್ಮಕತೆಯ ಪ್ರಮಾಣವು ಶೇಕಡಾ 30 ಕ್ಕೆ ಏರಿತ್ತು.

ಭಾರತವು ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು ಸಾವುಗಳಲ್ಲಿ ಸ್ವಲ್ಪ ಹೆಚ್ಚಳವನ್ನು ಕಂಡಿದೆ, ಬುಧವಾರ ಬೆಳಿಗ್ಗೆ 8 ಗಂಟೆವರೆಗಿನ ಮಾಹಿ ಪ್ರಕಾರ ಕಳೆದ24 ಗಂಟೆಗಳಲ್ಲಿ 15,102 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 278 ಸಾವುಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ದೈನಂದಿನ ಸಕಾರಾತ್ಮಕತೆಯ ದರವು ಪ್ರಸ್ತುತ ಶೇಕಡಾ 1.28 ರಷ್ಟಿದೆ.

31,377 ಕೊವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಳ್ಳುವುದರೊಂದಿಗೆ, ದೇಶದ ಸಕ್ರಿಯ ಕ್ಯಾಸೆಲೋಡ್ ಈಗ 1,64,522 ರಷ್ಟಿದೆ. ಚೇತರಿಕೆಯ ಪ್ರಮಾಣವು ಶೇಕಡಾ 98.42 ರಷ್ಟಿದೆ. ಸಕ್ರಿಯ ಪ್ರಕರಣಗಳು ಪ್ರಸ್ತುತ ಒಟ್ಟು ಕ್ಯಾಸೆಲೋಡ್‌ನ 0.38 ಪ್ರತಿಶತವನ್ನು ಒಳಗೊಂಡಿವೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ 176.19 ಕೋಟಿ ಲಸಿಕೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: Big Breaking: ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​​ ಮಲಿಕ್​​ರನ್ನು ಬಂಧಿಸಿದ ಇ.ಡಿ.