ಕೊರೊನಾ ಶಂಕಿತ ರೋಗಿಗಳಿಗೆ ಸಂಭಾವ್ಯ ಕೊವಿಡ್ ರೋಗಿಗಳು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಿದೆ ಉತ್ತರ ಪ್ರದೇಶ ಸರ್ಕಾರ

Uttar Pradesh: ಆರ್​ಟಿಪಿಸಿಆರ್ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ನೆಗೆಟಿವ್ ಎಂದು ತೋರಿಸಿದ್ದರೂ ಎಕ್ಸ್ ರೇ, ಸಿಟಿ ಸ್ಕ್ಯಾನ್, ರಕ್ತದ ಪರೀಕ್ಷೆಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರೆ ಅಥವಾ ವೈದ್ಯರು ಆ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಇದೆ ಎಂದು ಶಂಕೆ ವ್ಯಕ್ತಪಡಿಸಿದರೆ ಆ ವ್ಯಕ್ತಿಯನ್ನು ಸಂಭಾವ್ಯ ಕೊವಿಡ್ ರೋಗಿ ಎಂದು ವರ್ಗೀಕರಿಸಿ ಚಿಕಿತ್ಸೆ ನೀಡಲಾಗುವುದು.

ಕೊರೊನಾ ಶಂಕಿತ ರೋಗಿಗಳಿಗೆ ಸಂಭಾವ್ಯ ಕೊವಿಡ್ ರೋಗಿಗಳು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಿದೆ ಉತ್ತರ ಪ್ರದೇಶ ಸರ್ಕಾರ
ಕೊವಿಡ್ ವಾರ್ಡ್ ಪರಿಶೀಲನೆ ನಡೆಸುತ್ತಿರುವ ಯೋಗಿ ಆದಿತ್ಯನಾಥ
Follow us
ರಶ್ಮಿ ಕಲ್ಲಕಟ್ಟ
|

Updated on: Apr 18, 2021 | 11:59 AM

ಲಕ್ನೊ: ಆರ್​ಟಿಪಿಸಿಆರ್ ಪರೀಕ್ಷೆ ವರದಿ ನೆಗೆಟಿವ್ ಇದ್ದು, ಕೊವಿಡ್ ರೋಗ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಗಳನ್ನು ಸಂಭಾವ್ಯ ಕೊವಿಡ್ ರೋಗಿಗಳು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುವುದು ಎಂದು ಉತ್ತರಪ್ರದೇಶದ ಸರ್ಕಾರ ಹೇಳಿದೆ. ವ್ಯಕ್ತಿಯೊಬ್ಬರು ಆರ್​ಟಿಪಿಸಿಆರ್ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ನೆಗೆಟಿವ್ ಎಂದು ತೋರಿಸಿದ್ದರೂ ಎಕ್ಸ್ ರೇ, ಸಿಟಿ ಸ್ಕ್ಯಾನ್, ರಕ್ತದ ಪರೀಕ್ಷೆಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರೆ ಅಥವಾ ವೈದ್ಯರು ಆ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಇದೆ ಎಂದು ಶಂಕೆ ವ್ಯಕ್ತಪಡಿಸಿದರೆ ಆ ವ್ಯಕ್ತಿಯನ್ನು ಸಂಭಾವ್ಯ ಕೊವಿಡ್ ರೋಗಿ ಎಂದು ವರ್ಗೀಕರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಶನಿವಾರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಈ ವರ್ಗದಡಿಯಲ್ಲಿರುವ ಶಂಕಿತ ಕೊವಿಡ್ ರೋಗಿಗೆ ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆ ನೀಡಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ಹೇಳಿದೆ.

ಸಿಎಂ ಸೂಚನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ‘ಟೀಂ 11’ ಅಧಿಕಾರಿಗಳೊಂದಿಗೆ  ವಿಡಿಯೊ ಸಂವಾದ ನಡೆಸಿದ ನಂತರ ಲಾಕ್​ಡೌನ್ ಮತ್ತು ಕರ್ಫ್ಯೂ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಲಾಕ್​ಡೌನ್ ಸಮಯದಲ್ಲಿ, ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿತ ಸೇವೆಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆ ಮುಂದುವರಿಯುತ್ತದೆ. ವಾರಾಂತ್ಯದಲ್ಲಿ ಸ್ಯಾನಿಟೈಜೇಷನ್ ಮಾಡಲು ಬೃಹತ್ ಅಭಿಯಾನವನ್ನು ಕೈಗೊಳ್ಳಲಾಗುವುದು. ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಬೆಂಬಲದೊಂದಿಗೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಹತ್ತು ಹೊಸ ಆಮ್ಲಜನಕ ಘಟಕಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಆದಿತ್ಯನಾಥ ಹೇಳಿದ್ದಾರೆ

ಉತ್ತರ ಪ್ರದೇಶದಲ್ಲಿ 500 ಕ್ಕೂ ಹೆಚ್ಚು ಸಕ್ರಿಯ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಅದೇ ವೇಳೆ ಏಪ್ರಿಲ್ 30 ರವರೆಗೆ ರಾಜ್ಯದಲ್ಲಿ 1 ಮತ್ತು 12 ನೇ ತರಗತಿಯ ಶಾಲೆಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ.

