Explainer: ಏನಿದು B.1.617 ಡಬಲ್ ರೂಪಾಂತರಿ ವೈರಾಣು? 

Double Mutant Corona Cases: SARS-CoV-2 ನ B.1.617 ರೂಪಾಂತರಿಯು E484Q ಮತ್ತು L452R ಎಂಬ ಎರಡು ರೂಪಾಂತರಿಗಳನ್ನು ಹೊಂದಿದೆ. ಇವೆರಡೂ ಪ್ರತ್ಯೇಕವಾಗಿ ಇತರ ಅನೇಕ ಕೊರೊನಾವೈರಸ್ ಪ್ರಬೇಧಗಳಲ್ಲಿ ಕಂಡುಬರುತ್ತವೆ. ಆದರೆ ಅವುಗಳು ಭಾರತದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಪತ್ತೆಯಾಗಿದೆ.

Explainer: ಏನಿದು B.1.617 ಡಬಲ್ ರೂಪಾಂತರಿ ವೈರಾಣು? 
ಕೊರೊನಾವೈರಸ್ ಪರೀಕ್ಷೆ
Follow us
ರಶ್ಮಿ ಕಲ್ಲಕಟ್ಟ
|

Updated on:Apr 15, 2021 | 1:03 PM

ಮುಂಬೈ: ಕಳೆದ ವಾರ ಮಹಾರಾಷ್ಟ್ರದ ಜಿಲ್ಲಾ ಪ್ರಯೋಗಾಲಯಗಳೊಂದಿಗಿನ ಸಭೆಯಲ್ಲಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಸಂಗ್ರಹಿಸಿದ 361 ಜೀನೋಮ್ ಅನುಕ್ರಮ ಮಾದರಿಗಳ ಮಾಹಿತಿ ಹಂಚಿಕೊಂಡಿತ್ತು. ಭಾರತದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾ ಗುತ್ತಿದ್ದು, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಧ್ಯಯನದ ಪ್ರಕಾರ ಭಾರತದಲ್ಲಿ ಕೊರೊನಾ ವೈರಾಣು ಎರಡೆರಡು ಬಾರಿ ರೂಪಾಂತರಗೊಂಡಿರುವುದು ತಿಳಿದು ಬಂದಿದೆ. ಮಹಾಾಷ್ಟ್ರದಲ್ಲಿ ಕೊವಿಡ್ ಪರೀಕ್ಷೆಗಾಗಿ ಸಂಗ್ರಹಿಸಿದ ಮಾದರಿಗಳ ಪೈಕಿ ಶೇಕಡಾ 61 ಮಾದರಿಗಳಲ್ಲಿ ಡಬಲ್ ಮ್ಯುಟೇಷನ್ (ಡಬಲ್ ರೂಪಾಂತರಿ) ವೈರಾಣು ಇರುವುದು ಪತ್ತೆಯಾಗಿದೆ. ಈ ರೂಪಾಂತರಿ ವೈರಾಣುಗಳ ಪ್ರಬೇಧಗಳನ್ನು B.1.617 ಎಂದು ವರ್ಗೀಕರಿಸಲಾಗಿದೆ.

ಏನಿದು B.1.617? SARS-CoV-2 ನ B.1.617 ರೂಪಾಂತರಿಯು E484Q ಮತ್ತು L452R ಎಂಬ ಎರಡು ರೂಪಾಂತರಿಗಳನ್ನು ಹೊಂದಿದೆ. ಇವೆರಡೂ ಪ್ರತ್ಯೇಕವಾಗಿ ಇತರ ಅನೇಕ ಕೊರೊನಾವೈರಸ್ ಪ್ರಬೇಧಗಳಲ್ಲಿ ಕಂಡುಬರುತ್ತವೆ. ಆದರೆ ಅವುಗಳು ಭಾರತದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಪತ್ತೆಯಾಗಿದೆ. ಎರಡು ರೂಪಾಂತರಿಗಳು ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಿ ಕಂಡುಬರುತ್ತವೆ. ಸ್ಪೈಕ್ ಪ್ರೋಟೀನ್ ಎಂಬುದು  ವೈರಸ್​ನ್ನು  ಮಾನವ ಜೀವಕೋಶದ ಗ್ರಾಹಕಗಳೊಂದಿಗೆ ಬಂಧಿಸಲು ಸಹಾಯ ಮಾಡುತ್ತದೆ ಮತ್ತು ಆತಿಥೇಯ ಕೋಶಕ್ಕೆ ಪ್ರವೇಶ ಪಡೆಯುತ್ತದೆ.

