ಡಿವೋರ್ಸ್​ ಬಳಿಕ ಇನ್ನೊಂದು ಮದುವೆಯಾಗುವುದು ಕೌಟುಂಬಿಕ ದೌರ್ಜನ್ಯವಲ್ಲ; ಮಹಿಳೆಯ ಅರ್ಜಿ ವಜಾಗೊಳಿಸಿ, ತೀರ್ಪು ನೀಡಿದ ಬಾಂಬೆ ಹೈಕೋರ್ಟ್​

ಮಾಜಿ ಪತಿ ಎರಡನೇ ಮದುವೆಯಾಗುತ್ತಿದ್ದಂತೆ ಇತ್ತು ಈ ಮಹಿಳೆ ಮತ್ತೆ ಕೋರ್ಟ್ ಮೆಟ್ಟಿಲೇರಿ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆಯಡಿ ಮಾಜಿ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಡಿವೋರ್ಸ್​ ಬಳಿಕ ಇನ್ನೊಂದು ಮದುವೆಯಾಗುವುದು ಕೌಟುಂಬಿಕ ದೌರ್ಜನ್ಯವಲ್ಲ; ಮಹಿಳೆಯ ಅರ್ಜಿ ವಜಾಗೊಳಿಸಿ, ತೀರ್ಪು ನೀಡಿದ ಬಾಂಬೆ ಹೈಕೋರ್ಟ್​
ಬಾಂಬೆ ಹೈಕೋರ್ಟ್​
Follow us
TV9 Web
| Updated By: Lakshmi Hegde

Updated on:Aug 19, 2021 | 4:49 PM

ಒಂದು ದಂಪತಿ ವಿಚ್ಛೇದನ (Divorce)ವಾದ ಬಳಿಕ, ಆ ಪತಿ ಇನ್ನೊಬ್ಬಳನ್ನು ಮದುವೆಯಾದರೆ ಅದು ಆತ ಮೊದಲ (ಮಾಜಿ) ಪತ್ನಿಯ ಮೇಲೆ ನಡೆಸುವ ಕೌಟುಂಬಿಕ ದೌರ್ಜನ್ಯ ಅಲ್ಲ. ಅದು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005ರಡಿ ಕ್ರೌರ್ಯ ಎನ್ನಿಸಿಕೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್ (Bombay Highcourt)​​ನ ನಾಗ್ಪುರ ಪೀಠ ಇತ್ತೀಚೆಗೆ ತೀರ್ಪು ನೀಡಿದೆ. ಈ ಮೂಲಕ ವಿಚ್ಛೇದಿತ ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸಿದೆ.

ಈ ದಂಪತಿ 2011ರ ಮಾರ್ಚ್​ 13ರಲ್ಲಿ ವಿವಾಹವಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರಲ್ಲಿ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾy ಎದ್ದು, ವೈವಾಹಿಕ ಜೀವನ ಮುರಿದುಬಿತ್ತು. ಆಗ ಪತಿಯೇ ಮೊದಲು ಡಿವೋರ್ಸ್​ಗೆ ಅರ್ಜಿ ಹಾಕಿದ್ದರು. ಪತ್ನಿಯಿಂದ ಹಿಂಸೆಯಾಗುತ್ತಿದೆ ಎಂಬ ಅಂಶವನ್ನು ಉಲ್ಲೇಖಿಸಿ ಮುಂಬೈನ ಅಕೋಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಾ ಪ್ರಕ್ರಿಯೆ ಶುರು ಮಾಡಿದರು. ಎಲ್ಲವನ್ನೂ ಪರಿಶೀಲಿಸಿದ ಅಕೋಲಾ ನ್ಯಾಯಾಲಯ 2014ರ ಸೆಪ್ಟೆಂಬರ್​ 16ರಂದು ವಿಚ್ಛೇದನಕ್ಕೆ ಅನುಮತಿಸಿತು ಮತ್ತು ತನ್ನ ವೈವಾಹಿಕ ಹಕ್ಕುಗಳನ್ನು ಪತಿಯ ಕುಟುಂಬ ಪಾವತಿಸಬೇಕು ಎಂದು ಮಹಿಳೆ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತ್ತು. ಅದಾದ ಮೇಲೆ ಆ ಮಹಿಳೆ ಹೈಕೋರ್ಟ್​ ಮೊರೆ ಹೋದರು ಅಲ್ಲೂ ಕೂಡ ಹಿನ್ನಡೆಯಾಯಿತು..ಅದೂ ಸಾಲದೆಂಬಂತೆ ಸುಪ್ರೀಂಕೋರ್ಟ್​ ಮೆಟ್ಟಿಲು ಹತ್ತಿದರು. ಸರ್ವೋಚ್ಛ ನ್ಯಾಯಾಲಯ ಕೂಡ ಅಕೋಲಾ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿಯಿತು.

