AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಎಸ್ಐ, ಲಷ್ಕರ್-ಎ-ತೊಯ್ಬಾ ಮುಂದೆ ಪ್ರಾಣ ಭಿಕ್ಷೆ ಬೇಡಿದ್ದ ಯಾಸಿನ್ ಮಲಿಕ್

ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ 2006ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ನನಗೆ ಧನ್ಯವಾದ ಸಲ್ಲಿಸಿದ್ದರು ಎಂಬ ಹೇಳಿಕೆಯ ನಂತರ ಇದೀಗ ಮತ್ತೊಂದು ವಿಚಾರ ಬಹಿರಂಗವಾಗಿದೆ. ಪಾಕ್​​ ಐಎಸ್ಐ ಮತ್ತು ಎಲ್ಇಟಿ ಮುಂದೆ ತನಗೆ ಜೀವ ಭಿಕ್ಷೆ ನೀಡುವಂತೆ ಬೇಡಿಕೊಂಡಿದ್ದಾನೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಐಎಸ್ಐ, ಲಷ್ಕರ್-ಎ-ತೊಯ್ಬಾ ಮುಂದೆ ಪ್ರಾಣ ಭಿಕ್ಷೆ ಬೇಡಿದ್ದ ಯಾಸಿನ್ ಮಲಿಕ್
ಯಾಸಿನ್ ಮಲಿಕ್
ಅಕ್ಷಯ್​ ಪಲ್ಲಮಜಲು​​
|

Updated on:Sep 20, 2025 | 10:27 AM

Share

ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ (Yasin Malik) ಬಗ್ಗೆ ದಿನಕ್ಕೊಂದು ಸತ್ಯಾಂಶಗಳು ಬಹಿರಂಗವಾಗುತ್ತಿದೆ.  ಲಷ್ಕರ್-ಎ-ತೈಬಾ (ಎಲ್‌ಇಟಿ) ಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ನನಗೆ ಧನ್ಯವಾದ ಸಲ್ಲಿಸಿದ್ದರು ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ,  ನಂತರ ಇದೀಗ ಮತ್ತೊಂದು ವಿಚಾರ ಬಹಿರಂಗವಾಗಿದೆ. ಯಾಸಿನ್ ಮಲಿಕ್ ಒಮ್ಮೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ಇಟಿ) ಮುಂದೆ ತನ್ನ ಜೀವ ಭಿಕ್ಷೆ ಬೇಡಿದ್ದಾನೆ ಎಂದು ಎನ್​​ಡಿಟಿವಿಗೆ ಉನ್ನತ ಮಟ್ಟದ ಗುಪ್ತಚರ ಮೂಲಗಳು ತಿಳಿಸಿದೆ.

ಈ ಘಟನೆ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಚಳವಳಿಯಲ್ಲಿ ಪ್ರಕ್ಷುಬ್ಧ ಅವಧಿಯಲ್ಲಿ ಅಂದರೆ 2013ರಲ್ಲಿ ನಡೆದಿದೆ. ಗುಪ್ತಚರ ಮಾಹಿತಿಯ ಪ್ರಕಾರ, ಮಲಿಕ್‌ನನ್ನು ಹತ್ಯೆ ಮಾಡಲು 2012 ರಲ್ಲಿ ಸೋಪೋರ್‌ನ ಲಷ್ಕರ್ ಕಾರ್ಯಕರ್ತ ಹಿಲಾಲ್ ದಾರ್ ಎಂಬಾತನನ್ನು ನೇಮಕ ಮಾಡಲಾಗಿತ್ತು. ಐಎಸ್‌ಐ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ದಾರ್, ಶ್ರೀನಗರದ ಮೈಸುಮಾ ಪ್ರದೇಶದ ಮಕ್ಬೂಲ್ ಮಂಜಿಲ್‌ನಲ್ಲಿರುವ ಮಲಿಕ್‌ನ ನಿವಾಸದ ಬಳಿ ಗುಪ್ತವಾಗಿ ವೀಡಿಯೊ ರೆಕಾರ್ಡ್​​  ನಡೆಸಿದ್ದ, ಮಲಿಕ್ ಭಾರತೀಯ ಏಜೆನ್ಸಿಗಳೊಂದಿಗೆ ರಹಸ್ಯವಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಅನುಮಾನ ಪಾಕಿಸ್ತಾನಕ್ಕೆ ಬಂದ ನಂತರ ಈ ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಮಲಿಕ್ ಆಪ್ತ ಸಹಚರ ಮೊಲ್ವಿ ಶೋಕತ್ ನಿವಾಸದ ಬಳಿ ಸೈಕಲ್ ಐಇಡಿ ಸ್ಫೋಟಿಸಲಾಗಿತ್ತು. ಇದರಿಂದ ಮೊಲ್ವಿ ಶೋಕತ್ ಸಾವನ್ನಪ್ಪಿದ್ದ, ಈ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಮುಖ್ಯಸ್ಥರ ಬಗ್ಗೆ ಪಾಕಿಸ್ತಾನಕ್ಕೆ ಅಪನಂಬಿಕೆ ಹುಟ್ಟಿಸಿತ್ತು. 2012ರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಸುಳಿವಿನ ಪ್ರಕಾರ ಹಿಲಾಲ್ ದಾರ್​ನನ್ನು ಬಂಧಿಸಲಾಯಿತು. ತನಿಖೆಯ ವೇಳೆ ತಾನು ಭಾರತದ ಗುಪ್ತಚರ ಬ್ಯೂರೋಗಾಗಿ ಕೆಲಸ ಮಾಡುತ್ತಿದ್ದಾನೆ. ಹಾಗೂ ಐಎಸ್‌ಐ-ಲಷ್ಕರ್ ಜಂಟಿಯಾಗಿ ಮಲಿಕ್ ಅನ್ನು ಕೊಲ್ಲಲು ಬಯಸಿದ್ದವು ಎಂದು ಹೇಳಲಾಗಿದೆ.

