ಆಸ್ಪತ್ರೆಗಳ ಒಪಿಡಿಯಲ್ಲಿ ಹೆಸರು ನೋಂದಾಯಿಸಲು ಇನ್ನು ಉದ್ದುದ್ದ ಸಾಲುಗಳಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ!

ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ಮುಂಬರುವ ದಿನಗಳಲ್ಲಿ ಸದರಿ ಸೇವೆಯನ್ನು ನಗರದ ಎಲ್ಲ ಆರೋಗ್ಯ ಸೌಲಭ್ಯ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು.

ಆಸ್ಪತ್ರೆಗಳ ಒಪಿಡಿಯಲ್ಲಿ ಹೆಸರು ನೋಂದಾಯಿಸಲು ಇನ್ನು ಉದ್ದುದ್ದ ಸಾಲುಗಳಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ!
ನವದೆಹಲಿಯ ಎಸ್ ಎಸ್ ಕೆ ಹೆಚ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 07, 2022 | 2:08 PM

ನವದೆಹಲಿ:  ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (ಎನ್ ಎಚ್ ಎ) (NHA) ತನ್ನ ಮುಂಚೂಣಿಯ ಸ್ಕೀಮ್ ನಿಸಿಕೊಂಡಿರುವ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಶನ್ ನಲ್ಲಿ ತ್ವರಿತ ನೋಂದಣಿ ಸೇವೆ (registration service) ಜನರಿಗೆ ಲಭ್ಯವಾಗುವ ದೃಷ್ಟಿಯಿಂದ ದೆಹಲಿಯ ಲೇಡಿ ಹರ್ದಿಂಗೆ ಮೆಡಿಕಲ್ ಕಾಲೇಜು ಮತ್ತು ಶ್ರೀಮತಿ ಸುಚೇತಾ ಕೃಪಲಾನಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಪ್ರಾಯೋಗಿಕವಾಗಿ (pilot project) ಆರಂಭಿಸಿದೆ.

ಈ ಸೇವೆಯ ಅನ್ವಯ ಹಳೆಯ ಮತ್ತು ಹೊಸ ರೋಗಿಗಳು ಸರಳವಾಗಿ ಒಂದು ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿ, ತಮ್ಮ ಹೆಸರು ತಂದೆ ಹೆಸರು, ವಯಸ್ಸು, ಲಿಂಗ, ವಿಳಾಸ ಮೊಬೈಲ್ ನಂಬರ್ ಮೊದಲಾದ ವಿವರಗಳನ್ನು ಆಸ್ಪತ್ರೆಯೊಂದಿಗೆ ಶೇರ್ ಮಾಡಿಕೊಳ್ಳಬೇಕು. ಇದರಿಂದಾಗಿ ಒಪಿಡಿ ನೋಂದಣಿ ಕೌಂಟರ್​ ನಲ್ಲಿ ರೋಗಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ತಗಲುತ್ತಿದ್ದ ಸಮಯ ಗಣನೀಯವಾಗಿ ಕಮ್ಮಿಯಾಗುತ್ತದೆ ಮತ್ತು ಅದಕ್ಕೂ ಮುಖ್ಯಾವಾಗಿ ಉದ್ದ್ದುದ್ದದ ಸಾಲುಗಳಲ್ಲಿ ಗಂಟೆಗಟ್ಟಲೆ ಕಾಯುವುದು ತಪ್ಪುತ್ತದೆ.

ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ಮುಂಬರುವ ದಿನಗಳಲ್ಲಿ ಸದರಿ ಸೇವೆಯನ್ನು ನಗರದ ಎಲ್ಲ ಆರೋಗ್ಯ ಸೌಲಭ್ಯ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು.

ಕ್ಯೂರ್ ಕೋಡ್-ಆಧಾರಿತ ಒಪಿಡಿ ನೋಂದಣಿ ಸೇವೆಯು ರೋಗಿಗಳಿಗೆ ಆಸ್ಪತ್ರೆಯ ವಿಶಿಷ್ಟ ಕ್ಯೂರ್ ಕೋಡನ್ನು ತಮ್ಮ ಮೊಬೈಲ್ ಫೋನ್ (ಫೋನ್ ಕೆಮೆರಾ/ಸ್ಕ್ಯಾನರ್/ಎಬಿ ಹೆಚ್ ಡ ಌಪ್/ ಆರೋಗ್ಯ ಸೇತು ಌಪ್ ಅಥವಾ ಯಾವುದೇ ಎಬಿಡಿಎಮ್ ಬೆಂಬಲಿತ ಌಪ್) ಮೂಲಕ ಸ್ಕ್ಯಾನ್ ಮಾಡುವ ಅವಕಾಶವನ್ನು ಒದಗಿಸಿ ತಮ್ಮ ವಿವರಗಳನ್ನು ಆಸ್ಪತ್ರೆಯೊಂದಿಗೆ ಶೇರ್ ಮಾಡಿಕೊಳ್ಳಲು ನೆರವಾಗುತ್ತದೆ.

