AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಆರ್ಥಿಕತೆ, ಭವಿಷ್ಯ ಬದಲಾಯಿಸಿದ ಮನಮೋಹನ್ ಸಿಂಗ್ ಸರ್ಕಾರದ ಐದು ನಿರ್ಧಾರಗಳಿವು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 92 ನೇ ವಯಸ್ಸಿನಲ್ಲಿ ಗುರುವಾರ ನಿಧನರಾದರು. 2004ರಿಂದ 2014ರವರೆಗೆ 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದರು. ಅವರ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ, ದೇಶದ ಆರ್ಥಿಕತೆ ಮತ್ತು ಭವಿಷ್ಯವನ್ನು ಬದಲಾಯಿಸಿದ 5 ಪ್ರಮುಖ ನಿರ್ಧಾರಗಳ ಇಣುಕುನೋಟ ಇಲ್ಲಿದೆ.

ದೇಶದ ಆರ್ಥಿಕತೆ, ಭವಿಷ್ಯ ಬದಲಾಯಿಸಿದ ಮನಮೋಹನ್ ಸಿಂಗ್ ಸರ್ಕಾರದ ಐದು ನಿರ್ಧಾರಗಳಿವು
ಮನಮೋಹನ್ ಸಿಂಗ್
Follow us
Ganapathi Sharma
|

Updated on:Dec 27, 2024 | 7:53 AM

ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ದೇಶದ ಹಣಕಾಸು ಸಚಿವರಾಗಿ ಮತ್ತು ನಂತರ 10 ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಅವರ ಸಾರ್ವಜನಿಕ ಜೀವನ ಮಹತ್ವದ್ದಾಗಿದೆ. 2004 ಮತ್ತು 2014 ರ ನಡುವೆ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 5 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಅವುಗಳು ದೇಶದ ಜನರ ಭವಿಷ್ಯವನ್ನು ಬದಲಾಯಿಸಿದವಲ್ಲದೆ, ದೇಶದ ಆರ್ಥಿಕತೆಯ ಬೆಳವಣಿಗೆಗೂ ನೆರವಾದವು. ಆ ನಿರ್ಧಾರಗಳು ಯಾವುವು? ಇಲ್ಲಿದೆ ಮಾಹಿತಿ.

ಉದ್ಯೋಗ ಖಾತರಿ ಯೋಜನೆ

ಮನಮೋಹನ್ ಸಿಂಗ್ ಸರ್ಕಾರದ ಅತಿದೊಡ್ಡ ಆರ್ಥಿಕ ಸುಧಾರಣೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (MNREGA). ಈ ಒಂದು ಕಾನೂನು ದೇಶದಲ್ಲಿ ವಲಸೆ ಸಮಸ್ಯೆಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಷ್ಟೇ ಅಲ್ಲ, ಈ ಕಾಯ್ದೆಯಡಿ ಗ್ರಾಮೀಣ ಪ್ರದೇಶದವರಿಗೆ, ಬಡವರಿಗೆ 100 ದಿನಗಳ ಉದ್ಯೋಗ ಖಾತರಿಪಡಿಸಲಾಯಿತು. ಈ ಕಾಯ್ದೆ 2008 ರ ಆರ್ಥಿಕ ಹಿಂಜರಿತದ ಸಮಯದಲ್ಲಿ ದೇಶದ ಗ್ರಾಮೀಣ ಆರ್ಥಿಕತೆಯನ್ನು ಉಳಿಸಲು ಸಹಾಯ ಮಾಡಿತು.

ಸಂಚಲನ ಸೃಷ್ಟಿಸಿದ ಮಾಹಿತಿ ಹಕ್ಕು ಕಾಯ್ದೆ

ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿತ್ತು. ಆರ್ಥಿಕತೆಯಲ್ಲಿ ಪಾರದರ್ಶಕತೆ ತರುವಲ್ಲಿ ಈ ಕಾನೂನು ಉತ್ತಮ ಕೆಲಸ ಮಾಡಿದೆ. ಇದು ಸರ್ಕಾರದ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸಿತು. ಇದು ಒಟ್ಟಾರೆ ಆರ್ಥಿಕತೆಗೆ ಉತ್ತಮ ಹೆಜ್ಜೆ ಎಂಬುದು ನಂತರದ ದಿನಗಳಲ್ಲಿ ಸಾಬೀತಾಯಿತು.

