AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ 2ನೇ ಹಂತದ ಲಾಕ್​ಡೌನ್​ ಜಾರಿಗೆ ಸಿದ್ಧತೆ; ವ್ಯವಸ್ಥಿತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣ ತೀರ ಕಷ್ಟವಾಗುತ್ತಿದೆ. ಎರಡನೇ ಅಲೆ ಜೋರಾಗಿಯೇ ಅಪ್ಪಳಿಸಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ಮಧ್ಯೆ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಕಾಣುತ್ತಿದೆ. ಔಷಧಗಳ ಪೂರೈಕೆಯಲ್ಲೂ ವಿಳಂಬವಾಗುತ್ತಿದೆ. ಇನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಲಾಕ್​ಡೌನ್ ಹೇರಲಾಗಿದ್ದರೂ ಅದು ಸಾಕಾಗುತ್ತಿಲ್ಲ. ಇಡೀ ದೇಶದಲ್ಲಿ ಒಂದು ದಿನ ದಾಖಲಾಗುವ ಕೊರೊನಾ ಪ್ರಕರಣದಲ್ಲಿ ಮುಕ್ಕಾಲು ಭಾಗ ಮಹಾರಾಷ್ಟ್ರದ ಪಾಲೇ ಇರುತ್ತದೆ. ಹೀಗಿರುವಾಗ ರಾಜ್ಯವನ್ನು ಎರಡನೇ ಬಾರಿಗೆ ಸಂಪೂರ್ಣ ಲಾಕ್​ ಮಾಡುವತ್ತ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ […]

ಮಹಾರಾಷ್ಟ್ರದಲ್ಲಿ 2ನೇ ಹಂತದ ಲಾಕ್​ಡೌನ್​ ಜಾರಿಗೆ ಸಿದ್ಧತೆ; ವ್ಯವಸ್ಥಿತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಠಾಕ್ರೆ
ಉದ್ಧವ್​ ಠಾಕ್ರೆ
Lakshmi Hegde
|

Updated on: Mar 28, 2021 | 7:26 PM

Share

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣ ತೀರ ಕಷ್ಟವಾಗುತ್ತಿದೆ. ಎರಡನೇ ಅಲೆ ಜೋರಾಗಿಯೇ ಅಪ್ಪಳಿಸಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ಮಧ್ಯೆ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಕಾಣುತ್ತಿದೆ. ಔಷಧಗಳ ಪೂರೈಕೆಯಲ್ಲೂ ವಿಳಂಬವಾಗುತ್ತಿದೆ. ಇನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಲಾಕ್​ಡೌನ್ ಹೇರಲಾಗಿದ್ದರೂ ಅದು ಸಾಕಾಗುತ್ತಿಲ್ಲ. ಇಡೀ ದೇಶದಲ್ಲಿ ಒಂದು ದಿನ ದಾಖಲಾಗುವ ಕೊರೊನಾ ಪ್ರಕರಣದಲ್ಲಿ ಮುಕ್ಕಾಲು ಭಾಗ ಮಹಾರಾಷ್ಟ್ರದ ಪಾಲೇ ಇರುತ್ತದೆ.

ಹೀಗಿರುವಾಗ ರಾಜ್ಯವನ್ನು ಎರಡನೇ ಬಾರಿಗೆ ಸಂಪೂರ್ಣ ಲಾಕ್​ ಮಾಡುವತ್ತ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಇನ್ನು ಆ ರಾಜ್ಯದ ಕೊವಿಡ್​-19 ಟಾಸ್ಕ್​ ಫೋರ್ಸ್ ಕೂಡ ಲಾಕ್​ಡೌನ್ ಜಾರಿಗೊಳಿಸಲು ಶಿಫಾರಸು ಮಾಡಿದ್ದು, ಅದರ ಅನ್ವಯ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಮತ್ತೊಮ್ಮೆ ಲಾಕ್​ಡೌನ್ ಆಗುವ ಸಾಧ್ಯತೆ ಹೆಚ್ಚಾಗಿಯೇ ಇದೆ.

