VPF or PPF: ಹಣ ಉಳಿತಾಯಕ್ಕೆ ನಿಮಗೆ ವಿಪಿಎಫ್ ಅಥವಾ ಪಿಪಿಎಫ್​ಗಳ ಪೈಕಿ ಯಾವುದು ಉತ್ತಮ?

ವಿಪಿಎಫ್ ಅಥವಾ ಪಿಪಿಎಫ್ ಇವೆರಡರ ಪೈಕಿ ಯಾವುದರಲ್ಲಿ ಹಣ ಉಳಿತಾಯ ಮಾಡಲಿ ಎಂಬುದರ ಬಗ್ಗೆ ಗೊಂದರಲದಲ್ಲಿ ಇರುವವರಿಗೆ ಇಲ್ಲಿದೆ ಉತ್ತರ.

VPF or PPF: ಹಣ ಉಳಿತಾಯಕ್ಕೆ ನಿಮಗೆ ವಿಪಿಎಫ್ ಅಥವಾ ಪಿಪಿಎಫ್​ಗಳ ಪೈಕಿ ಯಾವುದು ಉತ್ತಮ?
ಶೇ 16,000ದಷ್ಟು ಏರಿಕೆ
Follow us
Srinivas Mata
|

Updated on: Apr 21, 2021 | 9:29 PM

ಭಾರತದಲ್ಲಿ ಈಚೆಗೆ ಹೆಚ್ಚೆಚ್ಚು ಮಂದಿ ತಮ್ಮ ನಿವೃತ್ತಿ ಜೀವನಕ್ಕೆ ಚಿಕ್ಕಂದಿನಿಂದಲೇ ಯೋಜನೆ ರೂಪಿಸುವುದನ್ನು ಆರಂಭಿಸಿದ್ದಾರೆ. ಹಾಗೆ ಯೋಜನೆ ರೂಪಿಸುವವರಿಗೆ ವಾಲಂಟರಿ ಪ್ರಾವಿಡೆಂಟ್ ಫಂಡ್ (VPF) ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಎರಡೂ ತುಂಬ ಜನಪ್ರಿಯ ಆಗಿರುವ ಆಯ್ಕೆಗಳು. ಈ ಎರಡೂ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒಮ್ಮೆ ಪರಾಂಬರಿಸಿದರೆ, ಒಂದು ವೇಳೆ ನಿಮಗೆ ಇವೆರಡರಲ್ಲಿ ಯಾವುದು ಆರಿಸಿಕೊಳ್ಳಬೇಕು ಎಂಬ ಅನುಮಾನಗಳಿದ್ದಲ್ಲಿ ತೀರುತ್ತದೆ.

ವಾಲಂಟರಿ ಪ್ರಾವಿಡೆಂಟ್ ಫಂಡ್ (VPF) ಯಾವುದೇ ವ್ಯಕ್ತಿ ತನಗೆ ಬರುವ ವೇತನದ ಯಾವುದೇ ಭಾಗವನ್ನು ಸ್ವಯಂಪ್ರೇರಿತವಾಗಿ (ವಾಲಂಟರಿ) ಪ್ರಾವಿಡೆಂಟ್ ಫಂಡ್ ಎಂದು ಉಳಿತಾಯ ಮಾಡಬಹುದು. ಮೂಲವೇತನ ಮತ್ತು ತುಟ್ಟಿಭತ್ಯೆ ಎರಡನ್ನೂ ಸೇರಿಸಿದಾಗ ಬರುವ ಒಟ್ಟು ಮೊತ್ತದ ಶೇ 12ಕ್ಕಿಂತ ಮೇಲ್ಪಟ್ಟು ಜಮೆ ಮಾಡಬೇಕಾಗುತ್ತದೆ. ಇದು ಸರ್ಕಾರ ನಿಗದಿ ಮಾಡಿರುವ ಮಿತಿಯಾಗಿದೆ. ಇನ್ನು ಉದ್ಯೋಗಿಯು ಪಿಎಫ್​ ಮೊತ್ತಕ್ಕೆ ಹೆಚ್ಚುವರಿಯಾಗಿ ಕಟ್ಟುವ ವಿಪಿಎಫ್​ಗೆ ಉದ್ಯೋಗದಾತರು ಯಾವುದೇ ಹಣವನ್ನು ಕಟ್ಟಲ್ಲ. ಇನ್ನೂ ಒಂದು ವಿಚಾರ ಏನೆಂದರೆ ಉದ್ಯೋಗಿಯು ತನ್ನ ಮೂಲವೇತನ ಹಾಗೂ ಡಿ.ಎ. (ತುಟ್ಟಿ ಭತ್ಯೆ) ಪೂರ್ತಿ ಮೊತ್ತವನ್ನು (ಶೇಕಡಾ 100ರಷ್ಟು) ಸಹ ವಿಪಿಎಫ್​ನಲ್ಲಿ ಹಾಕಬಹುದು.

