ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕಲು ರಹಸ್ಯ ಯೋಜನೆ ರೂಪಿಸಿದ್ದರು ಪ್ರಧಾನಿ ಮೋದಿ

|

Updated on: Feb 11, 2024 | 12:32 PM

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದು ಇಂದು ನಿನ್ನೆಯ ನಿರ್ಧಾರವಾಗಿರಲಿಲ್ಲ. ಸರಿಯಾದ ಸಮಯಕ್ಕೆ ಸರ್ಕಾರ ಕಾಯುತ್ತಿತ್ತು. ಅದಕ್ಕೆ ಪ್ರಧಾನಿ ಮೋದಿ ರಹಸ್ಯ ಯೋಜನೆಯನ್ನು ಕೂಡ ರೂಪಿಸಿದ್ದರು. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಏನೇನಾಗಿತ್ತು ಇಲ್ಲಿದೆ ಮಾಹಿತಿ.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕಲು ರಹಸ್ಯ ಯೋಜನೆ ರೂಪಿಸಿದ್ದರು ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಅಂದು 4 ಆಗಸ್ಟ್ 2019, ಸಂಜೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ರಾಷ್ಟ್ರಪತಿ ಭವನ(Rashtrapati Bhavan)ಕ್ಕೆ ಹಠಾತ್ತನೆ ತಲುಪಿದ್ದರು. ರಾಷ್ಟ್ರಪತಿ ಭವನಕ್ಕೆ ಅವರ ಆಗಮನದ ಬಗ್ಗೆ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿತ್ತು. ಅವರು ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಕಾರು ವಿಶೇಷ ಭದ್ರತೆ ಹೊಂದಿರುವ ಕಾರು ಆಗಿರಲಿಲ್ಲ. ಹೆಚ್ಚಿನ ಭದ್ರತಾ ಸಿಬ್ಬಂದಿಗಳೂ ಸುತ್ತಮುತ್ತಲಿರಲಿಲ್ಲ. ಒಬ್ಬರೇ ಕುಳಿತು ರಾಷ್ಟ್ರಪತಿ ಭವನ ತಲುಪಿದ್ದರು. ಯಾವುದೇ ನಿರ್ದಿಷ್ಟ ನಿರ್ಧಾರದ ಬಗ್ಗೆ ಪ್ರಧಾನಿ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು.

370 ನೇ ವಿಧಿ(Article 370)ಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ತಮ್ಮ ಸರ್ಕಾರದ ಮಹತ್ವದ ನಿರ್ಧಾರದ ಬಗ್ಗೆ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತಿಳಿಸಲು ಪ್ರಧಾನಿ ಹೋಗಿದ್ದರು. ಈ ರಹಸ್ಯವು ರಾಜಕೀಯ ಎದುರಾಳಿಗಳನ್ನು ಅಚ್ಚರಿಗೊಳಿಸುವ ದೊಡ್ಡ ಯೋಜನೆಯ ಭಾಗವಾಗಿತ್ತು. ನಿರೀಕ್ಷೆಯಂತೆ ಈ ಬದಲಾವಣೆಯು ಪ್ರತಿಪಕ್ಷಗಳಿಂದ ವ್ಯಾಪಕ ಖಂಡನೆಯಾಗುವ ಜತೆಗೆ, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯೂ ಇತತು. ಹೀಗಾಗಿ ಯಾವುದೇ ಪ್ರಮುಖ ಚುನಾವಣೆಗಳು ಸಮೀಪದಲ್ಲಿ ಇಲ್ಲದ ಸಮಯದಲ್ಲಿ 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಮತ್ತಷ್ಟು ಓದಿ: 370ನೇ ವಿಧಿ ರದ್ದುಗೊಳಿಸುವ ಮುನ್ನ ಅಮಿತ್ ಶಾ ಜತೆಗೆ ನಡೆದ ಸಭೆ ಹೇಗಿತ್ತು?; ತಮ್ಮ ಪುಸ್ತಕದಲ್ಲಿ ವಿವರಿಸಿದ ಕೆಜೆಎಸ್ ಧಿಲ್ಲೋನ್

ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಇಲ್ಲದಿದ್ದಾಗ, ಲೋಕಸಭೆಯಲ್ಲಿ ಬಿಜೆಪಿಗೆ ಒಂದೇ ಬಹುಮತವಿದ್ದಲ್ಲಿ ಮಸೂದೆಯನ್ನು ಮೊದಲು ಮಂಡಿಸಲು ಸಾಧ್ಯವಾಗಿರಲಿಲ್ಲ. ಲೋಕಸಭೆಯಲ್ಲಿ ಏಕಾಏಕಿ 370ನೇ ವಿಧಿ ರದ್ದು ಮಾಡುವ ವಿಚಾರ ಪ್ರಸ್ತಾಪವಾದರೆ ಪ್ರತಿಪಕ್ಷಗಳನ್ನು ಎಚ್ಚರಿಸಿದಂತಾಗುತ್ತಿತ್ತು. ಹಾಗಾಗಿ 2019ರಲ್ಲಿ ಸರ್ಕಾರ ಗೆಲುವು ಸಾಧಿಸುವವರೆಗೆ ಕಾದಿದ್ದರು. ಅಂದು 2019ರ ಆಗಸ್ಟ್‌ 5, ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಿಯಮಾವಳಿಯಂತೆ ಸ್ಪೀಕರ್‌ ಅವರಿಗೆ ವಿಶೇಷ ಎರಡು ಮಸೂದೆಗಳನ್ನು ಮಂಡಿಸಲು ಅವಕಾಶ ಕೋರಿದ್ದರು. ಸ್ಪೀಕರ್‌ ಅವಕಾಶ ನೀಡುತ್ತಿದ್ದಂತೆ ಎದ್ದು ನಿಂತ ಗೃಹ ಸಚಿವ ಶಾ, ನೇರ ಕಾಶ್ಮೀರದ ವಿಷಯ ಪ್ರಸ್ತಾಪಿಸಿದರು.