ಇಂದು ಸಭೆ ನಡೆದಿತ್ತು ಇನ್ನು ರಾಜ್ಯದಲ್ಲಿ ಮತ್ತೊಮ್ಮೆ ಲಾಕ್​ಡೌನ್ ಹೇರುವ ಸಂಬಂಧ ಇಂದು ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಎರಡನೇ ಬಾರಿಗೆ ಲಾಕ್​ಡೌನ್ ಹೇರಿದರೆ, ಈ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ, ವೈದ್ಯಕೀಯ ಸೇವೆ ನೀಡುವುದರಲ್ಲಿ ಯಾವುದೇ ವ್ಯತ್ಯಯ ಆಗಬಾರದು. ಜನರು ಯಾವ ಕಾರಣಕ್ಕೂ ಹೊರಗೆ ಬರುವಂತೆ ಇರಬಾರದು. ಹಾಗಾಗಿ ಸುವ್ಯವಸ್ಥಿತವಾಗಿ ಯೋಜನೆ ರೂಪಿಸಬೇಕು ಎಂದು ಉದ್ಧವ್ ಠಾಕ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಇನ್ನು ಸಭೆ ಬಳಿಕ ಮಾತನಾಡಿದ ರಾಜ್ಯ ಕಾರ್ಯದರ್ಶಿ ಸೀತಾರಾಮ್​ ಕುಂಟೆ, ಮತ್ತೆ ಲಾಕ್​ಡೌನ್ ಜಾರಿಯಾದರೆ ಯಾವುದೇ ಗೊಂದಲಗಳು ಉಂಟಾಗಬಾರದು. ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂಬುದನ್ನು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಬೆಡ್​, ವೆಂಟಿಲೇಟರ್ ಕೊರತೆ ಇನ್ನು ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಕೊರೊನಾ ರೋಗಿಗಳಿಂದ ಬೆಡ್​, ವೆಂಟಿಲೇಟರ್, ಆಕ್ಸಿಜನ್​​ಗಳ ಕೊರತೆ ಉಂಟಾಗಿದೆ ಎಂದು ಡಾ. ಪ್ರದೀಪ್ ವ್ಯಾಸ್ ತಿಳಿಸಿದ್ದಾರೆ. ಇರುವ 3.57 ಲಕ್ಷ ಐಸೋಲೇಶನ್​ ಬೆಡ್​ಗಳಲ್ಲಿ 1 ಲಕ್ಷಕ್ಕಿಂತಲೂ ಅಧಿಕ ಬೆಡ್​ಗಳು ಅದಾಗಲೇ ತುಂಬಿಹೋಗಿವೆ. ಉಳಿದವೂ ಕೂಡ ತ್ವರಿತವಾಗಿ ತುಂಬುತ್ತಿವೆ. ಹೀಗಾದರೆ ಕೆಲವೇ ದಿನಗಳಲ್ಲಿ ಬೆಡ್​ಗಳು ಇಲ್ಲದಂತಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ದಾಖಲೆ ಮುರಿದ ಮಹಾರಾಷ್ಟ್ರ ಕೊರೊನಾ ಮೊದಲ ಹಂತದಲ್ಲೂ ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಪ್ರಕರಣಗಳು ಕಂಡುಬಂದಿದ್ದವು. ಎರಡನೇ ಅಲೆಯಲ್ಲೂ ಸಹ ಮಹಾರಾಷ್ಟ್ರವೇ ಮುಂದಿದೆ. ಕಳೆದವರ್ಷ ಸೆಪ್ಟೆಂಬರ್​ನಲ್ಲಿ ಒಂದು ದಿನ 24, 619 ಕೇಸ್​ಗಳು ದಾಖಲಾಗಿದ್ದವು. ಆ ದಾಖಲೆ ಈಗ ಮುರಿದಿದ್ದು, ಮಾರ್ಚ್​ 27ರಂದು 24 ಗಂಟೆಯಲ್ಲಿ 35,726 ಕೇಸ್​ಗಳು ದಾಖಲಾಗಿವೆ. ಹೀಗೆ ಮುಂದುವರಿದರೆ ಒಂದು ದಿನಕ್ಕೆ 40,000 ಕೇಸ್​​ಗಳು ದಾಖಲಾಗಬಹುದು ಎಂಬ ಆತಂಕವನ್ನು ಟಾಸ್ಕ್ ಫೋರ್ಸ್ ವ್ಯಕ್ತಪಡಿಸಿದೆ.

ಇದನ್ನೂ ಓದಿ:  ಬಿಜೆಪಿ ಅಧಿಕಾರದಲ್ಲಿದ್ದರೆ ಅಲ್ಲಿ ಭದ್ರತೆ, ಅಭಿವೃದ್ಧಿ, ಶಾಂತಿ ಇರುತ್ತದೆ: ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್

ನರೇಂದ್ರ ಮೋದಿ ಭೇಟಿಯ ನಂತರ ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ, ಹಿಂದೂ ದೇವಾಲಯಗಳ ಮೇಲೆ ದಾಳಿ