ಜೋಶಿಮಠ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಿಂದ 20ಕ್ಕೂ ಹೆಚ್ಚು ಸೇನಾ ತುಕಡಿಗಳನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ಮನೋಜ್ ಪಾಂಡೆ, ಸೇನಾ ಮುಖ್ಯಸ್ಥ
ಇದು ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಎಂದು ಕರೆಸಿಕೊಳ್ಳುವ 3,488 ಕಿಮೀ ಉದ್ದ ಚೀನಾದೊಂದಿಗಿನ ಗಡಿ ಪ್ರದೇಶ ಹೆಚ್ಚಿನ ಭಾಗವನ್ನು ಸಂರಕ್ಷಿಸುವ ಪ್ರಮುಖ ಮತ್ತು ಪ್ರಬಲ ಭಾಗವಾಗಿದೆ. ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿಗಳು ಸೇರಿದಂತೆ ಭಾರತೀಯ ಸೇನೆಯ 20,000 ಕ್ಕೂ ಹೆಚ್ಚು ಟ್ರೂಪ್ ಗಳು ಮತ್ತು ಮಿಲಿಟರಿ ಹಾರ್ಡ್ ವೇರ್ ನೆಲೆಗೊಂಡಿವೆ.
ಹಿಮಾಲಯ ಪರ್ವತ ಶ್ರೇಣಿಯಿಂದ (Himalaya mountain range) ಅವೃತಗೊಂಡಿರುವ ಮತ್ತು ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವುದರ ಜೊತೆಗೆ ಚೀನಾದೊಂದಿಗಿನ ಗಡಿ ನಿಯಂತ್ರಣ ರೇಖೆಗೆ ಹತ್ತಿರವಾಗಿರುವ ಜೋಶಿಮಠ ಪಟ್ಟಣ ಮತ್ತು ಅದರ ಸುತ್ತಮುತ್ತ ಕುಸಿಯತ್ತಿರುವ ಪ್ರದೇಶಗಳ ಬಳಿಯಿದ್ದ ಸೇನೆಯನ್ನು ಭಾರತ ವಾಪಸ್ಸು ಕರೆಸಿಕೊಂಡಿದೆ ಎಂದು ಸೇನಾ ಮುಖ್ಯಸ್ಥ (Army Chief) ಮನೋಜ್ ಪಾಂಡೆ (Manoj Pande) ಹೇಳಿದ್ದಾರೆ. ಆ ಸ್ಥಳದಿಂದ ಎಷ್ಟು ಸಂಖ್ಯೆಯ ಜವಾನರನ್ನು ವಾಪಸ್ಸು ಕರೆಸಲಾಗಿದೆ ಎನ್ನುವ ಬಗ್ಗೆ ಜನರಲ್ ಪಾಂಡೆ ವಿವರಗಳನ್ನು ನೀಡಿಲ್ಲವಾದರೂ ಅಲ್ಪ ಪ್ರಮಾಣದಲ್ಲಿ ಹಾನಿಗೆ ತುತ್ತಾಗಿರುವ ಉತ್ತರಾಖಂಡದ ಜೋಶಿಮಠದಿಂದ 20 ಕ್ಕೂ ಹೆಚ್ಚು ಸೇನಾ ತುಕಡಿಗಳನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ ಎಂದಿದ್ದಾರೆ. ಅಗತ್ಯಬಿದ್ದರೆ ಮತ್ತಷ್ಟು ಸೇನಾ ತುಕಡಿಗಳನ್ನು ವಾಪಸ್ಸು ಕರೆಸಿಕೊಳ್ಳಲು ನಾವು ಸನ್ನದ್ಧ ಸ್ಥಿತಿಯಲ್ಲಿದ್ದೇವೆ ಆದರೆ ಕಾರ್ಯಾಚರಣೆಯ ಸಿದ್ಧತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ನಮ್ಮ ತಯಾರಿಗಳು ಯಾವುದೇ ರೀತಿಯ ಪ್ರಭಾವಕ್ಕೊಳಗಾಗಿಲ್ಲ,’ ಎಂದು ಸೇನಾ ಕಾರ್ಯಾಚರಣೆಯ ಸ್ಥಿತಿಯ ಬಗ್ಗೆ ವಾರ್ಷಿಕ ಭಾಷಣದಲ್ಲಿ ಜನರಲ್ ಪಾಂಡೆ ಹೇಳಿದ್ದಾರೆ.
