AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swati Mohan ವ್ಯಕ್ತಿ ವ್ಯಕ್ತಿತ್ವ | ಮಂಗಳನ ಅಂಗಳದಲ್ಲಿ ಜೀವ ಕುರುಹು ಹುಡುಕುವ ನಾಸಾ ತಂಡದಲ್ಲಿ ಭಾರತ ಸಂಜಾತೆ ಡಾ. ಸ್ವಾತಿ ಮೋಹನ್

ತಮ್ಮ 16ನೇ ವಯಸ್ಸಿನವರೆಗೆ ಶಿಶುವೈದ್ಯೆ ಆಗಬೇಕು ಅಂದುಕೊಂಡಿದ್ದ ಸ್ವಾತಿ ಮೋಹನ್, ಬಳಿಕ ಇಂಜಿನಿಯರ್ ಆಗಿ ಬಾಹ್ಯಾಕಾಶ ವಿಷಯದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ತೋರಿದರು.

Swati Mohan ವ್ಯಕ್ತಿ ವ್ಯಕ್ತಿತ್ವ | ಮಂಗಳನ ಅಂಗಳದಲ್ಲಿ ಜೀವ ಕುರುಹು ಹುಡುಕುವ ನಾಸಾ ತಂಡದಲ್ಲಿ ಭಾರತ ಸಂಜಾತೆ ಡಾ. ಸ್ವಾತಿ ಮೋಹನ್
ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಡಾ. ಸ್ವಾತಿ ಮೋಹನ್.
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Feb 19, 2021 | 3:20 PM

Share

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ (National Aeronautics and Space Administration – NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ವಾಹನ ‘ಪರ್ಸೆವೆರೆನ್ಸ್ ರೋವರ್’ (Perseverance Rover) ಮಂಗಳ ಗ್ರಹವನ್ನು ಸ್ಪರ್ಶಿಸಿದಾಗ ಆ ವಿವರವನ್ನು ಮೊದಲು ಖಚಿತಪಡಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್. ಏಳು ತಿಂಗಳ ಬಾಹ್ಯಾಕಾಶ ಯಾನದ ಬಳಿಕ, ಗುರುವಾರ ಮಂಗಳನಲ್ಲಿಗೆ ನೌಕೆ ಕಾಲಿರಿಸಿದಾಗ ‘ರೋವರ್ ಮಂಗಳ ಗ್ರಹಕ್ಕೆ ತಲುಪಿದೆ. ಪ್ರಾಚೀನ ಜೀವಗಳ ಕುರುಹನ್ನು ಹುಡುಕಲು ತಯಾರಾಗಿದೆ’ ಎಂದು ವಿವರಣೆ ನೀಡಿದ್ದರು ಅವರು.

ಅತಿ ಕಠಿಣ ಎನಿಸಿಕೊಂಡಿರುವ ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಇವರು. ರೋವರ್​ನ ಆ್ಯಟಿಟ್ಯೂಡ್ ಕಂಟ್ರೋಲ್ ಹಾಗೂ ಲ್ಯಾಂಡಿಂಗ್ ಸಿಸ್ಟಮ್​ನ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿ, ನೌಕೆ ಮಂಗಳ ಗ್ರಹ ಸ್ಪರ್ಶಿಸುತ್ತಿದ್ದಂತೆ ಅದರ ವಿವರಣೆಯನ್ನು ನೀಡಿದರು.

ಕಾರ್ನೆಲ್ ಯುನಿವರ್ಸಿಟಿಯಲ್ಲಿ ಪದವಿ ಪಡೆದ ಡಾ. ಸ್ವಾತಿ, ಪರ್ಸೆವೆರೆನ್ಸ್ ಮಾರ್ಸ್ ಮಿಷನ್​ನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ನಾಸಾದ ಇತರ ಯೋಜನೆಗಳಲ್ಲಿಯೂ ಸ್ವಾತಿ ಪಾಲ್ಗೊಂಡಿದ್ದರು. ಶನಿ ಗ್ರಹಕ್ಕೆ ಬಾಹ್ಯಾಕಾಶ ಯಾನ ಕೈಗೊಂಡ ನಾಸಾದ ಕ್ಯಾಸ್ಸಿನಿ ಮಿಷನ್ ತಂಡದಲ್ಲೂ ಅವರು ಕಾರ್ಯನಿರ್ವಹಿಸಿದ್ದರು.

ಡಾ. ಸ್ವಾತಿ ಮೋಹನ್ ಬಾಲ್ಯದಲ್ಲೇ ಭಾರತದಿಂದ ಆಮೆರಿಕಾಕ್ಕೆ ತೆರಳಿದ್ದರು. ಅಮೆರಿಕಾದ ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿಯಲ್ಲಿ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದರು. ತಮ್ಮ 9ನೇ ವಯಸ್ಸಿನಲ್ಲಿ ನೋಡಿದ ಅಮೆರಿಕಾದ ಸೈನ್ಸ್ ಫಿಕ್ಷನ್ ಸರಣಿ ‘ಸ್ಟಾರ್ ಟ್ರೆಕ್’ ಮೂಲಕ ವಿಜ್ಞಾನ, ಬಾಹ್ಯಾಕಾಶದ ಬಗ್ಗೆ ಆಸಕ್ತಿ ಮೂಡಿಸಿಕೊಂಡರು. ತಮ್ಮ 16ನೇ ವಯಸ್ಸಿನವರೆಗೆ ಶಿಶುವೈದ್ಯೆ ಆಗಬೇಕು ಅಂದುಕೊಂಡಿದ್ದ ಸ್ವಾತಿ ಮೋಹನ್, ಬಳಿಕ ಇಂಜಿನಿಯರ್ ಆಗಿ ಬಾಹ್ಯಾಕಾಶ ವಿಷಯದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ತೋರಿದರು.

ಪ್ರಸ್ತುತ ನಾಸಾದ ವಿಜ್ಞಾನಿಯಾಗಿರುವ ಸ್ವಾತಿ, ಮೆಕಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕಾದ ಎಂಐಟಿ (Massachusetts Institute of Technology – MIT) ಸಂಸ್ಥೆಯಿಂದ ಏರೋನಾಟಿಕ್ಸ್/ಆಸ್ಟ್ರೋನಾಟಿಕ್ಸ್ ವಿಷಯದಲ್ಲಿ MS ಹಾಗೂ PhD ಪದವಿ ಪಡೆದಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಜೆಡ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.35ಕ್ಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿದೆ. ಈ ನೌಕೆಯು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.

ಇದನ್ನೂ ಓದಿ: Perseverance Rover: ಮಂಗಳದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ! ಮಂಗಳ ಗ್ರಹಕ್ಕೆ ಕಾಲಿರಿಸಿದ NASA ಬಾಹ್ಯಾಕಾಶ ನೌಕೆ

Photo Gallery | Perseverance Rover: ಮಂಗಳನ ಅಂಗಳದಲ್ಲಿ ಹೆಜ್ಜೆಯೂರಿದ ನಾಸಾ ನೌಕೆ; ತಜ್ಞರ ತಂಡದಲ್ಲಿ ಭಾರತೀಯ ಮೂಲದ ಮಹಿಳೆ!

Published On - 3:17 pm, Fri, 19 February 21

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?