ರೋಗಿಯ ಪ್ರೊಫೈಲ್ ಶೇರ್  ಆದ ಬಳಿಕ  ಆ ನಿರ್ದಿಷ್ಟ ಆಸ್ಪತ್ರೆಯು ಒಂದು ಟೋಕನ್ ನಂಬರ್ (ಸರತಿ ಸಂಖ್ಯೆ) ಒದಗಿಸುತ್ತದೆ. ಈ ಸಂಖ್ಯೆಯು ರೋಗಿ ತನ್ನ ಹೆಸರು ನೋಂದಣಿ ಮಾಡಿಕೊಳ್ಳಲು ಬಳಸಿದ ಌಪ್ ನಲ್ಲಿ ಮತ್ತು ಆಸ್ಪತ್ರೆಯಲ್ಲಿ ಅಳವಡಿಸಿರಬಹುದಾದ ಸ್ಕ್ರೀನ್ ಗಳ ಮೇಲೆ ಡಿಸ್ಪ್ಲೇಯಾಗುತ್ತದೆ. ಟೋಕನ್ ನಂಬರ್​​ ಅನ್ವಯ ರೋಗಿಯು ನೋಂದಣಿ ಕೌಂಟರ್​ ಗೆ ಹೋಗಿ ವೈದ್ಯರನ್ನು ಭೇಟಿಯಾಗಲು ನೀಡುವ ಹೊರರೋಗಿ ಸ್ಲಿಪ್ (ಓಪಿ ಸ್ಲಿಪ್) ಪಡೆದುಕೊಳ್ಳಬಹುದು.

ಸದರಿ ಸೇವೆಯ ಪ್ರಯೋಜನಗಳ ಬಗ್ಗೆ ಮಾತಾಡಿದ ಎನ್ ಹೆಚ್ ಎದ ಸಿಇಓ ಡಾ ಆರ್ ಎಸ್ ಶರ್ಮ ಅವರು. ‘ಎಬಿಡಿಎಮ್ ಅಡಿಯಲ್ಲಿ ನಾವು ಪ್ರಕ್ರಿಯೆಗಳನ್ನು ಸರಾಗಗೊಳಿಸಲು ಮತ್ತು ಆರೋಗ್ಯ ಸೇವೆ ಹೆಚ್ಚು ಪರಿಣಾಮಕಾರಿ ಹಾಗೂ ಮಿತವ್ಯಯಿ ಮಾಡಲು ತಂತ್ರಜ್ಞಾನದ ನೆರವು ಪಡೆಯುತ್ತಿದ್ದೇವೆ. ಈ ದಿಶೆಯಲ್ಲಿ ಕ್ಯೂರ್ ಕೋಡ್-ಆಧಾರಿತ ಒಪಿಡಿ ನೋಂದಣಿ ಸೇವೆ ಮೊದಲ ಹೆಜ್ಜೆಯಾಗಿದೆ. ಎಲ್ ಎಚ್ ಎಮ್ ಸಿ ಮತ್ತು ಎಸ್ ಎಸ್ ಕೆ ಹೆಚ್ ನಲ್ಲಿನ ಈ ಪ್ರಾಯೋಗಿಕ ಯೋಜನೆಯು 15 ದಿನಗಳಲ್ಲಿ ನೋಂದಣಿ ಕೌಂಟರ್‌ನಲ್ಲಿ ಸುಮಾರು 2200 ರೋಗಿಗಳ ಸರತಿ ಸಾಲಿನಲ್ಲಿ ಕಾಯುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ ಮತ್ತು ಉದ್ದುದ್ದದ ಸಾಲುಗಳನ್ನು ತಪ್ಪಿಸಲು ನೆರವಾಗಿದೆ. ರೋಗಿಯ ನೇರ ಪ್ರೊಫೈಲ್ ಹಂಚಿಕೆಯಿಂದಾಗಿ ದಾಖಲೆಗಳಲ್ಲಿ ಹೆಚ್ಚಿನ ಮಟ್ಟದ ನಿಖರತೆಯನ್ನು ಸಾಧಿಸಲು ಸಹಾ ಇದು ನೆರವಾಗಿದೆ. ಈ ಸೇವೆಯನ್ನು ವಿಸ್ತರಿಸಲು ಮತ್ತು ಹೆಚ್ಚಿನ ರೋಗಿಗಳಿಗೆ ಸಹಾಯ ಮಾಡಲು ನಮ್ಮ ತಂಡವು ಇತರ ಆರೋಗ್ಯ ಸೌಲಭ್ಯಗಳು ಮತ್ತು ವಿಭಾಗಗಳೊಂದಿಗೆ ಕೆಲಸ ಮಾಡುತ್ತಿದೆ,’ ಎಂದು ಹೇಳಿದರು.