ದೇಶದ ಉತ್ತರ ಗಡಿಯಲ್ಲಿ ಪರಿಸ್ಥಿತಿ ಸಹಜ, ಆದರೆ ಸೂಕ್ಷ್ಮವಾಗಿದೆ: ಸೇನಾ ಮುಖ್ಯಸ್ಥ

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಆದರೆ ರಜೌರಿ-ಪೂಂಚ್ ವಲಯದಲ್ಲಿ ಇಂತಹ ಘಟನೆಗಳು ಹೆಚ್ಚಿವೆ ಎಂದು ಜನರಲ್ ಪಾಂಡೆ ಹೇಳಿದರು. ಕಳೆದ 5-6 ತಿಂಗಳುಗಳಲ್ಲಿ ರಜೌರಿ ಮತ್ತು ಪೂಂಚ್‌ನಲ್ಲಿನ ಪರಿಸ್ಥಿತಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ನಮಗೆ ಕಳವಳಕಾರಿ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದ ಉತ್ತರ ಗಡಿಯಲ್ಲಿ ಪರಿಸ್ಥಿತಿ ಸಹಜ, ಆದರೆ ಸೂಕ್ಷ್ಮವಾಗಿದೆ: ಸೇನಾ ಮುಖ್ಯಸ್ಥ
ಮನೋಜ್ ಪಾಂಡೆ
Follow us
ರಶ್ಮಿ ಕಲ್ಲಕಟ್ಟ
|

Updated on: Jan 11, 2024 | 3:20 PM

ದೆಹಲಿ ಜನವರಿ 11: ಸೇನಾ ಮುಖ್ಯಸ್ಥ (COAS) ಜನರಲ್ ಮನೋಜ್ ಪಾಂಡೆ (General Manoj Pande) ಅವರು ಭಾರತ-ಮ್ಯಾನ್ಮಾರ್ ಗಡಿಯಲ್ಲಿನ ಪರಿಸ್ಥಿತಿ ಮತ್ತು ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿ-ಪೂಂಚ್ ಸೆಕ್ಟರ್‌ನಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಸೇನಾ ದಿನದ ಮುನ್ನಾ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಂಡೆ, ಉತ್ತರದ ಗಡಿಯಲ್ಲಿ, ವಿಶೇಷವಾಗಿ ಲಡಾಖ್‌ನಲ್ಲಿ ಪರಿಸ್ಥಿತಿ ‘ಸ್ಥಿರವಾಗಿದೆ ಆದರೆ ಸೂಕ್ಷ್ಮವಾಗಿದೆ’ ಎಂದು ಹೇಳಿದ್ದಾರೆ.

ಸ್ಥಾಪಿತ ಪ್ರೋಟೋಕಾಲ್‌ಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಉಳಿದಿರುವ ಸಮತೋಲನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ವ್ಯಾಪಕವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರ ಎರಡು ಕಡೆಯವರು ಹಲವಾರು ಪ್ರದೇಶಗಳಿಂದ ಸೇನಾ ಹಿಂಪಡೆತ ಪೂರ್ಣಗೊಳಿಸಿದಾಗಲೂ ಪೂರ್ವ ಲಡಾಖ್‌ನಲ್ಲಿ ಕೆಲವು ಘರ್ಷಣೆಯ ಬಿಂದುಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಮೂರು ವರ್ಷಗಳ ಘರ್ಷಣೆ ನಡೆಸಿವೆ. ಪಡೆಗಳ ದೃಢವಾದ ಮತ್ತು ಸಮತೋಲಿತ ನಿಯೋಜನೆಯೊಂದಿಗೆ ಕಾರ್ಯಾಚರಣೆಯ ಸನ್ನದ್ಧತೆಯು ಉನ್ನತ ಮಟ್ಟದಲ್ಲಿ ಉಳಿಯುತ್ತದೆ ಎಂದು ಸೇನಾ ಮುಖ್ಯಸ್ಥರು ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ, ಜನರಲ್ ಪಾಂಡೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಒಪ್ಪಂದ ಮುಂದುವರೆಸುವುದನ್ನು ಗಮನಿಸಿದರು. ಒಳನುಸುಳುವಿಕೆ ಯತ್ನಗಳ ಹೊರತಾಗಿಯೂ, ಭಾರತೀಯ ಸೇನೆಯು ಅಂತಹ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿತು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಪ್ರಬಲವಾದ ಡ್ರೋನ್ ವಿರೋಧಿ ಕಾರ್ಯವಿಧಾನವು ಅವರ ಯಶಸ್ಸಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಆದರೆ ರಜೌರಿ-ಪೂಂಚ್ ವಲಯದಲ್ಲಿ ಇಂತಹ ಘಟನೆಗಳು ಹೆಚ್ಚಿವೆ ಎಂದು ಜನರಲ್ ಪಾಂಡೆ ಹೇಳಿದರು. ಕಳೆದ 5-6 ತಿಂಗಳುಗಳಲ್ಲಿ ರಜೌರಿ ಮತ್ತು ಪೂಂಚ್‌ನಲ್ಲಿನ ಪರಿಸ್ಥಿತಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ನಮಗೆ ಕಳವಳಕಾರಿ ವಿಷಯವಾಗಿದೆ. 2003ರ ಹೊತ್ತಿಗೆ, ಈ ಪ್ರದೇಶದಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ಹರಡಿತು ಮತ್ತು 2017-18 ರವರೆಗೆ ಅಲ್ಲಿ ಶಾಂತಿ ಸ್ಥಾಪಿಸಲಾಯಿತು. ಕಣಿವೆಯಲ್ಲಿ ಶಾಂತಿ ನೆಲೆಸಿರುವ ಕಾರಣ, ನಮ್ಮ ವಿರೋಧಿಗಳು ಈ ಪ್ರದೇಶದಲ್ಲಿ ಪ್ರಾಕ್ಸಿ ತಂಝೀಮ್‌ಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪಾಕಿಸ್ತಾನವನ್ನು ಉಲ್ಲೇಖಿಸಿ ಜನರಲ್ ಪಾಂಡೆ ಹೇಳಿದರು.

