ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಕೊರೊನಾ ಲಸಿಕೆ ನೀಡಲು ಬೇಡಿಕೆಯಿಟ್ಟ ರಾಕೇಶ್ ಟಿಕಾಯತ್

Corona Vaccine in Farmers Protest : ಚಳುವಳಿ ನಿರತ ಪಂಜಾಬ್ ರೈತರು ಕೊರೊನಾ ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದಾರೆಯೇ? ಎಂದು ರೈತರ ಹೋರಾಟದ 43ನೇ ದಿನ  ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಗಂಭೀರವಾಗಿ ಪ್ರಶ್ನಿಸಿತ್ತು.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಕೊರೊನಾ ಲಸಿಕೆ ನೀಡಲು ಬೇಡಿಕೆಯಿಟ್ಟ ರಾಕೇಶ್ ಟಿಕಾಯತ್
ರಾಕೇಶ್​ ಟಿಕಾಯತ್​
Follow us
guruganesh bhat
| Updated By: Lakshmi Hegde

Updated on: Mar 18, 2021 | 3:47 PM

ದೆಹಲಿ: ರಾಷ್ಟ್ರ ರಾಜಧಾನಿಯ ಗಡಿಭಾಗಗಳಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಕೊರೊನಾ ಲಸಿಕೆ ಒದಗಿಸಬೇಕು ಎಂದು ರೈತ ನಾಯಕ, ಭಾರತೀಯ ಕಿಸಾನ್ ಯುನಿಯನ್​ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ. ಘಾಜಿಪುರ ಗಡಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಸರ್ಕಾರ ಕೊರೊನಾ ಲಸಿಕೆ ಒದಗಿಸಿದಲ್ಲಿ ರೈತರ ಜತೆ ತಾವೂ ಲಸಿಕೆ ಪಡೆಯುವುದಾಗಿ ತಿಳಿಸಿದ್ದಾರೆ.

ಈ ಮೊದಲೇ ಪ್ರಶ್ನಿಸಿತ್ತು ಸುಪ್ರೀಂಕೋರ್ಟ್ ಚಳುವಳಿ ನಿರತ ಪಂಜಾಬ್ ರೈತರು ಕೊರೊನಾ ಸೋಂಕಿನಿಂದ ರಕ್ಷಿಸಲ್ಪಟ್ಟಿದ್ದಾರೆಯೇ? ಎಂದು ರೈತರ ಹೋರಾಟದ 43ನೇ ದಿನ  ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಗಂಭೀರವಾಗಿ ಪ್ರಶ್ನಿಸಿತ್ತು. ದೇಶದ ರಾಜಧಾನಿಯ ಗಡಿಭಾಗದಲ್ಲಿ ಸಾವಿರಾರು ರೈತರು ವಾಸ್ತವ್ಯ ಹೂಡಿ ಪ್ರತಿಭಟಿಸುತ್ತಿದ್ದು, ಕೊರೊನಾ ಸೋಂಕಿನಿಂದ ಅವರು ಮುಕ್ತವಾಗಿದ್ದಾರೆಯೇ? ಹಿಂದೊಮ್ಮೆ ಕೊರೊನಾ ಸೋಂಕು ಹರಡಲು ಕಾರಣವಾಗಿದ್ದ ತಬ್ಲಿಘಿ ಜಮಾತ್ ಘಟನೆಯಿಂದ ಪಾಠ ಕಲಿತಿಲ್ಲವೇ? ಎಂದು ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.

2020ರ ಮಾರ್ಚ್​ನಲ್ಲಿ ಕೊರೊನಾ ಸೋಂಕಿನ ಭಯದ ನಡುವೆ ದೆಹಲಿಯ ದರ್ಗಾವೊಂದರಲ್ಲಿ ತಬ್ಲಿಘಿ ಜಮಾತ್ ಸಂಘಟನೆಯ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮ ದೇಶದಲ್ಲಿ ಕೊರೊನಾ ಸೋಂಕಿನ ಹೆಚ್ಚಳಕ್ಕೆ ‘ಸೂಪರ್ ಸ್ಪ್ರೆಡರ್’ ಆಗಿ ಪರಿಣಮಿಸುತ್ತದೆ ಎಂದು ಬಿಂಬಿಸಲಾಗಿತ್ತು. ಪೊಲೀಸರು ಆದರೆ, ಕೆಲ ತಿಂಗಳ ನಂತರ ಸರ್ವೋಚ್ಛ ನ್ಯಾಯಾಲಯ ಸಾಕ್ಷಿಯ ಕೊರತೆಯಿಂದ ತಬ್ಲಿಘಿ ಜಮಾತ್ ವಿರುದ್ಧದ ಆರೋಪವನ್ನು ನಿರಾಕರಿಸಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಬಳಿ ರೈತರ ಪ್ರತಿಭಟನೆಯಿಂದ ಕೊರೊನಾ ಸೋಂಕು ಹರಡುವುದಿಲ್ಲವೇ ಎಂದು ಪ್ರಶ್ನಿಸಿತ್ತು.

