ಸ್ಪುಟ್ನಿಕ್ ವಿ ಲಸಿಕೆಯ ಪೈಲಟ್ ಟೆಸ್ಟಿಂಗ್ ಕೊನೆ ಹಂತದಲ್ಲಿದ್ದು ಶೀಘ್ರದಲ್ಲಿ ಮಾರ್ಕೆಟ್​ಗೆ ಬಿಡುಗಡೆ ಮಾಡಲಾಗುವುದು: ಡಾ ರೆಡ್ಡೀಸ್

ರಷ್ಯನ್ ಸಾವರೀನ್ ವೆಲ್ತ್ ಫಂಡ್ (ಆರ್​ಡಿಐಎಫ್) ನೆರವಿನಿಂದ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದ ಗಮಾಲೆಯಾ ಇನ್​ಸ್ಟಿಟ್ಯೂಟ್​ ಅಭಿವೃದ್ಧಿಪಡಿಸಿದ್ದು ಜಾಗತಿವಾಗಿ ಆದರ ಮಾರ್ಕೆಟಿಂಗ್ ಸಹ ಮಾಡುತ್ತಿದೆ.

ಸ್ಪುಟ್ನಿಕ್ ವಿ ಲಸಿಕೆಯ ಪೈಲಟ್ ಟೆಸ್ಟಿಂಗ್ ಕೊನೆ ಹಂತದಲ್ಲಿದ್ದು ಶೀಘ್ರದಲ್ಲಿ ಮಾರ್ಕೆಟ್​ಗೆ ಬಿಡುಗಡೆ ಮಾಡಲಾಗುವುದು: ಡಾ ರೆಡ್ಡೀಸ್
ಸ್ಪುಟ್ನಿಕ್​ ವಿ ಲಸಿಕೆ

ಕೊರೋನಾ ಸೋಂಕಿನ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಭಾರತದಲ್ಲಿ ನಡೆಯುತ್ತಿರುವ ಟೆಸ್ಟಿಂಗ್ ಅಂತಿಮ ಹಂತದಲ್ಲಿದ್ದು ದೇಶದ ಮಾರ್ಕೆಟ್​ಗಳಿಗೆ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಭಾರತದಲ್ಲಿ ಅದರ ಹಂಚಿಕೆಯನ್ನು ಮಾಡಲಿರುವ ಡಾ ರೆಡ್ಡೀಸ್ ಲ್ಯಾಬೊರೇಟೊರೀಸ್ ಸಂಸ್ಥೆ ಬುಧವಾರದಂದು ಹೇಳಿದೆ. ‘ಬಾರತದಲ್ಲಿ ಸ್ಫುಟ್ನಿಕ್ ವಿ ಲಸಿಕೆ ಸೀಮಿತ ಪೈಲಟ್​ ಲಾಂಚ್ ಅನ್ನು ಮೇ 14 ರಂದು ಹೈದರಾಬಾದಿನ ಡಾ ರೆಡ್ಡೀಸ್ ಆರಂಭಿಸಿದ್ದು ಅದರ ಅಂತಿಮ ಹಂತದ ಟೆಸ್ಟಿಂಗ್ ಈಗ ಜಾರಿಯಲ್ಲಿದೆ. ಅದರ ಕಮರ್ಷಿಯಲ್ ಲಾಂಚ್​ಗೋಸ್ಕರ ಸಂಸ್ಥೆಯು ಸಿದ್ಧವಾಗುತ್ತಿದೆ.’ ಅಂತ ಇಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಡಾ ರೆಡ್ಡೀಸ್ ಲ್ಯಾಬೊರೇಟೊರೀಸ್ ತಿಳಿಸಿದೆ.

