ವಿದೇಶಿ ದೇಣಿಗೆ ಸಂಗ್ರಹ: ಎನ್‌ಜಿಒಗಳ ರದ್ದಾದ ಎಫ್‌ಸಿಆರ್‌ಎ ಪರವಾನಗಿ ನವೀಕರಿಸುವ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ವಿದೇಶಿ ದೇಣಿಗೆ ಸಂಗ್ರಹ: ಎನ್‌ಜಿಒಗಳ ರದ್ದಾದ ಎಫ್‌ಸಿಆರ್‌ಎ ಪರವಾನಗಿ ನವೀಕರಿಸುವ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್​

ಎನ್‌ಜಿಒಗಳು ಉತ್ತಮ ಕೆಲಸ ಮಾಡುತ್ತಿವೆ ಮತ್ತು ಕೊವಿಡ್ ಅನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವವರೆಗೆ ವಿಸ್ತರಣೆಯನ್ನು ನೀಡಬೇಕು ಎಂದು ಮನವಿಯಲ್ಲಿ ವಾದಿಸಲಾಗಿತ್ತು. ಅರ್ಜಿಯಲ್ಲಿ ಎನ್‌ಜಿಒ ಮಿಷನರೀಸ್ ಆಫ್ ಚಾರಿಟಿಯ ಉಲ್ಲೇಖವೂ ಸೇರಿದೆ. ಆದಾಗ್ಯೂ, ಕೇಂದ್ರವು ತನ್ನ ಎಫ್‌ಸಿಆರ್‌ಎ ಪರವಾನಗಿಯನ್ನು ಜನವರಿ 6 ರಂದು ನವೀಕರಿಸಿದೆ.

TV9kannada Web Team

| Edited By: Rashmi Kallakatta

Jan 25, 2022 | 8:59 PM

ದೆಹಲಿ: 6,000 ಸರ್ಕಾರೇತರ ಸಂಸ್ಥೆಗಳು ಅಥವಾ ಎನ್‌ಜಿಒ (NGO)ಗಳಿಗೆ ವಿದೇಶದಿಂದ ನಿಧಿಯನ್ನು ಪಡೆಯಲು ಅಗತ್ಯವಿರುವ ಪರವಾನಗಿಗಳನ್ನು ನವೀಕರಿಸಲು ಸರ್ಕಾರ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ (Supreme Court) ಮಂಗಳವಾರ ನಿರಾಕರಿಸಿದೆ. ಅಮೆರಿಕ ಮೂಲದ ಎನ್‌ಜಿಒ ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ದೇಶವು ಕೊವಿಡ್ ಮೂರನೇ ಅಲೆ ವಿರುದ್ಧ ಹೋರಾಡುತ್ತಿರುವ ಕಾರಣ ಪರವಾನಗಿ ರದ್ದುಗೊಳಿಸುವಿಕೆಯು ಕೊವಿಡ್-19 ಪರಿಹಾರ ಪ್ರಯತ್ನಗಳ ಮೇಲೆ ದುರ್ಬಲ ಪರಿಣಾಮವನ್ನು ಬೀರುತ್ತದೆ ಎಂದು ಮನವಿ ಹೇಳಿದೆ. ಈ ಎನ್‌ಜಿಒಗಳು ಇದುವರೆಗೆ ಲಕ್ಷಾಂತರ ಭಾರತೀಯರಿಗೆ ಸಹಾಯ ಮಾಡಿದೆ. ಇದು ಅಗತ್ಯವಿರುವ ನಾಗರಿಕರಿಗೆ ಸಹಾಯ ನಿರಾಕರಣೆಗೆ ಕಾರಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಗಡುವಿನೊಳಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ 11,594 ಎನ್‌ಜಿಒಗಳಿಗೆ ಈಗಾಗಲೇ ವಿಸ್ತರಣೆ ನೀಡಲಾಗಿದೆ ಎಂದು ಕೇಂದ್ರದ ಸಲ್ಲಿಕೆಯನ್ನು ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರ ಪೀಠವು ಗಮನಿಸಿತು. ಎನ್‌ಜಿಒಗಳು ಅಧಿಕಾರಿಗಳಿಗೆ ಪ್ರಾತಿನಿಧ್ಯ ನೀಡಬಹುದು ಮತ್ತು ಅವರು ನಿರ್ಧಾರ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. 

ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮನವಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದರು ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ಸಾವಿರಾರು ಎನ್‌ಜಿಒಗಳು ಈಗಾಗಲೇ ವಿಸ್ತರಣೆಗಳನ್ನು ಪಡೆದಿವೆ ಎಂದು ಉಲ್ಲೇಖಿಸಿದ್ದಾರೆ. ಅರ್ಜಿದಾರರು ಯುಎಸ್ ಮೂಲದವರಾಗಿದ್ದಾರೆ ಎಂದು ಅವರು ಸೂಚಿಸಿದರು.