ಭಾರತದಲ್ಲಿ ಉದ್ಯೋಗ ಮಾಡುವ ಯಾವುದೇ ಉದ್ಯೋಗಿಗೆ ವಿಪಿಎಫ್ ಮುಕ್ತವಾಗಿರುತ್ತದೆ. ವಾರ್ಷಿಕ ಶೇ 8.50ರಷ್ಟು ರಿಟರ್ನ್ಸ್ ನೀಡುತ್ತದೆ. ಹೂಡಿಕೆದಾರರಿಗೆ ಈ ಹೂಡಿಕೆಗೆ ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಅನುಕೂಲ ಕೂಡ ಇದೆ. ಅಷ್ಟೇ ಅಲ್ಲ, ಮೆಚ್ಯೂರಿಟಿ ಮೇಲಿನ ರಿಟರ್ನ್ಸ್ ಕೂಡ ತೆರಿಗೆಮುಕ್ತವಾಗಿದೆ.

ಆದರೆ, ಈ ಯೋಜನೆ ಅಡಿಯಲ್ಲಿ ಮೆಚ್ಯೂರಿಟಿ ಅವಧಿಯು ನಿವೃತ್ತಿ ತನಕ ಇರುತ್ತದೆ. ಒಂದು ವೇಳೆ ಉದ್ಯೋಗ ಕಳೆದುಕೊಂಡು, ಎರಡು ತಿಂಗಳ ತನಕ ಎಲ್ಲೂ ಕೆಲಸ ಸಿಗದೇ ಇದಲ್ಲಿ, ಮನೆ ಖರೀದಿಗೆ, ವೈದ್ಯಕೀಯ ಉದ್ದೇಶಕ್ಕೆ, ಮದುವೆಗೆ (ತಮ್ಮದು ಅಥವಾ ಅವಲಂಬಿತರದು) ಅಥವಾ ಸಾಲ ಮರುಪಾವತಿ ಉದ್ದೇಶಕ್ಕೆ ಉದ್ಯೋಗಿಯು ಭಾಗಶಃ ವಿಥ್​ಡ್ರಾ ಮಾಡಬಹುದು.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಇದು ಸರ್ಕಾರದ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದು. ಅಸಂಘಟಿತ ವಲಯವೂ ಸೇರಿದಂತೆ ಯಾವುದೇ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗಾಗಿ ಈ ಯೋಜನೆ ಇದೆ. ಸಣ್ಣ ಮೊತ್ತವನ್ನು ಉಳಿಸಿ, ಹೂಡಿಕೆ ಮಾಡಬಹುದು. ಇದರಲ್ಲಿ ಗರಿಷ್ಠ ಹೂಡಿಕೆ ಅಂದರೆ ತಿಂಗಳಿಗೆ 12,500 ರೂಪಾಯಿ, ವಾರ್ಷಿಕ 1,50,000 ರೂಪಾಯಿ ಉಳಿಸಬಹುದು. ಕನಿಷ್ಠ ಉಳಿತಾಯ ಅಂದರೆ ವರ್ಷಕ್ಕೆ ರೂ. 500. ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ಆಗಿ ವರ್ಷಕ್ಕೆ ರೂ. 1.5 ಲಕ್ಷ ಸಿಗುತ್ತದೆ.

