AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ದಾಖಲೆಯ ಮಟ್ಟಕ್ಕೆ ಇಳಿಕೆ; ಮುಂಬೈನಲ್ಲಿ ಪ್ರಲ್ಹಾದ್ ಜೋಶಿ ಹೇಳಿಕೆ

ಮುಂಬೈಯಲ್ಲಿ ನಡೆದ "ಹವಾಮಾನ ಸಪ್ತಾಹ 2026" ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದಾರೆ. ಮುಂಬೈ ಹವಾಮಾನ ಸಪ್ತಾಹದಲ್ಲಿ ಮಾತನಾಡಿದ ಅವರು, ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಮಹಾರಾಷ್ಟ್ರವು ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಪ್ರಗತಿಯು ಒಟ್ಟಾಗಿ ಮುಂದುವರಿಯಬಹುದು ಎಂದು ಸಾಬೀತುಪಡಿಸುತ್ತಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಜಾಗತಿಕ ಹವಾಮಾನ ನಿರೂಪಣೆಯನ್ನು ಸುಸ್ಥಿರತೆಯಿಂದ ಬೆಳವಣಿಗೆಯ ಪ್ರಬಲ ಎಂಜಿನ್ ಆಗಿ ಬದಲಾಯಿಸಿದೆ ಎಂದಿದ್ದಾರೆ.

ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ದಾಖಲೆಯ ಮಟ್ಟಕ್ಕೆ ಇಳಿಕೆ; ಮುಂಬೈನಲ್ಲಿ ಪ್ರಲ್ಹಾದ್ ಜೋಶಿ ಹೇಳಿಕೆ
Pralhad Joshi Addressed At The Mumbai Climate Week
ಸುಷ್ಮಾ ಚಕ್ರೆ
|

Updated on: Feb 17, 2026 | 4:39 PM

Share

ಮುಂಬೈ, ಫೆಬ್ರವರಿ 17: ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. 279 ರೂ. ದರದೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಘೋಷಿಸಿದ್ದಾರೆ.

ಮುಂಬೈಯಲ್ಲಿ ಇಂದು ಆಯೋಜಿಸಿದ್ದ “ಹವಾಮಾನ ಸಪ್ತಾಹ 2026” ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ 279 ರೂ. ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದಿದ್ದಾರೆ.

ಸೂರ್ಯಘರ್ ಯೋಜನೆಯಡಿ ಭಾರತ ಪ್ರಸ್ತುತ 30 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಮನೆಗಳಿಗೆ ಸೌರ ಮೇಲ್ಛಾವಣಿ ಮೂಲಕ ಉಚಿತ ವಿದ್ಯುತ್ ಕಲ್ಪಿಸಿದೆ. ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ಭಾರತ ಪ್ರಬಲ ಇಂಜಿನ್ ಆಗಿ ಕಾರ್ಯ ಸಾಧಿಸುತ್ತಿದ್ದು, ‘ಪಿಎಂ ಸೂರ್ಯಘರ್’ ಮತ್ತು ‘ಪಿಎಂ ಕುಸುಮ್’ ನಮ್ಮ ಸೌರ ಶಕ್ತಿಯ ಡಬಲ್ ಇಂಜಿನ್ ಆಗಿವೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ಮುಂದಿನ 25 ವರ್ಷಕ್ಕೆ ಭಾರತದ ಬೆಳವಣಿಗೆಗೆ ಬುನಾದಿ ಹಾಕಿದೆ ಈ ಬಜೆಟ್: ಸಚಿವ ಪ್ರಲ್ಹಾದ್ ಜೋಶಿ

ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯಘರ್ ಅಳವಡಿಕೆ ಮೂಲಕ, ರೈತರು ಮತ್ತು ಸಾಮಾನ್ಯ ಕುಟುಂಬಗಳು ಸಹ ದೇಶದ ಶುದ್ಧ ಇಂಧನ ಪರಿವರ್ತನೆ ಪ್ರಯಾಣದಲ್ಲಿ ಸಕ್ರಿಯರಾಗುತ್ತಿದ್ದಾರೆಂದು ಪ್ರಲ್ಹಾದ್ ಜೋಶಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಭಾರತ ಇಂದು ಹವಾಮಾನದ ಕುರಿತಾದ ಜಾಗತಿಕ ಸಪ್ತಾಹ, ಸಮಾವೇಶ ಆಯೋಜಿಸುವ ಮಟ್ಟಕ್ಕೆ ಬೆಳೆದಿದೆ. ಮುಂಬೈಯಲ್ಲಿ ಆಯೋಜಿಸಿರುವ ಇದು ಮೊದಲ ಜಾಗತಿಕ ದಕ್ಷಿಣ ಸಮಾವೇಶವಾಗಿದೆ. ಇದಕ್ಕಾಗಿ ಮಹಾರಾಾಷ್ಟ್ರ ತಂಡವನ್ನು ಅಭಿನಂದಿಸುತ್ತೇನೆ. ಕರ್ನಾಟಕ ಮತ್ತು ಮಹಾರಾಷ್ಟ್ರ ವಿಶೇಷವಾಗಿ ಆರ್ಥಿಕತೆಯ ಚಾಲಕವಾಗಿವೆ. ಆರ್ಥಿಕತೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ದೇಶವೇ ಅನುಸರಿಸುತ್ತದೆ. ಮುಂಬೈ ನಮ್ಮ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ, ಸಿದ್ದರಾಮಯ್ಯ ಡ್ರಾಮಾ ಬಿಟ್ಟು ವಾಸ್ತವತೆ ಒಪ್ಪಿಕೊಳ್ಳಲಿ; ಪ್ರಲ್ಹಾದ್ ಜೋಶಿ ತಿರುಗೇಟು

