Explainer: ಏನಾಗುತ್ತಿದೆ ಲಕ್ಷದ್ವೀಪದಲ್ಲಿ, ಹೊಸ ಆಡಳಿತಾಧಿಕಾರಿಯ ನಿಯಮಗಳಿಗೆ ಯಾಕಿಷ್ಟು ವಿರೋಧ?

ಲಕ್ಷದ್ವೀಪದ ಜನ ಕಳೆದ ಮೂರು ತಿಂಗಳುಗಳಿಂದ ಹೊಸ ಆಡಳಿತಾಧಿಕಾರಿ ಪಟೇಲ್ ಜಾರಿಗೆ ತಂದಿರುವ ಹೊಸ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಈ ದ್ವೀಪ ಸಮೂಹದೊಂದಿಗೆ ಭಾಷಾ ಮತ್ತು ಸಾಂಸ್ಕೃತಿಕ ಸಾಮರಸ್ಯ ಹೊಂದಿರುವ ನೆರೆ ರಾಜ್ಯ ಕೇರಳ ಅವರಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಪ್ರತಿಭಟನೆಗೆ ಇಂಬು ಸಿಕ್ಕಿದೆ.

Explainer: ಏನಾಗುತ್ತಿದೆ ಲಕ್ಷದ್ವೀಪದಲ್ಲಿ, ಹೊಸ ಆಡಳಿತಾಧಿಕಾರಿಯ ನಿಯಮಗಳಿಗೆ ಯಾಕಿಷ್ಟು ವಿರೋಧ?
ಲಕ್ಷದ್ವೀಪದಲ್ಲಿ ಪ್ರತಿಭಟನೆ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 28, 2021 | 10:00 PM

ಅರಬ್ಬೀ ಸಮುದ್ರದ ನಡುವೆ ರಮಣೀಯ ನಿಸರ್ಗದ ಮಡಿಲಲ್ಲಿನ ಸುಂದರ ಬೀಚ್​ಗಳಿಗೆ ಹೆಸರಾಗಿರುವ ಲಕ್ಷದ್ವೀಪ ದ್ವೀಪ ಸಮೂಹವು ಈಗ ರಾಜಕೀಯ ಕಾರಣಗಳಿಗೆ ಸುದ್ದಿಯಲ್ಲಿದೆ. ಪ್ರಫುಲ್ ಖೋಡಾ ಪಟೇಲ್ ಹೆಸರಿನ ಹೊಸ ಆಡಳಿತಾಧಿಕಾರಿ ಈ ಕೇಂದ್ರಾಡಳಿತ ಪ್ರದೇಶದ ಉಸ್ತುವಾರಿ ವಹಿಸಿಕೊಂಡ ಮೇಲೆ ಜಾರಿಗೊಳಿಸಿರುವ ಹೊಸ ಕಾನೂನು ಕಟ್ಟಳೆಗಳು ಇಲ್ಲಿನ ಜನರಿಂದ ಮತ್ತು ರಾಜಕೀಯ ವಲಯಗಳಲ್ಲಿ ತೀವ್ರ ಸ್ವರೂಪದ ಖಂಡನೆಗೊಳಗಾಗಿವೆ, ಕಾಂಗ್ರೆಸ್​ ಮತ್ತು ಸಿಪಿಐ (ಮಾರ್ಕ್ಸಿಸ್ಟ್) ಸಂಸದರು ಪಟೇಲ್ ಅವರನ್ನು ವಾಪಸ್ಸು ಕರೆಸಿಕೊಳ್ಳಬೇಕೆಂದು ರಾಷ್ಟ್ರಪತಿಗಳಿಗೆ ಪತ್ರ ಬರೆದ ನಂತರ ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ.​ಕೆ ಸ್ಟ್ಯಾಲಿನ್ ಮತ್ತು ಇನ್ನೂ ಹಲವಾರು ರಾಜಕೀಯ ನಾಯಕರು ಪಟೇಲ್ ಅವರನ್ನು ವಾಪಸ್ಸು ಕರೆಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಲಕ್ಷದ್ವೀಪದ ಜನ ಕಳೆದ ಮೂರು ತಿಂಗಳುಗಳಿಂದ ಹೊಸ ಆಡಳಿತಾಧಿಕಾರಿ ಪಟೇಲ್ ಜಾರಿಗೆ ತಂದಿರುವ ಹೊಸ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಈ ದ್ವೀಪ ಸಮೂಹದೊಂದಿಗೆ ಭಾಷಾ ಮತ್ತು ಸಾಂಸ್ಕೃತಿಕ ಸಾಮರಸ್ಯ ಹೊಂದಿರುವ ನೆರೆ ರಾಜ್ಯ ಕೇರಳ ಅವರಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಪ್ರತಿಭಟನೆಗೆ ಇಂಬು ಸಿಕ್ಕಿದೆ. ರಾಜಕೀಯ ನಾಯಕರ ಹೊರತಾಗಿ ಅನೇಕ ಕಲಾವಿದರು, ಸಿನಿಮಾ ನಟರು ಸಹ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ #SaveLakshadweepCampaign ಆಗಿ ಬಿರುಗಾಳಿ ಎಬ್ಬಿಸಿದೆ.