ಬಡ್ಡಿ ಮತ್ತು ಮೆಚ್ಯೂರ್ಡ್ ಮೊತ್ತ ಎರಡೂ ವಿಥ್​ಡ್ರಾ ವರ್ಷದಲ್ಲಿ ತೆರಿಗೆಯಿಂದ ಮುಕ್ತವಾಗಿರುತ್ತವೆ. ಖಾತೆ ತೆರೆದಾಗಿನಿಂದ 15 ವರ್ಷ ಇದರ ಮೆಚ್ಯೂರಿಟಿ ಅವಧಿಯಾಗಿರುತ್ತದೆ. ಆದರೆ ಖಾತೆ ತೆರೆದ 7 ವರ್ಷ ಪೂರ್ತಿ ಆದ ಮಲೆ ಅವಧಿಪೂರ್ವ ವಿಥ್​ಡ್ರಾಗೆ ಅವಕಾಶ ಇದೆ.

ವಿಪಿಎಫ್ ಎಂಬುದು ವೇತನದಾರರಿಗೆ ಮಾತ್ರ ಇರುವ ಯೋಜನೆ. ಪಿಪಿಎಫ್ ವೇತನದಾರರು ಮತ್ತು ಆ ವರ್ಗದಿಂದ ಹೊರಗಿರುವವರು ಇಬ್ಬರಿಗೂ ಇದೆ. ಆದರೆ ಅನಿವಾಸಿ ಭಾರತೀಯರಿಗೆ ಇಲ್ಲ. ಪಿಪಿಎಫ್​ನಲ್ಲಿ ಗರಿಷ್ಠ ಉಳಿತಾಯ ಮೊತ್ತ ರೂ. 1.5 ಲಕ್ಷ ರೂಪಾಯಿ. ಆದರೆ ವಿಪಿಎಫ್​ಗೆ ಆ ರೀತಿಯ ಮಿತಿ ಇಲ್ಲ. ಇನ್ನು ರಿಟರ್ನ್ಸ್ ಬಗ್ಗೆ ಹೇಳುವುದಾದರೆ ಪಿಪಿಎಫ್​ಗೆ ವಾರ್ಷಿಕ ಬಡ್ಡಿ ದರ ಶೇ 7.10 ಇದ್ದರೆ, ವಿಪಿಎಫ್​ಗೆ ಶೇ 8.5 ಇದೆ. ಆದರೆ ಈ ದರಗಳು ಭವಿಷ್ಯದಲ್ಲಿ ಇಳಿಕೆ ಆಗಬಹುದು.

ವಿಪಿಎಫ್ ಮತ್ತು ಪಿಪಿಎಫ್​ಗೆ ಅವುಗಳದೇ ಆದ ಪಾಸಿಟಿವ್ ಹಾಗೂ ನೆಗೆಟಿವ್​ಗಳಿವೆ. ವಿಪಿಎಫ್​ಗಾದರೆ ನಿಮ್ಮ ಉಳಿತಾಯ ಖಾತೆಯಿಂದ ಹಣ ಹಾಕಬೇಕು ಅಂತೇನೂ ಚಿಂತೆ ಇಲ್ಲ. ಇನ್ನು ಪಿಪಿಎಫ್​ಗೆ ನಿಮಗೆ ಯಾವಾಗ ಬೇಕೋ ಆಗ ಹಣ ಹಾಕಬಹುದು. ಇವೆರಡರ ಪೈಕಿ ವಿಪಿಎಫ್ ಉತ್ತಮ ಆಯ್ಕೆಯಂತೆ ಅನಿಸುತ್ತದೆ. ಇದು ಹೆಚ್ಚಿನ ಬಡ್ಡಿ ನೀಡುತ್ತದೆ ಅಂತಷ್ಟೇ ಅಲ್ಲ. ಮೂರು ಬಗೆಯಲ್ಲಿ ತೆರಿಗೆ ವಿನಾಯಿತಿಯನ್ನು ನೀಡುತ್ತದೆ ಎಂಬ ಕಾರಣಕ್ಕೆ.

ಇದನ್ನೂ ಓದಿ: EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್​ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು

(VPF or PPF which one is better investment?)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