ಪಾರ್ಸಿಗಳು, ಕ್ರೈಸ್ತರು ಸಿಎಎಗೆ ಅರ್ಹರು ಆದರೆ ಮುಸ್ಲಿಮರು ಅಲ್ಲ; ಅಮಿತ್ ಶಾ ನೀಡಿದ ಉತ್ತರ ಹೀಗಿದೆ

ಅಖಂಡ ಭಾರತವು ಆಧುನಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬೆಟ್ ಅನ್ನು ವ್ಯಾಪಿಸಿರುವ ಪರಿಕಲ್ಪನೆಯಾಗಿದೆ.  ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ 23 ರಷ್ಟಿದ್ದರು."ಈಗ ಅದು ಶೇಕಡಾ 3.7 ಕ್ಕೆ ಇಳಿದಿದೆ. ಅವರು ಎಲ್ಲಿಗೆ ಹೋದರು? ಎಂದು ಕೇಳಿದ್ದಾರೆ ಅಮಿತ್ ಶಾ.

ಪಾರ್ಸಿಗಳು, ಕ್ರೈಸ್ತರು ಸಿಎಎಗೆ ಅರ್ಹರು ಆದರೆ ಮುಸ್ಲಿಮರು ಅಲ್ಲ; ಅಮಿತ್ ಶಾ ನೀಡಿದ ಉತ್ತರ ಹೀಗಿದೆ
ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on:Mar 14, 2024 | 2:56 PM

ದೆಹಲಿ  ಮಾರ್ಚ್ 14: ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನದ ಸುತ್ತಲಿನ ವಿವಾದದ ಮಧ್ಯೆ, ಗೃಹ ಸಚಿವ ಅಮಿತ್ ಶಾ (Amit Shah) ಅವರು ಪಾರ್ಸಿಗಳು ಮತ್ತು ಕ್ರೈಸ್ತರು ಸಿಎಎ ಅಡಿಯಲ್ಲಿ ಅರ್ಹರು, ಆದರೆ ಮುಸ್ಲಿಮರು (Muslim) ಅಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಆಗಮಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುವ ಗುರಿಯನ್ನು ಸಿಎಎ ಹೊಂದಿದೆ. ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಅವರಲ್ಲಿ, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡಲಾಗುತ್ತದೆ.ಆದರೆ ಮುಸ್ಲಿಮರಿಗೆ ಯಾಕೆ ಇಲ್ಲ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಶಾ, “ಮುಸ್ಲಿಂ ಜನಸಂಖ್ಯೆಯಿಂದಾಗಿ ಆ (ಪ್ರದೇಶ) ಇಂದು ಭಾರತದ ಭಾಗವಾಗಿಲ್ಲ. ಅದನ್ನು ಅವರಿಗಾಗಿ ನೀಡಲಾಗಿದೆ. ಅಖಂಡ ಭಾರತದ ಭಾಗವಾಗಿರುವ ಮತ್ತು ಧಾರ್ಮಿಕ ಕಿರುಕುಳ ಅನುಭವಿಸಿದವರಿಗೆ ಆಶ್ರಯ ನೀಡುವುದು ನಮ್ಮ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂದು ನಾನು ನಂಬುತ್ತೇನೆ ಎಂದಿದ್ದಾರೆ .

ಅಖಂಡ ಭಾರತವು ಆಧುನಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬೆಟ್ ಅನ್ನು ವ್ಯಾಪಿಸಿರುವ ಪರಿಕಲ್ಪನೆಯಾಗಿದೆ.  ವಿಭಜನೆಯ ಸಮಯದಲ್ಲಿ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂದೂಗಳು ಶೇಕಡಾ 23 ರಷ್ಟಿದ್ದರು.”ಈಗ ಅದು ಶೇಕಡಾ 3.7 ಕ್ಕೆ ಇಳಿದಿದೆ. ಅವರು ಎಲ್ಲಿಗೆ ಹೋದರು? ಇಷ್ಟು ಜನರು ಇಲ್ಲಿಗೆ ಬಂದಿಲ್ಲ. ಬಲವಂತದ ಮತಾಂತರ ನಡೆಯಿತು, ಅವರನ್ನು ಅವಮಾನಿಸಲಾಗಿದೆ, ಅವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಲಾಯಿತು, ಅವರು ಎಲ್ಲಿಗೆ ಹೋಗುತ್ತಾರೆ? ನಮ್ಮ ಸಂಸತ್ ಮತ್ತು ರಾಜಕೀಯ ಪಕ್ಷಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತವೆಯೇ? ಎಂದು ಕೇಳಿದ್ದಾರೆ.