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಜನರಲ್ ಪಾಂಡೆ, ಮ್ಯಾನ್ಮಾರ್ ಸೇನೆ ಮತ್ತು ಜನಾಂಗೀಯ ಸಶಸ್ತ್ರ ಸಂಘಟನೆಗಳ ಚಟುವಟಿಕೆಗಳ ಪ್ರಭಾವವನ್ನು ಎತ್ತಿ ತೋರಿಸಿದರು. ಮ್ಯಾನ್ಮಾರ್ ಸೇನೆಯ ಸಿಬ್ಬಂದಿ ಮತ್ತು ಭೂತಾನ್ ನಾಗರಿಕರು ಭಾರತೀಯ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ನಿದರ್ಶನಗಳನ್ನು ಅವರು ಹೇಳಿದ್ದಾರೆ.

ಕೆಲವು ಬಂಡುಕೋರ ಗುಂಪು ಈಗ ಮಣಿಪುರ ರಾಜ್ಯದ ಗಡಿಯ ನಮ್ಮ ಭಾಗಕ್ಕೆ ಬರಲು ಪ್ರಯತ್ನಿಸಿದ್ದಾರೆ. ಅದು ಮಣಿಪುರದ ಪರಿಸ್ಥಿತಿಯೊಂದಿಗೆ ಸೇರಿಕೊಂಡು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಸುಮಾರು 20 ಅಸ್ಸಾಂ ರೈಫಲ್ ಬೆಟಾಲಿಯನ್‌ಗಳನ್ನು ಹೊಂದಿದ್ದೇವೆ, ಇವುಗಳನ್ನು ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ನಿಯೋಜಿಸಲಾಗಿದೆ. ಗಡಿಯಲ್ಲಿ ನಮ್ಮ ಬೇಲಿಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಇತ್ತೀಚೀನ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ಜನರಲ್ ಪಾಂಡೆ ಹೊಸ ತಂತ್ರಜ್ಞಾನಗಳ ಇಂಡಕ್ಷನ್ ಮತ್ತು ಫಿರಂಗಿ ಮತ್ತು ಎಲೆಕ್ಟ್ರಾನಿಕ್ ಯುದ್ಧ ಘಟಕಗಳ ಪುನರ್ರಚನೆಯನ್ನು ವಿವರಿಸಿದರು. ತುರ್ತು ನಿಬಂಧನೆಗಳ ಭಾಗವಾಗಿ, ನಾವು ಕೆಲವು ಹೊಸ ತಂತ್ರಜ್ಞಾನಗಳನ್ನು ಸೇರಿಸಲು ಮತ್ತು ಯುದ್ಧದ ಡೊಮೇನ್‌ಗಳನ್ನು ಪರಿಹರಿಸಲು ಸಮರ್ಥರಾಗಿದ್ದೇವೆ. ನಾವು ಉತ್ತಮ ವಾಹನಗಳು, ಡ್ರೋನ್‌ಗಳು ಮತ್ತು ಕೌಂಟರ್-ಡ್ರೋನ್ ವ್ಯವಸ್ಥೆಗಳನ್ನು ಸೇರಿಸಿದ್ದೇವೆ. ನಾವು ಭೂಪ್ರದೇಶ-ನಿರ್ದಿಷ್ಟ ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳನ್ನು ಹೊಂದಿದ್ದೇವೆ ಎಂದು ಜನರಲ್ ಪಾಂಡೆ ಹೇಳಿದರು.

ಇದನ್ನೂ ಓದಿ: ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳನ್ನು ಬಲಪಡಿಸಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಿತ್ ಶಾ

ನಾವು ನಮ್ಮ ಫಿರಂಗಿ ಘಟಕವನ್ನು ಪುನರ್ರಚಿಸಿದ್ದೇವೆ. ನಾವು ಎಲೆಕ್ಟ್ರಾನಿಕ್ ವಾರ್ಫೇರ್ ಮತ್ತು ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್‌ನ ಪುನರ್ರಚಿಸಿದ ಘಟಕಗಳನ್ನು ಸಹ ಹೊಂದಿದ್ದೇವೆ. ನಮ್ಮ ಪ್ರಾಣಿ ಸಾಗಣೆ ಘಟಕಗಳಲ್ಲಿ ಪ್ರಾಣಿಗಳನ್ನು ಕಡಿಮೆ ಮಾಡುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಿದ್ದೇವೆ. ಅವುಗಳ ಬದಲು ಡ್ರೋನ್‌ ಬಳಸಲಾಗುತ್ತದೆ. 2027 ರ ವೇಳೆಗೆ ನಾವು 1 ಲಕ್ಷ ಸಂಖ್ಯೆಗಳ ಆಪ್ಟಿಮೈಸೇಶನ್ ಅನ್ನು ಸಾಧಿಸುತ್ತೇವೆ. ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಸೇನೆಗೆ ಅಗ್ನಿವೀರ್‌ಗಳ ಸೇರ್ಪಡೆ ಉತ್ತಮವಾಗಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