ಕೇಂದ್ರ ಸಚಿವಾಲಯದ ವೆಬ್​​ಸೈಟ್​​ಗಳ ಮೌಲ್ಯಮಾಪನ; ಗೃಹ ವ್ಯವಹಾರಗಳ ಸಚಿವಾಲಯದ ವೆಬ್​​ಸೈಟ್​​ಗೆ ಮೊದಲ ಸ್ಥಾನ

ಇದು ನಿರ್ದಿಷ್ಟ ಅವಧಿಯ ಮೌಲ್ಯಮಾಪನವಾಗಿದ್ದು ರಾಜ್ಯ , ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸರ್ಕಾರ ನಾಗರಿಕರಿಗೆ ಆನ್​​ಲೈನ್ ಸೇವೆಗಳನ್ನು ನೀಡುವುದನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ.

ಕೇಂದ್ರ ಸಚಿವಾಲಯದ ವೆಬ್​​ಸೈಟ್​​ಗಳ ಮೌಲ್ಯಮಾಪನ; ಗೃಹ ವ್ಯವಹಾರಗಳ ಸಚಿವಾಲಯದ ವೆಬ್​​ಸೈಟ್​​ಗೆ ಮೊದಲ ಸ್ಥಾನ
ಎಂಎಚ್ಎ ವೆಬ್​​ಸೈಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 15, 2022 | 1:43 PM

ದೆಹಲಿ: ಕೇಂದ್ರ ಸರ್ಕಾರದ ಎಲ್ಲ ವೆಬ್​​ಸೈಟ್​​ಗಳಲ್ಲಿ ಗೃಹ ವ್ಯವಹಾರಗಳ ಸಚಿವಾಲಯ (MHA) ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. 2021ರಲ್ಲಿ ನಾಸ್ಕಾಂ (NASSCOM)ಮತ್ತು ಕೆಪಿಎಂಜಿ ( KPMG)ಸಹಯೋಗದಲ್ಲಿ ಆಡಳಿತಾತ್ಮಕ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ನಡೆಸಿದ ರಾಷ್ಟ್ರೀಯ ಇ ಆಡಳಿತ ಸೇವೆ ನಿರ್ವಹಣೆ ಮೌಲ್ಯಮಾಪನದಲ್ಲಿ ಎಂಎಚ್ಎ ಮೊದಲ ಸ್ಥಾನಗಳಿಸಿದೆ. ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (PIB), ಇದು ನಿರ್ದಿಷ್ಟ ಅವಧಿಯ ಮೌಲ್ಯಮಾಪನವಾಗಿದ್ದು ರಾಜ್ಯ , ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸರ್ಕಾರ ನಾಗರಿಕರಿಗೆ ಆನ್​​ಲೈನ್ ಸೇವೆಗಳನ್ನು ನೀಡುವುದನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಮೌಲ್ಯಮಾಪನದ ನಂತರ ಇತ್ತೀಚೆಗೆ ಇದರ ಫಲಿತಾಂಶ ಬಿಡುಗಡೆಯಾಗಿದ್ದು, ಕೇಂದ್ರ ಸಚಿವಾಲಯಗಳ ಪೋರ್ಟಲ್​ಗಳ ಪೈಕಿ ಗೃಹ ವ್ಯವಹಾರಗಳ ಸಚಿವಾಲಯದ ವೆಬ್ ಸೈಟ್ ನಂಬರ್ 1 ಸ್ಥಾನದಲ್ಲಿದೆ. ಅದೇ ವೇಳೆ ಕೇಂದ್ರ ಸಚಿವಾಲಯ ಸೇವೆಗಳ ಪೋರ್ಟಲ್​​ಗಳಲ್ಲಿ ಡಿಜಿಟಲ್ ಪೊಲೀಸ್ ಪೋರ್ಟಲ್ ಎರಡನೇ ಸ್ಥಾನದಲ್ಲಿದೆ ಎಂದು ಪಿಐಬಿ ಹೇಳಿದೆ.  ಈ ಪ್ರಕ್ರಿಯೆಯಲ್ಲಿ ಸೇವಾ ಪೋರ್ಟಲ್ ಗಳನ್ನು ಸಚಿವಾಲಯ, ಇಲಾಖೆ ಪೋರ್ಟಲ್ ಗಳೊಂದಿಗೆ ಮೌಲ್ಯಮಾಪನ ಮಾಡಲಾಗಿದೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊದ (NCRB) ಡಿಜಿಟಲ್ ಪೊಲೀಸ್ ಪೋರ್ಟಲ್​​ನ್ನು https://digitalpolice.gov.in ಸರ್ವೀಸ್ ಪೋರ್ಟಲ್ ಅಡಿಯಲ್ಲಿ ಮೌಲ್ಯಮಾಪನ ಮಾಡಲಾಗಿದೆ, ಅದೇ ರೀತಿ ಸಚಿವಾಲದ ಪೋರ್ಟಲ್​​ಗಳ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ವೆಬ್​​ಸೈಟ್ https://mha.gov.in ನ್ನು ಮೌಲ್ಯ ಮಾಪನ ಮಾಡಲಾಗಿದೆ.

ಎಲ್ಲ ಸರ್ಕಾರಿ ಪೋರ್ಟಲ್ ಗಳನ್ನು ಮೌಲ್ಯಮಾಪನಕ್ಕಾಗಿ ಎರಡು ಪ್ರಧಾನ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ರಾಜ್ಯ/ಕೇಂದ್ರಾಡಳಿತ ಪ್ರದೇಶ /ಕೇಂದ್ರ ಸಚಿವಾಲಯದ ಪೋರ್ಟಲ್ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶ /ಕೇಂದ್ರ ಸಚಿವಾಲಯದ ಸೇವಾ ಪೋರ್ಟಲ್ ಗಳು. ಕೇಂದ್ರ ಸಚಿವಾಲಯದ ಪೋರ್ಟಲ್ ಗಳ ಮೌಲ್ಯಮಾಪನಕ್ಕಿರುವ ನಿಯತಾಂಕಗಳೆಂದರೆ ಪ್ರವೇಶ, ವಿಷಯದ ಲಭ್ಯತೆ, ಸುಲಭ ಬಳಕೆ, ಮಾಹಿತಿ ಸುರಕ್ಷೆ ಮತ್ತು ಗೌಪ್ಯತೆ. ಕೇಂದ್ರ ಸಚಿವಾಲಯದ ಸೇವಾ ಪೋರ್ಟಲ್​​ಗಳ ಮೌಲ್ಯಮಾಪನಕ್ಕೆ ಮೂರು ನಿಯತಾಂಕಗಳನ್ನು ಪರಿಗಣಿಸಲಾಗಿತ್ತು ಅವುಗಳೆಂದರೆ ಸೇವಾ ವಿತರಣೆ, ಇಂಟಗ್ರೇಟೆಡ್ ಸರ್ವೀಸ್ ಡೆಲಿವರಿ, ಸ್ಟೇಟಸ್ ಮತ್ತು ರಿಕ್ವೆಸ್ಟಿಂಗ್ ಟ್ರ್ಯಾಕಿಂಗ್ ಎಂದು ಪಿಐಬಿ ಹೇಳಿದೆ.