ನವದೆಹಲಿ: ಈ ಬಾರಿಯ 74ನೇ ಗಣರಾಜ್ಯೋತ್ಸವ ಪರೇಡ್ (Republic Day parade) ಹಲವು ವಿಶೇಷತೆಗಳೊಂದಿಗೆ ಕೂಡಿದೆ. ರಾಜಪಥ್ನಿಂದ ಕರ್ತವ್ಯಪಥ್ (Kartavya Path) ಎಂದು ಹೆಸರು ಬದಲಾಯಿಸಿದ ನಂತರ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಡೆಯುತ್ತಿದೆ. ಈ ಪರೇಡ್ನ್ನು ವೀಕ್ಷಿಸಲು ವಿವಿಐಪಿ ಆಸನಗಳಲ್ಲಿ ವಿಶೇಷ ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ಜನೆವರಿ 18ರಂದು ರಕ್ಷಣಾ ಇಲಾಖೆ ನೀಡಿರುವ ಹೇಳಿಕೆ ಪ್ರಕಾರ ಈ ವರ್ಷದ ಗಣರಾಜ್ಯೋತ್ಸವ ಪರೇಡ್ನ್ನು ವಿವಿಐಪಿ ಆಸನಗಳಲ್ಲಿ ಕೂತು ವೀಕ್ಷಿಸಲು “ಶ್ರಮಯೋಗಿ”ಗಳಿಗೆ ಅವಕಾಶ ನೀಡಲಾಗಿದೆ. ಸೆಂಟ್ರಲ್ ವಿಸ್ಟಾ (ನೂತನ ಸಂಸತ್ ಭವನ) ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಕೆಲಸಗಾರರು, ಕರ್ತವ್ಯಪಥ್ ಕೆಲಸಗಾರರು, ಹಾಲು, ತರಕಾರಿ ಮಾರಾಟಗಾರರು ಮತ್ತು ಬೀದಿ ವ್ಯಾಪಾರಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ: ಜನವರಿ 26ರಂದು ಗಣರಾಜ್ಯೋತ್ಸವವನ್ನು ಯಾಕೆ ಆಚರಿಸಲಾಗುತ್ತದೆ?; ಇಲ್ಲಿದೆ ಹಿನ್ನಲೆ
ಈ ವರ್ಷದ ಈ ಗಣರಾಜ್ಯೋತ್ಸವ ಪರೇಡ್ನಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ವರ್ಷದ ಪರೇಡ್ನಲ್ಲಿ ಈಜಿಪ್ಟ್ನ 120 ಸದಸ್ಯರನ್ನು ಒಳಗೊಂಡ ಬ್ಯಾಂಡ್ ಭಾಗವಹಿಸಲಾಗಿದೆ. ಇದಲ್ಲದೆ, ಪರೇಡ್ಗಾಗಿ ಮೀಸಲಿಡಲಾಗಿದ್ದ ಆಸನಗಳ ಸಂಖ್ಯೆಯನ್ನು 45,000 ಕ್ಕೆ ಇಳಿಸಲಾಗಿದೆ. ಇವುಗಳಲ್ಲಿ 32,000 ಮತ್ತು ಬೀಟಿಂಗ್ ರಿಟ್ರೀಟ್ ಈವೆಂಟ್ಗಾಗಿ ಒಟ್ಟು ಆಸನಗಳು 10 ಪ್ರತಿಶತದಷ್ಟು ಆಸನಗಳು ಸಾರ್ವಜನಿಕರಿಗೆ ಆನ್ಲೈನ್ ಮಾರಾಟಕ್ಕೆ ಲಭ್ಯವಿದೆ.
ಇದನ್ನೂ ಓದಿ: ಸಂವಿಧಾನವು ಜನವರಿ 26 ರಂದು ಏಕೆ ಜಾರಿಗೆ ಬಂತು, ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳು ಇಲ್ಲಿವೆ
ಬುಡಕಟ್ಟು ವ್ಯವಹಾರಗಳು ಮತ್ತು ರಕ್ಷಣಾ ಸಚಿವಾಲಯಗಳು ಮತ್ತು ವಿವಿಧ ರಾಜ್ಯಗಳ ಇತರ ಪ್ರದರ್ಶನಗಳು ತಮ್ಮ ಕಲೆ ಮತ್ತು ಆಹಾರ ಪದಾರ್ಥಗಳನ್ನು ಕೆಂಪು ಕೋಟೆಯಲ್ಲಿ ‘ಭಾರತ ಪರ್ವ್’ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಫ್ಲೈಪಾಸ್ಟ್ 18 ಹೆಲಿಕಾಪ್ಟರ್ಗಳು, 8 ಟ್ರಾನ್ಸ್ಪೋರ್ಟರ್ ಏರ್ಕ್ರಾಫ್ಟ್ಗಳು ಮತ್ತು 23 ಫೈಟರ್ಗಳನ್ನು ಒಳಗೊಂಡಿರುತ್ತದೆ. ಕಳೆದ ವರ್ಷದಂತೆ ಈ ವರ್ಷವು 3,500 ಸ್ಥಳೀಯ ಡ್ರೋನ್ಗಳನ್ನು ಒಳಗೊಂಡಿರುವ ಭಾರತದ ಅತಿದೊಡ್ಡ ಡ್ರೋನ್ ಶೋ ಏರ್ಪಡಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