ಲಕ್ಷದ್ವೀಪ ಜನಸಂಖ್ಯೆಯ ಶೇಕಡಾ 95 ಮುಸ್ಲಿಂ ಸಮುದಾಯದವರಾಗಿದ್ದು (ಅವರಿಗೆ ಪರಿಶಿಷ್ಟ ಜನಾಂಗದ ಸ್ಥಾನಮಾನ ಸಿಕ್ಕಿದೆ) ಪಟೇಲ್ ಅವರ ಹೊಸ ನಿಯಮಗಳು ಅವರ ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಪ್ರಾಂತ್ಯದ ಸೂಕ್ಷ್ಮ ಪರಿಸರಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ವಿಮರ್ಶಕರು ಹೇಳುತ್ತಿದ್ದಾರೆ. 2011 ರ ಜನಗಣತಿ ಪ್ರಕಾರ ಲಕ್ಷದ್ವೀಪದ ಜನಸಂಖ್ಯೆ 64,373 ಆಗಿತ್ತು. ಇಲ್ಲಿರುವ 37 ದ್ವೀಪಗಳಲ್ಲಿ ಕೇವಲ 10 ರಲ್ಲಿ ಮಾತ್ರ ಜನ ವಾಸಿಸುತ್ತಿದ್ದಾರೆ. ಮಾಲ್ ಭಾಷೆಯನ್ನಾಡುವ ಮಿನಿಕಾಯ್ ದ್ವೀಪವನ್ನು ಒಂದನ್ನು ಬಿಟ್ಟರೆ ಮಿಕ್ಕೆಲ್ಲ ದ್ವೀಪಗಳಲ್ಲಿ ಜನ ಮಲಯಾಳಂ ಭಾಷೆ ಮಾತಾಡುತ್ತಾರೆ.

ಭಾರತೀಯ ಜನತಾ ಪಕ್ಷವು, ಕೇವಲ ಮೂಲಭೂತವಾದಿ ಬಣಗಳು ಹೊಸ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ ಮತ್ತು ಪಕ್ಕದ ಕೇರಳ ರಾಜ್ಯವು ಕೇಸರಿ ಪಕ್ಷವನ್ನು ಸದಾ ವಿರೋಧಿಸುವ ಹಿನ್ನೆಲಯಲ್ಲಿ ಅವರಿಗೆ ಬೆಂಬಲ ಸೂಚಿಸುತ್ತಿದೆ ಎಂದು ಹೇಳಿದೆ. ಸುಧಾರಣೆಗೆ ರೂಪಿಸಲಾಗಿರುವ ನಿಯಮಗಳು ಟೀಕಾಕಾರರಿಗೆ ಕಠಿಣವೆನಿಸುತ್ತಿವೆ, ಅವುಗಳನ್ನು ಲಕ್ಷದ್ವೀಪದ ಅಭಿವೃದ್ಧಿಗೆ ಮತ್ತು ಹೆಚ್ಚುತ್ತಿರುವ ಡ್ರಗ್ ಮತ್ತು ಶಸ್ತ್ರಾಸ್ತ್ರಗಳ ಅಕ್ರಮ ಮಾರಾಟವನ್ನು ತಡೆಯಲು ಜಾರಿಗೊಳಿಸಲಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಪಟೇಲ್ ಜಾರಿಗೊಳಿಸಿರುವ ಕಾಯ್ದೆಗಳು ಟೂರಿಸಂಗೆ ಅತ್ಯಂತ ಯೋಗ್ಯ ಸ್ಥಳವಾಗಿರುವ ಲಕ್ಷದ್ವೀಪನ್ನು ಅಭಿವೃದ್ಧಿಗೊಳಿಸಿ ಸೌಂದರ್ಯ ಮತ್ತು ಸೊಬಗಿನಲ್ಲಿ ಮಾಲ್ಟೀವ್ಸ್ ಅನ್ನು ಸಹ ಹಿಂದಿಕ್ಕಲಿವೆ ಎಂದು ಅವರು ಹೇಳುತ್ತಿದ್ದಾರೆ.