ರಷ್ಯನ್ ಸಾವರೀನ್ ವೆಲ್ತ್ ಫಂಡ್ (ಆರ್​ಡಿಐಎಫ್) ನೆರವಿನಿಂದ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದ ಗಮಾಲೆಯಾ ಇನ್​ಸ್ಟಿಟ್ಯೂಟ್​ ಅಭಿವೃದ್ಧಿಪಡಿಸಿದ್ದು ಜಾಗತಿವಾಗಿ ಆದರ ಮಾರ್ಕೆಟಿಂಗ್ ಸಹ ಮಾಡುತ್ತಿದೆ.
ಸ್ಪುಟ್ನಿಕ್ ವಿ ಲಸಿಕೆಯು ಎರಡು-ಡೋಸ್​ಗಳ ಶಾಟ್ (ಆದರೆ ಇದರ ಡೋಸ್​ಗಳು ಬೇರೆ ಲಸಿಕೆಗಳಂತೆ ಒಂದೇ ತೆರನಾಗಿರದೆ ಪರಸ್ಪರ ಭಿನ್ನವಾಗಿರುತ್ತವೆ ) ಆಗಿದ್ದು ಇದು ಸೋಂಕನ್ನು ತಡೆಯುವಲ್ಲಿ ಶೇಕಡಾ 91.6 ರಷ್ಟು ಪರಿಣಾಮಕಾರಿಯಾಗಿದೆ.

ಲಸಿಕೆಯ ಸಾಫ್ಟ್ ಲಾಂಚ್ ಭಾಗವಾಗಿ ಅದನ್ನು ಪ್ರಸ್ತುತ 9 ನಗರಗಳಲ್ಲಿ ನೀಡಲಾಗುತ್ತಿದೆ ಮತ್ತು ಬೇರೆ ನಗರಗಳಿಗೂ ವಿಸ್ತರಿಸುವ ಇರಾದೆ ಸಂಸ್ಥೆಗಿದೆ. ವಿಶಾಖಪಟ್ನಮ್, ಬೆಂಗಳೂರು. ಮುಂಬೈ, ಕೊಲ್ಕತಾ, ದೆಹಲಿ, ಬಡ್ಡಿ, ಮಿರ್ಯಾಲಗುಡ, ಚೆನೈ, ಮತ್ತು ಕೊಲ್ಲಾಪುರ ನಗರಗಳಲ್ಲಿ ಅದನ್ನು ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ಡಿಜಿಟಲ್ ವ್ಯಾಕ್ಸಿನ್ ಡೆಲಿವರಿ ಪ್ಲಾಟ್​ಫಾರ್ಮ್ ಕೊವಿನ್​ನಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಇನ್ನೂ ಸ್ಲಾಟ್​ಗಳು ದೊರೆತಿಲ್ಲ.

‘ಸದ್ಯಕ್ಕೆ ಸೀಮಿತ ಪೈಲಟ್​ ಹಂತದಲ್ಲಿರುವುದರಿಂದ ಸಾರ್ವಜನಿಕರಿಗೆ ಕೊವಿನ್ ಪ್ಲಾಟ್​ಫಾರ್ಮ್​ನಲ್ಲಿ ಸ್ಪುಟ್ನಿಕ್​ ಲಸಿಕೆಗಾಗಿ ನೋಂದಣಿ ಇನ್ನೂ ಪ್ರಾರಂಭವಾಗಿಲ್ಲ. ಲಸಿಕೆಯ ವಾಣಿಜ್ಯ ಲಾಂಚ್​ ಸಂದರ್ಭದಲ್ಲಿ ಅದು ಓಪನ್​ ಆಗುತ್ತದೆ,’ ಎಂದು ಕಂಪನಿ ಹೇಳಿದೆ.

‘ಪೈಲಟ್ ಹಂತವು ನಮ್ಮ ಶೈತ್ಯಾಗಾರದ ವ್ಯವಸ್ಥೆಯನ್ನು ಈ ನಗರಗಳಲ್ಲಿ ಟೆಸ್ಟ್ ಮಾಡುವ ಅವಕಾಶವನ್ನು ಕಲ್ಪಿಸಿದೆ, ಸ್ಪುಟ್ನಿಕ್ ಲಸಿಕೆಯನ್ನು -18 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸ್ಟೋರ್ ಮಾಡಬೇಕಾಗುತ್ತದೆ, ಕಮರ್ಷಿಯಲ್ ಲಾಂಚ್​ಗೆ ಮೊದಲು ಎಲ್ಲ ಏರ್ಪಾಡುಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ,’ ಎಂದು ಕಂಪನಿಯ ಹೇಳಿಕೆ ತಿಳಿಸುತ್ತದೆ.