ಇದನ್ನೂ ಓದಿ: ಹಫೀಜ್ ಸಯೀದ್ ಭೇಟಿ ಮಾಡಿದ್ದಕ್ಕೆ ಮನಮೋಹನ್ ಸಿಂಗ್ ಧನ್ಯವಾದ ಹೇಳಿದ್ದರು; ಯಾಸಿನ್ ಮಲಿಕ್ ಸ್ಫೋಟಕ ಹೇಳಿಕೆ

2013ರಲ್ಲಿ ಸಂಸತ್ತಿನ ದಾಳಿಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಅಫ್ಜಲ್ ಗುರುವನ್ನು ಭಾರತದಲ್ಲಿ ಗಲ್ಲಿಗೇರಿಸಿದಾಗ ಕೂಡ ಈ ವಿಚಾರಗಳು ಭಾರೀ ಸುದ್ದಿಯಾಗಿತ್ತು. ಆಗ ಪಾಕಿಸ್ತಾನದಲ್ಲಿದ್ದ ಮಲಿಕ್ ತಕ್ಷಣವೇ ಭಾರತದ ವಿರುದ್ಧ ಪ್ರತಿಭಟನೆಗಳನ್ನು ಇನ್ನಷ್ಟು ಬಲಗೊಳಿಸಿದ, ಅವನ ಜತೆಗೆ ಪಾಕಿಸ್ತಾನದ ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್ ಕೂಡ ಇದ್ದನು. ಈ ಪ್ರತಿಭಟನೆಗಳ ಸಮಯದಲ್ಲಿ, ಮಲಿಕ್ ಖಾಸಗಿಯಾಗಿ ಭೇಟಿಯಾಗಿ ಅವರ ಮುಂದೆ ತನಗೆ ೀವ ಭಿಕ್ಷೆ ನೀಡುವಂತೆ ಹಾಗೂ ಇನ್ನು ಮುಂದೆ ಭಾರತೀಯ ಸಂಸ್ಥೆಗಳೊಂದಿಗೆ ಸಹಕರಿಸುವುದಿಲ್ಲ ಮತ್ತು ಬದಲಿಗೆ ಐಎಸ್‌ಐ ಆದೇಶಗಳನ್ನು ಪಾಲಿಸುತ್ತೇನೆ ಎಂದು ಹೇಳಿದ್ದಾನೆ ಎಂದು ಈ ವರದಿ ಹೇಳಿದೆ. ಅದೇ ವರ್ಷ ಮಲಿಕ್ ಪಾಕಿಸ್ತಾನದಿಂದ ಹಿಂದಿರುಗಿದ ನಂತರ, ಭಾರತ ಸರ್ಕಾರ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತು. ಪಾಕಿಸ್ತಾನಿ ಪ್ರಜೆಯಾದ ಅವರ ಪತ್ನಿ ಮುಷಾಲ್ ಮಲಿಕ್ ಅವರಿಗೂ ವೀಸಾ ನಿರಾಕರಿಸಲಾಯಿತು.

2017 ರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರತ್ಯೇಕತಾವಾದಿ ಜಾಲದ ಮೇಲೆಯನ್ನು ನಡೆಸಿ, ಕಾಶ್ಮೀರ ಮತ್ತು ದೆಹಲಿಯಲ್ಲಿ ಅದರ ಹಲವಾರು ನಾಯಕರು ಮತ್ತು ಮಧ್ಯವರ್ತಿಗಳನ್ನು ಬಂಧಿಸಿ, ಎರಡು ವರ್ಷಗಳ ನಂತರ, ಕೇಂದ್ರವು JKLF ಅನ್ನು ನಿಷೇಧಿಸಿತು ಮತ್ತು ಮಲಿಕ್ ಅನ್ನು ಬಂಧಿಸಿತು. 2019 ರಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪದ ಮೇಲೆ ಮಲ್ಲಿಕ್​​ನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sat, 20 September 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