ಜಮ್ಮು ಕಾಶ್ಮೀರದ ನಾಯಕ ಒಮರ್ ಅಬ್ದುಲ್ಲಾ ಪ್ರಧಾನಿ ಮೋದಿಯತ್ತ ವಾಲುತ್ತಿರುವುದೇಕೆ?

|

Updated on: Oct 10, 2024 | 5:03 PM

ಜಮ್ಮು ಮತ್ತು ಕಾಶ್ಮೀರದ ಸಿಎಂ ಅಭ್ಯರ್ಥಿ ಒಮರ್ ಅಬ್ದುಲ್ಲಾ ಅವರ ನಿರಂತರ ಭಾವನಾತ್ಮಕ ಪ್ರಚಾರದಿಂದಾಗಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) 42 ಸ್ಥಾನಗಳನ್ನು ಗೆದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೀಗ ಸುಗಮ ಸರ್ಕಾರ ನಡೆಸಲು ಒಮರ್ ಅಬ್ದುಲ್ಲಾ ಅವರು ಪಿಎಂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದತ್ತ ವಾಲುತ್ತಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು?

ಜಮ್ಮು ಕಾಶ್ಮೀರದ ನಾಯಕ ಒಮರ್ ಅಬ್ದುಲ್ಲಾ ಪ್ರಧಾನಿ ಮೋದಿಯತ್ತ ವಾಲುತ್ತಿರುವುದೇಕೆ?
ಒಮರ್ ಅಬ್ದುಲ್ಲಾ
Follow us on

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರನ್ನು ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ನಾಲ್ವರು ಸ್ವತಂತ್ರ ಶಾಸಕರು ಪಕ್ಷಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದಾಗಲೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿದ ನಂತರ ಅವರು ಮುಂದಿನ ಸರ್ಕಾರ ರಚನೆಗೆ ಹಕ್ಕು ಸಾಧಿಸುವ ನಿರೀಕ್ಷೆಯಿದೆ.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೆಲವು ಅಚ್ಚರಿಯ ಸಂಗತಿಗಳನ್ನು ಹೊರಹಾಕಿದೆ. ಈ ಸಂಗತಿಗಳು ಮುಂದಿನ 5 ವರ್ಷಗಳ ಕಾಲ ಸರ್ಕಾರದ ತಳಹದಿಯಾಗಿರುತ್ತದೆ. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ಅವರಿಗೆ ಈ ಸಂಗತಿಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಏಕೈಕ ದೊಡ್ಡದಾಗಿ ಹೊರಹೊಮ್ಮಿದಾಗಿನಿಂದ ಅವರ ಹೇಳಿಕೆಗಳು ಇದೇ ಅಭಿಪ್ರಾಯವನ್ನು ಪ್ರತಿಧ್ವನಿಸಿವೆ. ಒಮರ್ ಅಬ್ದುಲ್ಲಾ ಅವರು ಪಿಎಂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಮನ್ವಯತೆಯ ಧ್ವನಿಯಲ್ಲಿ ಮಾತನಾಡಿರುವುದು ಗಮನಾರ್ಹವಾಗಿದೆ.

ಇನ್ನೊಂದು ಸತ್ಯವೆಂದರೆ, ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿದೆ. ಕೇಂದ್ರವು ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಮೂಲಕ ಸರ್ಕಾರದ ದೈನಂದಿನ ಕಾರ್ಯನಿರ್ವಹಣೆಯ ಮೇಲೆ ಹಿಡಿತವನ್ನು ಹೊಂದಿದೆ. ಇದೀಗ ಒಮರ್ ಅಬ್ದುಲ್ಲಾ ಕಾಂಗ್ರೆಸ್​ಗಿಂತಲೂ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯತ್ತ ವಾಲುತ್ತಿದ್ದಾರೆ. ಅದಕ್ಕೆ ಕಾರಣವೇನೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ‘ಹರಿಯಾಣದ ಗೆಲುವು ದೇಶಾದ್ಯಂತ ಪ್ರತಿಧ್ವನಿಸಲಿದೆ’; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು

“ನಾವು ಕೇಂದ್ರ ಸರ್ಕಾರದೊಂದಿಗೆ ಸಮನ್ವಯವನ್ನು ಹೊಂದಿರಬೇಕು. ಜಮ್ಮು ಕಾಶ್ಮೀರದ ಅನೇಕ ಸಮಸ್ಯೆಗಳನ್ನು ಕೇಂದ್ರ ಸರ್ಕಾರದೊಂದಿಗೆ ಹೋರಾಡುವ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಮುಂಬರುವ ಸರ್ಕಾರವು ಎಲ್‌ಜಿ ಮತ್ತು ಕೇಂದ್ರ ಸರ್ಕಾರದೊಂದಿಗೆ ಸುಗಮ ಸಂಬಂಧಕ್ಕಾಗಿ ಕೆಲಸ ಮಾಡಲು ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೇ ಇದ್ದರೂ ನ್ಯಾಷನಲ್ ಕಾನ್ಫರೆನ್ಸ್ ಹೇಗೆ ಚೆನ್ನಾಗಿ ನಡೆಯುತ್ತಿತ್ತು ಎಂದು ಒಮರ್ ಅಬ್ದುಲ್ಲಾ ಚರ್ಚಿಸಿದ್ದಾರೆ. “ಕಾಂಗ್ರೆಸ್‌ನೊಂದಿಗಿನ ಮೈತ್ರಿಯು ನಮಗೆ ಸೀಟುಗಳ ಬಗ್ಗೆ ಅಲ್ಲ. ನಾವು ಕಾಂಗ್ರೆಸ್ ಇಲ್ಲದೆ ಇದ್ದರೂ ಸೀಟುಗಳನ್ನು ಗೆಲ್ಲುತ್ತಿದ್ದೆವು” ಎಂದು ಒಮರ್ ಇಂಡಿಯಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸುವುದು ಹೊಸ ಸರ್ಕಾರದ ಆದ್ಯತೆಯಾಗಿದೆ. ಅದಕ್ಕಾಗಿ ನಾವು ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

“ಪ್ರಧಾನಿ ಮೋದಿ ಒಬ್ಬ ಗೌರವಾನ್ವಿತ ವ್ಯಕ್ತಿ ಎಂದು ನಾನು ನಂಬುತ್ತೇನೆ. ಅವರು ಇಲ್ಲಿ ಪ್ರಚಾರ ಮಾಡುವಾಗ ರಾಜ್ಯತ್ವವನ್ನು ಮರುಸ್ಥಾಪಿಸಲಾಗುವುದು ಎಂದು ಜನರಿಗೆ ಭರವಸೆ ನೀಡಿದ್ದಾರೆ. ಗೌರವಾನ್ವಿತ ಗೃಹ ಸಚಿವರು ಕೂಡ ಅದನ್ನೇ ಮಾಡಿದ್ದಾರೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಆರ್ಟಿಕಲ್ 370ರ ನಂತರ ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲ್ಪಟ್ಟಿತು. ನಮ್ಮ ರಾಜಕೀಯ ನಿಲುವು ಎಂದಿಗೂ ಬದಲಾಗಿಲ್ಲ. ಬಿಜೆಪಿಯಿಂದ ಆರ್ಟಿಕಲ್ 370 ಮರುಸ್ಥಾಪನೆಯನ್ನು ನಿರೀಕ್ಷಿಸುವುದು ಮೂರ್ಖತನ. ಸಮಯ ಬಂದಾಗ ನಾವು ಆರ್ಟಿಕಲ್ 370ರ ಮರುಸ್ಥಾಪನೆಗಾಗಿ ಬ್ಯಾಟಿಂಗ್ ಮುಂದುವರಿಸುತ್ತೇವೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: Jammu Kashmir Election Results: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸೋಲಿಗೆ ಕಾರಣವೇನು?

ಈ ಮೊದಲು ನ್ಯಾಷನಲ್ ಕಾನ್ಫರೆನ್ಸ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂದು ಘಟಕವಾಗಿತ್ತು. ಒಮರ್ ಅಬ್ದುಲ್ಲಾ 1999 ಮತ್ತು 2002ರ ನಡುವೆ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಮೊದಲು ಫೆಬ್ರವರಿಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಅವರು 2014ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಲೆಕ್ಕಾಚಾರದ ಪ್ರಯತ್ನಗಳನ್ನು ಮಾಡಿದ್ದರು ಎಂದು ಹೇಳಲಾಗಿತ್ತು.

