Wheat Export Ban: ಗೋಧಿ ದರ ಇಳಿಕೆಗೆ ಪ್ಲ್ಯಾನ್: ರಫ್ತು ನಿಷೇಧಿಸಿದ ಭಾರತ

Wheat Export Ban: ಗೋಧಿ ದರ ಇಳಿಕೆಗೆ ಪ್ಲ್ಯಾನ್: ರಫ್ತು ನಿಷೇಧಿಸಿದ ಭಾರತ
ಗೋಧಿ ರಫ್ತು ನಿಷೇಧ

Wheat Export Ban:ಗೋಧಿ(Wheat)ಯ ಬೇಡಿಕೆಗೆ ತಕ್ಕಂತೆ ಬೆಳೆ ಇಲ್ಲದ ಕಾರಣ, ಗೋಧಿ ಹಾಗೂ ಹಿಟ್ಟಿನ ಬೆಲೆ ತಾರಕಕ್ಕೇರಿತ್ತು. ಹೀಗಾಗಿ ಇದೀಗ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತ(Export)ನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.

TV9kannada Web Team

| Edited By: Nayana Rajeev

May 14, 2022 | 10:35 AM

ನವದೆಹಲಿ: ಗೋಧಿ(Wheat)ಯ ಬೇಡಿಕೆಗೆ ತಕ್ಕಂತೆ ಬೆಳೆ ಇಲ್ಲದ ಕಾರಣ, ಗೋಧಿ ಹಾಗೂ ಹಿಟ್ಟಿನ ಬೆಲೆ ತಾರಕಕ್ಕೇರಿತ್ತು. ಹೀಗಾಗಿ ಇದೀಗ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತ(Export)ನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಸಾಗಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ದೇಶದಲ್ಲಿ ದರ ಏರಿಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ರಷ್ಯಾ ಅತಿಕ್ರಮಣ ಆರಂಭಿಸಿದ ಬಳಿಕ ಕಪ್ಪು ಸಮುದ್ರ ಮಾರ್ಗವಾಗಿ ಗೋಧಿ ಪೂರೈಕೆ ಕಡಿಮೆಯಾದ ಬೆನ್ನಲ್ಲೇ ಜಾಗತಿಕ ಖರೀದಿದಾರರು ಭಾರತದತ್ತ ಮುಖಮಾಡಿದ್ದರು.

ಬೇರೆ ದೇಶಗಳಿಗೆ ಗೋಧಿ ರಫ್ತು ಮಾಡಬೇಕಿದ್ದರೆ ಸರ್ಕಾರದ ಅನುಮತಿ ಪಡೆಯಬೇಕು, ಬೇರೆ ದೇಶಗಳ ವಿನಂತಿಗೆ ತಕ್ಕಂತೆ ಗೋಧಿ ರಫ್ತು ಮಾಡಲಾಗುತ್ತದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿದೆ. ರಷ್ಯಾ – ಉಕ್ರೇನ್ ಸಂಘರ್ಷದಿಂದ ಜಾಗತಿಕವಾಗಿ ಗೋಧಿ ರಫ್ತಿನಲ್ಲಿ ಏರುಪೇರು ಉಂಟಾಗಿದ್ದು, ಇದನ್ನೇ ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಂಡು ಜಾಗತಿಕವಾಗಿ ಗೋಧಿ ರಫ್ತಿನಲ್ಲಿ ಭಾರತ ಪ್ರಾಬಲ್ಯ ಸಾಧಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ.

ಹೀಗಾಗಿ ರೈತರಿಗೆ, ಮಾರಾಟಗಾರರಿಗೆ ಹಾಗೂ ರಫ್ತು ಮಾಡುವವರಿಗೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಕೂಡದು ಎಂದು ಸೂಚನೆ ನೀಡಲಾಗಿದೆ.

ಕೊರತೆಯ ಲಾಭ ಪಡೆಯಲಿದೆಯೇ ಸರ್ಕಾರ ರಷ್ಯಾ- ಉಕ್ರೇನ್ ಯುದ್ಧದಿಂದ ಜಾಗತಿಕವಾಗಿ ಉಂಟಾಗಿರುವ ಗೋಧಿ ಕೊರತೆಯ ಲಾಭವನ್ನು ಪಡೆಯಲು ಭಾರತ ಮುಂದಾಗಿದೆ. ಹೀಗಾಗಿ 2022-23ರ ಆರ್ಥಿಕ ವರ್ಷದಲ್ಲಿ 10 ಮಿಲಿಯನ್‌ ಟನ್‌ ಗೋಧಿ ರಫ್ತು ಮಾಡಲು ಭಾರತ ಯೋಜನೆ ಹಾಕಿಕೊಂಡಿದೆ. ಆದರೆ ಸಧ್ಯಕ್ಕೆ ರಫ್ತನ್ನು ನಿಲ್ಲಿಸಿ ದೇಶದಲ್ಲಿ ಗೋಧಿ ಬೆಲೆಯ ಸಮತೋಲನ ಕಾಪಾಡಿಕೊಳ್ಳುವ ಯೋಚನೆ ಮಾಡಿದೆ.