ಆಹಾರದ ಹಕ್ಕು

ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮಾಡಿದ ಮತ್ತೊಂದು ಬಹು ದೊಡ್ಡ ಕೆಲಸವೆಂದರೆ ‘ಆಹಾರದ ಹಕ್ಕು’. ಇದರ ಅಡಿಯಲ್ಲಿ, ದೇಶದ ಬಡ ಜನರಿಗೆ ಸಬ್ಸಿಡಿ ದರದಲ್ಲಿ ಆಹಾರವನ್ನು ಒದಗಿಸುವ ನಿಯಮ ರೂಪಿಸಲಾಯಿತು. ದೇಶದ ಹೆಚ್ಚಿನ ಜನಸಂಖ್ಯೆಯು ಹಸಿವಿನ ಬಗ್ಗೆ ಚಿಂತಿಸದೆ ದೇಶದ ಆರ್ಥಿಕತೆಗೆ ಕೊಡುಗೆ ನೀಡಬಹುದು ಎಂಬುದು ಈ ನಿರ್ಧಾರದ ಹಿಂದಿನ ಮನಮೋಹನ್ ಯೋಚನೆಯಾಗಿತ್ತು. ಇಂದು ದೇಶದಲ್ಲಿ ಚಾಲನೆಯಲ್ಲಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಈ ಕ್ರಮದಿಂದಲೇ ರೂಪುಗೊಂಡಿದೆ. ಈ ಕಾನೂನು ಕೋವಿಡ್ ಸಮಯದಲ್ಲಿ ದೇಶದ ಬಡ ಜನರಿಗೆ ಸಾಕಷ್ಟು ಸಹಾಯ ಮಾಡಿದೆ ಎಂಬುದು ಗಮನಾರ್ಹ.

ಚಂದ್ರನಿಂದ ಮಂಗಳನತ್ತ ಹೆಜ್ಜೆ

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಬಾಹ್ಯಾಕಾಶ ಆರ್ಥಿಕತೆಗೆ ಶಕ್ತಿ ತುಂಬಲಾಯಿತು. ಅದೇ ಅವಧಿಯಲ್ಲಿ, ದೇಶದ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಳುಹಿಸಿತು. ಈ ಒಂದು ಹೆಜ್ಜೆ ಭಾರತಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ಶಕ್ತಿಯನ್ನು ನೀಡಿತು. ಭಾರತದ ಮಾನವಸಹಿತ ಬಾಹ್ಯಾಕಾಶ ಯಾತ್ರೆಯ ರೂಪುರೇಷೆಯನ್ನು ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಯಿತು.

ಇದನ್ನೂ ಓದಿ: ಬೀದಿ ದೀಪದ ಓದಿನಿಂದ ಆರ್ಥಿಕ ತಜ್ಞನಾಗುವ ವರೆಗೆ: ಮನಮೋಹನ್ ಸಿಂಗ್ ಬಗ್ಗೆ ಕಡಿಮೆ ತಿಳಿದಿರುವ ವಿಚಾರಗಳಿವು

ಕೌಶಲಾಭಿವೃದ್ಧಿ

ದೇಶದ ಆರ್ಥಿಕತೆ, ಯುವಕರು ಮತ್ತು ಭವಿಷ್ಯದ ಅಗತ್ಯಗಳನ್ನು ಅರ್ಥಮಾಡಿಕೊಂಡ ಮನಮೋಹನ್ ಸಿಂಗ್ ಸರ್ಕಾರವು ಕೌಶಲಾಭಿವೃದ್ಧಿ ನಿಟ್ಟಿನಲ್ಲಿಯೂ ಕೆಲಸ ಮಾಡಿದೆ. ಅವರ ಅಧಿಕಾರಾವಧಿಯಲ್ಲಿಯೇ ಕೌಶಲಾಭಿವೃದ್ಧಿ ಮಿಷನ್‌ನ ಅಡಿಪಾಯವನ್ನು ಹಾಕಲಾಯಿತು. ಅದು ಇಂದು ಕೌಶಲಾಭಿವೃದ್ಧಿ ಸಚಿವಾಲಯದ ರೂಪವನ್ನು ಪಡೆದುಕೊಂಡಿದೆ. ಅವರ ಸರ್ಕಾರದ ಈ ಹೆಜ್ಜೆ ಆರ್ಥಿಕತೆಯ ಬೆಳವಣಿಗೆಯ ದೃಷ್ಟಿಕೋನದಿಂದ ಬಹಳ ಮುಖ್ಯವಾಗಿತ್ತು, ಏಕೆಂದರೆ ಇದು ದೇಶದ ಬೆಳೆವಣಿಗೆ ಹೊಂದುತ್ತಿರುವ ಆರ್ಥಿಕತೆಗೆ ನುರಿತ ಕಾರ್ಯಪಡೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 am, Fri, 27 December 24

ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್