RTI portal ಆನ್‌ಲೈನ್ ಆರ್‌ಟಿಐ ಪೋರ್ಟಲ್ ಆರಂಭಿಸಿದ ಸುಪ್ರೀಂಕೋರ್ಟ್; ಇಲ್ಲಿ ಅರ್ಜಿ ಸಲ್ಲಿಕೆ ಹೇಗೆ?
ಮೊದಲಿಗೆ, ಅರ್ಜಿದಾರರು ಖಾತೆ ರಚಿಸಿ ಪೋರ್ಟಲ್‌ಗೆ ಸೈನ್ ಇನ್ ಆಗಬೇಕು.ನಂತರ ಅವರು ಆರ್‌ಟಿಐ ಅರ್ಜಿಯನ್ನು ಭರ್ತಿ ಮಾಡಬಹುದು. ಖಾತೆಯನ್ನು ನೋಂದಾಯಿಸುವಾಗ, ನಿಮ್ಮ ವಿಳಾಸದ ದಾಖಲೆ ಒದಗಿಸುವುದು ಕಡ್ಡಾಯವಾಗಿದೆ.
ಸುಪ್ರೀಂಕೋರ್ಟ್ ಗುರುವಾರ ಆರ್‌ಟಿಐ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು ಅದು ನಾಗರಿಕರಿಗೆ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಾಹಿತಿ ಹಕ್ಕು (RTI) ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಲು ಮತ್ತು ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಈ ಪೋರ್ಟಲ್ ಶೀಘ್ರದಲ್ಲೇ ಬಳಕೆಗೆ ಸಿದ್ಧವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ನಾವು ಪ್ರಕರಣಗಳನ್ನು ಪ್ರಾರಂಭಿಸುವ ಮೊದಲು ಆರ್‌ಟಿಐ ಪೋರ್ಟಲ್ ಸಿದ್ಧವಾಗಿದೆ ಎಂದು ಹೇಳಲು ಬಯಸುತ್ತೇನೆ. ಇದು ಇನ್ನೇನು 15 ನಿಮಿಷಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಕೆಲವು ಸಮಸ್ಯೆಗಳಿದ್ದಲ್ಲಿ, ದಯವಿಟ್ಟು ತಾಳ್ಮೆ ವಹಿಸಿ. ಏನಾದರೂ ಸಮಸ್ಯೆಯಿದ್ದರೆ ನನಗೆ ಹೇಳಿ ನಾನು ಅದನ್ನು ನೋಡಲು ಹೆಚ್ಚು ಸಂತೋಷಪಡುತ್ತೇನೆ ಎಂದು ಸಿಜೆಐ ಗುರುವಾರ ಹೇಳಿದ್ದಾರೆ.
ಆನ್‌ಲೈನ್ ಆರ್‌ಟಿಐ ಪೋರ್ಟಲ್ ಎಂದರೇನು?
ಸುಪ್ರೀಂಕೋರ್ಟ್‌ನ ಮಾಹಿತಿಯನ್ನು ಪಡೆಯಲು ಜನರಿಗೆ ಅನುಕೂಲವಾಗುವಂತೆ ಆನ್‌ಲೈನ್ ಆರ್‌ಟಿಐ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ಸುಪ್ರೀಂಕೋರ್ಟ್‌ನಲ್ಲಿ ಆರ್‌ಟಿಐ ಅರ್ಜಿಗಳನ್ನು ಅಂಚೆ ಮೂಲಕ ಮಾತ್ರ ಸಲ್ಲಿಸಬೇಕಾಗಿತ್ತು. ನ್ಯಾಯಾಲಯಕ್ಕೆ ಆನ್‌ಲೈನ್ ಆರ್‌ಟಿಐ ಪೋರ್ಟಲ್‌ಗಾಗಿ ಸುಪ್ರೀಂ ಕೋರ್ಟ್‌ಗೆ ವಿವಿಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (ಪಿಐಎಲ್) ಸಲ್ಲಿಸಲಾಗಿತ್ತು. ಸಮಿತಿಯು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕಾರ್ಯವಿಧಾನವನ್ನು ಒದಗಿಸಿದ್ದರೂ, ಆರ್‌ಟಿಐ ಅರ್ಜಿಗಳ ಸಲ್ಲಿಕೆಗೆ ಅದನ್ನು ಒದಗಿಸಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.
