ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಅಂತಾ ಯುಜಿಸಿ ಯಾಕೆ ಹಟ ಹಿಡಿದಿದೆ ಗೊತ್ತಾ?
ನವದೆಹಲಿ: ಕೊರೊನಾ ಮಹಾಮಾರಿಯಿಂದಾಗಿ ಇಡಿ ವಿಶ್ವದ ಜನಜೀವನವೇ ಅಸ್ತವ್ಯಸ್ತವಾಗಿದೆ. ಇದು ಭಾರತದ ಶಿಕ್ಷಣ ವ್ಯವಸ್ಥಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೋ ಬೇಡವೋ ಎನ್ನುವ ದ್ವಂದ್ವದಲ್ಲಿವೆ. ಆದ್ರೆ ಉನ್ನತ ಶಿಕ್ಷಣದ ಮಾರ್ಗದರ್ಶಕ ಯುಜಿಸಿ ಅಂದ್ರೆ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ ಮಾತ್ರ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಎಂದಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಯುಜಿಸಿ, ಪರೀಕ್ಷೆ ಭಾರತದ ಶಿಕ್ಷಣದ ಅವಿಭಾಜ್ಯ ಅಂಗ, ಇದು ವಿದ್ಯಾರ್ಥಿಗಳ ಗುಣಮಟ್ಟ […]
ನವದೆಹಲಿ: ಕೊರೊನಾ ಮಹಾಮಾರಿಯಿಂದಾಗಿ ಇಡಿ ವಿಶ್ವದ ಜನಜೀವನವೇ ಅಸ್ತವ್ಯಸ್ತವಾಗಿದೆ. ಇದು ಭಾರತದ ಶಿಕ್ಷಣ ವ್ಯವಸ್ಥಯ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೋ ಬೇಡವೋ ಎನ್ನುವ ದ್ವಂದ್ವದಲ್ಲಿವೆ. ಆದ್ರೆ ಉನ್ನತ ಶಿಕ್ಷಣದ ಮಾರ್ಗದರ್ಶಕ ಯುಜಿಸಿ ಅಂದ್ರೆ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ ಮಾತ್ರ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಎಂದಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಯುಜಿಸಿ, ಪರೀಕ್ಷೆ ಭಾರತದ ಶಿಕ್ಷಣದ ಅವಿಭಾಜ್ಯ ಅಂಗ, ಇದು ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಅವರ ಕ್ಷಮತೆಯ ಮಾರ್ಗದಂಡವಾಗಿರುತ್ತೆ ಎಂದಿದೆ. ಪರೀಕ್ಷೆಯಲ್ಲಿನ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಅವರ ಜೀವನದುದ್ದಕ್ಕೂ ಅವರ ಗುಣಮಟ್ಟದ ಬಗ್ಗೆ ಸಾಕ್ಷಿಯಾಗಿರುತ್ತದೆ. ಉನ್ನತ ಶಿಕ್ಷಣಕ್ಕೆ, ಶಿಷ್ಯವೇತನಕ್ಕೆ, ಉದ್ಯೋಗಕ್ಕೆ ಇದು ಭಾರೀ ಸಹಾಯಕವಾಗಲಿದೆ ಎಂದಿದೆ.
ಮುಂದುವರಿದ ದೇಶಗಳಾದ ಅಮೆರಿಕಾ, ಬ್ರೀಟನ್, ಕೆನಡಾ, ಸಿಂಗಾಪೂರ್, ಹಾಂಗ್‌ಕಾಂಗ್, ಆಸ್ಟ್ರೇಲಿಯಾದಂಥ ದೇಶಗಳು ಪರೀಕ್ಷೆಗಳನ್ನು ನಡೆಸಿವೆ ಮತ್ತು ನಡೆಸುತ್ತಿವೆ. ಭಾರತದಲ್ಲೂ 755 ರಲ್ಲಿ 560 ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಿವೆ ಮತ್ತು ನಡೆಸುತ್ತಿವೆ. ಇದರಲ್ಲಿ 194 ವಿವಿಗಳು ಪರೀಕ್ಷೆ ಪ್ರಕ್ರೀಯನ್ನ ಈಗಾಗಲೇ ಪೂರ್ಣಗೊಳಿಸಿವೆ, ಇನ್ನುಳಿದ ವಿವಿಗಳು ನಡೆಸುತ್ತಿವೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆ, ಮಾನವ ಸಂಪೂನ್ಮೂಲ ಇಲಾಖೆಗಳು ನೀಡಿರುವ ನಿರ್ಧೇಶನ ಮತ್ತು ಶಿಕ್ಷಣ ತಜ್ಞರು ನೀಡಿದ ವರದಿಯನ್ನು ಅನುಸರಿಸಿ ಯುಜಿಸಿ ಪರೀಕ್ಷಗಳನ್ನು ನಡೆಸಲು ತೀರ್ಮಾನಿಸಿದೆ. ಈ ಪ್ರಕ್ರೀಯೆ ಸೆಪ್ಟೆಂಬರ್ 30ರೊಳಗೆ ಸಂಪೂರ್ಣವಾಗಬೇಕು. ಹೀಗಾಗಿ ಆಯಾ ವಿಶ್ವವಿದ್ಯಾಲಯಗಳು ತಮ್ಮ ಅನೂಕಲಕ್ಕೆ ತಕ್ಕಂತೆ ಆನ್‌ಲೈನ್ ಅಥವಾ ಆಫ್‌ಲೈನ್ ಅಥವಾ ಎರಡು ವಿಧಗಳ ಮಿಶ್ರಣದ ಮೂಲಕ ಪರೀಕ್ಷೆಗಳನ್ನು ನಡೆಸಬೇಕು ಎಂದು ಸೂಚಿಸಿದೆ. ಆದ್ರೆ ದೇಶದ ಪಂಜಾಬ್, ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳು ಪರೀಕ್ಷೆ ನಡೆಸಲು ವಿರೋಧ ವ್ಯಕ್ತಪಡಿಸಿವೆ.
Published On - 8:56 pm, Sat, 18 July 20