E484Q ರೂಪಾಂತರಿಯು E484K ಗೆ ಹೋಲುತ್ತದೆ, ಇದು ಬ್ರಿಟನ್ ನಲ್ಲಿ (ವಂಶಾವಳಿ B.1.1.7) ಮತ್ತು ದಕ್ಷಿಣ ಆಫ್ರಿಕಾದ (B.1.351) ಕೊರೊನಾವೈರಸ್‌ ರೂಪಾಂತರಿಗಳಲ್ಲಿ ಕಂಡುಬರುತ್ತದೆ.

L452R ರೂಪಾಂತರಿಯು ಕ್ಯಾಲಿಫೋರ್ನಿಯಾದಲ್ಲಿ ವೇಗವಾಗಿ ಹರಡುವ ವೈರಾಣು ಪ್ರಬೇಧಗಳಲ್ಲಿ (B.1.427 ಮತ್ತು B.1.429) ಕಂಡುಬಂದಿದೆ . ಇದು ಮಾನವ ಜೀವಕೋಶಗಳಲ್ಲಿರುವ ACE2 (Angiotensin-converting enzyme 2) ಗ್ರಾಹಕಗಳೊಂದಿಗೆ ಸ್ಪೈಕ್ ಪ್ರೋಟೀನ್‌ಗಳ ಬಂಧಿಸುವ ಶಕ್ತಿಯನ್ನು ಹೆಚ್ಚಿಸಿ, ವೈರಾಣು ಹರಡುವಂತೆ ಮಾಡುತ್ತದೆ. L452R ಸಹ ವೈರಲ್ ಪುನರಾವರ್ತನೆಯನ್ನು ಹೆಚ್ಚಿಸುತ್ತದೆ. E484Q ಮತ್ತು L452R ಒಟ್ಟಿಗೆ ಸೇರಿದರೆ ಹೆಚ್ಚು ಸಾಂಕ್ರಾಮಿಕವಾಗಿದ್ದು, ಪ್ರತಿಕಾಯಗಳಿಗೆ ಬಗ್ಗುವುದಿಲ್ಲ.

B.1.617 ಎಲ್ಲಿ ಪತ್ತೆಯಾಗಿದೆ? ಈ ಬಗ್ಗೆ ನಿಯಮಿತ ಮಾಹಿತಿಗಳಷ್ಟೇ ಸದ್ಯ ಲಭ್ಯವಾಗಿದೆ. ಮೊದಲ ಬಾರಿ ಇದು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಜನವರಿ ತಿಂಗಳಲ್ಲಿ ವಿವಿಧ ಜಿಲ್ಲೆಗಳಿಂದ 19 ಮಾದರಿಗಳನ್ನು ಸಂಗ್ರಹಿಸಿದ್ದು ಈ ಪೈಕಿ ನಾಲ್ಕು ಮಾದರಿಗಳಲ್ಲಿ B.1.617 ರೂಪಾಂತರಿ ಪತ್ತೆಯಾಗಿದೆ. ಫೆಬ್ರವರಿಯಲ್ಲಿ 18 ಜಿಲ್ಲೆಗಳಿಂದ 151 ಮಾದರಿ ಸಂಗ್ರಹಿಸಲಾಗಿತ್ತು. ಈ ಪೈಕಿ ಕನಿಷ್ಠ 16 ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ರೂಪಾಂತರಿ ವೈರಾಣು ಪತ್ತೆಯಾಗಿದೆ. ಮಾರ್ಚ್ ತಿಂಗಳಲ್ಲಿ ಸಂಗ್ರಹಿಸಿದ 94ಮಾದರಿಗಳ ಪೈಕಿ 65 ಮಾದರಿಗಳಲ್ಲಿ ರೂಪಾಂತರಿ ಪತ್ತೆಯಾಗಿದೆ

ಇಲ್ಲಿಯವರೆಗೆ ಅಮರಾವತಿ, ನಾಗ್ಪುರ್,ಅಕೊಲಾ, ವಾರ್ಧಾ, ಪುಣೆ, ಥಾಣೆ, ಔರಂಗಬಾದ್ ಮತ್ತು ಚಂದ್ರಾಪುರ್ ಜಿಲ್ಲೆ ಯಲ್ಲಿ B.1.617 ರೂಪಾಂತರಿ ವೈರಾಣು ಪತ್ತೆಯಾಗಿರುವುದಕ್ಕೆ ಪ್ರಬಲ ಪುರಾವೆಗಳಿವೆ. ಇತರ ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಕೆಲವೇ ಕೆಲವು ಮಾದರಿಗಳಲ್ಲಿ ಮಾತ್ರ ರೂಪಾಂತರಿ ವೈರಾಣು ಪತ್ತೆಯಾಗಿದೆ.

