AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Shield: ಪಾಕಿಸ್ತಾನದ ಗಡಿಯಲ್ಲಿರುವ 5 ರಾಜ್ಯಗಳಲ್ಲಿ ಮೇ 31ರಂದು ಆಪರೇಷನ್ ಶೀಲ್ಡ್​, ಹಾಗೆಂದರೇನು?

ಕಾಶ್ಮೀರದಿಂದ ಗುಜರಾತ್‌ವರೆಗಿನ ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಅಣಕು ಕವಾಯತು ಆಪರೇಷನ್ ಶೀಲ್ಡ್​ ನಡೆಸಲು ನಿರ್ಧರಿಸಿದೆ. ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ಚಂಡೀಗಢದಲ್ಲಿ ಆಪರೇಷನ್ ಶೀಲ್ಡ್ ಹೆಸರಿನಲ್ಲಿ ಈ ಅಣಕು ಕವಾಯತು ಮೇ 29ರಂದು ನಡೆಯಬೇಕಿತ್ತು, ಅದನ್ನು ಮೇ 31ಕ್ಕೆ ಮುಂದೂಡಲಾಗಿದೆ. ಆಪರೇಷನ್ ಶೀಲ್ಡ್​ ಎಂದರೇನು? ಅದನ್ನು ಯಾವ ಉದ್ದೇಶದಿಂದ ನಡೆಸಲಾಗುತ್ತದೆ ಇಲ್ಲಿದೆ ಮಾಹಿತಿ.

Operation Shield: ಪಾಕಿಸ್ತಾನದ ಗಡಿಯಲ್ಲಿರುವ 5 ರಾಜ್ಯಗಳಲ್ಲಿ ಮೇ 31ರಂದು ಆಪರೇಷನ್ ಶೀಲ್ಡ್​, ಹಾಗೆಂದರೇನು?
ಆಪರೇಷನ್ ಶೀಲ್ಡ್​ Image Credit source: Republicworld.com
ನಯನಾ ರಾಜೀವ್
|

Updated on: May 30, 2025 | 1:46 PM

Share

ನವದೆಹಲಿ, ಮೇ 30: ಕೇಂದ್ರ ಸರ್ಕಾರವು ಗಡಿ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್, ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಮೇ 31ರಂದು ಆಪರೇಷನ್​ ಶೀಲ್ಡ್(Operation Shield)​ ಅಡಿಯಲ್ಲಿ ಅಣಕು ಕವಾಯತು ನಡೆಸಲು ನಿರ್ಧರಿಸಿದೆ.  ಗಡಿಗಳಲ್ಲಿ ಮೂರು ರಾತ್ರಿಗಳ ಕಾಲ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಭೀಕರ ಘರ್ಷಣೆಗಳ ನಂತರ ಈ ಅಣಕು ಕವಾಯತು ನಡೆಸಲಾಗುತ್ತಿದೆ. ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನವು ಭಾರತದ ನಾಗರಿಕ ಪ್ರದೇಶಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.

ಮೇ31ರಂದು ಅಣಕು ಪ್ರದರ್ಶನ ಮೇ 7 ರಂದು, ಆಪರೇಷನ್ ಸಿಂಧೂರ್‌ಗೆ ಕೆಲವು ಗಂಟೆಗಳ ಮೊದಲು, ದೇಶಾದ್ಯಂತ ಅಣಕು ಡ್ರಿಲ್ ಅನ್ನು ನಡೆಸಲಾಯಿತು . ಅದೇ ರಾತ್ರಿ, ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಪ್ರಮುಖ ಕಾರ್ಯಾಚರಣೆ ನಡೆಸಿತು.

ಆಪರೇಷನ್ ಶೀಲ್ಡ್​ ಎಂದರೇನು? ಆಪರೇಷನ್ ಶೀಲ್ಡ್ ಎಂಬುದು ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಅಣಕು ಕವಾಯತು ಆಗಿದ್ದು , ತುರ್ತು ಪರಿಸ್ಥಿತಿಗಳಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಭಾರತದ ಸನ್ನದ್ಧತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಒಂದೊಮ್ಮೆ ಡ್ರೋನ್, ಬಾಂಬ್ ದಾಳಿಯಂತಹ ತುರ್ತು ಪರಿಸ್ಥಿತಿಗಳು ಎದುರಾದರೆ ನಾಗರಿಕರು ಧೈರ್ಯಗೆಡದೆ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು, ಹೇಗೆ ತಮ್ಮನ್ನು ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಕೆಲವು ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ.

