Quad Summit | ವಿಶ್ವದ ಅಭ್ಯುದಯ ಮತ್ತು ಶಾಂತಿಗಾಗಿ ಕ್ವಾಡ್ ಶ್ರಮಿಸುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

‘ಈ ಸಭೆಯಲ್ಲಿ ನಮ್ಮೆಲ್ಲರ ಪಾಲ್ಗೊಳ್ಳುವಿಕೆ ವಿಶ್ವದಲ್ಲಿ ಶಾಂತಿ ನೆಲೆಗೊಳ್ಳಲು ಮತ್ತು ವಿಶ್ವದ ಆಭ್ಯುದಯಕ್ಕೆ ನೆರವಾಗಲಿದೆ ಎಂಬ ವಿಶ್ವಾಸ ನನಗಿದೆ,‘ ಎಂದು ಪ್ರಧಾನಿ ಮೋದಿ ಹೇಳಿದರು.

Quad Summit | ವಿಶ್ವದ ಅಭ್ಯುದಯ ಮತ್ತು ಶಾಂತಿಗಾಗಿ ಕ್ವಾಡ್ ಶ್ರಮಿಸುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
ಕ್ವಾಡ್​ ನಾಯಕರು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 25, 2021 | 2:02 AM

ಅಮೇರಿಕದ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಚ್ ವಿ ಶ್ರೀಂಗ್ಲಾ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಪಾಲ್ಗೊಂಡರು. ಕ್ವಾಡ್​ನ ಇತರ ಸದಸ್ಯ ರಾಷ್ಟ್ರಗಳಾಗಿರುವ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ರಾಷ್ಟ್ರಗಳ ನಾಯಕರು ತಮ್ಮ ನಿಯೋಗಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ಬೈಡೆನ್ ಅವರು, ‘ನಾಲ್ಕು ಪ್ರಜಾಪ್ರಭುತ್ವದ ರಾಷ್ಟ್ರಗಳಾಗಿರುವ ಅಮೆರಿಕ, ಇಂಡಿಯ, ಆಸ್ಟ್ರೇಲಿಯ ಮತ್ತು ಜಪಾನ್ ಕೊವಿಡ್ ನಿಂದ ಹವಾಮಾನದವರೆಗೆ ಹಲವಾರು ವಿಷಯಗಳನ್ನು ಚರ್ಚಿಸಲು ಒಂದುಗೂಡಿವೆ. ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂದು ನಮಗೆ ಚೆನ್ನಾಗಿ ಗೊತ್ತಿದೆ ಮತ್ತು ನಾವು ಅದಕ್ಕೆ ಸಿದ್ಧರಾಗಿದ್ದೇವೆ,’ ಎಂದರು

ಸಭೆಯಲ್ಲಿ ನಂತರ ಮಾತಾಡಿದ ಪ್ರಧಾನಮಂತ್ರಿ ಮೋದಿ ಅವರು, ‘ಮೊದಲ ಬಾರಿಗೆ ಕ್ವಾಡ್ ರಾಷ್ಟ್ರಗಳ ಮುಖಾಮುಖಿ ಶೃಂಗಸಭೆ ನಡೆಸುತ್ತಿರುವುದಕ್ಕೆ ಅಧ್ಯಕ್ಷ ಬೈಡೆನ್ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಕೊವಿಡ್ ಮತ್ತು ಇತರ ವಿಷಯಗಳನ್ನು ಚರ್ಚಸುವುದಕ್ಕೆ ಉತ್ಸುಕನಾಗಿದ್ದೇನೆ,’ ಎಂದು ಹೇಳಿದರು.

‘ಇಂಡೊ-ಪೆಸಿಫಿಕ್ ಪ್ರಾಂತ್ಯಕ್ಕೆ ನೆರವಾಗುವ ಉದ್ದೇಶದಿಂದ ನಮ್ಮ ನಾಲ್ಕು ಕ್ವಾಡ್ ರಾಷ್ಟಗಳು 2004 ಸುನಾಮಿ ದುರಂತದ ಬಳಿಕ ಮೊದಲ ಬಾರಿಗೆ ಸಭೆ ಸೇರಿದವು. ಇಂದು ನಾವು ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡುತ್ತಿದ್ದೇವೆ. ಕ್ವಾಡ್ ಆಗಿ ನಾವು ಮಾನವ ಕಲ್ಯಾಣಕ್ಕಾಗಿಯೇ ಮತ್ತೊಮ್ಮೆ ಜೊತೆಗೂಡಿದ್ದೇವೆ. ನಮ್ಮ ಲಸಿಕಾ ಆಭಿಯಾನ ಇಂಡೋ-ಪೆಸಿಫಿಕ್ ರಾಷ್ಟ್ರಗಳಿಗೆ ಬಹಳಷ್ಟು ನೆರವಾಗಲಿದೆ,’ ಎಂದು ಪ್ರಧಾನಿ ಮೋದಿ ಹೇಳಿದರು.

