Republic Day 2022: ಗಣರಾಜ್ಯೋತ್ಸವದ ಹಿನ್ನೆಲೆ, ಸಂವಿಧಾನದ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

Ganatantra Diwas 2022; 1949ರಲ್ಲಿ ಅಂಗೀಕರಿಸ್ಪಲಟ್ಟ ಸಂವಿಧಾನ ತಿದ್ದುಪಡಿಯ ನಂತರ 1950ರ ಜನವರಿ 26 ರಂದು ಅಧಿಕೃತವಾಗಿ ಸಂವಿಧಾನವಾಗಿ ಜಾರಿಗೆ ಬಂದಿತ್ತು. ಆ ದಿನವೇ ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ.

Republic Day 2022: ಗಣರಾಜ್ಯೋತ್ಸವದ ಹಿನ್ನೆಲೆ, ಸಂವಿಧಾನದ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು
ಪ್ರಾತಿನಿಧಿಕ ಚಿತ್ರ
Follow us
|

Updated on:Jan 23, 2022 | 5:45 PM

1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಬಳಿಕ ಇಡೀ ಭಾರತ ಸಂಭ್ರಮಿಸಿದ ದಿನ 1950 ಜನವರಿ 26. ಡಾ. ಬಿ ಆರ್​ ಅಂಬೇಡ್ಕರ್ (Dr. BR Ambedkar) ನೇತೃತ್ವದಲ್ಲಿ ಕರಡು ಸಮಿತಿ ರಚನೆಯಾಗಿ ಭಾರತದ ಸಂವಿಧಾನ (Indian Constitution) ದ ರಚನೆಯ ಕಾರ್ಯ ಆರಂಭವಾಗಿತ್ತು. 1949ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನ ತಿದ್ದುಪಡಿಯ ನಂತರ 1950ರ ಜನವರಿ 26 ರಂದು ಅಧಿಕೃತವಾಗಿ ಸಂವಿಧಾನವಾಗಿ ಜಾರಿಗೆ ಬಂದಿತ್ತು. ಆ ದಿನವೇ ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ (Republic Day). ಈ ಬಾರಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ನವದೆಹಲಿಯ ಜನಪಥ್‌ನಲ್ಲಿ ಭಾರತದ ರಾಷ್ಟ್ರೀಯ ಸೇನೆಯನ್ನೊಳಗೊಂಡ ಪರೇಡ್ ಗಣರಾಜ್ಯೋತ್ಸವದಂದು ಗಮನ ಸೆಳೆಯುವ ಅಂಶವಾಗಿದೆ. ರಾಷ್ಟ್ರಗೀತೆಯೊಂದಿಗೆ ಬಾನೆತ್ತರಕ್ಕೆ ಹಾರುವ ರಾಷ್ಟ್ರಧ್ವಜವನ್ನು ಗೌರವಿಸುವ ಈ ದಿನ ಪ್ರತೀ ಭಾರತೀಯನ ಹೆಮ್ಮೆಯ ದಿನ. ಭಾರತ ಗಣರಾಜ್ಯವಾಗಿ ಘೋಷಣೆಯಾದ ಈ ದಿನ ದೇಶಾದ್ಯಂತ ಕೇಸರಿ, ಬಿಳಿ, ಹಸಿರಿನ ಬಾವುಟ ಹೆಮ್ಮೆಯಿಂದ ಹಾರುವುದನ್ನು ಕಂಡಾಗ ಮೈನವಿರೇಳುವುದಂತೂ ಸುಳ್ಳಲ್ಲ.

ಸತ್ಯಮೇವ ಜಯತೆ ಮದನ್​ ಮೋಹಮ್​ ಮಾಳವಿಯಾ ಅವರ ಆಯ್ಕೆಯಲ್ಲಿ ಮುಂಡಕ ಉಪನಿಷತ್ತಿನಿಂದ ಆಯ್ದ ಸತ್ಯಮೇವ ಜಯತೇ ಸಾಲನ್ನು ಧ್ಯೇಯವಾಕ್ಯವಾಗಿ ಅಳವಡಿಸಲಾಗಿದೆ. ಭಾರತದ ಸಂವಿಧಾನ ಸೇರಿ ರಾಷ್ಟ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯದಲ್ಲೂ ಇಂದಿಗೂ ಸತ್ಯಮೇವ ಜಯತೇ ಧ್ಯೇಯವಾಕ್ಯ ಹಾಸುಹೊಕ್ಕಾಗಿದೆ.

ಅತಿದೊಡ್ಡ ಸಂವಿಧಾನ ಭಾರತದ ಸಂವಿಧಾನ ಜಗತ್ತಿನ ಅತೀ ದೊಡ್ಡ ಸಂವಿಧಾನ. ಡಾ. ಬಿ ಆರ್​ ಅಂಬೇಡ್ಕರ್​ ಮುಂದಾಳತ್ವದಲ್ಲಿ ಭಾರತಕ್ಕೆ ಪ್ರತ್ಯೇಕ ನಿಯಮಗಳು ಬೇಕು ಎಂದು ತಯಾರಿಸಿದ ಸಂವಿಧಾನದ ರಚನೆಯಲ್ಲಿ ಹಲವರ ಪಾತ್ರವಿದೆ. ಅವರಲ್ಲಿ ಮುಖ್ಯವಾಗಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ಪ್ರಮುಖರು. 448 ವಿಧಿಗಳು, 22 ಭಾಗಗಳು, 10 (ನಂತರ 12) ಅನುಚ್ಛೇದಗಳನ್ನೂ,118 ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು1,17,369 ಶಬ್ಧಗಳನ್ನು ಹೊಂದಿದೆ. 2 ವರ್ಷ, 11ತಿಂಗಳು 18 ದಿನಗಳ ಅವಧಿಯಲ್ಲಿ ರಚನೆಯಾದ ಸಂವಿಧಾನದ ಪ್ರತಿ ಇಂಗ್ಲೀಷ್​ ಮತ್ತು ಹಿಂದಿ ಭಾಷೆಯಲ್ಲಿ ಮುದ್ರಣ ಮಾಡಲಾಗಿತ್ತು.