ಲಸಿಕೆ ಹಂಚಿಕೆಗಾಗಿ ಸಂಸ್ಥೆಯು ಸಹಭಾಗಿತ್ವ ಮಾಡಿಕೊಂಡಿರುವ ಎಲ್ಲ ನಗರಗಲ ಆಸ್ಪತ್ರೆಗಳಲ್ಲಿ ಕೋಲ್ಡ್ ಸ್ಟೋರೇಜ್  ವ್ಯವಸ್ಥೆ ಮಾಡುವುದರಲ್ಲಿ ಸಂಸ್ಥೆಯು ತಲ್ಲೀನವಾಗಿದೆ. ಲಸಿಕೆಯ ಸ್ಟೋರೇಜ್ ಮತ್ತು ನಿರ್ವಹಣೆಗಾಗಿ ಏರ್ಪಾಡುಗಳನ್ನು ಮಾಡಲಾಗುತ್ತಿದೆ.

‘ನಮ್ಮೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ಎರಡು ಡೋಸ್​ಗಳ ಕಾಂಪೊನೆಂಟ್​ಗಳು ಸರಿಯಾದ ಪ್ರಮಾಣದಲ್ಲಿ ಮತ್ತು ಸೂಕ್ತವಾದ ಸಮಯದಲ್ಲಿ ದೊರಕುವುದನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಿರುವ ಸರಬರಾಜು ಏರ್ಪಾಟುಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಮ್ಮೆ ಪ್ಲಾಟ್ ಹಂತ ಕೊನೆಗೊಂಡರೆ ಲಸಿಕೆಯ ಕಮರ್ಷಿಯಲ್ ಲಾಂಚ್​ ಬಗ್ಗೆ ಡಾ ರೆಡ್ಡೀಸ್ ಘೋಷಣೆ ಮಾಡುತ್ತದೆ,’ ಎಂದು ಕಂಪನಿಯ ಹೇಳಿಕೆ ತಿಳಿಸುತ್ತದೆ.

ಭಾರತದಲ್ಲಿ ಮೊದಲ 250 ದಶಲಕ್ಷ ಲಸಿಕೆ ಡೋಸ್​ಗಳ ಹಂಚಿಕೆಗಾಗಿ ಡಾ ರೆಡ್ಡೀಸ್ ಆರ್​ಡಿಐಎಫ್​ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದೆ. ಅದಲ್ಲದೆ ಕಂಪನಿಯು ಲಸಿಕೆಯನ್ನು ರಚನಾತ್ಮಕ ಅಧ್ಯಯನದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ 1,600 ಜನರ ಮೇಲೆ ಪ್ರಯೋಗಿಸಿದೆ.

ಕೊವಿಷೀಲ್ಡ್ ಮತ್ತು ಕೋವ್ಯಾಕ್ಸಿನ್​ ನಂತರ ಭಾರತದಲ್ಲಿ ತುರ್ತು ಸ್ಥಿತಿಯಲ್ಲಿ ಬಳಸಲು ಆನುಮತಿ ಪಡೆದಿರುವ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಆಗಿದೆ.

ಇದನ್ನೂ ಓದಿ: Sputnik V: ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಒಂದು ಡೋಸ್​ಗೆ 995.40 ರೂ; ಭಾರತದಲ್ಲಿ ಉತ್ಪಾದನೆ ಆರಂಭವಾದ ನಂತರ ಬೆಲೆ ತಗ್ಗುವ ಸಾಧ್ಯತೆ

Click on your DTH Provider to Add TV9 Kannada