ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯ ವಿರುದ್ಧದ ಮೇಲ್ಮನವಿ ಶುಕ್ರವಾರ ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ

ಜ್ಞಾನವಾಪಿ ವಿವಾದ ದಶಕಗಳ ಹಿಂದಿನದು. ಆಗಸ್ಟ್ 2021 ರಲ್ಲಿ, ಐವರು ಮಹಿಳೆಯರು ಹಿಂದೂ ದೇವರುಗಳ ವಿಗ್ರಹಗಳನ್ನು ಹೊಂದಿರುವ ಸಂಕೀರ್ಣದೊಳಗೆ ಇರುವ ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ಅಡೆತಡೆಯಿಲ್ಲದ ಪೂಜೆಯ ಹಕ್ಕನ್ನು ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯ ವಿರುದ್ಧದ ಮೇಲ್ಮನವಿ ಶುಕ್ರವಾರ ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ
ಜ್ಞಾನವಾಪಿ ಮಸೀದಿ
Follow us
ರಶ್ಮಿ ಕಲ್ಲಕಟ್ಟ
|

Updated on: May 18, 2023 | 2:49 PM

ಹಿಂದೂಗಳು ಶಿವಲಿಂಗ (Shivling) ಎಂದು ಹೇಳುತ್ತಿರುವ ಮಸೀದಿಯ ಸಂಕೀರ್ಣದೊಳಗಿರುವ ರಚನೆಯ  ವಯಸ್ಸನ್ನು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಕಳೆದ ವಾರ ನೀಡಿದ ಆದೇಶದ ವಿರುದ್ಧ ಜ್ಞಾನವಾಪಿ ಮಸೀದಿ (Gyanvapi Mosque)ಆಡಳಿತ ಸಮಿತಿಯ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ವಿಚಾರಣೆ ನಡೆಸಲಿದೆ. ಸಮಿತಿಯ ಪರವಾಗಿ ಹಾಜರಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಮನವಿಯನ್ನು ಪ್ರಸ್ತಾಪಿಸಿದ ನಂತರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ವಿಷಯವನ್ನು ತುರ್ತು ವಿಚಾರಣೆಗೆ ಒಪ್ಪಿಕೊಂಡರು. ಹೈಕೋರ್ಟ್ ಕಳೆದ ವಾರ ಆದೇಶವನ್ನು ನೀಡಿದೆ, ಅಂತಿಮ ತೀರ್ಪು ಬಾಕಿ ಇದೆ. ಕಾರ್ಬನ್ ಡೇಟಿಂಗ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ ಮತ್ತು ಅದಕ್ಕೆ ಅವಕಾಶ ನೀಡಲಾಗಿದೆ ಎಂದು ಅಹ್ಮದಿ ಹೇಳಿದರು.

ಮೇ 22 ರಂದು ಅದನ್ನು ವಿಚಾರಣೆ ಮಾಡಬಹುದು ಎಂದು ಸಿಜೆಐ ಪ್ರತಿಕ್ರಿಯಿಸಿದಾಗ, ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ವೈಜ್ಞಾನಿಕ ಅಧ್ಯಯನವು ಅಂದು ಪ್ರಾರಂಭವಾಗಲಿದೆ ಎಂದು ಅಹ್ಮದಿ ಸೂಚಿಸಿದರು. ನಂತರ ಶುಕ್ರವಾರ ವಿಚಾರಣೆಗೆ ಸಿಜೆಐ ಒಪ್ಪಿಕೊಂಡರು.

ಮೇ 12 ರಂದು, ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಪತ್ತೆಯಾದ ರಚನೆಯ ಕಾರ್ಬನ್ ಡೇಟಿಂಗ್ ಬೇಡಿಕೆಯನ್ನು ತಿರಸ್ಕರಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ಪತ್ತೆಯಾದ ರಚನೆಯ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಲು ಹಿಂದೂ ಆರಾಧಕರು ಸಲ್ಲಿಸಿದ ಅರ್ಜಿಯ ಕುರಿತು ಕಾನೂನಿನ ಪ್ರಕಾರ ಮುಂದುವರಿಯುವಂತೆ ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿದೆ.

ಅಕ್ಟೋಬರ್ 2022 ರಲ್ಲಿ ಕಾರ್ಬನ್ ಡೇಟಿಂಗ್ ಬೇಡಿಕೆಯನ್ನು ತಿರಸ್ಕರಿಸಿದ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಲಕ್ಷ್ಮಿ ದೇವಿ ಮತ್ತು ಇತರ ಮೂವರು ಸಲ್ಲಿಸಿದ ಪರಿಷ್ಕರಣೆ ಅರ್ಜಿಯನ್ನು ಅದು ಅಂಗೀಕರಿಸಿತು.ಕಾರ್ಬನ್ ಡೇಟಿಂಗ್ ಎನ್ನುವುದು ಹಳೆಯ ವಸ್ತುಗಳ ವಯಸ್ಸನ್ನು ಲೆಕ್ಕಹಾಕುವ ವಿಧಾನವಾಗಿದ್ದು, ಅವುಗಳಲ್ಲಿರುವ ಇಂಗಾಲದ ವಿವಿಧ ರೂಪಗಳ ಪ್ರಮಾಣವನ್ನು ಅಳೆಯಲಾಗುತ್ತದೆ.