ಇದನ್ನು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ರಾಮ್ ಮಾಧವ್ ಅವರು ಅಕ್ಟೋಬರ್ 2ರಂದು ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ. “2014ರಲ್ಲಿ ಬಿಜೆಪಿ-ಎನ್‌ಸಿ ಅಥವಾ ಬಿಜೆಪಿ-ಪಿಡಿಪಿ ಒಟ್ಟಾಗಿ ಸರ್ಕಾರ ರಚಿಸುವ ಸಾಧ್ಯತೆಯಿರುವ ವಿಚಿತ್ರ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ, ಎನ್‌ಸಿ ಮತ್ತು ಪಿಡಿಪಿ ಎರಡರೊಂದಿಗೂ ಮಾತುಕತೆ ನಡೆದಿತ್ತು.” ಎಂದು ರಾಮ್ ಮಾಧವ್ ಹೇಳಿದ್ದರು.

ಆದರೆ, ರಾಮ್ ಮಾಧವ್, ಬಿಜೆಪಿ ಎನ್‌ಸಿ ಅಥವಾ ಜಮ್ಮು ಕಾಶ್ಮೀರದಲ್ಲಿ ಯಾವುದೇ ಇತರ ಪಕ್ಷದೊಂದಿಗೆ ಕೈಜೋಡಿಸುವ ಮಾತನ್ನು ತಳ್ಳಿಹಾಕಿದರು. ಅದು ಫಲಿತಾಂಶ ಪ್ರಕಟವಾಗುವ ಸುಮಾರು ಒಂದು ವಾರದ ಮೊದಲಿನ ಹೇಳಿಕೆಯಾಗಿತ್ತು. ಆರ್ಟಿಕಲ್ 370 ರದ್ದಾದ ನಂತರವೂ ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ನ್ಯಾಷನಲ್ ಕಾನ್ಫರೆನ್ಸ್ ಪ್ರಯತ್ನಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಸಿಂಗ್ ರಾಣಾ ಹೇಳಿದ್ದರು. ಒಮರ್ ಅಬ್ದುಲ್ಲಾ ಅವರ ಮಾಜಿ ರಾಜಕೀಯ ಸಲಹೆಗಾರ ರಾಣಾ ಮೂರು ವರ್ಷಗಳ ಹಿಂದೆ ಬಿಜೆಪಿಗೆ ಸೇರಿದ್ದರು.

90 ಸದಸ್ಯ ಬಲದ ವಿಧಾನಸಭೆಯಲ್ಲಿ ಮಂಗಳವಾರ ಎನ್‌ಸಿ-ಕಾಂಗ್ರೆಸ್ 49 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) 29 ಸ್ಥಾನಗಳನ್ನು ಗಳಿಸಿತ್ತು. ಜಮ್ಮು ಕಾಶ್ಮೀರದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾದ ಬಿಜೆಪಿ ಜಮ್ಮುವಿನ ಎಲ್ಲಾ 29 ಸ್ಥಾನಗಳನ್ನು ಗೆದ್ದಿದೆ. ಎನ್‌ಸಿ ಮತ್ತು ಬಿಜೆಪಿಯ ಕೈ ಸೇರುವುದರಿಂದ ಕಣಿವೆ ರಾಜ್ಯದಲ್ಲಿ ಲಾಭವೇ ಹೆಚ್ಚಾಗಲಿದೆ ಎಂಬ ಮಾತು ಕೇಳಿಬರುತ್ತಿವೆ. ಐದು ನಾಮನಿರ್ದೇಶಿತ ಸದಸ್ಯರೊಂದಿಗೆ ಬಿಜೆಪಿ ಬಲವು 34ರಷ್ಟಿದೆ. ಇದು ಕಾಶ್ಮೀರದಲ್ಲಿ ಸ್ಥಿರ ಸರ್ಕಾರಕ್ಕೆ ಗಣನೀಯವಾಗಿದೆ.

ಸುಗಮ ಆಡಳಿತಾತ್ಮಕ ಕಾರ್ಯನಿರ್ವಹಣೆಗಾಗಿ ಒಮರ್ ಅಬ್ದುಲ್ಲಾ ಪ್ರಧಾನಿ ಮೋದಿಯತ್ತ ವಾಲುತ್ತಿದ್ದರೂ, ರಾಜಕೀಯದ ವಾಸ್ತವಿಕತೆಯು ಮುಚ್ಚಿರುವ ಇತರ ಬಾಗಿಲುಗಳನ್ನು ಕೂಡ ತೆರೆಯಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