ಅಂತೂ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಆ ವ್ಯಕ್ತಿ ಇನ್ನೊಂದು ಮದುವೆಯಾದರು. ಆದರೆ ಅವರು ಎರಡನೇ ಮದುವೆಯಾಗುತ್ತಿದ್ದಂತೆ ಇತ್ತು ಈ ಮಹಿಳೆ ಮತ್ತೆ ಕೋರ್ಟ್ ಮೆಟ್ಟಿಲೇರಿ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆಯಡಿ ಮಾಜಿ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅರ್ಜಿದಾರ ನಂ.1 (ತನ್ನ ವಿಚ್ಛೇದಿತ ಪತಿ) ಇದೀಗ ಮತ್ತೊಂದು ಮದುವೆಯಾಗುವ ಮೂಲಕ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದು ಕೌಟುಂಬಿಕ ದೌರ್ಜನ್ಯ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲ, ತನಗೆ ನೀಡಬೇಕಾದ ಮಾಸಿಕ ನಿರ್ವಹಣಾ ವೆಚ್ಚ, ಪರಿಹಾರ ಇತರ ಆರ್ಥಿಕ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಇದಾಗಿದ್ದು 2016ರಲ್ಲಿ. ಆದರೆ ಮಹಿಳೆಯ ಈ ಅರ್ಜಿ ವಿರುದ್ಧ ಮಾಜಿ ಪತಿಯ ಕುಟುಂಬಸ್ಥರೂ ಪ್ರತಿ ಅರ್ಜಿ ಸಲ್ಲಿಸಿದ್ದರು. ಅಂಥ ಹುರುಳಿಲ್ಲದ ಅರ್ಜಿಗಳನ್ನು ಪರಿಗಣಿಸಬಾರದು..ವಿಚ್ಛೇದನ ಕೊಟ್ಟ ಮೇಲೆ ಬೇರೆ ಮದುವೆಯಾಗುವುದು ದೌರ್ಜನ್ಯ ಹೇಗಾಗುತ್ತದೆ ಎಂದೂ ಪ್ರಶ್ನಿಸಿದ್ದರು. ಅದರಂತೆ ಅಕೋಲಾ ಮ್ಯಾಜಿಸ್ಟ್ರೇಟ್​ ಮಹಿಳೆಯ ಅರ್ಜಿಯನ್ನು ವಜಾ ಮಾಡಿದ್ದರು. ಪಟ್ಟು ಬಿಡದ ಮಹಿಳೆ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು.

ತೀರ್ಪು ಏನು? ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೀಶ್​ ಪಿಟಾಲೆ, ವಿಚ್ಛೇದನವಾದ ನಂತರ ಮತ್ತೊಂದು ಮದುವೆಯಾಗುವುದು ಕೌಟುಂಬಿಕ ದೌರ್ಜನ್ಯವಲ್ಲ. ಪ್ರಸ್ತುತ ಪ್ರಕರಣದಲ್ಲೂ ಸಹ ಪುರುಷ ಎರಡನೇ ಮದುವೆಯಾಗಿದ್ದನ್ನು ಮಾಜಿ ಪತ್ನಿಯ ಮೇಲೆ ನಡೆಸಿದ ಕೌಟುಂಬಿಕ ಹಿಂಸೆ ಎಂದು ಪರಿಗಣಿಸಿ, ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗೆಲ್ಲ ಅರ್ಜಿ ಸಲ್ಲಿಸುವುದೇ ತಪ್ಪು.. ಇದು ಕಾನೂನು ಪ್ರಕ್ರಿಯೆಯ ದುರುಪಯೋಗ ಮಾಡಿಕೊಂಡಂತಾಗಿದೆ. ನ್ಯಾಯ ವ್ಯವಸ್ಥೆಯ ಬಗ್ಗೆ ನಿಂದನೆ ತೋರಿದಂತಾಗಿದೆ ಎಂದು ಕಟುವಾಗಿಯೇ ಹೇಳಿದ್ದಾರೆ.

ಇದನ್ನೂ ಓದಿ:  ಇನ್ನೊಬ್ಬರ ಜತೆ  ಲಿವ್ ಇನ್ ಸಂಬಂಧದಲ್ಲಿರುವ ವಿವಾಹಿತ ಮಹಿಳೆಗೆ ರಕ್ಷಣೆ ನೀಡಿದರೆ ಅದು ಅಕ್ರಮ ಸಂಬಂಧವನ್ನು ಒಪ್ಪಿಕೊಂಡಂತೆ: ರಾಜಸ್ಥಾನ ಹೈಕೋರ್ಟ್

ಮದುವೆ ನಂತರ ಬಿಕಿನಿ ತೊಟ್ಟ ಕಾಜಲ್​ ಅಗರ್​ವಾಲ್​; ಆದರೆ, ಇದರ ಬಗ್ಗೆ ಅಭಿಮಾನಿಗಳು ಮಾತನಾಡುವಂತಿಲ್ಲ

Published On - 4:47 pm, Thu, 19 August 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್