ತೆಲಂಗಾಣ: ಹೈದರಾಬಾದ್‌ನಿಂದ ಒಡಿಶಾಗೆ ಆಕ್ಸಿಜನ್ ಟ್ಯಾಂಕ್ ಏರ್​ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

|

Updated on: Apr 23, 2021 | 4:47 PM

Telangana: ಆಕ್ಸಿಜನ್ ಇಲ್ಲದ ಖಾಲಿ ಟ್ಯಾಂಕರ್​ಗಳನ್ನು ರಸ್ತೆ ಮಾರ್ಗವಾಗಿ ಹೈದರಾಬಾದ್​ನಿಂದ ಒಡಿಶಾಗೆ ತೆಗೆದುಕೊಂಡು ಹೋಗಬೇಕಾದರೆ ಮೂರು ದಿನ ಬೇಕಾಗುತ್ತದೆ. ಟ್ಯಾಂಕರ್​ಗಳನ್ನು ಏರ್ ಲಿಫ್ಟ್ ಮಾಡುವುದರಿಂದ ಮೂರು ದಿನ ಉಳಿಯುತ್ತದೆ.

ತೆಲಂಗಾಣ: ಹೈದರಾಬಾದ್‌ನಿಂದ ಒಡಿಶಾಗೆ ಆಕ್ಸಿಜನ್ ಟ್ಯಾಂಕ್ ಏರ್​ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ
ತೆಲಂಗಾಣದಲ್ಲಿ ಆಕ್ಸಿಜನ್ ಏರ್ ಲಿಫ್ಟಿಂಗ್
Follow us on

ಹೈದರಾಬಾದ್: ಭಾರತೀಯ ವಾಯುಪಡೆಯ ವಿಮಾನಗಳ ಸಹಾಯದಿಂದ ತೆಲಂಗಾಣ ಸರ್ಕಾರ ಒಡಿಶಾ ಸ್ಥಾವರಗಳಿಗೆ ಒಂಬತ್ತು ಖಾಲಿ ಆಮ್ಲಜನಕ ಟ್ಯಾಂಕ್​ಗಳನ್ನು ಶುಕ್ರವಾರ ವಿಮಾನದಲ್ಲಿ ಸಾಗಿಸಿ ರಾಜ್ಯಕ್ಕೆ ಅಗತ್ಯವಿರುವ ಲಿಕ್ವಿಡ್ ಆಕ್ಸಿಜನ್ ಪಡೆಯಲು ಕ್ರಮ ಕೈಗೊಂಡಿದೆ. ಅಂಗುಲ್ ಮತ್ತು ರೂರ್ಕೆಲಾ ಸ್ಥಾವರಗಳ ಹೈದರಾಬಾದ್‌ನಿಂದ ಸುಮಾರು 1200 ಕಿ.ಮೀ ದೂರದಲ್ಲಿದೆ .ಆಮ್ಲಜನಕ ಟ್ಯಾಂಕರ್‌ಗಳನ್ನು ಏರ್ ಲಿಫ್ಟ್ ಮಾಡುವ ನಿರ್ಧಾರವು ಸಮಯವನ್ನು ಉಳಿಸುವುದಲ್ಲದೆ, ಕೊವಿಡ್ ರೋಗಿಗಳ ಚಿಕಿತ್ಸೆಗಾಗಿರುವ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಟ್ಯಾಂಕರ್‌ಗಳು ರಸ್ತೆಯ ಮೂಲಕ ಹಿಂತಿರುಗಲಿದ್ದು, ಏಪ್ರಿಲ್ 27 ರೊಳಗೆ ರಾಜ್ಯಕ್ಕೆ 150 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ತರಲಿವೆ.

ಶುಕ್ರವಾರ, ಆರೋಗ್ಯ ಸಚಿವ ಇಟಾಲಾ ರಾಜೇಂದರ್, ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮತ್ತು ಇತರ ಅಧಿಕಾರಿಗಳು ಹೈದರಾಬಾದ್‌ನ ಬೇಗಂಪೆಟ್‌ನಲ್ಲಿರುವ ಹಳೆಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಸಚಿವರ ಕಚೇರಿಯ ಹೇಳಿಕೆಯ ಪ್ರಕಾರ, ಭಾರತೀಯ ವಾಯುಪಡೆಯ ಎರಡು ಸಿ 17 ವಿಮಾನಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗಿದೆ.

ಕ್ರಿಯೊಜೆನಿಕ್ ಆಕ್ಸಿಜನ್ ಕಂಟೈನರ್ ಗಳನ್ನು ಹಿಂಡನ್ ಏರ್ ಫೋರ್ಸ್ ಸ್ಟೇಷ ನ್ ನಿಂದ ಮೇಲೆತ್ತಿ ಕಂಟೈನರ್ ಗಳಲ್ಲಿ ಮರುಪೂರಣಕ್ಕಾಗಿ ಪನಾಗಡಕ್ಕೆ ತೆಗೆದುಕೊಂಡು ಹೋಗುವ ಕಾರ್ಯಾರಣೆ ಬಗ್ಗೆ ಮುಂಜಾನೆ ಭಾರತೀಯ ವಾಯುಪಡೆ ಟ್ವೀಟ್ ಮಾಡಿತ್ತು. ಅದಕ್ಕಾಗಿ C-17 ಮತ್ತು IL-76 ವಿಮಾನವನ್ನು ಬಳಸಲಾಗಿದೆ. ಇದೇ ರೀತಿಯ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿಯೂ ನಡೆದಿದೆ.

