ದೆಹಲಿ ಫೆಬ್ರವರಿ 24: ‘ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಚಾಲನೆ ನೀಡಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಸಾವಿರಾರು ವೇರ್ ಹೌಸ್ ಮತ್ತು ಗೋದಾಮುಗಳು ಬರಲಿವೆ ಎಂದು ಹೇಳಿದ್ದಾರೆ. ದೆಹಲಿಯ ಭಾರತ್ ಮಂಟಪದಲ್ಲಿ(Bharat Mandapam ಸಹಕಾರಿ ಕ್ಷೇತ್ರಕ್ಕೆ ಬಹುಮುಖ್ಯ ಉಪಕ್ರಮಗಳಿಗೆ ಚಾಲನೆ ನೀಡಿದ ಮೋದಿ, 700 ಲಕ್ಷ ಮೆಟ್ರಿಕ್ ಟನ್‌ಗಳ ವಿಶ್ವದ ಅತಿದೊಡ್ಡ ಸಂಗ್ರಹಣಾ ಯೋಜನೆಯನ್ನು ಮುಂದಿನ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಂಡು ತಮ್ಮ ಅಗತ್ಯಕ್ಕೆ ತಕ್ಕಂತೆ ಸರಿಯಾದ ಸಮಯಕ್ಕೆ ಮಾರಾಟ ಮಾಡುವುದರ ಜೊತೆಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಸಹಕಾರಿ ಸಂಸ್ಥೆಗಳು ಭಾರತದ ಪ್ರಾಚೀನ ಪರಿಕಲ್ಪನೆ ಎಂದು ಪ್ರಧಾನಿ ಹೇಳಿದ್ದಾರೆ. ಗೋಡೌನ್‌ಗಳು ಮತ್ತು ಇತರ ಕೃಷಿ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಮತ್ತು ದೇಶಾದ್ಯಂತ 18 ಸಾವಿರ ಪಿಎಸಿಎಸ್‌ಗಳಲ್ಲಿ ಗಣಕೀಕರಣದ ಯೋಜನೆಗಾಗಿ ದೇಶಾದ್ಯಂತ ಹೆಚ್ಚುವರಿ 500 ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳಿಗೆ (ಪಿಎಸಿಎಸ್) ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಿದ್ದಾರೆ. ಹೊಸ ಸಹಕಾರ ಸಚಿವಾಲಯದ ಮೂಲಕ, ಭಾರತದ ಕೃಷಿ ಕ್ಷೇತ್ರದ ವಿಘಟಿತ ಅಧಿಕಾರಗಳನ್ನು ಒಟ್ಟುಗೂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮುಂಬರುವ ವರ್ಷಗಳಲ್ಲಿ ಎರಡು ಲಕ್ಷ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಸರ್ಕಾರದ ಗುರಿಯನ್ನು ಅವರು ಪುನರುಚ್ಚರಿಸಿದ್ದಾರೆ.
▶️ Prime Minister @narendramodi inaugurates the pilot project of ‘World’s Largest Grain Storage Plan in Cooperative Sector’, with 11 Primary Agricultural Credit Societies (PACS) godowns across 11 states for foodgrain distribution
▶️ PM lays the foundation stone for the… pic.twitter.com/NTmSFuTsit
— PIB India (@PIB_India) February 24, 2024
ರೈತ ಉತ್ಪಾದಕರ ಸಂಘಟನೆಯ ಉದಾಹರಣೆ ನೀಡಿದ ಅವರು, ಹಳ್ಳಿಗಳಲ್ಲಿ ಸಣ್ಣ ರೈತರಲ್ಲಿ ಬೆಳೆಯುತ್ತಿರುವ ಉದ್ಯಮಶೀಲತೆ ಬಗ್ಗೆಯೂ ಮಾತನಾಡಿದ್ದಾರೆ. ಪ್ರತ್ಯೇಕ ಸಚಿವಾಲಯದ ಕಾರಣ, 10 ಸಾವಿರ ಎಫ್‌ಪಿಒಗಳ ಗುರಿಯಲ್ಲಿ ಎಂಟು ಸಾವಿರ ಎಫ್‌ಪಿಒಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೀನುಗಾರಿಕೆ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಸಹಕಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: ಯುಪಿ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು; 6 ತಿಂಗಳೊಳಗೆ ಮರು ಪರೀಕ್ಷೆಗೆ ಸಿಎಂ ಆದಿತ್ಯನಾಥ್ ಆದೇಶ
ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೃಷಿ ಮತ್ತು ಡೈರಿ ಸಹಕಾರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ವ್ಯವಸ್ಥೆಗಳ ಆಧುನೀಕರಣವು ವಿಕಸಿತ್ ಭಾರತ್‌ಗೆ ಅತ್ಯಗತ್ಯ ಎಂದ ಮೋದಿ, ಅಮುಲ್ ಮತ್ತು ಲಿಜ್ಜತ್ ಪಾಪಡ್ ಯಶಸ್ಸಿನ ಕಥೆಗಳನ್ನು ಉಲ್ಲೇಖಿಸಿ ಅದು ಸಹಕಾರಿ ಸಂಸ್ಥೆಗಳ ಶಕ್ತಿ ಎಂದಿದ್ದಾರೆ. ಈ ಉದ್ಯಮಗಳಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