ಭಾರತ ಹಾಗೂ ಚೀನಾ ನಡುವಿನ ಇತ್ತೀಚಿನ ಪರಿಸ್ಥಿತಿ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಂಸತ್ತಿನಲ್ಲಿ ಇಂದು ಮಾತನಾಡಿದರು. ಗಡಿ ವಿವಾದವನ್ನು ಅಂತ್ಯಗೊಳಿಸಲು ಭಾರತ ಹಾಗೂ ಚೀನಾ ದಶಕಗಳಿಂದ ಮಾತನಾಡುತ್ತಿದೆ. ಎಲ್‌ಎಸಿಯಲ್ಲಿ ವಿವಾದ ಮುಂದುವರೆದಿದೆ, ಪರಸ್ಪರ ಒಪ್ಪಿಗೆಯಿಂದ ಗಡಿ ವಿವಾದ ಬಗೆಹರಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.
ಮೇ 2020ರಲ್ಲಿ ಪೂರ್ವ ಲಡಾಖ್ನಲ್ಲಿ ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿತ್ತು. ಇದರಿಂದ ನಮಗೆ ಗಸ್ತು ತಿರುಗಲು ತೊಂದರೆಯಾಗಿತ್ತು. ಆ ಸಮಯದಲ್ಲಿ ಕೋವಿಡ್ ಪರಿಸ್ಥಿತಿ ಇದ್ದರೂ ನಾವು ಕೂಡ ಹೆಚ್ಚಿನ ಸೈನಿಕರನ್ನು ನಿಯೋಜನೆ ಮಾಡಿದ್ದೆವು ಎಂದು ತಿಳಿಸಿದರು.
ಜೈಶಂಕರ್ ಅವರು ಉಭಯ ದೇಶಗಳ ನಡುವಿನ ಇತ್ತೀಚಿನ ಪರಿಸ್ಥಿತಿಯ ಕುರಿತು ಮಾತನಾಡುತ್ತಾ, ಜೂನ್ 2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಉದ್ವಿಗ್ನತೆಯ ನಂತರ ಚೀನಾ ಮತ್ತು ಭಾರತದ ನಡುವೆ ಸಾಕಷ್ಟು ಉದ್ವಿಗ್ನತೆ ಉಂಟಾಗಿತ್ತು. 1991 ರಲ್ಲಿ, ಎರಡೂ ದೇಶಗಳು ಎಲ್‌ಎಸಿಯಲ್ಲಿ ಶಾಂತಿಗೆ ಒಪ್ಪಿಕೊಂಡಿದ್ದವು. 1993 ರಲ್ಲಿ LAC ನಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಕುರಿತು ಒಪ್ಪಂದ ಮುಂದುವರೆದಿತ್ತು.
ಮತ್ತಷ್ಟು ಓದಿ: ಭಾರತ-ಅಮೆರಿಕ ಬಾಂಧವ್ಯ ಭವಿಷ್ಯದಲ್ಲಿ ಇನ್ನಷ್ಟು ಗಟ್ಟಿಯಾಗಲಿದೆ; ಜೈಶಂಕರ್ ವಿಶ್ವಾಸ
ಎರಡೂ ದೇಶಗಳು ಪರಿಸ್ಥಿತಿಯನ್ನು ಸುಧಾರಿಸಲು ಬದ್ಧವಾಗಿವೆ. ಮುಂದೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಭಾರತೀಯ ಸೈನಿಕರ ನಿಯೋಜನೆ ಮಾಡಲಾಗಿದೆ. ಎರಡೂ ಕಡೆಯವರು ಗಡಿ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಒಪ್ಪಂದಕ್ಕೆ ಬದ್ಧವಾಗಿರಲು ಎರಡೂ ದೇಶಗಳು ಬದ್ಧವಾಗಿವೆ. ಹೊಸ ಪರಿಸ್ಥಿತಿಯಲ್ಲಿ ಎಲ್ಲವೂ ಮೊದಲಿನಂತೆ ಸಾಮಾನ್ಯವಾಗದೇ ಇರಬಹುದು. ಪರಸ್ಪರ ಒಪ್ಪಂದವನ್ನು ಅನುಸರಿಸುವುದು ಅವಶ್ಯಕ.
ಗಡಿಯಲ್ಲಿ ಪರಿಸ್ಥಿತಿ ಸಹಜವಾಗುವವರೆಗೆ ಭಾರತ-ಚೀನಾ ಸಂಬಂಧಗಳು ಸಹಜವಾಗಿರಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.
ನಮ್ಮ ಪರಸ್ಪರ ಸಂಬಂಧಗಳು ಶಾಂತಿ ಮತ್ತು ರಾಜಿ ಆಧಾರದ ಮೇಲೆ ಮಾತ್ರ ಸುಧಾರಿಸುವ ಭರವಸೆ ಇದೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ ಮತ್ತು ಮಿಲಿಟರಿ ಮಟ್ಟದಲ್ಲಿಯೂ ಇದೇ ರೀತಿಯ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
In the Lok Sabha, EAM Dr S Jaishankar says “As Members are aware, there is a long history of frictions, transgressions and face-offs in several sectors of the India-China border. This goes back to Barahoti from 1954, to Longju in 1959, to Sumdorong Chu from 1986-1995 and Depsang… pic.twitter.com/ovP5i3zBAv
— ANI (@ANI) December 3, 2024
ಅಕ್ಟೋಬರ್ 21 ರಂದು ಚೀನಾ ವಿದೇಶಾಂಗ ಸಚಿವರೊಂದಿಗೆ ಸಹಿ ಹಾಕಿರುವ ಒಪ್ಪಂದವನ್ನು ನಾನು ಪ್ರಸ್ತಾಪಿಸಿದ್ದೆ, ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಗಸ್ತು ತಿರುಗುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾನು ಹೇಳಿದ್ದೆ. ಇದಾದ ಬಳಿಕ ಈ ಎರಡು ಪ್ರಮುಖ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದೆ.
ಇಲ್ಲಿ ಸಾಮಾನ್ಯ ಚಟುವಟಿಕೆಯೂ ಆರಂಭವಾಗಿದೆ. ರಿಯೊ ಸಮ್ಮೇಳನದಲ್ಲಿ ನಾನು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತನಾಡಿದ್ದೇನೆ. ಎರಡೂ ಸೇನೆಗಳು ಈ ಪ್ರದೇಶಗಳಿಂದ ಹಿಂದೆ ಸರಿಯುವವರೆಗೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲ ಎಂದು ನಮ್ಮ ಸರ್ಕಾರ ಸ್ಪಷ್ಟಪಡಿಸಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