ಜಮ್ಮು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಪಾಕಿಸ್ತಾನ, ಚೀನಾದ ಭೂಪಟದಲ್ಲಿ ತೋರಿಸಿದ ವಿಶ್ವ ಆರೋಗ್ಯ ಸಂಸ್ಥೆ
“ನಾನು ನೀಲಿ ಭಾಗವನ್ನು ಕ್ಲಿಕ್ ಮಾಡಿದಾಗ, ಅದು ನಮ್ಮ ದೇಶದ ಕೊವಿಡ್ ಡೇಟಾವನ್ನು ತೋರಿಸುತ್ತಿದೆ. ಕುತೂಹಲದಿಂದ ನಾನು ನಮ್ಮ ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಭಿನ್ನ ಬಣ್ಣದ ಭಾಗಗಳ ಮೇಲೆ ಕ್ಲಿಕ್ ಮಾಡಿದಾಗ, ದೊಡ್ಡ ಭಾಗವು ಪಾಕಿಸ್ತಾನದ ಡೇಟಾವನ್ನು ತೋರಿಸುತ್ತಿದೆ ಮತ್ತು ಚಿಕ್ಕದು ಚೀನಾದ ಡೇಟಾವನ್ನು ತೋರಿಸುತ್ತಿದೆ ಎಂದು ಟಿಎಂಸಿ ಸಂಸದ ಹೇಳಿದ್ದಾರೆ.
ದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಪಾಕಿಸ್ತಾನ ಮತ್ತು ಚೀನಾದ ಭಾಗಗಳಾಗಿ ತೋರಿಸುವ ವಿಶ್ವ ಆರೋಗ್ಯ ಸಂಸ್ಥೆಯ (WHO) ಕೊವಿಡ್ -19 ಡ್ಯಾಶ್‌ಬೋರ್ಡ್ ಕುರಿತು ತೃಣಮೂಲ ಕಾಂಗ್ರೆಸ್ (TMC) ಸಂಸದ ಸಂತನು ಸೇನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ. ಸೇನ್ ಅವರು ಡ್ಯಾಶ್‌ಬೋರ್ಡ್ ಮೂಲಕ ನ್ಯಾವಿಗೇಟ್ ಮಾಡುತ್ತಿದ್ದಾಗ ಈ ವ್ಯತ್ಯಾಸ ಕಂಡು ಬಂದಿದೆ. “ನಾನು ನೀಲಿ ಭಾಗವನ್ನು ಕ್ಲಿಕ್ ಮಾಡಿದಾಗ, ಅದು ನಮ್ಮ ದೇಶದ ಕೊವಿಡ್ ಡೇಟಾವನ್ನು ತೋರಿಸುತ್ತಿದೆ. ಕುತೂಹಲದಿಂದ ನಾನು ನಮ್ಮ ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಭಿನ್ನ ಬಣ್ಣದ ಭಾಗಗಳ ಮೇಲೆ ಕ್ಲಿಕ್ ಮಾಡಿದಾಗ, ದೊಡ್ಡ ಭಾಗವು ಪಾಕಿಸ್ತಾನದ ಡೇಟಾವನ್ನು ತೋರಿಸುತ್ತಿದೆ ಮತ್ತು ಚಿಕ್ಕದು ಚೀನಾದ ಡೇಟಾವನ್ನು ತೋರಿಸುತ್ತಿದೆ. ಇದು “ಗಂಭೀರ ಅಂತರರಾಷ್ಟ್ರೀಯ ಸಮಸ್ಯೆ” ಎಂದು ಕರೆದ ಸೇನ್, ಇದನ್ನು ಸರ್ಕಾರವು ಗಮನಿಸಬೇಕು ಮತ್ತು ಸರಿಪಡಿಸಬೇಕು. ಇದು ನಮ್ಮ ದೇಶದ ನಾಗರಿಕರಿಗೆ ದುಃಖದ ವಿಷಯ ಎಂದು ಅವರು ಹೇಳಿದರು. ಈ ವಿಷಯವನ್ನು ತನಿಖೆ ಮಾಡಲು ಮತ್ತು “ದೊಡ್ಡ ತಪ್ಪು” ಬಗ್ಗೆ ಜನರಿಗೆ ತಿಳಿಸಲು ಅವರು ಮೋದಿಯನ್ನು ಒತ್ತಾಯಿಸಿದರು.