ಸುಮಾರು 9 ದೇಶಗಳಿಗೆ ವ್ಯಾಪಾರ ನಿಯೋಗ ಭೇಟಿ ಯಾವ್ಯಾವ ದೇಶದಲ್ಲಿ ಗೋಧಿ ಬೇಡಿಕೆ ಹೆಚ್ಚಿದೆ ಎಂದು ತಿಳಿಯಲು ಸುಮಾರು 9ಕ್ಕೂ ಹೆಚ್ಚು ರಾಷ್​ಟರಗಳಿಗೆ ವ್ಯಾಪಾರ ನಿಯೋಗವನ್ನು ಕಳುಹಿಸಲು ಯೋಜನೆ ರೂಪಿಸಲಾಗಿದೆ. ಈ ನಿಯೋಗವು ಗೋಧಿ ರಫ್ತು ಮಾಡಲಿರುವ ಅವಕಾಶಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ನೀಡಲಿದೆ. ಈ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಾಣಿಜ್ಯ ನಿಯೋಗವು ಮೊರೋಕ್ಕೊ, ಟುನೇ‍ಷ್ಯಾ, ಇಂಡೋನೇಶ್ಯಾ, ಫಿಲಿಪ್ಪಿನ್ಸ್‌, ಥಾಯ್ಲಂಡ್‌, ವಿಯೇಟ್ನಾಂ, ಟರ್ಕಿ, ಅಲ್ಜೀರಿಯಾ ಹಾಗೂ ಲೆಬನಾನ್ ಮುಂತಾದ ದೇಶಗಳಿಗೆ ಭೇಟಿ ನೀಡಿ, ಅಲ್ಲಿ ಗೋಧಿ ರಫ್ತು ಮಾಡುವ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಲಿದೆ.

ಗೋಧಿ ರಫ್ತಿನ ಕುರಿತು ಸರಣಿ ಚರ್ಚೆ ಗೋಧಿ ರಫ್ತಿ ಗುರಿ ಸಾಧಿಸಲು ವಾಣಿಜ್ಯ ಮಂತ್ರಾಲಯ ಸರಣಿ ಸಭೆಗಳನ್ನು ಕೂಡ ಆಯೋಜಿಸಿ ಚರ್ಚೆ ಶುರು ಮಾಡಿದೆ. ದೇಶದಲ್ಲಿ ಅತೀ ಹೆಚ್ಚು ಗೋಧಿ ಬೆಳೆಯುವ ರಾಜ್ಯಗಳಾದ ಪಂಜಾಬ್‌, ಹರ್ಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸಭೆಗಳನ್ನು ನಡೆಸಲಿದೆ.

ಟಾಸ್ಕ್​ಫೋರ್ಸ್ ಸಮಿತಿ ರಚನೆ ಕೇಂದ್ರ ವಾಣಿಜ್ಯ ಮಂತ್ರಾಲಯವು ಟಾಸ್ಕ್‌ಫೋರ್ಸ್‌ ಸಮಿತಿ ರಚನೆ ಮಾಡಲಾಗಿದೆ. ಕೃಷಿ ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ನಿಗಮ ಗೋಧಿಗಳ ರಫ್ತು ಪ್ರಕ್ರಿಯೆಯನ್ನು ನೋಡಿಕೊಳ್ಳಲಿದೆ. ಈ ಸಮಿತಿಯಲ್ಲಿ ವಾಣಿಜ್ಯ ಇಲಾಖೆ, ಹಡಗು ಮತ್ತು ರೈಲ್ವೇ ಇಲಾಖೆಯ ಪ್ರತಿನಿಧಿಗಳು ಇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗೋಧಿ ಹಿಟ್ಟಿನ ಬೆಲೆ ಬೇಡಿಕೆ ತಕ್ಕಂತೆ ಗೋಧಿ(Wheat )ಹಿಟ್ಟಿನ ಉತ್ಪಾದನೆ ಇಲ್ಲದ ಕಾರಣ, ಗೋಧಿ ಹಿಟ್ಟಿನ ಬೆಲೆ ಗಗನಕ್ಕೇರಿದೆ. ಏಪ್ರಿಲ್​ನಲ್ಲಿ ಒಂದು ಕೆಜಿ ಗೋಧಿ ಹಿಟ್ಟಿ(Wheat Flour)ಗೆ 32.38 ರೂ. ಇತ್ತು ಇದು 2010ರ ಬಳಿಕ ತಲುಪಿದಂತಹ ಅತಿ ಗರಿಷ್ಠ ಬೆಲೆ ಇದಾಗಿದೆ. ಭಾರತದಲ್ಲಿ ಗೋಧಿ ಉತ್ಪಾದನೆ ಹಾಗೂ ಶೇಖರಣೆ ಕ್ರಮೇಣವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಯಾಗುತ್ತಿದೆ. ವಿದೇಶಗಳಲ್ಲಿಯೂ ಗೋಧಿ ಹಿಟ್ಟಿಗೆ ಬೇಡಿಕೆ ಹೆಚ್ಚಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Most Read Stories

Click on your DTH Provider to Add TV9 Kannada