‘ಈ ಸಭೆಯಲ್ಲಿ ನಮ್ಮೆಲ್ಲರ ಪಾಲ್ಗೊಳ್ಳುವಿಕೆ ವಿಶ್ವದಲ್ಲಿ ಶಾಂತಿ ನೆಲೆಗೊಳ್ಳಲು ಮತ್ತು ವಿಶ್ವದ ಆಭ್ಯುದಯಕ್ಕೆ ನೆರವಾಗಲಿದೆ ಎಂಬ ವಿಶ್ವಾಸ ನನಗಿದೆ,’ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸಗಳನ್ನು ಹೇಗೆ ಮಾಡಬೇಕು ಎನ್ನುವುದನ್ನು ಗುಂಪಾಗಿ ಸೇರುವಿಕೆ ಸಾಬೀತುಪಡಿಸುತ್ತದೆ. ಈಗಾಗಲೇ ನಾವು ಬಹಳಷ್ಟನ್ನು ಸಾಧಿಸಿದ್ದೇವೆ. ನಮ್ಮಲ್ಲಿ ಕೋವಿಡ್ ಲಸಿಕೆಗಳು ಲಭ್ಯವಿಲ್ಲ. ಅದರೂ ಆವುಗಳನ್ನು ಹೇಗೋ ಹೊಂದಿಸಿಕೊಂಡು ಜನರಿಗೆ ನೀಡುತ್ತಿದ್ದೇವೆ,’ಎಂದು ಆಸ್ಟ್ರೇಲಿಯ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಹೇಳಿದರು.

ಜಪಾನಿನ ಪ್ರಧಾನಿ ಯೊಶಿಧೆ ಸುಗಾ, ‘ನಾಲ್ಕು ರಾಷ್ಟ್ರಗಳ ನಡುವೆ ಸಂಬಂಧ ಎಷ್ಟು ಗಾಢವಾಗಿದೆ ಎನ್ನುವುದನ್ನು ಈ ಶೃಂಗಸಭೆ ಸೂಚಿಸುತ್ತದೆ. ವಿಷಯ ಪ್ರಾದೇಶಿಕವಾಗಿರಲಿ, ಅಥವಾ ಕೋವಿಡ್ ಸಂಬಂಧಿಸಿದ್ದು; ನಾವು ಅವುಗಳನ್ನು ಪರಸ್ಪರ ಹಂಚಿಕೊಂಡು ಆನಂದಿಸುತ್ತೇವೆ. ಇಂಥ ಅನೇಕ ಸಮಸ್ಯೆಗಳನ್ನು ಕ್ವಾಡ್ ನಿಭಾಯಿಸಿದೆ. ಆರ್ಥಿಕ ಮತ್ತು ಟೆಕ್ ಗೆ ಸಂಬಂಧಿಸಿದ ವಿಷಯಗಳನ್ನೂ ನಾವು ನಿರ್ವಹಿಸೋಣ,’ ಎಂದು ಹೇಳಿದರು.

ಅಮೇರಿಕದ ಅಧ್ಯಕ್ಷ ಜೋ ಬೈಡೆನ್ ಅವರು, ‘ಜಾಗತಿಕ ಸರಬರಾಜನ್ನು ಬಲಪಡಿಸುವುದಕ್ಕೋಸ್ಕರ ಭಾರತದಲ್ಲಿ 1 ಬಿಲಿಯನ್ ಡೋಸುಗಳನ್ನು ಉತ್ಪಾದಿಸುವ ನಮ್ಮ ಲಸಿಕಾ ಅಭಿಯಾನದ ಗುರಿ ಸರಿಯಾದ ನಿಟ್ಟಿನಲ್ಲಿ ಸಾಗುತ್ತಿದೆ’ ಎಂದು ಹೇಳಿದರು.

ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ದಮನಕಾರಿ ಧೋರಣೆ ಮತ್ತು ವ್ಯಾಜ್ಯಗಳಿರಬಾರದು. ಸಂಘರ್ಷ ತಲೆದೋರಿದರೆ ಅಂತರರಾಷ್ಟ್ರೀಯ ಕಾನೂನಿನ ಅನ್ವಯ ಅದನ್ನು ಪರಿಹರಿಸಿಕೊಳ್ಳಬೇಕು. ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಬಹಳಷ್ಟು ಸವಾಲುಗಳಿವೆ ಮತ್ತು ಆ ಸವಾಲುಗಳನ್ನು ನಾವು ಮೆಟ್ಟಿ ನಿಲ್ಲಬೇಕು. ನಾವು ಅರು ತಿಂಗಳ ಹಿಂದೆ ನಡೆಸಿದ ಸಭೆ ನಂತರ ಬಹಳಷ್ಟನ್ನು ಸಾಧಿಸಿದ್ದೇವೆ. ನಾವು ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಜೊತೆಗೂಡಿದ್ದೇವೆ,’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಹೇಳಿದರು.

ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ ಯುದ್ಧ ನಡೆಸಿದ ಬಳಿಕ ನಾಟಕೀಯವಾಗಿ ಅಲ್ಲಿಂದ ನಿರ್ಗಮಿಸುವ ನಿರ್ಣಯ ತೆಗೆದುಕೊಂಡ ಅಮೆರಿಕಾಗೆ ಕ್ವಾಡ್ ಶೃಂಗಸಭೆಯು ಪ್ರಾಂತ್ಯದಲ್ಲಿ ರಾಜತಾಂತ್ರಿಕ ಪ್ರಯತ್ನಗಳ ಮೇಲೆ ತನ್ನ ಗಮನವನ್ನು ಪುನರುಜ್ಜೀವನಗೊಳಿಸಲು ಕ್ವಾಡ್ ಶೃಂಗಸಭೆ ಮತ್ತೊಂದು ಆಯಾಮವಾಗಿ ಸಿಕ್ಕಿದೆ.

ಚೀನಾದ ಪ್ರಾಬಲ್ಯವನ್ನು ಹತ್ತಿಕ್ಕಲು ವಾಷಿಂಗ್ಟನ್ ಹೆಣೆಯುತ್ತಿರುವ ಮೂರು ಪ್ರಾದೇಶಿಕ ವ್ಯೂಹಾತ್ಮಕ ನಡೆಗಳಲ್ಲಿ ಕ್ವಾಡ್ ನಿಸ್ಸಂದೇಹವಾಗಿ ಉಳಿದವುಗಳಿಗಿಂತ ಮುಕ್ತವಾಗಿದೆ. ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲ್ಯಾಂಡ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಒಳಗೊಂಡಿರುವ ಐದು ಕಣ್ಣುಗಳ ಗುಪ್ತಚರ ಹಂಚಿಕೆಯ ಮೈತ್ರಿ ಜೊತೆಗೆ ಈ ಬ್ಲಾಕ್‌ಗೆ ಹೊಸ ಆಗಮನವೆಂದರೆ-ಅಯುಕೆಯುಎಸ್

ಕ್ವಾಡ್ ರಾಷ್ಟ್ರಗಳು, ಚೀನಾವನ್ನು ಒಳಗೊಂಡಿರುವ ಪ್ರಮುಖ ಪ್ರಾದೇಶಿಕ ಗುಂಪು ಎಎಸ್ಇಎಎನ್ ಅನ್ನು ಪ್ರತಿಸ್ಪರ್ಧಿ ಎಂದು ಪರಿಗಣಿಸಿಲ್ಲ ಮತ್ತು ಅದನ್ನು ದುರ್ಬಲಗೊಳಿಸುವ ಉದ್ದೇಶ ಸರ್ವಥಾ ಇಲ್ಲ ಎನ್ನವುದನ್ನು ಖಚಿತಪಡಿಸಿದ್ದು ಇದು ಮಿಲಿಟರಿ ಮೈತ್ರಿಯಲ್ಲ ಎಂದು ಹೇಳಿವೆ.

ಇದನ್ನೂ ಓದಿ:  Quad Summit 2021: ಕ್ವಾಡ್​ ಸಭೆಗೂ ಮುನ್ನವೇ ಬೆಚ್ಚಿದ ಚೀನಾ; ನಾಲ್ಕು ಪ್ರಮುಖ ರಾಷ್ಟ್ರಗಳ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ

Published On - 1:14 am, Sat, 25 September 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್