ಬೆಂಗಳೂರಲ್ಲಿ ಮಿತಿ ಮೀರಿದ ವಾಯುಮಾಲಿನ್ಯ: ನಿಮ್ಮ ಏರಿಯಾದಲ್ಲೆಷ್ಟಿದೆ? ಇಲ್ಲಿದೆ ಮಾಹಿತಿ
ಗುರುವಾರ, ಶುಕ್ರವಾರ ಹಾಗೂ ಶನಿವಾರ ನಗರದ ವಾಯು ಗುಣಮಟ್ಟದ ಸೂಚ್ಯಂಕ 100-163ರ ನಡುವೆ ಇತ್ತು. ವಾಯುಗುಣಮಟ್ಟದ ಪ್ರಮಾಣ ದಿನದಿಂದ ದಿನಕ್ಕೆ ಹಾಳಾಗುತ್ತಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿರುವ ಮರಗಳು. ಆದರೆ, ನಗರದಲ್ಲಿ ನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ವಾಯುಮಾಲಿನ್ಯದ ಪ್ರಮಾಣ ಕೂಡ ಅಧಿಕವಾಗಿದೆ. ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಮಟ್ಟ ಮಿತಿ ಮೀರುತ್ತಿದ್ದು, ಹೊರಗೆ ಹೆಚ್ಚು ಸುತ್ತಾಟ ನಡೆಸಬೇಡಿ ಎಂದು ತಜ್ಞರು ಸೂಚನೆ ನೀಡಿದ್ದಾರೆ.
ಗುರುವಾರ, ಶುಕ್ರವಾರ ಹಾಗೂ ಶನಿವಾರ ನಗರದ ವಾಯು ಗುಣಮಟ್ಟದ ಸೂಚ್ಯಂಕ 100-163ರ ನಡುವೆ ಇತ್ತು. ವಾಯುಗುಣಮಟ್ಟದ ಪ್ರಮಾಣ ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಹೀಗಾಗಿ, ಹೆಚ್ಚು ಟ್ರಾಫಿಕ್ ಹಾಗೂ ಧೂಳು ಇರುವ ಪ್ರದೇಶಗಳಲ್ಲಿ ಸಂಚಾರ ಮಾಡದಿರಿ. ಒಂದೊಮ್ಮೆ ಹೀಗೆ ಓಡಾಡುವ ಪರಿಸ್ಥಿತಿ ಬಂದರೆ ಮಾಸ್ಕ್ ಕಡ್ಡಾಯವಾಗಿ ಧರಿಸಿ. ಈ ರೀತಿಯ ಗಾಳಿ ಸೇವನೆಯಿಂದ ನಿಮ್ಮ ಆರೋಗ್ಯದ ಹಾಳಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ನಿಧಾನವಾಗಿ ವರ್ಕ್ ಫ್ರಮ್ ಹೋಂ ಪದ್ದತಿ ಕೊನೆಗೊಳ್ಳುತ್ತಿದೆ. ಹೀಗಾಗಿ, ಜನರು ಕಚೇರಿಗೆ ತೆರಳುತ್ತಿದ್ದಾರೆ. ಕೊರೊನಾ ನಂತರ ಜನರು ತಮ್ಮದೇ ವಾಹನ ಹೊಂದುತ್ತಿದ್ದಾರೆ. ಈ ಕಾರಣಕ್ಕೆ ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ ಎನ್ನುವುದು ತಜ್ಞರ ವಾದ. ಉಳಿದಂತೆ ನಗರದಲ್ಲಿ ಹೆಚ್ಚು ರಸ್ತೆ ಕಾಮಾಗಾರಿ ನಡೆಯುತ್ತಿದೆ. ಈ ಕಾರಣಕ್ಕೂ ಗಾಳಿಯ ಗುಣಮಟ್ಟ ಹಾಳಾಗುತ್ತಿದೆ.
- ವಾಯು ಗುಣಮಟ್ಟದ ಸೂಚ್ಯಂಕವನ್ನು ಆರು ವಿಧದಲ್ಲಿ ವಿಂಗಡಿಸಲಾಗುತ್ತದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
- 0-50: ಈ ಸೂಚ್ಯಂಕ ಗಾಳಿ ಉತ್ತಮವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದರಿಂದ ಯಾರಿಗೂ ಹಾನಿಯಿಲ್ಲ. ಕಬ್ಬನ್ ಪಾರ್ಕ್ ಭಾಗದಲ್ಲಿ ಈ ರೀತಿಯ ಗಾಳಿ ಕಂಡು ಬರುತ್ತದೆ.
- 51-100: ವಾಯು ಗುಣಮಟ್ಟದ ಈ ಸೂಚ್ಯಂಕ ಅಷ್ಟೊಂದು ಅಪಾಯಕಾರಿ ಅಲ್ಲ. ಆದರೆ, ವಯಸ್ಸಾದವರಿಗೆ ಇದು ಹಾನಿ ಉಂಟು ಮಾಡಬಹುದು.
- 100-150: ಇದು ತೀರಾ ಅಪಾಯಕಾರಿ ಅಲ್ಲದಿದ್ದರೂ ಸೂಕ್ಷ್ಮ ವ್ಯಕ್ತಿಗಳಿಗೆ ಹಾನಿ ಉಂಟು ಮಾಡುತ್ತದೆ.
- 151-200: ವಾಯು ಗುಣಮಟ್ಟದ ಈ ಸೂಚ್ಯಂಕ ಅಪಾಯಕಾರಿ. ದೆಹಲಿ ವಾಯು ಗುಣಮಟ್ಟ ಈಗಾಗಲೇ ಈ ಹಂತ ತಲುಪಿದೆ.
- 200-300: ಇದು ಬಹುತೇಕರಿಗೆ ಹಾನಿ ಉಂಟು ಮಾಡುತ್ತದೆ. ಈ ರೀತಿಯ ಗಾಳಿ ಸೇವನೆ ಬಹುತೇಕರಿಗೆ ತೊಂದರೆ ಉಂಟು ಮಾಡುತ್ತದೆ.
- 300+: ಇಷ್ಟು ಪ್ರಮಾಣದಲ್ಲಿ ಗಾಳಿ ಮಲಿನಗೊಂಡಿದ್ದರೆ ವ್ಯಕ್ತಿಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ. ಗಾಳಿ ಗುಣಮಟ್ಟ ತುಂಬಾನೇ ಕೆಳಮಟ್ಟಕ್ಕೆ ಹೋಗಿರುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಬಹುದು.
ಎಲ್ಲೆಲ್ಲಿ ಎಷ್ಟೆಷ್ಟು?
-
-
- ಬೆಂಗಳೂರು ಕೆಂದ್ರ ರೈಲ್ವೆ ನಿಲ್ದಾಣ: 81
- ಬಿಡಬ್ಲ್ಯುಎಸ್ಎಸ್ ಕಾಡಬೇಸನಹಳ್ಳಿ: 186
- ಸಿಲ್ಕ್ ಬೋರ್ಡ್: 154
- ಪೀಣ್ಯ: 153
- ಹೆಬ್ಬಾಳ: 157
https://tv9kannada.com/delhi-air-pollution-due-to-agricultural-waste-has-increased-healthy-air-not-available
-