PM Modi Visit World Mosque: ಈಜಿಪ್ಟ್‌ನ ಅಲ್-ಹಕೀಮ್ ಮಸೀದಿಗೆ ಪ್ರಧಾನಿ ಪ್ರವಾಸ: ಮೋದಿ ಭೇಟಿ ನೀಡಿದ ವಿದೇಶಿ ಮಸೀದಿಗಳು ಯಾವುವು?

ಪ್ರಧಾನಿ ಮೋದಿ ಅವರು ಜೂನ್​​ನಲ್ಲಿ ಈಜಿಪ್ಟ್‌ಗೆ ತಮ್ಮ ಮೊದಲ ಪ್ರವಾಸ ಮಾಡಲಿದ್ದು, ಈ ಸಮಯಲ್ಲಿ ಈಜಿಪ್ಟ್‌ನ ಓಲ್ಡ್ ಕೈರೋದಲ್ಲಿನ ಪ್ರಸಿದ್ಧ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ.

PM Modi Visit World Mosque: ಈಜಿಪ್ಟ್‌ನ ಅಲ್-ಹಕೀಮ್ ಮಸೀದಿಗೆ ಪ್ರಧಾನಿ ಪ್ರವಾಸ: ಮೋದಿ ಭೇಟಿ ನೀಡಿದ ವಿದೇಶಿ ಮಸೀದಿಗಳು ಯಾವುವು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jun 19, 2023 | 4:38 PM

ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಅಬುಧಾಬಿಯ ಶೇಖ್ ಜಾಯೆದ್ ಮಸೀದಿ ಮತ್ತು 2018ರಲ್ಲಿ ಇಂಡೋನೇಷ್ಯಾದ ಬೃಹತ್ ಇಸ್ತಿಕ್ಲಾಲ್ ಮಸೀದಿಗೆ ಭೇಟಿ ನೀಡಿದ್ದರು ಮತ್ತು ಅಲ್ಲಿನ ಅಭಿವೃದ್ಧಿಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು. ಇದೀಗ ಜೂನ್​​ನಲ್ಲಿ ಈಜಿಪ್ಟ್‌ಗೆ ತಮ್ಮ ಮೊದಲ ಪ್ರವಾಸ ಮಾಡಲಿದ್ದು, ಈ ಸಮಯಲ್ಲಿ ಈಜಿಪ್ಟ್‌ನ ಓಲ್ಡ್ ಕೈರೋದಲ್ಲಿನ ಪ್ರಸಿದ್ಧ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಸುಮಾರು 1,000 ವರ್ಷಗಳಷ್ಟು ಹಳೆಯದಾದ ಅಲ್-ಹಕೀಮ್ ಮಸೀದಿಯನ್ನು ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಆರು ವರ್ಷಗಳಲ್ಲಿ ಪುನಃಸ್ಥಾಪಿಸಲಾಯಿತು ಮತ್ತು ಇದೀಗ ಮತ್ತೆ ತೆರೆಯಲಾಗುತ್ತಿದೆ.

ಅಧಿಕಾರಿಗಳು ಪ್ರಧಾನಿ ಮೋದಿಯವರ ಮಸೀದಿಗಳ ಪ್ರವಾಸ ಮಾಡುವುದು, ಒಂದು ಮಹತ್ವದಾಗಿದೆ ಎಂದು ಹೇಳಿದ್ದಾರೆ. ಮೋದಿ ಭೇಟಿ ನೀಡಿದ ದೇಶಗಳಲ್ಲಿ ಅಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಮುಸ್ಲಿಂ ದೇಶಗಳಿಗೆ ಪ್ರವಾಸ ಮಾಡಿದಾಗ, ಅಲ್ಲಿನ ವಿವಿಧ ಮಸೀದಿಗಳಿಗೆ ಭೇಟಿ ನೀಡಿದ್ದಾರೆ.