1951 ರಲ್ಲಿ ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ 22 ಪ್ರತಿಶತದಷ್ಟು ಹಿಂದೂಗಳು ಇದ್ದಾರೆ. “2011 ರಲ್ಲಿ ಇದು ಶೇಕಡಾ 10 ಕ್ಕೆ ಕಡಿಮೆಯಾಯಿತು. ಅವರು ಎಲ್ಲಿಗೆ ಹೋದರು?. ಅಫ್ಘಾನಿಸ್ತಾನದಲ್ಲಿ 1992 ರಲ್ಲಿ ಸುಮಾರು 2 ಲಕ್ಷ ಸಿಖ್ ಮತ್ತು ಹಿಂದೂಗಳು ಇದ್ದರು. ಈಗ 500 ಉಳಿದಿದ್ದಾರೆ. ಅವರ (ಧಾರ್ಮಿಕ) ನಂಬಿಕೆಗಳ ಪ್ರಕಾರ ಬದುಕುವ ಹಕ್ಕಿಲ್ಲವೇ? ಭಾರತವು ಒಂದಾಗಿರುವಾಗ ಅವರು ನಮ್ಮವರಾಗಿದ್ದರು. ಅವರು ನಮ್ಮ ಸಹೋದರರು, ಸಹೋದರಿಯರು ಮತ್ತು ತಾಯಂದಿರು ಎಂದು ಹೇಳಿದ್ದಾರೆ.

ಶೋಷಿತ ಸಮುದಾಯಗಳಾದ ಶಿಯಾ, ಬಲೂಚ್ ಮತ್ತು ಅಹ್ಮದೀಯ ಮುಸ್ಲಿಮರ ಬಗ್ಗೆ ಕೇಳಿದಾಗ, “ವಿಶ್ವದಾದ್ಯಂತ, ಈ ಬಣವನ್ನು ಮುಸ್ಲಿಂ ಬಣ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಮುಸ್ಲಿಮರು ಸಹ ಇಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಂವಿಧಾನದಲ್ಲಿ ಅವಕಾಶವಿದೆ. ಅವರು ಅರ್ಜಿ ಸಲ್ಲಿಸಬಹುದು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ, ಯಾವುದೇ ಮಾನ್ಯ ದಾಖಲೆಯಿಲ್ಲದೆ ಗಡಿ ದಾಟಿದ ಮೂರು ದೇಶಗಳ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಸಿಎಎ “ವಿಶೇಷ ಕಾಯಿದೆ” ಎಂದು ಶಾ ಹೇಳಿದ್ದಾರೆ.

ಇದನ್ನೂ ಓದಿ: ಸಿಎಎ ಅನುಷ್ಠಾನವನ್ನು ನಿರಾಕರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ: ಅಮಿತ್​​ ಶಾ

ಯಾವುದೇ ದಾಖಲೆಗಳಿಲ್ಲದವರ ಬಗ್ಗೆ? ಎಂದು ಕೇಳಿದಾಗ “ದಾಖಲೆಗಳಿಲ್ಲದವರಿಗೆ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ. ಆದರೆ ನನ್ನ ಅಂದಾಜಿನ ಪ್ರಕಾರ, ಶೇಕಡಾ 85 ಕ್ಕಿಂತ ಹೆಚ್ಚು ಜನರ ಬಳಿ ದಾಖಲೆಗಳಿವೆ” ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Thu, 14 March 24