Beautiful beech in Lakshadweep

ಲಕ್ಷದ್ವೀಪದ ಒಂದು ಸುಂದರ ಬೀಚ್

ಗುರುವಾರದಂದು ಕೊಚ್ಚಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡಿದ ಲಕ್ಷದ್ವೀಪದ ಕಲೆಕ್ಟರ್ ಎಸ್ ಅಸ್ಕರ್ ಅಲಿ ಅವರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆಡಳಿತದ ವಿರುದ್ಧ ಒಗ್ಗೂಡಿ ತಪ್ಪು ಮಾಹಿತಿಯ ಅಭಿಯಾನ ನಡೆಸುತ್ತಿದ್ದಾರೆ. ಆದರೆ ದ್ವೀಪ ಸಮೂಹಗಳ ಜನರು ಅವರಿಗೆ ವಿಪುಲ ಉದ್ಯೋಗಾವಕಾಶಗಳನ್ನು ಕಲ್ಪಿಸಲಿರುವ ಹೊಸ ಕಾಯ್ದೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು. ಜನರನ್ನು ವ್ಯಗ್ರರನ್ನಾಗಿಸಿರುವ ನಿಯಮಗಳು ಯಾವವು ಅನ್ನುವುದನ್ನು ಗಮನಿಸೋಣ.

ಹೊಸ ಗೂಂಡಾ ಕಾಯ್ದೆ ವ್ಯಕ್ತಿಯೊಬ್ಬನಿಗೆ ಕಾನೂನಿನ ನೆರವು ಪಡೆಯಲು ಅವಕಾಶ ನೀಡದೆ ಒಂದು ವರ್ಷದವರೆಗೆ ಜೈಲಿನಲ್ಲಿಡುವ ಹೊಸ ಗೂಂಡಾ ಕಾಯ್ದೆಯನ್ನು (ಸಮಾಜ-ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ) ಜನ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಕಾನೂನಿನ ಅಗತ್ಯವೇ ಇಲ್ಲ, ಯಾವುದೆ ಕಾರಣವಿಲ್ಲದೆ ಬಂಧಿಸಿ ಜೈಲಿಗೆ ನೂಕುವ ಈ ಕಾನೂನು ಜನರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಿದೆ. ದೇಶದಲ್ಲೆ ಅತಿ ಕಡಿಮೆ ಅಪರಾಧ ಪ್ರಮಾಣ ಹೊಂದಿರುವ ಹೆಗ್ಗಳಿಕೆ ಲಕ್ಷದ್ವೀಪದ್ದಾಗಿದೆ. 2019ರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಪ್ರಕಾರ; ರೇಪ್, ಕೊಲೆ, ಅಪಹರಣ ಮತ್ತು ಡಕಾಯಿತಿ ಮುಂತಾದ ಹೇಯ ಅಪರಾಧಗಳು ಇಲ್ಲಿ ಒಂದೂ ನಡೆದಿಲ್ಲ. 2019 ರಲ್ಲಿ 16 ಹಿಂಸಾತ್ಮಕ ಪ್ರಕರಣಗಳು ನಡೆದಿದ್ದು ಅದರಲ್ಲಿ 13 ಡ್ರಗ್ಸ್ ಮತ್ತು ಲಿಕ್ಕರ್​ಗೆ ಸಂಬಂಧಿಸಿವೆ.