ಜ್ಞಾನವಾಪಿ ವಿವಾದ ದಶಕಗಳ ಹಿಂದಿನದು. ಆಗಸ್ಟ್ 2021 ರಲ್ಲಿ, ಐವರು ಮಹಿಳೆಯರು ಹಿಂದೂ ದೇವರುಗಳ ವಿಗ್ರಹಗಳನ್ನು ಹೊಂದಿರುವ ಸಂಕೀರ್ಣದೊಳಗೆ ಇರುವ ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ಅಡೆತಡೆಯಿಲ್ಲದ ಪೂಜೆಯ ಹಕ್ಕನ್ನು ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಏಪ್ರಿಲ್ 2022 ರಲ್ಲಿ, ಸ್ಥಳೀಯ ನ್ಯಾಯಾಲಯವು ಸಂಕೀರ್ಣದ ವಿವಾದಾತ್ಮಕ ಸಮೀಕ್ಷೆಗೆ ಆದೇಶ ನೀಡಿತು, ಇದನ್ನು ವಿರೋಧಿಸಿ ಪ್ರತಿಭಟನೆಗಳೂ ನಡೆದವು. ಸಮೀಕ್ಷೆಯು ಅಂತಿಮವಾಗಿ ಮೇ ತಿಂಗಳಲ್ಲಿ ಪೂರ್ಣಗೊಂಡಿತು. ಆದರೆ ಪ್ರಕ್ರಿಯೆಯ ಅಂತಿಮ ಗಂಟೆಗಳಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹಿಂದೂ ಕಡೆಯವರು ಹೇಳಿಕೊಂಡರು. ಆದರೆ ಅದು ಕಾರಂಜಿ ಎಂದು ಮುಸ್ಲಿಂ ಕಡೆವರು ವಾದಿಸಿದ್ದರು. ಪ್ರಕರಣವು ಸುಪ್ರೀಂ ಕೋರ್ಟ್‌ಗೆ ತಲುಪಿತು, ಅದು ಮೇ 20, 2022 ರಂದು ವಾರಣಾಸಿ ಸಿವಿಲ್ ನ್ಯಾಯಾಧೀಶರಿಂದ ಜಿಲ್ಲಾ ನ್ಯಾಯಾಧೀಶರಿಗೆ ಮೊಕದ್ದಮೆಯನ್ನು ವರ್ಗಾಯಿಸಿ ಪ್ರಸ್ತುತ ಪ್ರದೇಶಕ್ಕೆ ರಕ್ಷಣೆ ನೀಡಲಾಯಿತು. ಸೆಪ್ಟೆಂಬರ್‌ನಲ್ಲಿ, ಜಿಲ್ಲಾ ನ್ಯಾಯಾಲಯವು ಹಿಂದೂ ಮಹಿಳೆಯರ ಮನವಿಗಳನ್ನು ನಿರ್ವಹಿಸಬಹುದೆಂದು ತೀರ್ಪು ನೀಡಿತು.

ಇದನ್ನೂ ಓದಿ: International Museum Expo 2023: ಅಂತಾರಾಷ್ಟ್ರೀಯ ಮ್ಯೂಸಿಯಂ ಎಕ್ಸ್​ಪೋ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಐವರು ಮಹಿಳೆಯರಲ್ಲಿ ನಾಲ್ವರು ಕಾರ್ಬನ್ ಡೇಟಿಂಗ್ ಅಥವಾ ರಚನೆ, ಸಂಕೀರ್ಣ ಗೋಡೆಗಳು ಮತ್ತು ಮಾ ಶೃಂಗಾರ್ ಗೌರಿ ಸ್ಥಳದ ವೈಜ್ಞಾನಿಕ ತನಿಖೆಯನ್ನು ಕೋರಿ ಮನವಿ ಸಲ್ಲಿಸಿದರು. ಈ ಮನವಿಯನ್ನು ಮಸೀದಿ ಸಮಿತಿ ಮಾತ್ರವಲ್ಲದೆ ಹಿಂದೂ ಅರ್ಜಿದಾರರಲ್ಲಿ ಒಬ್ಬರಾದ ರಾಖಿ ಸಿಂಗ್ ವಿರೋಧಿಸಿದರು, ಅವರು ಮನವಿಯನ್ನು ಪ್ರಚಾರ ಎಂದು ಕರೆದರು ಮತ್ತು ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ ಅಪವಿತ್ರ ಕ್ರಿಯೆಯಾಗಿದೆ ಎಂದು ಹೇಳಿದರು.

ಅಕ್ಟೋಬರ್ 14 ರಂದು, ಆವರಣವನ್ನು ಸೀಲ್ ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ ಜಿಲ್ಲಾ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್