ಮೋದಿ ಅವರು ಭಾರತದ ಪ್ರಧಾನಿಯಾಗಿದ್ದಾಗ ಭೇಟಿ ನೀಡಿದ ಮಸೀದಿಗಳು

ಚಿಲುಯ ಮಸೀದಿ

2018ರಲ್ಲಿ, ಮೋದಿ ಅವರು ಸಿಂಗಾಪುರದ ಸಂಸ್ಕೃತಿ ಸಚಿವ ಗ್ರೇಸ್ ಯಿನ್ ಅವರೊಂದಿಗೆ ಸಿಂಗಾಪುರದ ಚಿಲುಯಾ ಮಸೀದಿಗೆ ಭೇಟಿ ನೀಡಿದ್ದರು. ಈ ಮಸೀದಿಯನ್ನು 1826ರಲ್ಲಿ ಭಾರತದ ಕೋರಮಂಡಲ್ ಕರಾವಳಿಯ ತಮಿಳು ಮುಸ್ಲಿಂ ವ್ಯಾಪಾರಿಗಳಾದ ಚುಲಿಯಾಸ್ ನಿರ್ಮಿಸಿದರು ಮತ್ತು ಇದು ಸಿಂಗಾಪುರದ ಪ್ರಸಿದ್ಧ ಮಸೀದಿಗಳಲ್ಲಿ ಒಂದಾಗಿದೆ. ಇದು ಸೆಂಟ್ರಲ್ ಏರಿಯಾದ ಚೈನಾಟೌನ್ ನೆರೆಹೊರೆಯ ಸೌತ್ ಬ್ರಿಡ್ಜ್ ರಸ್ತೆಯಲ್ಲಿದೆ.

ಇಸ್ತಾಕಲ್ ಮಸೀದಿ

ಅದೇ ವರ್ಷದಲ್ಲಿ ಮೋದಿ ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಇಸ್ತಾಕಲ್ ಮಸೀದಿಗೆ ಭೇಟಿ ನೀಡಿದರು. ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಮಸೀದಿ ಎಂದು ಹೇಳಲಾಗುತ್ತದೆ. ಇಂಡೋನೇಷ್ಯಾದ ಸ್ವಾತಂತ್ರ್ಯದ ನೆನಪಿಗಾಗಿ, ಮಸೀದಿಯನ್ನು ನಿರ್ಮಿಸಲಾಯಿತು. “ಸ್ವಾತಂತ್ರ್ಯ” ಎಂಬ ಪದ ಅರೇಬಿಕ್​​ನಲ್ಲಿ ಇಸ್ತಿಕ್ಲಾಲ್ ಆಗಿದೆ. ಈ ಮಸೀದಿಯಲ್ಲಿ 120,000ಕ್ಕೂ ಹೆಚ್ಚು ಜನರು ಇದರ ಒಳಗೆ ಹೋಗಬಹುದ, ಇದರ ನಿರ್ಮಾಣಕ್ಕೆ 17 ವರ್ಷಗಳನ್ನು ತೆಗೆದುಕೊಂಡಿತು.

ಸುಲ್ತಾನ್ ಕಬೂಸ್ ಗ್ರ್ಯಾಂಡ್ ಮಸೀದಿ

ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಸಿಂಗಾಪುರದ ಪ್ರವಾಸ ಮುಗಿಸಿ ಭಾರತಕ್ಕೆ ತೆರಳುವ ಮೊದಲು ಮಸ್ಕತ್‌ನಲ್ಲಿರುವ ಸುಲ್ತಾನ್ ಖಾಬೂಸ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿದ್ದರು. ಮಸ್ಕತ್‌ನ ಆಕರ್ಷಣೆಗಳಲ್ಲಿ ಇದು ಒಂದು, ಇದು ಮುಸ್ಲಿಮೇತರ ಪ್ರವಾಸಿಗರನ್ನು ಕೂಡ ಸೆಳೆಯುತ್ತದೆ. ವರದಿಗಳ ಪ್ರಕಾರ, ಬೆರಗುಗೊಳಿಸುವ ಕಟ್ಟಡವು ಸಮಕಾಲೀನ ಇಸ್ಲಾಮಿಕ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ಮುಖ್ಯ ಪ್ರಾರ್ಥನಾ ಸಭಾಂಗಣದಲ್ಲಿರುವ ಪರ್ಷಿಯನ್ ಕಾರ್ಪೆಟ್ ವಿಶ್ವದ ಎರಡನೇ ಅತಿದೊಡ್ಡ ಕೈಯಿಂದ ನೇಯ್ದ ಇರಾನಿನ ಕಾರ್ಪೆಟ್ ಆಗಿದೆ, ಇದು 70 ರಿಂದ 60 ಮೀಟರ್ ಅಳತೆಯಾಗಿದೆ. ಕಾರ್ಪೆಟ್ ನಿರ್ಮಾಣಕ್ಕೆ ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು ಮತ್ತು 600 ಜನರು ನೇಯ್ಗೆ ಮಾಡಿದರು.