ಇಲ್ಲಿ ಶೂನ್ಯ ಅಪರಾಧ ಪ್ರಮಾಣ ಇರುವುದರಿಂದ ಹೊಸ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿರುವುದು ಸಹಜವಾಗೇ ಜನರಲ್ಲಿ ಅನುಮಾನಗಳನ್ನು ಹುಟ್ಟಿಸಿದೆ. ಶಾಂತಿಪ್ರಿಯ ಜನರ ಮೇಲೆ ಇಂಥ ಅಸಂಬದ್ಧವಾದ ಕಾನೂನು ಹೇರವುದು ಯಾಕೆ ಅಂತ ಜನ ಕೇಳುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಭೀತಿ ಹುಟ್ಟಿಸಲು ಈ ಕಾಯ್ದೆಯನ್ನು ತರಲಾಗಿದೆ ಎಂದು ಕವರಟ್ಟಿ ಪಂಚಾಯತ್ ಅಧ್ಯಕ್ಷ ಅಬ್ದುಲ್ ಖಾದರ್ ಹೇಳುತ್ತಾರೆ.

ಆದರೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ದ್ವೀಪಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ ದಂಧೆಯೆಡೆ ಯುವಕರು ಆಕರ್ಷಿತರಾಗುತ್ತಿದ್ದಾರೆ, ರೂ. 3000 ಕೋಟಿ ಮೌಲ್ಯದ ಹಶೀಷ್ ಇತ್ತೀಚಿಗೆ ವಶಪಡಿಸಿಕೊಂಡಿದ್ದು ವ್ಯವಸ್ಥಿತ ಅಪರಾಧಗಳು ನಡೆಯುತ್ತಿರುವುದಕ್ಕೆ ಸಾಕ್ಷಿ ಎಂದು ಕಲೆಕ್ಟರ್ ಹೇಳುತ್ತಾರೆ

ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಈ ಕಾಯ್ದೆಯು ಆಡಳಿತಾಧಿಕಾರಿಗೆ ಯಾವುದೇ ಜಮೀನನ್ನು ಬಲವಂತದಿಂದ ವಶಪಡಿಸಿಕೊಳ್ಳಲು, ಜನರನ್ನು ಸ್ಥಳಾಂತರಿಸಲು ಮತ್ತು ವಿರೋಧಿಸಿದವರಿಗೆ ಕಠಿಣ ಶಿಕ್ಷೆಗೊಳಪಡಿಸಲು ಪರಮಾಧಿಕಾರ ನೀಡುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಆಸ್ತಿಹೊಂದುವ ಅಥವಾ ಮಾಡಿಕೊಳ್ಳುವ ಹಕ್ಕನ್ನು ತಮ್ಮಿಂದ ಸದರಿ ಕಾಯ್ದೆ ಕಸಿದುಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ. ಯಾವುದೇ ಜಮೀನಿನಲ್ಲಿ ಕಟ್ಟಡ ಕಾಮಗಾರಿ, ಗಣಿಗಾರಿಕೆ ಮತ್ತು ಅಭಿವೃದ್ಧಿ ಹೆಸರಲ್ಲಿ ಬೇರೆ ಕೆಲಸಗಳನ್ನು ನಡೆಸಲು ಈ ಕಾಯ್ದೆ ಅನುವು ಮಾಡಿಕೊಡುತ್ತದೆ ಎಂದು ಜನ ಹೇಳುತ್ತಾರೆ

ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಮೀನುಗಾರ ಕುಟುಂಬಗಳ ಉಪಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ, ಮತ್ತು ಕೇವಲ ಎರಡು ವಾರಗಳ ಹಿಂದೆ ಮೀನುಗಾರು ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಸಮುದ್ರ ತೀರದಲ್ಲಿದ್ದ ಅವರ ಶೆಡ್​ಗಳನ್ನು ಯಾವುದೇ ಸೂಚನೆ ನೀಡದೆ ಧ್ವಂಸಗೊಳಿಸಲಾಗಿದೆ ಎಂದು ಮಿನುಗಾರ ಖಾದರ್ ಹೇಳುತ್ತಾರೆ. ಆ ಶೆಡ್​ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು, ಹಾಗಾಗೇ ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ಕಲೆಕ್ಟರ್ ಹೇಳುತ್ತಾರೆ