ಕೊರೊನಾ ಸೋಂಕಿತರ ಸದ್ಯದ ಅಂಕಿ-ಅಂಶ ದೇಶದಲ್ಲಿ ಕೊರೊನಾ ಸೋಂಕಿನ ಪ್ರಸರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಕಳೆದ ಒಂದು ವಾರದಿಂದ ದಿನವೊಂದರಲ್ಲಿ ದಾಖಲೆಯಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಾರ್ಚ್ 17ರಂದು ಪ್ರಕಟವಾದ ವರದಿಯಲ್ಲಿ 24ಗಂಟೆಯಲ್ಲಿ 28,903 ಕೊವಿಡ್​-19 ಕೇಸ್​​ಗಳು ದಾಖಲಾಗಿದ್ದು ಪತ್ತೆಯಾಗಿತ್ತು. ಮಾರ್ಚ್ 17ರ ಅಂಕಿಅಂಶದ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 11,438,734ಕ್ಕೆ ಏರಿಕೆಯಾಗಿದೆ.

5 ರಾಜ್ಯಗಳದ್ದೇ ಹೆಚ್ಚುಪಾಲು ಹೀಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಹೆಚ್ಚಾಗುತ್ತಿರುವಲ್ಲಿ 5 ರಾಜ್ಯಗಳ ಪಾಲು ಹೆಚ್ಚಿದೆ. ಒಂದು ದಿನದಲ್ಲಿ ದಾಖಲಾಗುತ್ತಿರುವ ಸೋಂಕಿನ ಕೇಸ್​​ಗಳಲ್ಲಿ ಶೇ.80ರಷ್ಟು ಮಹಾರಾಷ್ಟ್ರ, ಪಂಜಾಬ್​, ಕರ್ನಾಟಕ, ಗುಜರಾತ್​ ಮತ್ತು ತಮಿಳುನಾಡಿನಿಂದಲೇ ವರದಿಯಾಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಅದರಲ್ಲೂ ದೇಶದ ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್​ ರಾಜ್ಯಗಳ ಪಾಲು ಶೇ.76.57ರಷ್ಟಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಒಂದೆಡೆ ಕೊರೊನಾ ಲಸಿಕೆ ವಿತರಣೆ ನಡೆಯುತ್ತಿದೆ. ಇದುವರೆಗೂ ಸೋಂಕಿನಿಂದ ಚೇತರಿಕೆ ಕಂಡವರ ಸಂಖ್ಯೆ 11,045,284ಕ್ಕೆ ತಲುಪಿದೆ. ಮಂಗಳವಾರದವರೆಗೆ ಒಟ್ಟು 3.50 ಕೋಟಿ ಡೋಸ್​ ಲಸಿಕೆ ವಿತರಣೆ ಆಗಿದೆ ಎಂದೂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರೈತ ಹೋರಾಟಕ್ಕೆ ಎಷ್ಟು ದಿನ? ಮಾರ್ಚ್ 6ರಂದು ಐತಿಹಾಸಿಕ ದೆಹಲಿ ಚಲೋ ಚಳವಳಿಗೆ ಭರ್ತಿ ನೂರು ದಿನ ತುಂಬಿದೆ. ಪಂಜಾಬ್​ನ ಚಿಕ್ಕ ಹಳ್ಳಿಯಿಂದ ಆರಂಭವಾದ ರೈತರ ಚಳವಳಿ ದೇಶದ ರಾಜಧಾನಿ ತಲುಪಿದಾಗ ದೇಶದೆಲ್ಲೆಡೆ ಬೆಂಬಲ ವ್ಯಕ್ತವಾಗಿತ್ತು. ಆದರೆ ನಂತರ ನಡೆದ ಗಲಾಟೆಗಳಿಂದ ಚಳವಳಿಯ ದಿಕ್ಕೇ ಬದಲಾಯಿತು. ದೆಹಲಿ ಚಲೋದ ಮುಂದುವರೆದ ಭಾಗವಾಗಿ ದೇಶದ ವಿವಿಧ ಸ್ಥಳಗಳಲ್ಲಿ ಕಿಸಾನ್ ಮಹಾ ಪಂಚಾಯತ್  (Kisan Mahapanchayat) ನಡೆಯುತ್ತಿದೆ. ಅದರ ಅಂಗವಾಗಿ ಕರ್ನಾಟಕದ ಮೂರು ಕಡೆ ಕಿಸಾನ್ ಪಂಚಾಯತ್ ನಡೆಸಲು ದೆಹಲಿ ಚಲೋ ವರಿಷ್ಠರು ತೀರ್ಮಾನಿಸಿದ್ದರು.

ನೂರಾರು ರೈತ ಹೋರಾಟಗಾರರು ದೆಹಲಿಯ ಗಡಿಗಳಲ್ಲಿ ವಸತಿ ಹೂಡಿರುವುದರಿಂದ ಸಹಜವಾಗಿ ಕೊರೊನಾತಂಕ ಹೆಚ್ಚುತ್ತಿದೆ.  ಎರಡನೇ ಅಲೆಯ ಭೀತಿಯ ಕಾರಣದಿಂದ ಕೊರೊನಾ ಲಸಿಕೆ ಪಡೆಯುವತ್ತ ರೈತ ಹೋರಾಟಗಾರರ ಚಿತ್ತ ಹರಿದಿದೆ.

ಇದನ್ನೂ ಓದಿ: Delhi Chalo: ದೆಹಲಿ ಚಲೋಗೆ ನೂರು ದಿನ; ಕರ್ನಾಟಕದಲ್ಲೂ ನಡೆಯಲಿದೆ ರೈತ ಪಂಚಾಯತ್, ಬರ್ತಾರೆ ರಾಕೇಶ್ ಟಿಕಾಯತ್

ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