ಬ್ರಹ್ಮಶ್ರೀ ನಾರಾಯಣಗುರು ಜಯಂತಿಗೆ ಶುಭಕೋರಿದ ಕೇಂದ್ರ ಗೃಹಸಚಿವ ಅಮಿತ್ ಶಾ
ಗಣರಾಜ್ಯೋತ್ಸವದ ಸಮಯದಲ್ಲಿ ಸ್ಥಬ್ಧ ಚಿತ್ರಕ್ಕೆ ಅವಕಾಶ ನೀಡಿಲ್ಲವೆಂದು ವಿವಾದ ಉಂಟಾಗಿತ್ತು. ಅಲ್ಲದೆ, ಶಾಲಾ ಪುಸ್ತಕದಿಂದ ನಾರಾಯಣ ಗುರು ಅವರ ಪಠ್ಯ ಕೈ ಬಿಟ್ಟಿರುವ ಬಗ್ಗೆಯೂ ವಿವಾದಕ್ಕೆ ಕಾರಣವಾಗಿತ್ತು. ಈ ಎಲ್ಲದರ ನಡುವೆ ಕೇಂದ್ರ ಗೃಹಸಚಿವ ಅಮಿತ್ ಅವರು ಇಂದು ನಾರಾಯಣ ಗುರು ಅವರ ಜಯಂತಿಗೆ ಶುಭಕೋರಿ ಮಳಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ, ಆಗಸ್ಟ್ 31: ಇಂದು ಬ್ರಹ್ಮಶ್ರೀ ನಾರಾಯಣ ಗುರು (Bhramhashri Narayana Guru) ಜಯಂತಿ ಆಚರಣೆಯನ್ನು ಕೇರಳ, ಕರ್ನಾಟಕದ ತುಳುನಾಡಿನಲ್ಲಿ ಆಚರಿಸಲಾಗುತ್ತದೆ. ಅದರಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮಳಯಾಳಂ ಭಾಷಣೆಯಲ್ಲಿ ಟ್ವೀಟ್ ಮಾಡಿ ನಾರಾಯಣ ಗುರು ಜಯಂತಿಗೆ ಶುಭಕೋರಿದ್ದಾರೆ.
“ಋಷಿವರ್ಯರೂ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣಗುರು ಅವರ ಜನ್ಮದಿನದಂದು ನಾನು ನಮಸ್ಕರಿಸುತ್ತೇನೆ. ಶ್ರೀ ನಾರಾಯಣಗುರುಗಳು ಸುಜ್ಞಾನದ ಶಿಖರವಾಗಿದ್ದರು, ಅವರ ಚಿಂತನೆಗಳು ಸಾಮಾಜಿಕ ಗಡಿಗಳನ್ನು ಮೀರಿ ವಿವಿಧ ಸಮುದಾಯಗಳ ನಡುವೆ ಸಹಬಾಳ್ವೆಯ ಮಾದರಿಗಳನ್ನು ಸೃಷ್ಟಿಸಿದವು. ಆಧ್ಯಾತ್ಮಿಕ ಶ್ರೇಷ್ಠತೆಯಿಂದ ಸಶಕ್ತ ಸಮಾಜವನ್ನು ಹೇಗೆ ರೂಪಿಸಬೇಕೆಂದು ಅವರ ಜೀವನವು ನಮಗೆ ತೋರಿಸುತ್ತದೆ” ಎಂದು ಅಮಿತ್ ಶಾ ಅವರು ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಟ್ವೀಟ್
I bow to the revered sage Sree Narayana Guru Ji on his birth anniversary.
Narayana Guru Ji was an abode of wisdom that transcended social barriers, building bridges of humanity among communities. His ideals show the path that leads to a society empowered by enlightenment.… pic.twitter.com/1SQPcWOFHw
— Amit Shah (@AmitShah) August 31, 2023
ಈ ಹಿಂದೆ ನಾರಾಯಣ ಗುರು ವಿಚಾರದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಪಠ್ಯದಿಂದ ಇವರನ್ನು ಕೈಬಿಡಲಾಗಿತ್ತು. ಹಾಗೇ ಇವರ ಗಣರಾಜ್ಯೋತ್ಸವದ ಸ್ಥಬ್ಧ ಚಿತ್ರಕ್ಕೆ ಅವಕಾಶ ನೀಡಿರಲಿಲ್ಲವೆಂದು ವಿವಾದವೂ ಹುಟ್ಟುಕೊಂಡಿತ್ತು. ಈ ಎಲ್ಲದರ ನಡುವೆ ಇದೀಗ ಅಮಿತ್ ಶಾ ಅವರು ನಾರಾಯಣ ಗುರು ಜಯಂತಿಗೆ ಶುಭಾಶಯ ಕೋರಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾಳೆ ಅಮಿತ್ ಶಾ ರಿಪೋರ್ಟ್ ಕಾರ್ಡ್ ಕೇಳಿದಾಗ ಇಸ್ರೋ ಮಾಡಿದ್ದು ನಾವು ಎಂದು ಹೇಳಿ: ಮಲ್ಲಿಕಾರ್ಜುನ ಖರ್ಗೆ
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸುವುದಕ್ಕಾಗಿ ಅನುಮೋದನೆ ನೀಡಲು ಕೇರಳ ಸಲ್ಲಿಸಿದ ಸ್ತಬ್ಧ ಚಿತ್ರವನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿತ್ತು. ಪ್ರವಾಸೋದ್ಯಮದ ಸಾಮರ್ಥ್ಯದ ಜೊತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನು ಸಾರುವ ಚಡಯಮಂಗಲಂ ಜಟಾಯುಪಾರ ಮಾದರಿಯನ್ನು ಕೇರಳ ಸಿದ್ಧಪಡಿಸಿದೆ. ಈ ಸ್ತಬ್ಧ ಚಿತ್ರದ ಮುಂದೆ ಶ್ರೀ ನಾರಾಯಣ ಗುರು ಪ್ರತಿಮೆಯನ್ನು ಇರಿಸಲು ರಾಜ್ಯವು ಉದ್ದೇಶಿಸಿತ್ತು.
ಎಸ್ಎಸ್ಎಲ್ಸಿ ಪುಸ್ತಕದಲ್ಲಿ ಇದ್ದ ನಾರಾಯಣ ಗುರು ಬಗೆಗಿನ ಪಠ್ಯವನ್ನು ಕೈಬಿಡಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ನಂತರ ಎಚ್ಚೆತ್ತ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ, 10ನೇ ತರಗತಿ ಬದಲಾಗಿ ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಭಾಗ-2ರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ವಿಭಾಗದಲ್ಲಿ ಗುರುಗಳ ಜೀವನ ಚರಿತ್ರೆಯನ್ನು ಅಳವಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