ಎರಡು ಮಕ್ಕಳ ಕಾಯ್ದೆ ಮತ್ತು ಸ್ಥಾನಿಕ ಸಂಸ್ಥೆಗಳ ಚುನಾವಣೆ ರದ್ದು ಲಕ್ಷದ್ವೀಪ ಪಂಚಾಯತ್ ನಿಯಮ ಕಾಯ್ದೆ 2021 ರ ಪ್ರಕಾರ ಇಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸ್ಥಾನಿಕ ಸಂಸ್ಥೆಗಳ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ನಮ್ಮ ಹಕ್ಕನ್ನು ಈ ಕಾನೂನು ಕಸಿದುಕೊಳ್ಳುತ್ತದೆ ಎಂದು ದ್ವೀಪವಾಸಿಗಳು ಹೇಳುತ್ತಿದ್ದಾರೆ. ಮುಖ್ಯ ಪ್ರದೇಶಗಳಲ್ಲಿ ವಾಸಿಸುವ ಗ್ರಾಮೀಣ ಭಾಗದಿಂದ ಬಂದ ಜನರಲ್ಲಿ ಜನನ ಪ್ರಮಾಣ ಅಧಿಕವಾಗಿದೆ. ಇದು ದ್ವೀಪದ ಜನಸಂಖ್ಯೆ ನಿಯಂತ್ರಿಸುವ ಹುನ್ನಾರವಾಗಿದೆ. ಇಂಥ ಡ್ರಾಕೋನಿಯನ್ ನಿಯಮ ಯಾವುದೇ ಉದ್ದೇಶವನ್ನು ಈಡೇರಿಸುವುದಿಲ್ಲ, ಎಂದು ಮಿನಿಕಾಯ್ ನಿವಾಸಿ ಕೆಕೆ ಅಶ್ರಫ್ ಹೇಳುತ್ತಾರೆ. ಕುಟುಂಬ ನಿಯಂತ್ರಣ ಯೋಜನೆಗೆ ಒತ್ತು ನೀಡಲು ಈ ನಿಯಮ ಜಾರಿಗೊಳಿಸಿಲಾಗಿದೆ ಎಂದು ಕಲೆಕ್ಟರ್ ಹೇಳುತ್ತಾರೆ.

ಕೊವಿಡ್​-19 ಪ್ರಕರಣಗಳಲ್ಲಿ ಹೆಚ್ಚಳ ಡಿಸೆಂಬರ್ 2020ರವರೆಗೆ ಲಕ್ಷದ್ವೀಪನಲ್ಲಿ ಒಂದೇ ಒಂದು ಕೋವಿಡ್​-19 ಪ್ರಕರಣ ದಾಖಲಾಗಿರಲಿಲ್ಲ. ಅದರೀಗ ಟೆಸ್ಟ್​ ಪಾಸಿಟಿವಿಟಿ ಪ್ರಮಾಣ ಶೇಕಡಾ 10 ಕ್ಕಿಂತ ಜಾಸ್ತಿಯಿದೆ. ಕ್ವಾರಂಟೀನ್ ನಿಯಮದಲ್ಲಿ ಬದಲಾವಣೆ ಮತ್ತು ಪ್ರವಾಸ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಸೋಂಕಿನ ಪ್ರಕರಣಗಳು ಹೆಚ್ಚಿವೆಯೆಂದು ಸ್ಥಳೀಯರು ಹೇಳುತ್ತಾರೆ. ದ್ವೀಪಸಮೂಹದಲ್ಲಿ ಮೆಡಿಕಲ್ ಕಾಲೇಜು ಅಥವಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಇಲ್ಲದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ, ತುರ್ತುಸ್ಥಿತಿಯಲ್ಲಿ ರೋಗಿಯನ್ನು ಕೊಚ್ಚಿಗೆ ವಿಮಾನದ ಮೂಲಕ ಕರೆದೊಯ್ಯಲಾಗುತ್ತದೆ. ಜನರಲ್ಲಿ ಬೇರೆ ಆಪ್ಷನ್ ಇಲ್ಲವೇ ಇಲ್ಲ. ಆದರೆ, ಇಲ್ಲಿನ ಮರಣ ಪ್ರಮಾಣ ಬಹಳ ಕಡಿಮೆಯಿದೆ ಎಂಧು ಕಲೆಕ್ಟರ್ ಹೇಳುತ್ತಾರೆ