ಕಳೆದ ವಾರದ ಆರಂಭದಲ್ಲಿ, ಸಿಜೆಐ ನೇತೃತ್ವದ ಪೀಠವು ಇಬ್ಬರು ಕಾನೂನು ವಿದ್ಯಾರ್ಥಿಗಳಾದ ಆಕೃತಿ ಅಗರ್ವಾಲ್ ಮತ್ತು ಲಕ್ಷ್ಯ ಪುರೋಹಿತ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಪೋರ್ಟಲ್ “ಪ್ರಾಯೋಗಿಕವಾಗಿ ಪ್ರಾರಂಭಿಸಲು ಸಿದ್ಧವಾಗಿದೆ” ಎಂದು ಹೇಳಿದರು. ಆನ್‌ಲೈನ್ ಪೋರ್ಟಲ್, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸುಪ್ರೀಂಕೋರ್ಟ್‌ನ ಪ್ರತಿಕ್ರಿಯೆಗಳನ್ನು ಸರಳೀಕರಿಸುವ ಸಾಧ್ಯತೆಯಿದೆ.
ಆನ್‌ಲೈನ್ ಪೋರ್ಟಲ್ ಹೇಗೆ ಕೆಲಸ ಮಾಡುತ್ತದೆ?
ಆನ್‌ಲೈನ್ ಪೋರ್ಟಲ್ ಯುಆರ್ಎಲ್: https://registry.sci.gov.in/rti_app
ಸುಪ್ರೀಂಕೋರ್ಟ್‌ನಲ್ಲಿ ಆರ್‌ಟಿಐ ಸಲ್ಲಿಸುವ ಪ್ರಕ್ರಿಯೆಯು ಸಾಮಾನ್ಯವಾಗಿ ಅರ್ಜಿಯನ್ನು ಸಲ್ಲಿಸುವಂತೆಯೇ ಇರುತ್ತದೆ. ಮಾಹಿತಿ ಹಕ್ಕು ಕಾಯಿದೆ, 2005 (ಆರ್‌ಟಿಐ ಕಾಯಿದೆ) ಅಡಿಯಲ್ಲಿ ಆರ್‌ಟಿಐ ಅರ್ಜಿಗಳು, ಮೊದಲ ಮೇಲ್ಮನವಿಗಳು ಮತ್ತು ಶುಲ್ಕಗಳನ್ನು ಪಾವತಿಸಲು ಮತ್ತು ನಕಲಿಸುವ ಶುಲ್ಕಗಳನ್ನು ಪಾವತಿಸಲು ಭಾರತೀಯ ನಾಗರಿಕರು ಮಾತ್ರ ಈ ವೆಬ್ ಪೋರ್ಟಲ್ ಬಳಸಬಹುದು.
ಸುಪ್ರೀಂಕೋರ್ಟ್‌ನಲ್ಲಿ ಮಾಹಿತಿಯನ್ನು ಪಡೆಯಲು ಬಯಸುವವರು ಮಾತ್ರ ಅದನ್ನು ಪ್ರವೇಶಿಸಬಹುದು .ಸಾರ್ವಜನಿಕ ಅಧಿಕಾರಿಗಳಿಂದ ಯಾವುದೇ ಇತರ ಮಾಹಿತಿಯನ್ನು ಆಯಾ ಕೇಂದ್ರ/ರಾಜ್ಯ ಸರ್ಕಾರದ ಪೋರ್ಟಲ್ ಮೂಲಕ ಮಾಡಬಹುದು ಎಂದು ವೆಬ್‌ಸೈಟ್ ಸ್ಪಷ್ಟಪಡಿಸುತ್ತದೆ.
ಮೊದಲಿಗೆ, ಅರ್ಜಿದಾರರು ಖಾತೆ ರಚಿಸಿ ಪೋರ್ಟಲ್‌ಗೆ ಸೈನ್ ಇನ್ ಆಗಬೇಕು.ನಂತರ ಅವರು ಆರ್‌ಟಿಐ ಅರ್ಜಿಯನ್ನು ಭರ್ತಿ ಮಾಡಬಹುದು. ಖಾತೆಯನ್ನು ನೋಂದಾಯಿಸುವಾಗ, ನಿಮ್ಮ ವಿಳಾಸದ ದಾಖಲೆ ಒದಗಿಸುವುದು ಕಡ್ಡಾಯವಾಗಿದೆ.
