Vice President Election 2022 Result Highlights : ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟ; ಜಗದೀಪ್ ಧನಕರ್​ಗೆ ಜಯ

| Updated By: ವಿವೇಕ ಬಿರಾದಾರ

Updated on: Aug 06, 2022 | 7:56 PM

Vice Presidential Poll 2022 Result Live Updates in Kannada: ಇಂದು ಸಂಜೆಯ ವೇಳೆಗೆ ಚುನಾವಣಾಧಿಕಾರಿಯು ಉಪರಾಷ್ಟ್ರಪತಿ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಿದ್ದು, 80 ವರ್ಷದ ಆಳ್ವ ಕಾಂಗ್ರೆಸ್ ಹಿರಿಯರಾಗಿದ್ದು, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ, 71 ವರ್ಷದ ಜಗದೀಪ್ ಧನಕರ್ ಸಮಾಜವಾದಿ ಹಿನ್ನೆಲೆ ಹೊಂದಿರುವ ರಾಜಸ್ಥಾನದ ಜಾಟ್ ನಾಯಕರಾಗಿದ್ದಾರೆ.

Vice President Election 2022 Result Highlights : ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟ; ಜಗದೀಪ್ ಧನಕರ್​ಗೆ ಜಯ
ಜಗದೀಪ್ ಧನಕರ್ - ಮಾರ್ಗರೇಟ್ ಆಳ್ವ
Image Credit source: India.com

ಭಾರತದ ಉಪರಾಷ್ಟ್ರಪತಿ (Vice President) ಹುದ್ದೆಗೆ ನಡೆದ ಚುನಾವಣೆ ಮುಕ್ತಾಯಗೊಂಡಿದ್ದು, ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ (NDA) ಅಭ್ಯರ್ಥಿ ಜಗದೀಪ್​ ಧನಕರ್ ಅವರಿಗೆ ಗೆಲುವಾಗಿದೆ.  ವಿಪಕ್ಷ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್​ ಆಳ್ವಾಗೆ ಸೋಲಾಗಿದೆ. ಜಗದೀಪ್​ ಧನಕರ್ ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಒಟ್ಟು 528 ಮತಗಳನ್ನು ಪಡೆದಿದ್ದಾರೆ. ಜಗದೀಪ್​ ಧನಕರ್ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆ.11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

LIVE NEWS & UPDATES

The liveblog has ended.
  • 06 Aug 2022 06:21 PM (IST)

    ಉಪರಾಷ್ಟ್ರಪತಿ ಚುನಾವಣೆಯಲ್ಲಿ 725 ಸಂಸದರಿಂದ ಮತದಾನ

    ಉಪರಾಷ್ಟ್ರಪತಿ ಚುನಾವಣೆಯಲ್ಲಿ 725 ಸಂಸದರು ಮತದಾನ ಮಾಡಿದ್ದಾರೆ. ಅನಾರೋಗ್ಯ ಕಾರಣದಿಂದ ಬಿಜೆಪಿಯ ಸನ್ನಿ ಡಿಯೋಲ್ ಮತ್ತು ಸಂಜಯ್ ಧೋತ್ರೆ ಮತದಾನ ಮಾಡಿಲ್ಲ.  ಟಿಎಂಸಿ ಪಕ್ಷ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿತ್ತು.

  • 06 Aug 2022 05:31 PM (IST)

    ಮತ ಎಣಿಕೆ ಪ್ರಕ್ರಿಯೆ 6 ಗಂಟೆಗೆ ಆರಂಭ

    ಉಪರಾಷ್ಟ್ರಪತಿ ಚುನಾವಣೆಯ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆ 6 ಗಂಟೆಗೆ ಆರಂಭವಾಗಲಿದೆ.


  • 06 Aug 2022 04:18 PM (IST)

    ಉಪರಾಷ್ಟ್ರಪತಿ ಚುನಾವಣೆ; ಮಧ್ಯಾಹ್ನ 3.30ರವರೆಗೆ ಶೇ.93ರಷ್ಟು ಮತದಾನ

    ಮುಂದಿನ ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಮಧ್ಯಾಹ್ನ 3 ಗಂಟೆಯವರೆಗೆ 93% ಕ್ಕಿಂತ ಹೆಚ್ಚು ಮತದಾನವಾಗಿದೆ.
    ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಧ್ಯಾಹ್ನ 3.30ರವರೆಗೆ ಶೇ.93ರಷ್ಟು ಮತದಾನವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಹಿಂದಿನ ಮನಮೋಹನ್ ಸಿಂಗ್ ಅವರು ದಿನದ ಆರಂಭದಲ್ಲಿಯೇ ಮತ ಚಲಾಯಿಸಿದರು.