ಮಾಂಸಕ್ಕಾಗಿ ಸರ್ಟಿಫಿಕೇಟ್​ ರಹಿತ ಪ್ರಾಣಿಹತ್ಯೆ ಮೇಲೆ ನಿಷೇಧ ಲಕ್ಷದ್ವೀಪ ಆಡಳಿತವು ಲಕ್ಷದ್ವೀಪ ಪ್ರಾಣಿ ಸಂರಕ್ಷಣೆ ಕಾಯ್ದೆ ಎಂಬ ಹೊಸ ನಿಯಮದ ಪ್ರಸ್ತಾವನೆ ಮಾಡಿದ್ದು ಇದರ ಪ್ರಕಾರ ಕೇವಲ ಒಂದು ಸಕ್ಷಮ ಪ್ರಾಧಿಕಾರದಿಂದ ಪ್ರಮಾಣೀಕರತವಾದ ಪ್ರಾಣಿಗಳನ್ನಷ್ಟೇ ನಿಗದಿತ ಸ್ಥಳದಲ್ಲಿ ಕೊಯ್ಯುವುದಕ್ಕೆ ಅವಕಾಶವಿರುತ್ತದೆ. ಪ್ರಮಾಣ ಪತ್ರವಿಲ್ಲದೆ ಪ್ರಾಣಿಗಳನ್ನು ಕೊಂದರೆ ಒಂದು ವರ್ಷ ಜೈಲು ಶಿಕ್ಷೆ ಇಲ್ಲವೆ ರೂ 10,000 ದಂಡ ಅಥವಾ ಇವೆರಡನ್ನೂ ವಿಧಿಸಲಾಗುತ್ತದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಮಿಡ್-ಡೇ ಮೀಲ್ ಯೋಜನೆಯಡಿ ನೀಡುವ ಊಟದಿಂದ ಬೀಫನ್ನು (ದನದ ಮಾಂಸ) ತೆಗೆದುಹಾಕಲಾಗಿದೆ

ಈ ದ್ವೀಪಗಳಲ್ಲಿ ವಾಸಿಸುವ ಜನರಲ್ಲಿ ಮುಸ್ಲಿಂ ಸಮುದಾಯದವರೇ ಅತಿ ಹೆಚ್ಚು ಇರುವುದರಿಂದ ಮತ್ತು ಬೀಫ್ ಅವರ ಪ್ರಮುಖ ಆಹಾರವಾಗಿರುವುದರಿಂದ ಈ ಕಾಯ್ದೆಯು ಧಾರ್ಮಿಕ-ರಾಜಕೀಯ ಬಣ್ಣ ಪಡೆದುಕೊಂಡಿದೆ. ಸಾಂಸ್ಕೃತಿಕವಾಗಿ ಭಿನ್ನವಾಗಿರುವ ಒಂದು ಭಾಗದ ಮೇಲೆ ಬಿಜೆಪಿ ಬಲವಂತವಾಗಿ ತನ್ನ ರಾಜಕೀಯ ಮತ್ತು ಸೈದ್ಧಾಂತಿ ಕ ದೃಷ್ಟಿಕೋನವನ್ನು ಹೇರುವ ಪ್ರಯತ್ನ ಇದಾಗಿದೆ ಎಂದು ಟೀಕಾಕಾರು ಹೇಳುತ್ತಿದ್ದಾರೆ.

ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಯೋಜನೆ ಒಂದು ದೊಡ್ಡ ರೆಸಾರ್ಟ್​ ಹೊಂದಿರುವ ಬಂಗಾರಾಮ್ ದ್ವೀಪ ಹೊರತುಪಡಿಸಿ ಲಕ್ಷದ್ವೀಪದ ಯಾವುದೇ ಭಾಗದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ರೆಸಾರ್ಟ್​ನಲ್ಲೂ ಕೇವಲ ವಿದೇಶಿಯರಿಗೆ ಮಾತ್ರ ಲಿಕ್ಕರ್ ಸರಬರಾಜು ಮಾಡಲಾಗುತ್ತದೆ. ಆದರೀಗ ಆಡಳಿತವು ಪ್ರವಾಸೋದ್ಯಮವನ್ನು ಉತ್ತೇಜಿಸಲು ಇತರ ಮೂರು ದ್ವೀಪಗಳಲ್ಲೂ ಲಿಕ್ಕರ್ ಮಾರಾಟ ಆರಂಭಿಸಲು ಪ್ಲ್ಯಾನ್ ಮಾಡುತ್ತಿದೆ. ಆದರೆ ಸ್ಥಳೀಯರು ಇದನ್ನು ವಿರೋಧಿಸುತ್ತಿದ್ದಾರೆ. ಆದರೆ. ಈ ಪ್ರಸ್ತಾಪವನ್ನು ಬೆಂಬಲಿಸುತ್ತಿರುವ ಜನ, ದ್ವೀಪದ ಹಲವಾರು ಭಾಗಗಳಲ್ಲಿ ಮದ್ಯ ತಯಾರು ಮಾಡಲಾಗುತ್ತಿದ್ದು, ಅವರಿಗೆ ಪರವಾನಗಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಾರೆ.

ಗುತ್ತಿಗೆ ಕೆಲಸಗಾರರನ್ನು ವಜಾ ಮಾಡುವುದು ಮತ್ತು ಅವರ ವರ್ಗಾವಣೆ ಲಕ್ಷದ್ವೀಪದಲ್ಲಿ ಅನೇಕ ಜನ ಗುತ್ತಿಗೆ ಆಧಾರದಲ್ಲಿ ಕೇಂದ್ರ ಸರ್ಕಾರದಡಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈಗ ಕೆಲಸದಲ್ಲಿರುವವರ ಸಾಮರ್ಥ್ಯವನ್ನು ಅಳೆಯಲು ಹೊಸ ಪದ್ಧತಿಗಳನ್ನು ಜಾರಿಗೊಳಿಸಿದ ನಂತರ ಹಲವಾರು ಜನರನ್ನು ಟ್ರಾನ್ಸ್​ಫರ್ ಮಾಡಲಾಗಿದೆ. ಕುಟುಂಬಗಳೊಂದಿಗೆ ಅಲ್ಲಿ ವಾಸಮಾಡಲಾರಂಭಿಸಿದ್ದ ನೌಕರರು, ಹೊಸ ನಿಯಮಗಳು ಬಹಳ ತೊಂದರೆಯನ್ನುಂಟು ಮಾಡಿವೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ

ಈ ಹೊಸ ರಾಜಕೀಯ, ನೀತಿ ಮತ್ತು ಅಡಳಿತಾತ್ಮಕ ಪ್ರಮಾಣಗಳಿಂದ ಲಕ್ಷದ್ವೀಪದ ಹೊಸ ಆಡಳಿತಾಧಿಕಾರಿಯು ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ರೂಪ ನೀಡುವುದಾಗಿ ಹೇಳುತ್ತಿದ್ದಾರೆ. ಅದರೆ, ಸ್ಥಳೀಯರು, ನೆರೆ ರಾಜ್ಯದವರು, ರಾಜಕೀಯ ನಾಯಕರು ಮತ್ತ ವಿರೋಧ ಪಕ್ಷಗಳು ಪಟೇಲ್ ನೀತಿಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕೇಂದ್ರ ಈ ಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎನ್ನುವುದು ಕಾದು ನೋಡಬೇಕಿರುವ ಅಂಶ

ಇದನ್ನೂ ಓದಿ: Lakshadweep ಅಭಿಯಾನ ದಾರಿತಪ್ಪಿಸುವಂತದ್ದು; ಲಕ್ಷದ್ವೀಪದಲ್ಲಿ ಪ್ರಫುಲ್ ಪಟೇಲ್ ಅವರ ಸುಧಾರಣಾ ನೀತಿಗಳನ್ನು ಸಮರ್ಥಿಸಿಕೊಂಡ ಜಿಲ್ಲಾಧಿಕಾರಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್