ಪರ್ವತಾರೋಹಣದ ಯಾತ್ರೆ ಮತ್ತು ಬದರಿನಾಥನಂಥ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ಮುಖ್ಯ ಮತ್ತು ಪ್ರವೇಶ ದ್ವಾರದಂತಿರುವ ಜೋಶಮಠದ ಸುತ್ತಮುತ್ತ ಕ್ಷಿಪ್ರ ಗತಿಯಲ್ಲಿ ಸೌಕರ್ಯಗಳ ಅಭಿವೃದ್ಧಿಯಾಗಿರುವುದರಿಂದ ಮತ್ತು ಅಲ್ಲಿಗೆ ತೆರಳುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುರಿಂದ ಅಲ್ಲಿನ ಪರಿಸರ ಹಾಳಾಗಿದೆ ಮತ್ತು ಆ ಕಾರಣದಿಂದಲೇ ಅಲ್ಲಿ ಭೂಕುಸಿತ ಮತ್ತು ದಿಢೀರ್ ಪ್ರವಾಹಂಥ ಸ್ಥಿತಿಗಳು ಉಂಟಾಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂಓದಿ: ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್
ಇದು ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಎಂದು ಕರೆಸಿಕೊಳ್ಳುವ 3,488 ಕಿಮೀ ಉದ್ದ ಚೀನಾದೊಂದಿಗಿನ ಗಡಿ ಪ್ರದೇಶ ಹೆಚ್ಚಿನ ಭಾಗವನ್ನು ಸಂರಕ್ಷಿಸುವ ಪ್ರಮುಖ ಮತ್ತು ಪ್ರಬಲ ಭಾಗವಾಗಿದೆ. ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿಗಳು ಸೇರಿದಂತೆ ಭಾರತೀಯ ಸೇನೆಯ 20,000 ಕ್ಕೂ ಹೆಚ್ಚು ಟ್ರೂಪ್ ಗಳು ಮತ್ತು ಮಿಲಿಟರಿ ಹಾರ್ಡ್ ವೇರ್ ನೆಲೆಗೊಂಡಿವೆ.
ಜೋಶಿಮಠ ಪಟ್ಟಣದ 600ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದ ನಂತರ ಸ್ಥಳೀಯ ಧಾರ್ಮಿಕ ಮುಖಂಡರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯವು ಜನೆವರಿ 16 ರಂದು ಕೈಗೆತ್ತಿಕೊಳ್ಳಲಿದೆ. ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ ನಿಂದಾಗಿಯೇ ಭೂಕುಸಿತ ಉಂಟಾಗುತ್ತಿರುವುದರಿಂದ ಅದನ್ನು ಕೂಡಲೇ ಸ್ಥಗಿತಗೊಳಿಸುವ ಅದೇಶ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ. ಈಗ ತಲೆದೋರಿರುವ ಸಂಕಷ್ಟವು ಈ ಪ್ರದೇಶದಲ್ಲಿ ದಶಕಗಳಿಂದ ಜಾರಿಯಲ್ಲಿರುವ ಅಭಿವೃದ್ಧಿ ಮುಖ್ಯವಾ ಅಥವಾ ಪರಿಸರ ಸಂರಕ್ಷಣೆ ಮುಖ್ಯವಾ ಎಂಬ ಚರ್ಚೆಗೆ ಇಂಬು ನೀಡಿದಂತಾಗಿದೆ.
ಇದನ್ನೂಓದಿ: ಹಿಂದೂ ಧರ್ಮಗ್ರಂಥಗಳು ಅಶ್ಲೀಲತೆಯಿಂದ ಕೂಡಿದೆ; ಬಾಂಗ್ಲಾದೇಶದ ವಿಪಕ್ಷದ ನಾಯಕ ವಾಗ್ದಾಳಿ
ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯ ಜಾರಿಯಲ್ಲಿರುವಂತೆಯೇ, ಕೇಂದ್ರ ಸರ್ಕಾರ ಸ್ವಾಮ್ಯದ ಎನ್ ಟಿಪಿಸಿ ಲಿಮಿಟೆಡ್ ಸಂಸ್ಥೆಯು ತನ್ನ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ ಗಾಗಿ ನಿರ್ಮಿಸುತ್ತಿರುವ ಸುರಂಗಮಾರ್ಗದ ಕಾಮಗಾರಿಯನ್ನು ಕೂಡಲೇ ನಿಲ್ಲಿಸಲು ಕಾನೂನಾತ್ಮಕ ಮಧ್ಯಸ್ಥಿಕೆಯ ಅವಶ್ಯಕತೆಯಿದೆ ಎಂದು ಸುಪ್ರೀಮ್ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ. ಹೈಡ್ರಾಲಾಜಿಸ್ಟ್ ಗಳು, ಭೂಗರ್ಭ ತಜ್ಞರು ಮತ್ತು ಇಂಜಿನಿಯರ್ ಮೊದಲಾದವರನ್ನೊಳಗೊಂಡ ಒಂದು ಸಮಿತಿಯು ಸ್ಥಳದ ಪರಶೀಲನೆ ನಡೆಸಿ ಸುರಂಗ ಮಾರ್ಗ ಕೊರೆಯುವುದರಿಂದ ಯಾವುದೇ ಹಾನಿಯಿಲ್ಲ ಅಂತ ವರದಿ ನೀಡಿದ್ದೇಯಾದಲ್ಲಿ ಪ್ರಾಜೆಕ್ಟ್ ಗೆ ಅನುಮೋದನೆ ನೀಡಬಹುದು ಎಂದು ದಾವೆಯಲ್ಲಿ ಕೋರಲಾಗಿದೆ.
ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