ದೆಹಲಿ: ಕೊರೊನಾ ವಿರುದ್ಧದ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಮಾಡಿಕೊಳ್ಳುವುದು ಅಥವಾ ಅಪಾಯಿಂಟ್ಮೆಂಟ್ ಪಡೆದುಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಇಂದು (ಜೂನ್ 15) ಮಾಹಿತಿ ನೀಡಿದೆ. ಗ್ರಾಮೀಣ ಭಾಗದ ಹಲವು ಮಂದಿ ಲಸಿಕೆ ಪಡೆಯುವಲ್ಲಿ ಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ಬುಕಿಂಗ್ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.
18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ನೇರವಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಬಹುದು. ಅಲ್ಲಿ ದಾಖಲೆ ಸಲ್ಲಿಸಿ ಲಸಿಕೆ ಪಡೆದುಕೊಳ್ಳಬಹುದು. ಈ ವ್ಯವಸ್ಥೆಯನ್ನು ‘ವಾಕ್ ಇನ್’ ಎಂದು ಕರೆಯಲಾಗುತ್ತದೆ. ಈಗ ಈ ಮಾದರಿಯ ಲಸಿಕೆ ನೀಡಿಕೆಯನ್ನು ಕೇಂದ್ರ ಸರ್ಕಾರ ಸೂಚಿಸಿದೆ.
ಕೊವಿನ್ ಪೋರ್ಟಲ್ ಮೂಲಕ ರಿಜಿಸ್ಟ್ರೇಷನ್ ನಡೆಸಿ ಲಸಿಕೆ ಪಡೆದುಕೊಳ್ಳುವುದು ಕೂಡ ಒಂದು ಮಾರ್ಗವಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಗ್ರಾಮೀಣ ಭಾಗದಲ್ಲಿ ಲಸಿಕೆ ನೀಡಿಕೆಯನ್ನು ಆಶಾ ಕಾರ್ಯಕರ್ತೆಯರು ಗಮನಿಸುತ್ತಿದ್ದಾರೆ. ಈಗ ನೇರವಾಗಿ ಲಸಿಕಾ ಕೇಂದ್ರಕ್ಕೆ ಭೇಟಿನೀಡಿ ಲಸಿಕೆ ಪಡೆಯಬಹುದು. ಲಸಿಕೆ ಸಹಾಯವಾಣಿ ಸಂಖ್ಯೆ 1075 ಕೂಡ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲಾಗಿದೆ.
ಜೂನ್ 13ರ ಮಾಹಿತಿ ಪ್ರಕಾರ, ಕೊವಿನ್ ಪೋರ್ಟಲ್ನಲ್ಲಿ ಲಸಿಕೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ 28.36 ಕೋಟಿ ಜನರ ಪೈಕಿ, 16.45 ಕೋಟಿ ಮಂದಿ (ಶೇಕಡಾ 58ರಷ್ಟು) ನೇರವಾಗಿ ವಾಕ್ಇನ್ ಮೂಲಕ ಲಸಿಕೆ ಪಡೆದುಕೊಂಡವರಾಗಿದ್ದಾರೆ. ಜೊತೆಗೆ, ಜೂನ್ 13ರಂತೆ ಲಸಿಕೆ ಪಡೆದಿರುವ ಒಟ್ಟು 24.84 ಕೋಟಿ ಲಸಿಕೆ ಡೋಸ್ಗಳಲ್ಲಿ 19.84 ಕೋಟಿ ಕೋಟಿ ಲಸಿಕೆ ಡೋಸ್ (ಸುಮಾರು ಶೇಕಡಾ 80ರಷ್ಟು) ಲಸಿಕೆ ನೀಡಿಕೆ ವಾಕ್ಇನ್ ಮೂಲಕ ಆಗಿದೆ.
ಆರೋಗ್ಯ ಸಚಿವಾಲಯದ ಮಾಹಿತಿಯಂತೆ, ಒಟ್ಟು 69,995 ಲಸಿಕಾ ಕೇಂದ್ರಗಳಲ್ಲಿ 49,883 ಅಂದರೆ ಶೇಕಡಾ 71ರಷ್ಟು ಲಸಿಕಾ ಕೇಂದ್ರಗಳು ಗ್ರಾಮೀಣ ಭಾಗಗಳಲ್ಲಿ ಇವೆ. ಹೀಗಾಗಿ, ಲಸಿಕೆ ನಿಡಿಕೆಗೆ ವಾಕ್ ಇನ್ ಕ್ರಮ ಅನುಸರಿಸುವ ಬಗ್ಗೆ ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Corona Vaccine: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ; ಶೇಕಡಾ 100ರಷ್ಟು ಲಸಿಕೆ ನೀಡಿಕೆ ಸಾಧಿಸಿದ ಮೊದಲ ಗ್ರಾಮವಿದು!
ಕೊವಿಡ್ 19 ಲಸಿಕೆಯಿಂದ ಭಾರತದಲ್ಲಿ ಮೃತಪಟ್ಟವರು ಎಷ್ಟು ಮಂದಿ?..ಕೊನೆಗೂ ಸಂಖ್ಯೆ ದೃಢಪಡಿಸಿದ ಎಇಎಫ್ಐ ಸಮಿತಿ