ದೊಡ್ಡ ದೇಶವಾಗಿದ್ದರೂ ಭಾರತ ಈ ಹಿಂದೆ ಹವಾಮಾನ ಸಪ್ತಾಹ, ಹವಾಮಾನ ಸಮಾವೇಶ ಅಥವಾ ಸುಸ್ಥಿರ ಸಮಾವೇಶದಂತಹ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಆದರೀಗ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಹವಾಮಾನ ಸುಸ್ಥಿರತೆಯಲ್ಲಿ ದೇಶದಲ್ಲೀಗ ಮಹತ್ತರ ಬದಲಾವಣೆ ಆಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ನಾಯಕತ್ವದಲ್ಲಿ ಭಾರತ ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ನಿರ್ಣಾಯಕ ಹೆಜ್ಜೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಾರಾಷ್ಟ್ರದಲ್ಲಿ ಸೌರಶಕ್ತಿ ಒಂದು ಜನಾಂದೋಲನ ರೀತಿ ರೂಪಾಂತರಗೊಳ್ಳುತ್ತಿದೆ. ಪರಿಣಾಮ ಫಲಿತಾಂಶಗಳು ಗಮನಾರ್ಹವಾಗಿವೆ. ಮಹಾರಾಷ್ಟ್ರ ಇಂದು ಕೈಗಾರಿಕಾ ಮತ್ತು ಗೃಹಬಳಕೆ ವಿದ್ಯುತ್ ದರ ಅತ್ಯಂತ ಕಡಿಮೆ ಇರುವ ಭಾರತದ ಮೊದಲ ರಾಜ್ಯವಾಗಿ ನಿಂತಿದೆ. ಇದು ಭಾರತದ ಶುದ್ಧ ಇಂಧನ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದರು.

ಈ ಹವಾಮಾನ ಸುಸ್ಥಿರತೆ ಸಮಾವೇಶದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಸಚಿವರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

CBSE ವಿದ್ಯಾರ್ಥಿಗಳು, ಪೋಷಕರು ನೋಡಲೇಬೇಕಾದ ಸ್ಟೋರಿ ಇದು
CBSE ವಿದ್ಯಾರ್ಥಿಗಳು, ಪೋಷಕರು ನೋಡಲೇಬೇಕಾದ ಸ್ಟೋರಿ ಇದು
ಬೈಕ್​​ ಗುದ್ದಿದ ರಭಸಕ್ಕೆ ಹಾರಿಬಿದ್ದು ಪ್ರಾಣಬಿಟ್ಟ ಯುವತಿ
ಬೈಕ್​​ ಗುದ್ದಿದ ರಭಸಕ್ಕೆ ಹಾರಿಬಿದ್ದು ಪ್ರಾಣಬಿಟ್ಟ ಯುವತಿ
ಮೊದಲು ಪ್ರಕಟವಾಗುವ PU ಇಂಟರ್​​​ನಲ್ ಮಾರ್ಕ್ಸ್​​ ಹೇಗೆ? ಎಲ್ಲಿ ನೋಡಬೇಕು?
ಮೊದಲು ಪ್ರಕಟವಾಗುವ PU ಇಂಟರ್​​​ನಲ್ ಮಾರ್ಕ್ಸ್​​ ಹೇಗೆ? ಎಲ್ಲಿ ನೋಡಬೇಕು?
W,W,W,W,W,W,W,W: ವಿಕೆಟ್ ಮೇಲೆ ವಿಕೆಟ್: ಶಮಿ ಬೆಂಕಿ ಬೌಲಿಂಗ್
W,W,W,W,W,W,W,W: ವಿಕೆಟ್ ಮೇಲೆ ವಿಕೆಟ್: ಶಮಿ ಬೆಂಕಿ ಬೌಲಿಂಗ್
‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಯಾವಾಗ? ಬಿಡುಗಡೆ ದಿನಾಂಕ ನಿಗದಿ
‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಯಾವಾಗ? ಬಿಡುಗಡೆ ದಿನಾಂಕ ನಿಗದಿ
30 ನಿಮಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯೆ
30 ನಿಮಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯೆ
ಬೈಕ್​​ ಡಿಕ್ಕಿ ರಭಸಕ್ಕೆ ಮುರಿದುಬಿದ್ದ ವಿದ್ಯುತ್​​ ಕಂಬ: ಸವಾರರು ಬಚಾವ್​​
ಬೈಕ್​​ ಡಿಕ್ಕಿ ರಭಸಕ್ಕೆ ಮುರಿದುಬಿದ್ದ ವಿದ್ಯುತ್​​ ಕಂಬ: ಸವಾರರು ಬಚಾವ್​​
VIDEO: ಅದ್ಭುತ, ಅತ್ಯದ್ಭುತ... ಇದು ವಿಶ್ವಕಪ್​ನ ಬೆಸ್ಟ್ ಕ್ಯಾಚ್!
VIDEO: ಅದ್ಭುತ, ಅತ್ಯದ್ಭುತ... ಇದು ವಿಶ್ವಕಪ್​ನ ಬೆಸ್ಟ್ ಕ್ಯಾಚ್!
ಬೆಂಗಳೂರಿನಲ್ಲಿ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ
ಬೆಂಗಳೂರಿನಲ್ಲಿ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ
ಮುಡಾ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​: ಆಡಿಯೋ ಬಾಂಬ್​​ ಸಿಡಿಸಿದ ಸ್ನೇಹಮಯಿ
ಮುಡಾ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​: ಆಡಿಯೋ ಬಾಂಬ್​​ ಸಿಡಿಸಿದ ಸ್ನೇಹಮಯಿ