ಈ ರೂಪಾಂತರಿಗಳು ಹೆಚ್ಚು ಮಾರಕವಾಗಿದೆ? ಇದಕ್ಕೆ ಪೂರಕ ಸಾಕ್ಷ್ಯಗಳು ಈವರೆಗೆ ಲಭ್ಯವಾಗಿಲ್ಲ. ರೋಗಿಗಳು ಹೋಮ್ ಐಸೋಲೇಷನ್ ನಲ್ಲಿರುವುದು ಉತ್ತಮ. ವೈಜ್ಞಾನಿಕ ಪುರಾವೆಗಳು ಸಿಗಬೇಕಾದರೆ ಕ್ಲಿನಿಕಲ್ ಪರೀಕ್ಷೆ ಮಾಹಿತಿ ಜತೆಗೆ ಜೀನೋಮ್ ಸೀಕ್ವೆನ್ಸಿಂಗ್ ಡೇಟಾವನ್ನು ಸಂಯೋಜಿಸಬೇಕಾಗುತ್ತದೆ. ವೈದ್ಯರ ಪ್ರಕಾರ ಈ ರೂಪಾಂತರಿಯು ವೇಗವಾಗಿ ಹರಡುತ್ತಿದ್ದು ಹೆಚ್ಚು ಸಾಂಕ್ರಾಮಿಕವಾಗಿದೆ. ಇದರಿಂದಾಗಿ ಇಡೀ ಕುಟುಂಬಗಳಿಗೆ ಸೋಂಕು ತರುತ್ತದೆ, ಆದರೆ ಕಡಿಮೆ ಮಾರಕವಾಗಿದೆ. ಈ ವೈರಾಣು ಸೋಂಕು ತಗುಲಿದರೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬರುವುದಿಲ್ಲ.

ಹೆಚ್ಚಿನ ರೋಗಿಗಳಳಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುವುದಿಲ್ಲ. ಇದು ಉತ್ತಮ ಸೂಚನೆಯಾಗಿದೆ. ಆದರೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ವ್ಯವಸ್ಥೆ ಮೇಲೆ ಹೊರೆಯಾಗಿದೆ ಎಂದು ಮಹಾರಾಷ್ಟ್ರ ಕೋವಿಡ್ ಟಾಸ್ಕ್ ಫೋರ್ಸ್ ನ ತಜ್ಞ ಡಾ.ಶಶಾಂಕ್ ಜೋಷಿ ಹೇಳಿದ್ದಾರೆ.

ಈ ರೂಪಾಂತರಿ ವೈರಾಣು ಎಷ್ಟು ವ್ಯಾಪಿಸಿದೆ? ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕ ಡಾ.ಸುಜೀತ್ ಸಿಂಗ್ ಅವರು ಪ್ರಕಾರ ಮಹಾರಾಷ್ಟ್ರದಿಂದ ಕೆಲವೇ ಕೆಲವು ಮಾದರಿಗಳನ್ನು ಈವರೆಗೆ ಪರೀಕ್ಷೆಗೊಳಪಡಿಸಿರುವುದರಂದ ಡಬಲ್ ರೂಪಾಂತರಿತ ಎಷ್ಟು ವ್ಯಾಪಕವಾಗಿದೆ ಎಂಬುದರ ಬಗ್ಗೆ ಈಗ ಖಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸರಿಯೆನಿಸುವುದಿಲ್ಲ. ಆದಾಗ್ಯೂ, ಮಹಾರಾಷ್ಟ್ರದಲ್ಲಿ ಶೇಕಡಾ 15-20 ರಷ್ಟು ಮಾದರಿಗಳಲ್ಲಿ ಈ ರೂಪಾಂತರಿಗಳು ಇವೆ ಎಂದು ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ವರದಿ ಮಾಡಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಈ ಸಂಖ್ಯೆ ಈಗ ಶೇಕಡಾ 60 ಕ್ಕಿಂತ ಹೆಚ್ಚಾಗಿದೆ ಎಂದು ನಮಗೆ ತಿಳಿದು ಬಂದಿದೆ.

