Aditya-L1: ಸೂರ್ಯನ ಈ ಚಿತ್ರವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ, ಆದಿತ್ಯ-ಎಲ್1 ಸೆರೆಹಿಡಿದ ಅದ್ಭುತ ಫೋಟೋ ಇಲ್ಲಿದೆ
ಚಂದ್ರಯಾನ-3 ಯಶಸಸ್ವಿಯಾದ ನಂತರ, ಆದಿತ್ಯ ಎಲ್1 ಕೂಡ ಸೂರ್ಯನತ್ತ ಪ್ರಯಾಣಿಸಿ, ಮಹತ್ವ ಸಾಧನೆಯನ್ನು ಮಾಡಿದೆ. ಸೂರ್ಯನ ಸುತ್ತ ನಡೆಯುವ ಚುಟುವಟಿಕೆಗಳನ್ನು ಆದಿತ್ಯ ಎಲ್1 ಅಧ್ಯಯನ ಮಾಡಲಿದೆ. ಇದರ ಜತೆಗೆ ನೀವು ಎಂದು ನೋಡಿರದ ಫೋಟೋವೊಂದನ್ನು ಈ ಮಿಷನ್ ಸೆರೆಹಿಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (Indian Space Research Organization ISRO) ಚಂದ್ರಯಾನ -3 ಮೂಲಕ ವಿಶ್ವವನ್ನೇ ಭಾರತದತ್ತ ನೋಡುವಂತೆ ಮಾಡಿತ್ತು. ಈ ಇತಿಹಾಸ ಸೃಷ್ಟಿಯ ನಂತರ ಇಸ್ರೋ ಸೂರ್ಯನಲ್ಲಿಗೆ ಪ್ರಯಾಣಿಸಿತ್ತು. ಆದಿತ್ಯ -ಎಲ್1 (Aditya L1) ಮೂಲಕ ಸೂರ್ಯನ ಸುತ್ತ ನಡೆಯುವ ಚಟುವಟಿಕೆಯನ್ನು ಅಧ್ಯಯನ ಮಾಡುತ್ತಿದೆ. ಇದೀಗ ಆದಿತ್ಯ -ಎಲ್1 ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನಾವು ಎಂದಿಗೂ ನೋಡಿರದ ಸೂರ್ಯ ಚಿತ್ರವೊಂದನ್ನು ಆದಿತ್ಯ -ಎಲ್1 ಕಳುಹಿಸಿದೆ.
ಇಸ್ರೋ ಸೆಪ್ಟೆಂಬರ್ 2 ರಂದು ಆದಿತ್ಯ -L1ನ್ನು ಉಡಾವಣೆ ಮಾಡಿತ್ತು. ಈ ಬಾಹ್ಯಾಕಾಶ ನೌಕೆಯು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿದೆ. ಇದೀಗ ಆದಿತ್ಯ L1 ಸೂರ್ಯನ ಮೇಲಿರುವ ಅತಿ ದೊಡ್ಡ ಸೌರ ಮಂಡಲವನ್ನು ಪತ್ತೆ ಮಾಡಿದೆ. ಇಸ್ರೋ ಸೂರ್ಯನ ಈ ಚಿತ್ರವನ್ನು ಎಕ್ಸ್ನಲ್ಲಿ ಹಂಚಿಕೊಂಡಿದೆ. ಇದು ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಸಹಾಯದಿಂದ ಸೆರೆಹಿಡಿಯಲಾದ ಸೂರ್ಯನ ಹೊಸ ವೀಡಿಯೊ ಎಂದು ಮಾಹಿತಿ ನೀಡಲಾಗಿದೆ.
Here’s the latest video of Sun captured by SUIT payload on-board #AdityaL1. pic.twitter.com/5KCSjus69G
— ISRO InSight (@ISROSight) May 17, 2024
ಆದಿತ್ಯ L1 ಮಿಷನ್‌ನ ಉದ್ದೇಶವೇನು?
ಇಸ್ರೋ ಪ್ರಕಾರ, ಸೌರವ್ಯೂಹದಲ್ಲಿ ಸೂರ್ಯನ ತಾಪಮಾನ, ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಸೂರ್ಯನ ಜ್ವಾಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಆದಿತ್ಯ -ಎಲ್1ನ್ನು ಅಲ್ಲಿಗೆ ಕಳುಹಿಸಲಾಗಿದೆ. ಇದಕ್ಕೆ 400 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 2019ರ ಚುನಾವಣೆ ವೇಳೆ ನನ್ನ ಮೇಲೆ ಗುಂಡಿನ ದಾಳಿಗೆ ಯತ್ನಿಸಿತ್ತು ಕಾಂಗ್ರೆಸ್: ಸ್ಮೃತಿ ಇರಾನಿ
ಆದಿತ್ಯ L1ನಲ್ಲಿ ಏಳು ಪೇಲೋಡ್‌ಗಳು
ಆದಿತ್ಯ L1 ನಲ್ಲಿ ಏಳು ವೈಜ್ಞಾನಿಕ ಪೇಲೋಡ್‌ಗಳನ್ನು ಬಳಸಲಾಗಿದೆ. ಈ ಎಲ್ಲಾ ಪೇಲೋಡ್‌ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್ಕಾಂತೀಯ ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಹೊರಗಿನ ಪದರವನ್ನು ವೀಕ್ಷಿಸಲು ಈ ಪೇಲೋಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