https://t.co/6FjbMmtiN1 pic.twitter.com/BE1Rl0fQS7
— DR SANTANU SEN (@SantanuSenMP) January 30, 2022
ಸೇನ್ ಅವರು ತಮ್ಮ ಪತ್ರದ ಪ್ರತಿಗಳನ್ನು ಕೇಂದ್ರ ಗೃಹ, ವಿದೇಶಾಂಗ ವ್ಯವಹಾರಗಳು ಮತ್ತು ಆರೋಗ್ಯ ಸಚಿವಾಲಯಗಳಿಗೆ ಕಳುಹಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
2021 ರಲ್ಲಿ ಟ್ವಿಟರ್ ಭಾರತದ ನಕ್ಷೆಯನ್ನು ತಪ್ಪಾಗಿ ಪ್ರತಿನಿಧಿಸಿದ್ದು ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ದೇಶ ಮತ್ತು ಲಡಾಖ್‌ನ ಹೆಚ್ಚಿನ ಭಾಗಗಳನ್ನು ಚೀನಾ ಎಂದು ಚಿತ್ರಿಸಿತ್ತು.
ಈ ಹಿಂದೆ ಅಕ್ಟೋಬರ್ 2020 ರಲ್ಲಿ, ಟ್ವಿಟರ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಭಾಗವಾಗಿ ಲೇಹ್ ಅನ್ನು ಜಿಯೋ-ಟ್ಯಾಗ್ ಮಾಡಿತ್ತು. ಭಾರತ ಸರ್ಕಾರ ಇದನ್ನು ಬಲವಾಗಿ ಖಂಡಿಸಿತ್ತು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾಹ್ನಿ ಅವರು ಟ್ವಿಟರ್‌ನ ಸಂಸ್ಥಾಪಕ ಮತ್ತು ಜಾಗತಿಕ ಮುಖ್ಯಸ್ಥ, ಜಾಕ್ ಡಾರ್ಸೆ ಅವರಿಗೆ ಈ ಕುರಿತು ಖಡಕ್ ಪತ್ರವನ್ನು ಬರೆದಿದ್ದರು. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಅಗೌರವಿಸುವ ಟ್ವಿಟರ್‌ನ ಯಾವುದೇ ಪ್ರಯತ್ನವು ಕಾನೂನುಬಾಹಿರ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಸರ್ಕಾರ ತನ್ನ ಪತ್ರದಲ್ಲಿ ತಿಳಿಸಿದೆ. ತೀವ್ರ ಆಕ್ರೋಶ ವ್ಯಕ್ತವಾದ ನಂತರ ಟ್ವಿಟರ್ ವೆಬ್‌ಸೈಟ್‌ನ ವೃತ್ತಿ ವಿಭಾಗದಲ್ಲಿ ‘ಟ್ವೀಪ್ ಲೈಫ್’ ಶೀರ್ಷಿಕೆಯಡಿಯಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ತಪ್ಪಾದ ನಕ್ಷೆಯನ್ನು ಟ್ವಿಟರ್ ತೆಗೆದುಹಾಕಿತ್ತು.
ಇದನ್ನೂ ಓದಿ: India Map Twitter: ವೆಬ್ಸೈಟ್ನಿಂದ ಭಾರತದ ತಪ್ಪು ಭೂಪಟ ತೆಗೆದು ಪ್ರಮಾದ ತಿದ್ದಿಕೊಂಡ ಟ್ವಿಟರ್
Published On - 11:05 am, Mon, 31 January 22