ಆಕ್ಸಿಜನ್ ಇಲ್ಲದ ಖಾಲಿ ಟ್ಯಾಂಕರ್ ಗಳನ್ನು ರಸ್ತೆ ಮಾರ್ಗವಾಗಿ ಹೈದರಾಬಾದ್​ನಿಂದ ಒಡಿಶಾಗೆ ತೆಗೆದುಕೊಂಡು ಹೋಗಬೇಕಾದರೆ ಮೂರು ದಿನ ಬೇಕಾಗುತ್ತದೆ. ಟ್ಯಾಂಕರ್​ಗಳನ್ನು ಏರ್ ಲಿಫ್ಟ್ ಮಾಡುವುದರಿಂದ ಮೂರು ದಿನ ಉಳಿಯುತ್ತದೆ. ಮುಂಬರುವ ದಿನಗಳಲ್ಲಿ ಕೊವಿಡ್ 19 ರೋಗಿಗಳಿಗಿರುವ ಆಕ್ಸಿಜನ್ ಕೊರತೆ ನೀಗಿಸುತ್ತೇವೆ. ಇಲ್ಲಿ 22 ಸರ್ಕಾರಿ ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆಮಾಡಿದ್ದೇವೆ ಎಂದು ಸರ್ಕಾರ ತಮ್ಮ ಪ್ರಕಟಣೆಲ್ಲಿ ತಿಳಿಸಿದೆ.

ಒಂದು ದಿನದ ಹಿಂದೆ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ ಎಂದು ಸಚಿವರು ಭರವಸೆ ನೀಡಿದ್ದರು. ಮುಖ್ಯ ಕಾರ್ಯದರ್ಶಿ, ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಅವರ ನೇತೃತ್ವದಲ್ಲಿ 10 ಐಎಎಸ್ ಅಧಿಕಾರಿಗಳನ್ನು ಒಳಗೊಂಡ ತಜ್ಞರ ತಂಡವು ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲಿದೆ ಎಂದು ಮಾಹಿತಿ ನೀಡಿದ್ದರು. ಕಾಳ ದಂಧೆ ಮತ್ತು ಕೆಲವು ವಿತರಣಾ ಕೇಂದ್ರಗಳಿಂದ ಸರಬರಾಜು ವಿಳಂಬದ ಬಗ್ಗೆ ಮಾಹಿತಿಯ ಹಿನ್ನೆಲೆಯ ಸರ್ಕಾರ ಈ ಕ್ರಮ ಕೈಗೊಂಡಿದೆ.


ಪ್ರಸ್ತುತ, ತೆಲಂಗಾಣವು ದಿನಕ್ಕೆ ಸುಮಾರು 270 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸುತ್ತಿದೆ.ಇಲ್ಲಿ ದಿನವೊಂದಕ್ಕೆ ಅಗತ್ಯವಿರುವ ಆಮ್ಲಜನಕ 384 ಮೆಟ್ರಿಕ್ ಟನ್. ರಾಜ್ಯಕ್ಕೆ ಕರ್ನಾಟಕದ ಬಳ್ಳಾರಿಯಿಂದ 40 ಟನ್, ಒಡಿಶಾದಿಂದ 84 ಟನ್ ಮತ್ತು ತಮಿಳುನಾಡಿನಿಂದ 55 ಟನ್ ಹಂಚಿಕೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಗುರುವಾರ ಹೇಳಿದ್ದಾರೆ. ತೆಲಂಗಾಣಕ್ಕೆ ಆಮ್ಲಜನಕವನ್ನು ಕಳುಹಿಸಲು ತಮಿಳುನಾಡು ನಿರಾಕರಿಸಿದೆ ಎಂದು ಆರೋಪಿಸಿ ಅವರು ಕೇಂದ್ರ ಸಚಿವ ಹರ್ಷ ವರ್ಧನ್ ಮಧ್ಯಪ್ರವೇಶಿಸಬೇಕು ಎಂದಿತ್ತು ತೆಲಂಗಾಣ.

ಏತನ್ಮಧ್ಯೆ, ಸಚಿವ ಕೆ.ಟಿ.ರಾಮರಾವ್ ಅವರಿಗೆ ಕೊವಿಡ್ ದೃಢಪಟ್ಟಿದೆ. ಶುಕ್ರವಾರ ಬೆಳಿಗ್ಗೆ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೋಗದ ಸ್ವಲ್ಪ ಲಕ್ಷಣಗಳೊಂದಿಗೆ ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದೇನೆ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನನ್ನನ್ನು ಭೇಟಿಯಾದವರು, ಕೋವಿಡ್ ನಿಯಮಾವಳಿಗಳನ್ನು ದಯವಿಟ್ಟು ಪಾಲಿಸಿ, ಪರೀಕ್ಷಿಸಿ ಮತ್ತು ಕಾಳಜಿ ವಹಿಸಿ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಭಾನುವಾರ ರಾಮ ರಾವ್ ಅವರ ಅಪ್ಪ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕೊವಿಡ್ ದೃಢಪಟ್ಟತ್ತು. ಸಿದ್ದಿಪೇಟೆ ಜಿಲ್ಲೆಯ ಎರ್ರಾವಲಿಯಲ್ಲಿರುವ ಅವರ ತೋಟದ ಮನೆಯಲ್ಲಿ ವೈದ್ಯರ ಕಂಡ ಚಂದ್ರಶೇಖರ್ ರಾವ್ ಆರೋಗ್ಯದ ಮೇಲೆ ನಿಗಾ ವಹಿಸಿದೆ.

ಇದನ್ನೂ ಓದಿ: ಚಿರತೆ ಜತೆ ವಾಕಿಂಗ್​ ಹೋದ ತೆಲಂಗಾಣ ರಾಜಕಾರಣಿ! ವಿಡಿಯೋ ವೈರಲ್