AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ಜೀ ಕಾ ತಹಖಾನಾ’ದಲ್ಲಿ ಪೂಜೆಗೆ ಅನುಮತಿ; ನೆಲಮಾಳಿಗೆಗೆ ಈ ಹೆಸರು ಹೇಗೆ ಬಂತು

ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ಜೀ ಕಾ ತಹಖಾನಾ’ದಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ. ಜ್ಞಾನವಾಪಿಯಲ್ಲಿರುವ ಈ ತಹಖಾನಾ ಅಥವಾ ನೆಲಮಾಳಿಗೆಗೆ ವ್ಯಾಸ್ ಜೀ ಕಾ ತಹಖಾನಾ ಎಂಬ ಹೆಸರು ಹೇಗೆ ಬಂತು?. ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಸಿದ ಅರ್ಜಿಯಲ್ಲೇನಿತ್ತು? ಇಲ್ಲಿದೆ ಮಾಹಿತಿ

ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ಜೀ ಕಾ ತಹಖಾನಾ’ದಲ್ಲಿ ಪೂಜೆಗೆ ಅನುಮತಿ; ನೆಲಮಾಳಿಗೆಗೆ ಈ ಹೆಸರು ಹೇಗೆ ಬಂತು
ಜ್ಞಾನವಾಪಿ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ| Edited By: |

Updated on:Feb 02, 2024 | 12:03 PM

Share

ವಾರಣಾಸಿ ಜನವರಿ 31: ವಾರಣಾಸಿಯ (Varanasi) ನ್ಯಾಯಾಲಯವು ಬುಧವಾರದಂದು ಜ್ಞಾನವಾಪಿ ಮಸೀದಿ (Gyanvapi mosque) ಸಂಕೀರ್ಣದಲ್ಲಿರುವ ‘ ವ್ಯಾಸ್ ಜೀ ಕಾ ತಹಖಾನಾ ‘ (Vyasji ka Tehkhana) ಎಂದು ಕರೆಯಲ್ಪಡುವ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಪೂಜೆಯನ್ನು ಮಾಡಲು ಅನುಮತಿ ನೀಡಿದೆ. ಮುಂದಿನ ಏಳು ದಿನಗಳಲ್ಲಿ ಫಿರ್ಯಾದಿದಾರರು ಮತ್ತು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಅಥವಾ ಅರ್ಚಕರು ನಡೆಸುವ ವಿಗ್ರಹಗಳ ಪೂಜೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಆದೇಶ ಹೊರಡಿಸಿದ್ದಾರೆ.

ಹಿಂದೂ ಕಡೆಯವರು ‘ವ್ಯಾಸ್ ಕಾ ತಹಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದಾರೆ. ಜಿಲ್ಲಾಡಳಿತವು 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ (ಎಐಎಂಸಿ) ವಿರುದ್ಧ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಸಲ್ಲಿಸಿದ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದ ತೀರ್ಪು ಬಂದಿದೆ.

ವ್ಯಾಸ್ ಜೀ ಕಾ ತಹಖಾನಾ ಎಂದರೇನು?

ಮಸೀದಿಯು ನೆಲಮಾಳಿಗೆಯಲ್ಲಿ ನಾಲ್ಕು ‘ ತಹಖಾನಾ ‘ಗಳನ್ನು (ನೆಲಮಾಳಿಗೆಗಳು) ಹೊಂದಿದೆ. ಅವುಗಳಲ್ಲಿ ಒಂದು ಇಲ್ಲಿ ವಾಸಿಸುತ್ತಿದ್ದ ವ್ಯಾಸ ಕುಟುಂಬದ ವಶದಲ್ಲಿದೆ. ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಕಮಿಟಿ ವಿರುದ್ಧ ಮೊಕದ್ದಮೆ ಹೂಡಿದ್ದು, ರಿಸೀವರ್ ಆಗಿ ಜಿಲ್ಲಾಧಿಕಾರಿಯನ್ನು ನೇಮಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದರು.

ಅರ್ಜಿಯ ಪ್ರಕಾರ, ಅರ್ಚಕ ಸೋಮನಾಥ ವ್ಯಾಸ್ ಅವರು 1993 ರವರೆಗೆ ಅಧಿಕಾರಿಗಳು ನೆಲಮಾಳಿಗೆಯನ್ನು ಮುಚ್ಚುವವರೆಗೆ ಅಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು. ಸೋಮನಾಥ ವ್ಯಾಸ್ ಅವರ ಮೊಮ್ಮಗನಾಗಿ, ತಹಖಾನಾವನ್ನು ಪ್ರವೇಶಿಸಲು ಮತ್ತು ಪೂಜೆಯನ್ನು ಪುನರಾರಂಭಿಸಲು ಅವಕಾಶ ನೀಡಬೇಕು ಎಂದು ವ್ಯಾಸ್ ಅರ್ಜಿ ಸಲ್ಲಿಸಿದ್ದರು.

ಮಸೀದಿ ಸಮಿತಿಯ ಜನರು ನೆಲಮಾಳಿಗೆಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅವರು ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಅವರು ಆರೋಪಿಸಿದರು, ಎಐಎಂಸಿಯ ವಕೀಲ ಅಖ್ಲಾಕ್ ಅಹ್ಮದ್ ಅವರು ಆಧಾರರಹಿತ ಆರೋಪವನ್ನು ತಳ್ಳಿಹಾಕಿದರು.

ಇದನ್ನೂ ಓದಿ: Gyanvapi mosque case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ಅನುಮತಿ

ಹಿಂದೂ ಅರ್ಜಿದಾರರು ಪ್ರಾರ್ಥನಾ ಹಕ್ಕುಗಳನ್ನು ಕೋರಿ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಹಲವಾರು ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ದ ವರದಿಯಲ್ಲಿ ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸುವ ಮೊದಲು ದೊಡ್ಡ ಹಿಂದೂ ದೇವಾಲಯವು ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ. ಎಎಸ್ಐಯ ವಿಸ್ತೃತ ವರದಿಯು ಅಸ್ತಿತ್ವದಲ್ಲಿರುವ ರಚನೆಗಳ ಆಳವಾದ ಅಧ್ಯಯನವನ್ನು ಉಲ್ಲೇಖಿಸಿದೆ. 17 ನೇ ಶತಮಾನದಲ್ಲಿ “ಅಸ್ತಿತ್ವದಲ್ಲಿರುವ ರಚನೆಯನ್ನು ನಿರ್ಮಿಸುವ ಮೊದಲು ದೊಡ್ಡ ಹಿಂದೂ ದೇವಾಲಯವು ಅಸ್ತಿತ್ವದಲ್ಲಿತ್ತು” ಎಂದು ತೀರ್ಮಾನಿಸಲು ಸೈಟ್‌ನಿಂದ ಸಿಕ್ಕಿದ ಕಲಾಕೃತಿಗಳನ್ನು ಉಲ್ಲೇಖಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:55 pm, Wed, 31 January 24

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