ಇದನ್ನೂ ಓದಿ
Image
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
Image
ಸೈಬರ್ ಅಪರಾಧಿಗಳ ವಿರುದ್ಧ 19 ಕಡೆ ಸಿಬಿಐ ಕಾರ್ಯಾಚರಣೆ
Image
ಬುರ್ಖಾ ಧರಿಸಿ ಸೊಸೆ ಮನೆಗೆ ನುಗ್ಗಿದ ಮಾವ, ಮುಂದೇನಾಯ್ತು?
Image
ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ನಿರ್ಬಂಧದ ನಡುವೆ ಇಲ್ಲಿದೆ ಗುಡ್ ನ್ಯೂಸ್

ಈ ಕವಾಯತು ಪಾಕಿಸ್ತಾನದ ಗಡಿಯಲ್ಲಿರುವ ಐದು ರಾಜ್ಯಗಳಲ್ಲಿ ನಡೆಯಲಿದೆ ಅವುಗಳೆಂದರೆ ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ . ಇದನ್ನು ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಅಗ್ನಿಶಾಮಕ ಸೇವೆಗಳು ಮತ್ತು ಗೃಹರಕ್ಷಕ ದಳದ ನಿರ್ದೇಶನಾಲಯವು ಆಯೋಜಿಸಿದೆ.

ಮತ್ತಷ್ಟು ಓದಿ: ಪಾಕ್ ಬಳಸಿದ ಚೀನಾ ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ, ಚೀನಾ ಹೇಳಿದ್ದೇನು?

ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಸರ್ಕಾರ ಸೇರಿದಂತೆ ವಿವಿಧ ಸಂಸ್ಥೆಗಳ ನಡುವೆ ಸುಗಮ ಸಂವಹನ ಮತ್ತು ಸಮನ್ವಯವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ವೈಮಾನಿಕ ಬೆದರಿಕೆಗಳು, ಡ್ರೋನ್ ದಾಳಿಗಳು ಮತ್ತು ಇತರ ತುರ್ತು ಪರಿಸ್ಥಿತಿಗಳಂತಹ ಸನ್ನಿವೇಶಗಳನ್ನು ಒಳಗೊಂಡ ಅಣಕು ಅಭ್ಯಾಸಗಳನ್ನು ನಡೆಸುವುದು.ಸುರಕ್ಷತಾ ಶಿಷ್ಟಾಚಾರಗಳು ಮತ್ತು ತುರ್ತು ಕಾರ್ಯವಿಧಾನಗಳ ಬಗ್ಗೆ ನಾಗರಿಕರಿಗೆ ತಿಳಿ ಹೇಳಲಾಗುತ್ತದೆ.

ಮೇ 31ರಂದು ಸಂಜೆ 5 ಗಂಟೆಯಿಂದ ಅಣಕು ಕವಾಯತು ನಡೆಸಲು ನಿರ್ಧರಿಸಲಾಗಿದೆ. ವಾಯು ದಾಳಿ ಎಚ್ಚರಿಕೆ, ಶತ್ರುಗಳ ದಾಳಿ ಸಂದರ್ಭದಲ್ಲಿ ಸ್ಥಳಾಂತರಿಸುವಿಕೆ, ವಾಯು ಪಡೆ ಹಾಗೂ ನಾಗರಿಕ ರಕ್ಷಣಾ ನಿಯಂತ್ರಣಾ ಕೊಠಡಿಗಳ ನಡುವೆ ಹಾಟ್​ಲೈನ್ ಸಕ್ರಿಯಗೊಳಿಸುವುದು, ಹೆಚ್ಚಿನ ಜನರಿಗೆ ಗಾಯಗಳಾದ ಸಂದರ್ಭದಲ್ಲಿ ವೈದ್ಯಕೀಯ ತಂಡ ಹೆಚ್ಚಿಸುವುದು ಇತರೆ ವಿಚಾರಗಳು ಕವಾಯತು ಭಾಗವಾಗಿರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