ಈ ಹಂತದಲ್ಲಿ ಇಡೀ ಸದನ ಕೋಲಾಹಲದಲ್ಲಿ ಮುಳುಗಿತು. ಮೊದಲೇ ಸಣ್ಣ ಸುಳಿವು ಇದ್ದ ಪ್ರತಿಪಕ್ಷದ ಸದಸ್ಯರು ಸರಕಾರದ ವಿರುದ್ಧ ಮುಗಿಬಿದ್ದರು. ಗದ್ದಲದ ನಡುವೆಯೇ ಗೃಹಸಚಿವರು ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿ ತೆಗೆದುಹಾಕಲು ‘ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ-2019’ರ ಅಡಿಯಲ್ಲಿ ರಾಜ್ಯಸಭೆಯಲ್ಲಿ ಪರಿಗಣನೆ ಹಾಗೂ ಅಂಗೀಕಾರಕ್ಕಾಗಿ ಎರಡು ನಿರ್ಣಯಗಳು ಮತ್ತು ಎರಡು ಮಸೂದೆಗಳನ್ನು ಮಂಡಿಸಿದರು.

ಮತ್ತಷ್ಟು ಓದಿ: Article 370: ಸುಪ್ರೀಂಕೋರ್ಟ್​ನಲ್ಲಿ ಇಂದಿನಿಂದ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ವಿರುದ್ಧದ ಅರ್ಜಿಗಳ ವಿಚಾರಣೆ

ಮೋದಿಯವರು ರಾಜಕೀಯ ಲಾಭದ ದೃಷ್ಠಿಕೋನದಿಂದ ನೋಡಿದ್ದರೆ ಚುನಾವಣೆಯ ಹತ್ತಿರದಲ್ಲಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಪ್ರಕರಣಗಳ ಇಳಿಕೆ, ಪ್ರವಾಸಿಗರ ಆಗಮನದಲ್ಲಿ ಭಾರಿ ಹೆಚ್ಚಳವಾಗಿತ್ತು.

370ನೇ ವಿಧಿ ಜಾರಿಗೆ ಬಂದಿದ್ದು ಹೇಗೆ?

ಸಂವಿಧಾನದ 370ನೇ ವಿಧಿ ಪ್ರಕಾರ, ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಈ ವಿಶೇಷತೆಯೇ ಕಾಶ್ಮಿರವನ್ನು ಭಾರತದಿಂದ ಅನೇಕ ವಿಷಯಗಳಲ್ಲಿ ಪ್ರತ್ಯೇಕವಾಗಿ ಇರಿಸಿತ್ತು. 1947ರ ಅಕ್ಟೋಬರ್‌ 24ರಂದು ಪಾಕಿಸ್ತಾನದ ದಾಳಿಕೋರರು ಕಾಶ್ಮೀರ ಆಕ್ರಮಿಸಿದಾಗ ಅಲ್ಲಿನ ಮಹಾರಾಜ ಹರಿಸಿಂಗ್‌ ಭಾರತ ಸರ್ಕಾರದ ನೆರವು ಕೇಳಿತ್ತು. ದಾಳಿಕೋರರನ್ನು ಭಾರತೀಯ ಸೇನಾ ಪಡೆ ಹಣ್ಣುಗಾಯಿ ನೀರುಗಾಯಿ ಮಾಡಿತ್ತು.

ಮತ್ತಷ್ಟು ಓದಿ: SC Verdict on Article 370: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂ: ಸೆ. 30 ರೊಳಗೆ ಚುನಾವಣೆ ನಡೆಸಲು ನಿರ್ದೇಶನ

1947ರ ಅಕ್ಟೋಬರ್‌ 26ರಂದು ರಕ್ಷಣೆ, ವಿದೇಶ ವ್ಯವಹಾರ ಮತ್ತು ಸಂಪರ್ಕ ಇಲಾಖೆಯನ್ನು ಹರಿಸಿಂಗ್‌, ಭಾರತ ಸರ್ಕಾರದ ವಶಕ್ಕೊಪ್ಪಿಸಿದ್ದರು. ಭಾರತದ ಇತರ ರಾಜ್ಯಗಳ ರಾಜರುಗಳೂ ಇದೇ ರೀತಿ ಭಾರತದ ಜತೆ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಆರಂಭಿಸುತ್ತಿದ್ದರು.

ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಅಂದಿನ ಭಾರತ ಸರ್ಕಾರದ ಒತ್ತಾಯದ ಮೇರೆಗೆ, ಅಂತಿಮ ನಿರ್ಧಾರ ಜಮ್ಮು ಮತ್ತು ಕಾಶ್ಮಿರದ ಅಸೆಂಬ್ಲಿ ತೆಗೆದುಕೊಳ್ಳಬೇಕೆಂದು ನಿರ್ಣಯಿಸಲಾಯಿತು. ಆದರೆ, ಈ ಮಧ್ಯಂತರ ಅವಧಿಯಲ್ಲಿ ಭಾರತದ ಸಂವಿಧಾನದ ಅಡಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಕಲ್ಪಿಸಲು ಸೃಷ್ಟಿಯಾಗಿದ್ದು ಈ 370ನೇ ವಿಧಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