ಕೊವಿಡ್ ಪ್ರಕರಣ ಹೆಚ್ಚಳ ಶನಿವಾರ ಉತ್ತರ ಪ್ರದೇಶಲ್ಲಿ 120 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 9,703 ಕ್ಕೆ ತಲುಪಿದೆ. 27,357 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು ಕೊವಿಡ್ ರೋಗಿಗಳ ಸಂಖ್ಯೆ 8,21,054 ಕ್ಕೆ ಏರಿದೆ. ರಾಜ್ಯದ ರಾಜಧಾನಿಯಲ್ಲಿ 36, ಕಾನ್ಪುರ್ ನಲ್ಲಿ 15, ವಾರಣಾಸಿಯಲ್ಲಿ 8, ಮೊರಾದಾಬಾದ್, ಮುಜಾಫರ್ ನಗರ್ ಮತ್ತು ಜೌನ್​ಪುರ್​ನಲ್ಲಿ ತಲಾ 4 ಮಂದಿ ಕೊವಿಡ್​ನಿಂದ ಸಾವಿಗೀಡಾಗಿದ್ದಾರೆ

ಲಕ್ನೊದಲ್ಲಿ 5,913 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಅಲಹಾಬಾದ್​ನಲ್ಲಿ 1,977, ಕಾನ್ಪುರ್​ನಲ್ಲಿ 1826 , ವಾರಣಾಸಿ 1,664 ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. ಈವರೆಗೆ ರಾಜ್ಯದಲ್ಲಿ 6,41,292 ಕೊವಿಡ್ -19 ರೋಗಿಗಳು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ಹೇಳಿದೆ.

ಹಾಸಿಗೆಗಾಗಿ ಸರದಿಯಲ್ಲಿ 50 ಕ್ಕೂ ಹೆಚ್ಚು ರೋಗಿಗಳು ಲಕ್ನೊದಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್ ಹೊರಗೆ ಸುಮಾರು 20 ಹಾಸಿಗೆಗಳು ಮತ್ತು ಕೆಲವು ಮೂಲಭೂತ ವೈದ್ಯಕೀಯ ಉಪಕರಣಗಳನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಕೊವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ. ಇಲ್ಲಿ ಥರ್ಮಲ್ ಸ್ಕ್ರೀನಿಂಗ್ ಇಲ್ಲ, ಸಾಮಾಜಿಕ ಅಂತರವಂತೂ ದೂರದ ಮಾತಾಗಿದೆ.

ಮಹಾರಾಷ್ಟ್ರದ ನಂತರ ಅತೀ ಹೆಚ್ಚು ಸಕ್ರಿಯ ಕೊವಿಡ್ ಪ್ರಕರಣಗಳಿರುವ ರಾಜ್ಯವಾಗಿದೆ ಉತ್ತರ ಪ್ರದೇಶ. ಲಕ್ನೊದ ಹೆಚ್ಚಿನ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ವೆಂಟಿಲೇಟರ್ ಹಾಸಿಗೆಗಳ ತೀವ್ರ ಕೊರತೆ ಇದೆ. ಕೊವಿಡ್ ರೋಗಿಯಾಗಿರುವ ನಾನು ಈ ಆಸ್ಪತ್ರೆಯ ಕೊವಿಡ್ ವಾರ್ಡ್ ನಲ್ಲಿ ಬೆಡ್ ಗಾಗಿ ಎರಡು ದಿನ ಕಾಯಬೇಕಾಗಿ ಬಂತು ಅಂತಾರೆ ಲಕ್ನೊ ನಿವಾಸಿ 38ರ ಹರೆಯದ ವಿಕಾಸ್ ವರ್ಮಾ. ಪ್ರಸ್ತುತ ಆಸ್ಪತ್ರೆಯಲ್ಲಿ ಸುಮಾರ್ 520 ಬೆಡ್ ಗಳಿವೆ. ಇದರಲ್ಲಿ 427 ಐಸಿಯು ಮತ್ತು 133 ವೆಂಟಿಲೇಟರ್ ಇರುವಂತವುಗಳಾಗಿವೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ಗೆ ಕೊರೊನಾ ಸೋಂಕು ದೃಢ

(Uttar Pradesh Administration to treat Suspected Coronavirus Patients as Presumptive Covid patients)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