ಮಸೀದಿಯು ಪ್ರಾರ್ಥನಾ ಮಂದಿರವನ್ನು ಹೊಂದಿದ್ದು, 750 ಮಹಿಳೆಯರು ಸೇರಿದಂತೆ 20,000 ಮಂದಿ ಪಾಲ್ಗೊಳ್ಳಬಹುದು. OR 2.500 ಕ್ಕೆ, ಮಸೀದಿ ಕೆಫೆ ಮತ್ತು ಉಡುಗೊರೆ ಅಂಗಡಿ ಮತ್ತು ಸ್ಕಾರ್ಫ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಇನ್ನೂ ಸುಲ್ತಾನ್ ಕಬೂಸ್ ಗ್ರ್ಯಾಂಡ್ ಮಸೀದಿಗೂ ಭಾರತಕ್ಕೂ ಕೊಂಡಿ ಇದೆ. ಈ ಮಸೀದಿಯನ್ನು 200 ಭಾರತೀಯ ಕುಶಲಕರ್ಮಿಗಳು ಕೆತ್ತಿದ 300,000 ಟನ್ ಭಾರತೀಯ ಮರಳುಗಲ್ಲು ಬಳಸಿ ನಿರ್ಮಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: PM Modi US Visit Schedule: ಜೂನ್ 20ರಂದು ಅಮೆರಿಕಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರ ವೇಳಾಪಟ್ಟಿ ಹೀಗಿದೆ

ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿ

ಯುಎಇಗೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಅಬುಧಾಬಿಯ ಗೌರವಾನ್ವಿತ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯಲ್ಲಿ ತಮ್ಮ ಮೊದಲ ಭೇಟಿ ನೀಡಿದ್ದಾರೆ. ಮೋದಿ ಅವರು ಮಸೀದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿ ತಮ್ಮ ಟ್ವಿಟರ್ ಈ ಬಗ್ಗೆ ಹಂಚಿಕೊಂಡಿದ್ದಾರೆ. ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನದಲ್ಲಿರುವ ಮಸೀದಿಗಳ ನಂತರ ವಿಶ್ವದ ಮೂರನೇ ಅತಿದೊಡ್ಡ ಮಸೀದಿಯಾಗಿರುವ ಈ ಪ್ರಮುಖ ಪ್ರಾರ್ಥನಾ ಸ್ಥಳವನ್ನು ಮೋದಿ ಅವರು ಸುತ್ತಾಡಿ ಅಲ್ಲಿನ ವಾಸ್ತುಶಿಲ್ಪದ ಬಗ್ಗೆ ತಿಳಿದುಕೊಂಡಿದ್ದಾರೆ.

ಬಹದ್ದೂರ್ ಷಾ ಜಫರ್ ಸಮಾಧಿ

2017ರಲ್ಲಿ ಮ್ಯಾನ್ಮಾರ್‌ಗೆ ಭೇಟಿ ನೀಡಿದ ಮೋದಿ ಅವರು ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್ ಅವರ ‘ಮಜರ್’ ಸಮಾಧಿಗೆ ಭೇಟಿ ನೀಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್