ಮಹಾರಾಷ್ಟ್ರದ ವೈದ್ಯರು ಮತ್ತು ಜಿಲ್ಲಾಡಳಿತ ಕೊರೊನಾವೈರಸ್ ಮೊದಲ ಅಲೆಗಿಂತ ಭಿನ್ನವಾಗಿ, ಇಡೀ ಕುಟುಂಬಗಳು ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದೆ. ಮನೆಯಲ್ಲಿ ದೈಹಿಕ ದೂರ ಮತ್ತು ಪ್ರತ್ಯೇಕತೆಯ ಕ್ರಮಗಳು ಅಸಮರ್ಪಕವಾಗಿವೆ ಅಥವಾ ವೈರಸ್ ಹೆಚ್ಚು ಹರಡುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ದೇಶದಲ್ಲಿ ಕೊವಿಡ್ ಪ್ರಕರಣ ಏರಿಕೆಗೆ ಕಾರಣ ರೂಪಾಂತರಿ ವೈರಸ್? ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ ಪ್ರಾಧ್ಯಾಪಕ ಡಾ.ಗಂಗನ್ ದೀಪ್ ಕಾಂಗ್ ಪ್ರಕಾರ ಈ ರೂಪಾಂತರಿ ಹೆಚ್ಚಾಗಿ ಹೊಂದಿರುವ 60.9 ಶೇಕಡಾ ಮಾದರಿಗಳು ರೂಪಾಂತರ (ಮ್ಯುಟೇಷನ್)ಮತ್ತು ಉಲ್ಬಣಗಳ ನಡುವಿನ ಸಂಬಂಧವನ್ನು ತೋರಿಸಿದೆ. ಆದಾಗ್ಯೂ, ನಿಖರವಾದ ಉತ್ತರಕ್ಕಾಗಿ ಕನಿಷ್ಠ 1 ಶೇಕಡಾ ಕೋವಿಡ್-19 ಮಾದರಿಗಳನ್ನು ಪ್ರತಿ ವಾರ ಅನುಕ್ರಮಗೊಳಿಸಬೇಕು. ಭಾರತವು ಪ್ರಸ್ತುತ ಪ್ರತಿದಿನ 1 ಲಕ್ಷ ಮಾದರಿಗಳನ್ನು ಪರೀಕ್ಷಿಸುತ್ತಿದೆ ಅಂದರೆ ಪ್ರತಿದಿನ ಸರಿಸುಮಾರು 1,000 ಜೀನೋಮ್ ಅನುಕ್ರಮಗೊಳಿಸಲಾಗುತ್ತದೆ. (genome sequence (ಜೀನೋಮ್ ಅನುಕ್ರಮ) ಎನ್ನುವುದು ಒಂದು ನಿರ್ದಿಷ್ಟ ಜೀವಿಯ ಜೀನೋಮ್‌ನ ಸಂಪೂರ್ಣ ಡಿಎನ್‌ಎ ಅನುಕ್ರಮವನ್ನು ನಿರ್ಧರಿಸಲು ಬಳಸುವ ಒಂದು ವಿಧಾನ). ಒಬ್ಬ ವ್ಯಕ್ತಿಯಿಂದ ಎಷ್ಟು ಜನರಿಗೆ ಸೋಂಕು ತಗಲುತ್ತದೆ ಮತ್ತು ಆರ್​ಟಿ-ಪಿಸಿಆರ್ ಸೈಕಲ್ ಮಿತಿಯನ್ನು ನಾವು ನೋಡಬೇಕಾಗಿದೆ. ಇದಕ್ಕಾಗಿ ಲೈವ್ ಟ್ರ್ಯಾಕಿಂಗ್ ಮಾಡಬೇಕಾಗಿದೆ. ಜನವರಿಯ ಡೇಟಾಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಇದು ಕಡಿಮೆ ಆಗಿದೆ ಎಂದು ಡಾ ಕಾಂಗ್ ಹೇಳಿದ್ದಾರೆ.