  • 06 Aug 2022 03:36 PM (IST)

    ಉಪರಾಷ್ಟ್ರಪತಿ ಚುನಾವಣೆ; ಶೇ.85ರಷ್ಟು ಮತದಾನ

    ಮಧ್ಯಾಹ್ನ 2 ಗಂಟೆಯವರೆಗೆ ಶೇ.85ರಷ್ಟು ಮತದಾನ ದಾಖಲು

  • 06 Aug 2022 02:50 PM (IST)

    ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಂದ ಮತದಾನ

  • 06 Aug 2022 01:58 PM (IST)

    ಉಪರಾಷ್ಟ್ರಪತಿ ಚುನಾವಣೆ; ಸೋನಿಯಾ ಗಾಂಧಿ ಮತದಾನ

  • 06 Aug 2022 01:54 PM (IST)

    ಉಪರಾಷ್ಟ್ರಪತಿ ಚುನಾವಣೆ; ರಾಹುಲ್ ಗಾಂಧಿಯಿಂದ ಮತ ಚಲಾವಣೆ

  • 06 Aug 2022 01:46 PM (IST)

    ಸಂಸದೆ ಹೇಮಾ ಮಾಲಿನಿಯಿಂದ ಮತದಾನ

  • 06 Aug 2022 12:24 PM (IST)

    ಮಾರ್ಗರೆಟ್ ಆಳ್ವ ಸಂಸತ್​ಗೆ ಆಗಮನ

    ವಿರೋಧ ಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವ ಸಂಸತ್​ ಭವನಕ್ಕೆ ಆಗಮಿಸಿದ್ದಾರೆ.

  • 06 Aug 2022 11:30 AM (IST)

    ನರೇಂದ್ರ ಮೋದಿ ಮತದಾನ

  • 06 Aug 2022 11:07 AM (IST)

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತದಾನ

    ಮತದಾನ ಮಾಡಲು ಸಂಸತ್ತಿಗೆ ಆಗಮಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

  • 06 Aug 2022 10:37 AM (IST)

    ಪ್ರಧಾನಿ ನರೇಂದ್ರ ಮೋದಿ ಮತ ಚಲಾವಣೆ

    ಪ್ರಧಾನಿ ನರೇಂದ್ರ ಮೋದಿ ಅವರು ಉಪರಾಷ್ಟ್ರಪತಿ ಚುನಾವಣೆಗೆ ಸಂಸತ್ತಿನಲ್ಲಿ ಮತ ಚಲಾಯಿಸಿದರು

  • 06 Aug 2022 10:05 AM (IST)

    ಉಪರಾಷ್ಟ್ರಪತಿ ಚುನಾವಣೆ ಆರಂಭ

    ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ಆರಂಭವಾಗಿದೆ

    ಇಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ

  • 06 Aug 2022 09:50 AM (IST)

    ಪಕ್ಷಗಳು ಯಾರಿಗೆ ಮತ ಹಾಕುತ್ತವೆ?

    ಇಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಮತದಾನದಿಂದ ದೂರ ಉಳಿಯುವುದಾಗಿ ಹೇಳಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮಾರ್ಗರೇಟ್ ಆಳ್ವಾ ಅವರನ್ನು ಬೆಂಬಲಿಸಲಿವೆ. ಮತ್ತೊಂದೆಡೆ, ಜಗದೀಪ್ ಧನಕರ್ ಅವರಿಗೆ ಜೆಡಿಯು, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಶಿವಸೇನೆಯಂತಹ ಪಕ್ಷಗಳ ಬೆಂಬಲವಿದೆ. ಬಿಜೆಪಿಯ 394 ಸೇರಿದಂತೆ ಎನ್‌ಡಿಎ 441 ಸಂಸದರನ್ನು ಹೊಂದಿದೆ. ಐವರು ನಾಮನಿರ್ದೇಶಿತ ಸದಸ್ಯರು ಕೂಡ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ.

  • 06 Aug 2022 09:43 AM (IST)

    ಯಾರು ಈ ಮಾರ್ಗರೆಟ್ ಆಳ್ವ?