Submit ಬಟನ್ ಕ್ಲಿಕ್ ಮಾಡಿದ ನಂತರ, ಅರ್ಜಿದಾರರು ಕಾಣಿಸಿಕೊಳ್ಳುವ ಪುಟದಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕು. ಯಾವುದೇ ಪೂರಕ ದಾಖಲೆ/ಅನುಬಂಧಗಳನ್ನು ನಿರ್ದಿಷ್ಟ ಫೈಲ್ ಗಾತ್ರದೊಳಗೆ “Supporting document” ವಿಭಾಗದಲ್ಲಿ PDF ಡಾಕ್ಯುಮೆಂಟ್‌ನಂತೆ ಲಗತ್ತಿಸಬೇಕು.
ಅರ್ಜಿದಾರರು ನಿಗದಿತ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಮಾಸ್ಟರ್/ವೀಸಾ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿಸಬಹುದು. ಪ್ರತಿ ಆರ್‌ಟಿಐ ಅರ್ಜಿ ಶುಲ್ಕ ₹10.
ಬಡತನ ರೇಖೆಗಿಂತ ಕೆಳಗಿರುವ (BPL) ಯಾವುದೇ ಅರ್ಜಿದಾರರಿಗೆ RTI ನಿಯಮಗಳು, 2012 ರ ಅಡಿಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಲು ವಿನಾಯಿತಿ ನೀಡಲಾಗುತ್ತದೆ. ಅರ್ಜಿದಾರರು ಸರ್ಕಾರದಿಂದ ನೀಡಲಾದ BPL ಪ್ರಮಾಣಪತ್ರದ ಪ್ರತಿಯನ್ನು ಲಗತ್ತಿಸಬೇಕು ಮತ್ತು ಅಪ್‌ಲೋಡ್ ಮಾಡಬೇಕು.
ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ವಿಶಿಷ್ಟವಾದ ನೋಂದಣಿ/ಡೈರಿ ಸಂಖ್ಯೆಯನ್ನು ರಚಿಸಲಾಗುತ್ತದೆ. ಭವಿಷ್ಯದ ಯಾವುದೇ ಉಲ್ಲೇಖಗಳು ಮತ್ತು ಪತ್ರವ್ಯವಹಾರಗಳಿಗಾಗಿ ಅರ್ಜಿದಾರರು ಅದನ್ನು ಬಳಸಬೇಕು ಎಂದು ವೆಬ್‌ಸೈಟ್ ಉಲ್ಲೇಖಿಸುತ್ತದೆ. ಒಂದು ವೇಳೆ ಅರ್ಜಿದಾರರು ಪಾವತಿಯನ್ನು ಮಾಡಿದ್ದರೆ ಮತ್ತು ನೋಂದಣಿ ಸಂಖ್ಯೆಯನ್ನು ಸ್ವೀಕರಿಸದಿದ್ದರೆ, ನಂತರ ಅರ್ಜಿದಾರರು ಸಂಖ್ಯೆಯನ್ನು ಜನರೇಟ್ ಮಾಡಲು 24-48 ಗಂಟೆಗಳ ಕಾಲ ಕಾಯಬೇಕು. ಅರ್ಜಿದಾರರು ಮರುಪ್ರಯತ್ನಿಸಬಾರದು ಅಥವಾ ಮತ್ತೆ ಪಾವತಿ ಮಾಡಲು ಹೆಚ್ಚುವರಿ ಪ್ರಯತ್ನ ಮಾಡಬಾರದು ಎಂದು ವೆಬ್‌ಸೈಟ್‌ನಲ್ಲಿನ ಮಾರ್ಗಸೂಚಿಗಳು ಉಲ್ಲೇಖಿಸುತ್ತವೆ.
ನೀವು ಯಾವಾಗ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು?
ಕಾನೂನಿನ ಪ್ರಕಾರ, RTI ಗಳಿಗೆ 30 ದಿನಗಳಲ್ಲಿ ಉತ್ತರಿಸಬೇಕು. ವಾಸ್ತವವಾಗಿ ಬದುಕು ಮತ್ತು ಸಾವಿನ ಪ್ರಕರಣಗಳಲ್ಲಿ RTI ಗಳಿಗೆ 48 ಗಂಟೆಗಳ ಒಳಗೆ ಪ್ರತಿಕ್ರಿಯಿಸಬೇಕು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Fri, 25 November 22