ಸೋನ್​ಪೇಠ್ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸ್  ಪ್ರಾಧ್ಯಾಪಕ ಡಾ. ಗೌತಮ್ ಮೆನನ್ ಪ್ರಕಾರ ವಿವಿಧ ರಾಜ್ಯಗಳಲ್ಲಿ ಹೊಸ ಸೋಂಕುಗಳ ಪ್ರಕರಣಗಳ ಏರಿಕೆಗೆ ಯಾವ ರೂಪಾಂತರಿ ಕಾರಣ ಎಂಬುದನ್ನು ಸಾಬೀತು ಪಡಿಸಲು ನಮಗೆ ಹೆಚ್ಚಿನ ಜೀನೋಮ್ ಸೀಕ್ವೆನ್ಸಿಂಗ್ ಡೇಟಾ ಅಗತ್ಯವಿದೆ. ಪ್ರಕರಣಗಳ ಏರಿಕೆಗೆ ಈ ಡಬಲ್ ರೂಪಾಂತರಿ ಪ್ರಬೇಧವೇ ಕಾರಣ ಎಂದು ಹೇಳಲು, ನಾವು ಇನ್ನಷ್ಟು ಕಾಲಾವಧಿಯಯ ಡೇಟಾಗಳನ್ನು ಬಳಸಬೇಕು. ಉದಾಹರಣೆಗೆ, ಮಾರ್ಚ್ 30 ರಂದು ನಾವು ಈ ರೂಪಾಂತರಿಯ ಶೇ 30 ಮತ್ತು ನಂತರ ಏಪ್ರಿಲ್ 14 ರಂದು ಶೇ 40 ಮಾದರಿಗಳನ್ನು ಪತ್ತೆ ಮಾಡಿದ್ದೇವೆ ಎಂದು ನಾವು ಹೇಳಿದರೆ, ಅದು ಹೊಸ ರೂಪಾಂತರಿಯು ರೋಗದ ಹರಡುವಿಕೆಯಲ್ಲಿ ಪ್ರಾಬಲ್ಯ ಹೊಂದಿದೆ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.

ರೂಪಾಂತರಿಗಳ ವಿರುದ್ಧ ಲಸಿಕೆ ಹೇಗೆ ಕೆಲಸ ಮಾಡುತ್ತದೆ? ಇದನ್ನು ಹೇಳುವುದಕ್ಕೆ ಅಗತ್ಯ ಮಾಹಿತಿಗಳ ಕೊರತೆ ಇದೆ. ಮೊದಲ ಡೋಸ್ ಕೊವಿಡ್ ಲಸಿಕೆ ಸ್ವೀಕರಿಸಿದವರಿಗೂ ರೋಗ ಬಂದಿದೆ. ಆದರೆ ಅವರ ಮಾದರಿಗಳು ಜಿನೋಮ್ ಅನುಕ್ರಮಕ್ಕೆ ಕಳುಹಿಸಿಕೊಡಲಾಗಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಾಣುಗಳು ಪ್ರತಿರೋಧಗಳಿಂದ ನುಣುಚಿಕೊಳ್ಳುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ನಾವು ನೋಡಿದ್ದೇವೆ. ಬ್ರಿಟನ್ ರೂಪಾಂತರಿ ಹೆಚ್ಚು ಪ್ರಸರಣ ಸಾಮರ್ಥ್ಯ ಹೊಂದಿರುವವುಗಳು . ಆದರೆ ಈವರೆಗೆ ನಮಗೆ B.1.617 ಬಗ್ಗೆ ಗೊತ್ತಿಲ್ಲ. ಅದಕ್ಕಾಗಿ ಹೆಚ್ಚಿನ ಮಾಹಿತಿಗಳು ಬೇಕು ಎಂದು ಡಾ. ಕಾಂಗ್ ಹೇಳಿದ್ದಾರೆ.

ಇದನ್ನೂ ಓದಿ: ದೇಶಿ ರೂಪಾಂತರಿ.. ಭಾರತದಲ್ಲೇ ಎರಡೆರಡು ಬಾರಿ ರೂಪಾಂತರವಾಗಿದೆ ಕೊರೊನಾ ವೈರಾಣು! ಹೊಸ ಅಧ್ಯಯನದಿಂದ ಬಯಲಾಯ್ತು ಮಾಹಿತಿ

Coronavirus India Update: ಕಳೆದ 24 ಗಂಟೆಗಳಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ಪತ್ತೆ, 1,038 ಮಂದಿ ಸಾವು

(What is Double Mutant of coronavirus Could B.1.617 variant be driving the ongoing surge in Covid 19 cases in India)

Published On - 12:58 pm, Thu, 15 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್