    ಮಾರ್ಗರೇಟ್ ಆಳ್ವ ಕನ್ನಡತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಏಪ್ರಿಲ್ 1942ರಂದು ಮಂಗಳೂರಿನ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಅವರು ಜನಿಸಿದರು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿ ಮತ್ತು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜ್‌ನಲ್ಲಿ ಕಾನೂನು ಪದವಿ ಪಡೆದರು. ಬಳಿಕ ಉತ್ತರ ಕನ್ನಡ ಜಿಲ್ಲೆಯ ನಿರಂಜನ್ ಆಳ್ವ ಎಂಬುವವರನ್ನು ಮದುವೆಯಾದರು. ಮಾರ್ಗರೇಟ್ ಆಳ್ವ ಐದು ಬಾರಿ ಸಂಸದೆಯಾಗಿದ್ದವರು. ನಾಲ್ಕು ಬಾರಿ ರಾಜ್ಯಸಭಾ ಸದಸ್ಯೆ ಮತ್ತು ಒಮ್ಮೆ ಲೋಕಸಭಾ ಸದಸ್ಯೆಯಾಗಿದ್ದರು. 1974, 1980, 1986 ಮತ್ತು 1992ರಲ್ಲಿ ರಾಜ್ಯಸಭಾ ಸದಸ್ಯೆಯಾಗಿದ್ದರು. 1999ರಲ್ಲಿ ಉತ್ತರ ಕನ್ನಡ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಅವರನ್ನು ಸೋಲಿಸಿ, ಸಂಸದೆಯಾದರು. ಮುಂದಿನ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಮಾರ್ಗರೇಟ್ ಆಳ್ವ ಸೋತು ಹೋದರು.

    ಮಾರ್ಗರೇಟ್ ಆಳ್ವಾ ರಾಜೀವ್ ಗಾಂಧಿ ಸರ್ಕಾರದಲ್ಲಿ 1985ರಿಂದ 1989ರವರೆಗೆ ರಾಜ್ಯ ಸಚಿವರು, ಸಂಸದೀಯ ವ್ಯವಹಾರಗಳ ಸಚಿವೆಯಾಗಿದ್ದರು. ಬಳಿಕ 1991ರಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆಯಾದರು. ಬಳಿಕ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಮಾರ್ಗರೇಟ್ ಆಳ್ವ 4 ರಾಜ್ಯಗಳಿಗೆ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದ್ಧಾರೆ. 2009ರಲ್ಲಿ ಉತ್ತರಾಖಂಡ್, 2012ರಲ್ಲಿ ರಾಜಸ್ಥಾನ, 2014ರಲ್ಲಿ ಗುಜರಾತ್ ಮತ್ತು 2014ರಲ್ಲಿ ಗೋವಾ ರಾಜ್ಯಗಳ ರಾಜ್ಯಪಾಲೆ ಆಗಿದ್ದರು. ಉತ್ತರಾಖಂಡ್ ರಾಜ್ಯಕ್ಕೆ ರಾಜ್ಯಪಾಲರಾದ ಮೊದಲ ಮಹಿಳೆ ಎಂಬ ದಾಖಲೆ ಅವರದ್ದಾಗಿದೆ.

  • 06 Aug 2022 09:38 AM (IST)

    ಜಗದೀಪ್ ಧನಕರ್ ಹಿನ್ನೆಲೆಯೇನು?

    ಉಪರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಕಣಕ್ಕಿಳಿದಿದ್ದು, ವೃತ್ತಿಯಲ್ಲಿ ವಕೀಲರಾಗಿರುವ ಜಗದೀಪ್ ಧನಕರ್ 1989ರಲ್ಲಿ ರಾಜಕೀಯ ಪ್ರವೇಶಿಸಿದರು. ಅವರು 2019ರ ಜುಲೈನಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದರು. ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನಗೊಂಡ ನಂತರ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ಎನ್‌ಡಿಎ ಪರವಾಗಿ ಕಣಕ್ಕಿಳಿದಿರುವ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರಿಗೆ ಸುಲಭ ಗೆಲುವು ಖಚಿತ ಎನ್ನಲಾಗಿದೆ. 71 ವರ್ಷದ ಜಗದೀಪ್ ಧನಕರ್ ಅವರು ಸಮಾಜವಾದಿ ಹಿನ್ನೆಲೆ ಹೊಂದಿರುವ ರಾಜಸ್ಥಾನದ ಜಾಟ್ ಸಮುದಾಯದ ನಾಯಕರಾಗಿದ್ದಾರೆ.

  • 06 Aug 2022 09:36 AM (IST)

    ಇಂದು ಉಪರಾಷ್ಟ್ರಪತಿ ಚುನಾವಣೆ

    ಭಾರತದ ಉಪ ರಾಷ್ಟ್ರಪತಿ ಹುದ್ದೆಗೆ ಇಂದು ಬೆಳಗ್ಗೆ 10 ಗಂಟೆಯಿಂದ ಮತದಾನ ನಡೆಯಲಿದ್ದು, ಸಂಸತ್ತಿನ ಉಭಯ ಸದನಗಳ ಸದಸ್ಯರು ನೂತನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಮತ ಚಲಾಯಿಸಲಿದ್ದಾರೆ.

Published On - 9:34 am, Sat, 6 August 22

Follow us on