AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬ್ ಚಾಲಕರನ್ನೇ ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದ ಹಂತಕ ಲಾಂಬಾ 24 ವರ್ಷಗಳ ಬಳಿಕ ಅರೆಸ್ಟ್​

ಕ್ಯಾಬ್​ ಚಾಲಕರನ್ನೇ ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದ ಹಂತಕನನ್ನು 24 ವರ್ಷಗಳ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಂತಕ ಅಜಯ್ ಲಾಂಬಾನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ. ಆತ ಹಾಗೂ ಆತನ ಸಹಚರರು ಮೊದಲು ಕ್ಯಾಬ್ ಬುಕ್ ಮಾಡುತ್ತಿದ್ದರು. ಬಾಡಿಗೆ ಪಡೆದು ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದರು. ನಂತರ ಚಾಲಕನನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಬೆಟ್ಟದ ಮೇಲೆ ವಿಲೇವಾರಿ ಮಾಡುತ್ತಿದ್ದರು.

ಕ್ಯಾಬ್ ಚಾಲಕರನ್ನೇ ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದ ಹಂತಕ ಲಾಂಬಾ 24 ವರ್ಷಗಳ ಬಳಿಕ ಅರೆಸ್ಟ್​
ಲಾಂಬಾ
ನಯನಾ ರಾಜೀವ್
|

Updated on:Jul 06, 2025 | 3:03 PM

Share

ನವದೆಹಲಿ, ಜುಲೈ 06: ಕ್ಯಾಬ್​ ಚಾಲಕರನ್ನೇ ಗುರಿಯಾಗಿಸಿ ಹತ್ಯೆ(Murder) ಮಾಡುತ್ತಿದ್ದ ಹಂತಕನನ್ನು 24 ವರ್ಷಗಳ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಂತಕ ಅಜಯ್ ಲಾಂಬಾನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ. ಆತ ಹಾಗೂ ಆತನ ಸಹಚರರು ಮೊದಲು ಕ್ಯಾಬ್ ಬುಕ್ ಮಾಡುತ್ತಿದ್ದರು.

ಬಾಡಿಗೆ ಪಡೆದು ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದರು. ನಂತರ ಚಾಲಕನನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಬೆಟ್ಟದ ಮೇಲೆ ವಿಲೇವಾರಿ ಮಾಡುತ್ತಿದ್ದರು. ಕಾರನ್ನು ಗಡಿ ಮೂಲಕ ತೆಗೆದುಕೊಂಡು ಹೋಗಿ ನೇಪಾಳದಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಆತ ದೆಹಲಿ ಹಾಗೂ ಉತ್ತರ ಪ್ರದೇಶ, ಉತ್ತರಾಖಂಡದಾದ್ಯಂತ 2001ರಲ್ಲಿ ಚಾಲಕರನ್ನು ಗುರಿಯಾಗಿಸಿಕೊಂಡು ನಡೆದ ನಾಲ್ಕು ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ, ಸಹಚರರೊಂದಿಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು, ಚಾಲಕರನ್ನು ಕೊಲೆ ಮಾಡಿ, ವಾಹನಗಳನ್ನು ದರೋಡೆ ಮಾಡಿ, ಪರ್ವತ ಪ್ರದೇಶಗಳಲ್ಲಿ ಶವವನ್ನು ಹೂತು ಹಾಕುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಗೇಟ್ ಬಳಿ ಕಾದು ಗುಂಡು ಹಾರಿಸಿ ಕೊಲೆ; ಪಾಟ್ನಾದಲ್ಲಿ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಸಿಸಿಟಿವಿ ವಿಡಿಯೋದಲ್ಲಿ ಸೆರೆ

ಅಜಯ್ ಲಂಬಾ ಮತ್ತು ಆತನ ಗ್ಯಾಂಗ್ ಸದಸ್ಯರು ಇನ್ನಷ್ಟು ಕೊಲೆಗಳಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಾಲ್ವರು ಬಲಿಪಶುಗಳಲ್ಲಿ ಒಬ್ಬ ಕ್ಯಾಬ್ ಚಾಲಕನ ಶವ ಮಾತ್ರ ಪತ್ತೆಯಾಗಿದೆ. ಲಂಬಾನ ಗ್ಯಾಂಗ್ ಸದಸ್ಯರಲ್ಲಿ ಇಬ್ಬರನ್ನು ಈ ಹಿಂದೆ ಬಂಧಿಸಲಾಗಿತ್ತು. ಪೊಲೀಸರು ಈಗ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.

48 ವರ್ಷದ ಲಾಂಬಾ ದೆಹಲಿಯವನಾಗಿದ್ದು, 6ನೇ ತರಗತಿವರೆಗೆ ಓದಿ ಶಾಲೆ ಬಿಟ್ಟಿದ್ದ. ನಂತರ ಉತ್ತರ ಪ್ರದೇಶದ ಬರೇಲಿಗೆ ತೆರಳಿ ಧೀರೇಂದ್ರ ಮತ್ತು ದಿಲೀಪ್ ನೇಗಿ ಜೊತೆ ನಂಟು ಬೆಳೆಸಿದ್ದ.2008 ರಿಂದ 2018 ರವರೆಗೆ ನೇಪಾಳದಲ್ಲಿ ವಾಸಿಸುತ್ತಿದ್ದ. ನಂತರ ತಮ್ಮ ಕುಟುಂಬದೊಂದಿಗೆ ಡೆಹ್ರಾಡೂನ್‌ಗೆ ಸ್ಥಳಾಂತರಗೊಂಡಿದ್ದ. 2020 ರಲ್ಲಿ, ಅವರು ಒಡಿಶಾದಿಂದ ದೆಹಲಿ ಸೇರಿದಂತೆ ಭಾರತದ ಇತರ ಭಾಗಗಳಿಗೆ ಗಾಂಜಾ ಪೂರೈಕೆ ಪ್ರಕರಣದಲ್ಲಿ ಭಾಗಿಯಾಗಿದ್ದ.

2024 ರಲ್ಲಿ ಒಡಿಶಾದ ಬೆಹ್ರಾಂಪುರದಲ್ಲಿ ನಡೆದ ಆಭರಣ ಅಂಗಡಿ ದರೋಡೆ ಪ್ರಕರಣದಲ್ಲಿ ಬಂಧಿಸಲಾಯಿತು. ಈ ಪ್ರಕರಣಗಳಲ್ಲಿ ಅವರು ಜಾಮೀನಿನ ಮೇಲೆ ಹೊರಗಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:01 pm, Sun, 6 July 25