ಹಸ್ತಾಕ್ಷರದಲ್ಲಿ ರಚನೆಯಾದ ಸಂವಿಧಾನ ಭಾರತದ ಸಂವಿಧಾನದ ಪ್ರತಿಯೊಂದರಲ್ಲೂ ವಿಶೇಷತೆಯನ್ನು ಹೊಂದಿದೆ. ಅದರಲ್ಲಿ ಪ್ರಮುಖವಾಗಿರುವುದು ಹಸ್ತಾಕ್ಷರ. ಹಿಂದಿ ಮತ್ತು ಇಂಗ್ಲೀಷ್​ ಭಾಷೆಗಳಲ್ಲಿ ರಚನೆಯಾದ ಸಂವಿಧಾನದ ನಿಯಮಗಳನ್ನು ಇಂದಿಗೂ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಹೀಲಿಯಂ ಸಂಗ್ರಹಿಸುವ ಪೆಟ್ಟಿಗೆಯಲ್ಲಿ ಭದ್ರವಾಗಿ ಜೋಪಾನ ಮಾಡಲಾಗಿದೆ. ಭಾರತೀಯ ಸಂವಿಧಾನವು ಈವರೆಗೆ ಒಟ್ಟು 94 ಬಾರಿ ತಿದ್ದುಪಡಿಗಳನ್ನು ಕಂಡಿದೆ.

ಗಣರಾಜ್ಯೋತ್ಸವದ ಮಹತ್ವ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ಸ್ವಾತಂತ್ರ್ಯವನ್ನು ಪಡೆದ ಬಳಿಕ 1950ರಲ್ಲಿ ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತ್ತು. ಪ್ರಜೆಗಳ ಅಸ್ಥತ್ವಕ್ಕೆ ನೀಡಿದ ಗೌರವದ ದಿನವಾಗಿತ್ತು. ಈ ಮೂಲಕ ಭಾರತದ ಸಂವಿಧಾನವು ಪ್ರಜೆಗಳಿಗೆ ತಮ್ಮದೇ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವನ್ನು ನೀಡಿದೆ. ಅದರ ಮೊದಲ ಅಧ್ಯಾಯದಲ್ಲಿ ಡಾ ರಾಜೇಂದ್ರ ಪ್ರಸಾದ್ ಅವರು ಸರ್ಕಾರಿ ಭವನದಲ್ಲಿರುವ ದರ್ಬಾರ್ ಹಾಲ್‌ನಲ್ಲಿ ಭಾರತದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ದಿನದ ಸವಿನೆನಪಿಗಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ದೆಹಲಿಯಲ್ಲಿ ಪ್ರಮುಖ ಆಚರಣೆ ಗಣರಾಜೋತ್ಸವವನ್ನು ದೆಹಲಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ದೆಹಲಿಯ  ಜನಪಥ್​​ನಿಂದ ಇಂಡಿಯಾ ಗೇಟ್​ವರೆಗೆ ಅದ್ದೂರಿ ಮೆರವಣಿಗೆ ಕಣ್ಸಳೆಯುತ್ತದೆ. ಭದ್ರತಾ ಪಡೆ ಮತ್ತು 14 ಕುದುರೆಗಳಿಂದ ಅಲಂಕರಿಸಲ್ಪಟ್ಟ ಗಾಡಿಯಲ್ಲಿ ಇಂಡಿಯಾ ಗೇಟ್‌ಗದೆ ಆಗಮಿಸುವ ರಾಷ್ಟ್ರಪತಿಗಳನ್ನು ಪ್ರಧಾನಿ ಸ್ವಾಗತಿಸುತ್ತಾರೆ. ಬಳಿಕ ರಾಷ್ಟ್ರಧ್ವಜವನ್ನು ರಾಷ್ಟ್ರಪತಿಗಳು ಹಾರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಜಾನಪದ ನೃತ್ಯವನ್ನು ಪ್ರಸ್ತುತಪಡಿಸುತ್ತದೆ. ಜತೆಗೆ 21 ತೋಪಿನ ಸೆಲ್ಯೂಟ್ ನೀಡಿ ರಾಷ್ಟ್ರಕ್ಕೆ, ರಾಷ್ಟ್ರಧ್ವಜಕ್ಕೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ:

Republic Day 2022 Parade: ಗಣರಾಜ್ಯೋತ್ಸವ ಪಥಸಂಚಲನಕ್ಕೆ ಪೂರ್ವಾಭ್ಯಾಸ; ಈ ಬಾರಿಯ ಪರೇಡ್​ನ ವಿಶೇಷತೆಗಳೇನು?

Published On - 2:22 pm, Sun, 23 January 22

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