ಬಾಲಿವುಡ್​ನ ಖ್ಯಾತ ಕಾಮಿಡಿ ಸ್ಟಾರ್ ಮನೆಯಲ್ಲಿ ಗಾಂಜಾ, ಭಾರತಿ ಸಿಂಗ್ ಅರೆಸ್ಟ್

  • Ayesha Banu
  • Published On - 7:53 AM, 22 Nov 2020

ಸುಶಾಂತ್ ಸಾವಿನ ಸುತ್ತಾ ಸುತ್ತುತ್ತಿರುವ ತನಿಖೆ ಭಯಾನಕ ವಿಚಾರಗಳನ್ನ ರಿವೀಲ್ ಮಾಡುತ್ತಿದೆ. ಇಷ್ಟೆಲ್ಲದ್ರ ನಡುವೆ ಫೇಮಸ್ ಆಗಿರುವ ಕಾಮಿಡಿಯನ್ ಒಬ್ಬರ ಬಂಡವಾಳವನ್ನೂ NCB ಬಯಲು ಮಾಡಿದ್ದು ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಯಾಗುವಂತೆ ಮಾಡಿದೆ.

ಬಾಲಿವುಡ್​ನ ಉದಯೋನ್ಮುಕ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನುಬಿದ್ದಿರುವ ತನಿಖಾ ತಂಡಗಳು ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳನ್ನ ಬೆದಕುತ್ತಿವೆ. ಹೀಗೆ ತನಿಖೆಯ ಜಾಡು ಹಿಡಿದು ಹೊರಟಿರುವ ಟೀಂಗೆ ಭಯಾನಕ ವಿಚಾರ ರಿವೀಲ್ ಆಗಿದೆ.

ಕಾಮಿಡಿ ಸ್ಟಾರ್ ಮನೆಯಲ್ಲಿ ಗಾಂಜಾ!
ಯೆಸ್ ಹಿಂದಿ ಸ್ಟಾಂಡ್ ಅಪ್ ಕಾಮಿಡಿಯನ್ ಭಾರತಿ ಸಿಂಗ್ ಮನೆಯಲ್ಲಿ ಎನ್​ಸಿಬಿ ಅಧಿಕಾರಿಗಳು ಗಾಂಜಾ ಸೀಜ್ ಮಾಡಿದ್ದಾರೆ ಎನ್ನಲಾಗಿದೆ. ಮುಂಬೈನ ಅಂಧೇರಿಯಲ್ಲಿರುವ ಸ್ಟಾಂಡ್ ಅಪ್ ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ರೇಡ್ ಆಗಿತ್ತು. ಈ ಸಂದರ್ಭದಲ್ಲಿ ಎನ್​ಸಿಬಿ ಅಧಿಕಾರಿಗಳಿಗೆ ಶಾಕ್ ಆಗಿತ್ತು. ಏಕೆಂದರೆ ಅಲ್ಲಿ 86.5 ಗ್ರಾಂ ಗಾಂಜಾ ಸಿಕ್ಕಿತ್ತು. ಹೀಗಾಗಿ ಭಾರತಿ ಸಿಂಗ್ ವಿಚಾರಣೆ ನಡೆಸಲಾಗುತ್ತಿದೆ.

ಒಟ್ನಲ್ಲಿ ದಿನದಿಂದ ದಿನಕ್ಕೆ ಸುಶಾಂತ್ ಪ್ರಕರಣ ದೊಡ್ಡ ತಿರುವು ಪಡೆಯುತ್ತಿದೆ. ಸುಶಾಂತ್ ಪ್ರಕರಣದ ಜೊತೆ ಹಲವರ ಬಣ್ಣ ಕೂಡ ಬಯಲಾಗುತ್ತಿದೆ. ಈಗಾಗಲೇ ಬಾಲಿವುಡ್ ಸ್ಟಾರ್​ಗಳನ್ನ ಎನ್​ಸಿಬಿ ಹೆಡೆಮುರಿ ಕಟ್ಟಿದೆ. ಇದರ ಜೊತೆ ಜೊತೆಗೆ ಇನ್ನೂ ಹಲವರು ಖೆಡ್ಡಾಗಿ ಬೀಳುವ ಮುನ್ಸೂಚನೆ ಸಿಕ್ಕಿದೆ. ಇಷ್ಟೆಲ್ಲದರ ಮಧ್ಯೆ ಕಾಮಿಡಿಯನ್ ಕೂಡ ಗಾಂಜಾ ಇಟ್ಟಕೊಂಡು ಲಾಕ್ ಆಗಿರೋದು ಭಾರಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ NCB ದಾಳಿ