“ಈ ಸಾರ್ವಜನಿಕ ಪ್ರೇರಿತ ಎನ್‌ಜಿಒ ಅಮೆರಿಕದ್ದಾಗಿದ್ದು ಇದು ಹೂಸ್ಟನ್‌ನಲ್ಲಿದೆ. ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ಎನ್‌ಜಿಒಗಳ ಪರವಾನಗಿಯನ್ನು ಈಗಾಗಲೇ ವಿಸ್ತರಿಸಲಾಗಿದೆ. ಈ ಮನವಿಯೊಂದಿಗೆ ಯಾವ ಉದ್ದೇಶವನ್ನು ಹುಡುಕಲಾಗಿದೆ ಎಂದು ನನಗೆ ತಿಳಿದಿಲ್ಲ. ಆದರೆ ಏನೋ ತಪ್ಪಾಗಿದೆ” ಎಂದು ಅವರು ಹೇಳಿದರು. ನಂತರ ನಡೆಯಲಿರುವ ಮುಂದಿನ ವಿಚಾರಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮತ್ತೊಂದು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ (FCRA) ತಿದ್ದುಪಡಿ ಪ್ರಕರಣದಲ್ಲಿ ತೀರ್ಪು ಪ್ರಕಟವಾದ ನಂತರ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಎನ್‌ಜಿಒಗಳು ಉತ್ತಮ ಕೆಲಸ ಮಾಡುತ್ತಿವೆ ಮತ್ತು ಕೊವಿಡ್ ಅನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವವರೆಗೆ ವಿಸ್ತರಣೆಯನ್ನು ನೀಡಬೇಕು ಎಂದು ಮನವಿಯಲ್ಲಿ ವಾದಿಸಲಾಗಿತ್ತು. ಅರ್ಜಿಯಲ್ಲಿ ಎನ್‌ಜಿಒ ಮಿಷನರೀಸ್ ಆಫ್ ಚಾರಿಟಿಯ ಉಲ್ಲೇಖವೂ ಸೇರಿದೆ. ಆದಾಗ್ಯೂ, ಕೇಂದ್ರವು ತನ್ನ ಎಫ್‌ಸಿಆರ್‌ಎ ಪರವಾನಗಿಯನ್ನು ಜನವರಿ 6 ರಂದು ನವೀಕರಿಸಿದೆ.

ಮಿಷನರೀಸ್ ಆಫ್ ಚಾರಿಟಿಗೆ ಸಂಬಂಧಿಸಿದಂತೆ ನಮ್ಮ ಮನವಿಗಳು ಅಗತ್ಯವಿಲ್ಲ (ಪರವಾನಗಿ ನವೀಕರಿಸಿದಂತೆ). ಆದರೆ ನಿರ್ದಿಷ್ಟವಾದವುಗಳನ್ನು ಬದಿಗಿಟ್ಟು, ಅಂತಹ ಹೆಚ್ಚಿನ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಕೊವಿಡ್ ಅನ್ನು ರಾಷ್ಟ್ರೀಯ ವಿಪತ್ತು ಎಂದು ಸೂಚಿಸುವವರೆಗೆ, ಪರವಾನಗಿಯನ್ನು ನವೀಕರಿಸಬೇಕು. ಯಾವ ಸ್ವರ್ಗವೂ ಬೀಳುವುದಿಲ್ಲ,’’ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಸಂಜಯ್ ಹೆಗ್ಡೆ ಹೇಳಿದರು.

ತಿರುಪತಿ ದೇವಸ್ಥಾನ ಮತ್ತು ಇತರರು ಸೇರಿದಂತೆ 6,000 ಎನ್‌ಜಿಒಗಳ ಪರವಾನಗಿಯನ್ನು ವಿಸ್ತರಿಸಲಾಗಿಲ್ಲ ಎಂದು ಹೆಗ್ಡೆ ಹೇಳಿದ್ದಾರೆ. ಈ ಎನ್‌ಜಿಒಗಳು ವಿಸ್ತರಣೆಗೆ ಅರ್ಜಿ ಸಲ್ಲಿಸದಿದ್ದರೆ ಅವು ಮುಂದುವರಿಯಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಹೇಳಿದರು.

ಈ ಸಾವಿರಾರು ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯ ಹಠಾತ್ ಮತ್ತು ಅನಿಯಂತ್ರಿತ ರದ್ದತಿಯು ಸಂಸ್ಥೆಗಳು,ಅದರ ಕೆಲಸಗಾರರು ಮತ್ತು ಅವರು ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಭಾರತೀಯರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಎನ್‌ಜಿಒಗಳು ಮಾಡಿದ ಕೆಲಸವನ್ನು ಎತ್ತಿ ತೋರಿಸುತ್ತಾ, ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಕೂಡ ತಮ್ಮ ಪಾತ್ರವನ್ನು ಒಪ್ಪಿಕೊಂಡಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. “ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡುವಲ್ಲಿ ಎನ್‌ಜಿಒಗಳ ಪಾತ್ರವನ್ನು ಕೇಂದ್ರ ಸರ್ಕಾರ, ನೀತಿ ಆಯೋಗ ಮತ್ತು ಪ್ರಧಾನ ಮಂತ್ರಿ ಕಚೇರಿ ಒಪ್ಪಿಕೊಂಡಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Padma Awards ಪದ್ಮ ಪ್ರಶಸ್ತಿ ಘೋಷಣೆ: ಕನ್ನಡ ಕವಿ ಸಿದ್ದಲಿಂಗಯ್ಯಗೆ ಪದ್ಮಶ್ರೀ, ಸಿಡಿಎಸ್ ಬಿಪಿನ್ ರಾವತ್​​ಗೆ ಮರಣೋತ್ತರ ಪದ್ಮವಿಭೂಷಣ

Follow us on

Related Stories

Most Read Stories

Click on your DTH Provider to Add TV9 Kannada